Apr 21, 2023, 10:00 AM IST
ನ್ಯಾಷ್‌ನಲ್ ಕ್ರಶ್ ರಶ್ಮಿಕಾ ಮಂದಣ್ಣ ಹೊಸ ರೀತಿಯ ಫೋಟೋ ಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಮ್ಯಾಗಝಿನ್‌ಗೆ ಮಾಡಿಸಿರೋ ಈ ಫೋಟೋಗಳಲ್ಲಿ ರಶ್ಮಿಕಾ ಮಂದಣ್ಣ ಸ್ಪೆಷಲ್ ಆಗಿ ಮತ್ತು ಬೇರೆ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ವಿಶೇಷ ಫೋಟೊ ಶೂಟ್‌ನ ಒಂದಷ್ಟು ಫೋಟೋಗಳನ್ನ ಸ್ವತಃ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರ ಫೋಟೋ ನೋಡಿದ ನೆಟ್ಟಿಗರು ಫೋಟೋದಲ್ಲಿ ಮೈಕಲ್ ಜಾಕ್ಸನ್ ತರಹ ಕಾಣ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇನ್ನು ನ್ಯಾಷನಲ್ ಕ್ರಷ್‌ಗೆ ಜನರಿಂದ ಎಷ್ಟು ಪ್ರೀತಿ ಸಿಗುತ್ತದೆ ಅಷ್ಟೇ ಟ್ರೋಲ್ ಮತ್ತು ನೆಗೆಟಿವ್ ಕಾಮೆಂಟ್ ಎದುರಿಸುತ್ತಿದ್ದಾರೆ. ಅನೇಕ ಬಾರಿ ಇದರ ಬಗ್ಗೆ ಧ್ವನಿ ಎತ್ತಿದ್ದಾರೆ. ಸದ್ಯ ರಶ್ಮಿಕಾ ಈಗ ಟಾಲಿವುಡ್ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.