Dec 23, 2024, 4:20 PM IST
ಕಿರಿಕ್ ಬ್ಯೂಟಿ ರಶ್ಮಿಕಾಗೂ ಟ್ರೋಲ್ಗಳಿಗೂ ಬಿಡಲಾರದ ನಂಟು. ರಶ್ಮಿಕಾ ಅದೆಷ್ಟೇ ಹಿಟ್ ಮೇಲೆ ಹಿಟ್ ಕೊಟ್ಟು ಮೇಲಕ್ಕೇರಿದ್ರೂ , ಟ್ರೋಲರ್ಸ್ಗೆ ಆಹಾರ ಆಗೋದು ಮಾತ್ರ ತಪ್ಪಿಲ್ಲ. ಸದ್ಯ ಪುಷ್ಪ-2 ಮೂಲಕ ಬಿಗ್ ಸಕ್ಸಸ್ ಕಂಡಿರೋ ರಶ್ಮಿಕಾ, ಅದರ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ಪೆದ್ದು ಪೆದ್ದಾಗಿ ಮಾತನಾಡಿ ಟ್ರೋಲ್ ಆಗಿದ್ದಾಳೆ. ಯುಐ ಸಿನಿಮಾದ ಟ್ರೋಲ್ ಆಗುತ್ತೆ... ಟ್ರೋಲ್ ಆಗುತ್ತೆ ಹಾಡು ನಮ್ಮ ಕಿರಿಕ್ ಬ್ಯೂಟಿ ರಶ್ಮಿಕಾಗೆ ಹೇಳಿ ಮಾಡಿಸಿದಂತಿದೆ. ಈಕೆ ಬಾಯ್ಬಿಟ್ರೆ ಟ್ರೋಲ್ ಆಗುತ್ತೆ. ಅದೆಷ್ಟೇ ಹಿಟ್ ಮೇಲೆ ಹಿಟ್ ಕೊಟ್ಟು ನಂ.1 ಸ್ಟಾರ್ ನಟಿಯಾದ್ರೂ ರಶ್ಮಿಕಾ ಟ್ರೋಲ್ ಆಗೋದು ಮಾತ್ರ ತಪ್ಪಿಲ್ಲ. ಸದ್ಯ ರಶ್ಮಿಕಾ ನಟಿಸಿರೋ ಪುಷ್ಪ-2 ಸಿನಿಮಾ ವರ್ಲ್ಡ್ ವೈಡ್ ಬಿಗ್ ಹಿಟ್ ಆಗಿದೆ. ಭರ್ತಿ 1500 ಕೋಟಿ ಗಳಿಕೆ ಮಾಡಿದೆ. ಈ ಸಕ್ಸಸ್ ಸಂಭ್ರಮದಲ್ಲಿ ಶ್ರೀವಲ್ಲಿ ತೇಲ್ತಾ ಇದ್ದಾಳೆ.
ನಿಜ ಹೇಳಬೇಕು ಅಂದ್ರೆ ಇವತ್ತು ಇಡೀ ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚಿನ ಬೇಡಿಕೆ ಇರೋದು, ಅತಿ ಹೆಚ್ಚು ಸಂಭಾವನೆ ಪಡೀತಾ ಇರೋದು ರಶ್ಮಿಕಾನೇ. ಸದ್ಯದ ಮಟ್ಟಿಗೆ ಇಂಡಿಯನ್ ಇಂಡಸ್ಟ್ರಿಯಲ್ಲಿ ರಶ್ಮಿಕಾನೇ ನಂ.1 ನಟಿಮಣಿ. ಆದ್ರೆ ಈ ಟೈಂನಲ್ಲೂ ತಾನು ಮಾಡಿಕೊಂಡ ಎಡವಟ್ಟಿಂದ ರಶ್ ಟ್ರೋಲ್ ಪೇಜಸ್ಗೆ ಆಹಾರವಾಗಿದ್ದಾಳೆ. ಇತ್ತೀಚಿಗೆ ಕೊಟ್ಟ ಸಂದರ್ಶನವೊಂದರಲ್ಲಿ ನೀವು ಥಿಯೇಟರ್ನಲ್ಲಿ ನೋಡಿದ ಮೊದಲ ಸಿನಿಮಾ ಯಾವುದು ಅಂತ ಕೇಳಲಾಗುತ್ತೆ. ಅದಕ್ಕೆ ದಳಪತಿ ವಿಜಯ್ ಅಭಿನಯದ ಗಿಲ್ಲಿ ಅಂತ ಉತ್ತರಿಸಿದ್ದಾಳೆ ಶ್ರೀವಲ್ಲಿ. ವಿಜಯ್ ನಟನೆಯ ಗಿಲ್ಲಿ ಸಿನಿಮಾ ನಂಗೆ ಶ್ಯಾನೆ ಇಷ್ಟ. ಅದ್ರಲ್ಲಿನ ಅಪಡಿ ಪೋಡು ಹಾಡಿಗೆ ನಾನು ಡ್ಯಾನ್ಸ್ ಮಾಡ್ತಿದ್ದೆ ಅಂತೆಲ್ಲಾ ಹೇಳಿರೋ ರಶ್ಮಿಕಾ. ಅದು ಮಹೇಶ್ ಬಾಬು ಅವರ ಪೋಕಿರಿ ಸಿನಿಮಾದ ರಿಮೇಕ್ ಅನ್ನೋದು ಇತ್ತೀಚಿಗೆ ಗೊತ್ತಾಯ್ತು ಅಂದಿದ್ದಾಳೆ.
ಅಸಲಿಗೆ ಗಿಲ್ಲಿ ಸಿನಿಮಾ ಮಹೇಶ್ ಬಾಬು ನಟನೆಯ ಒಕ್ಕಡು ಸಿನಿಮಾದ ರಿಮೇಕ್. ಇದನ್ನ ತಪ್ಪು ತಪ್ಪಾಗಿ ಹೇಳಿರೋ ರಶ್ಮಿಕಾ ಟ್ರೋಲರ್ಸ್ಗೆ ಆಹಾರ ಆಗಿದ್ದಾಳೆ. ಎಲ್ಲರೂ ನ್ಯಾಷನಲ್ ಕ್ರಶ್ ನ ಟ್ರೋಲ್ ಮಾಡಿ, ಕ್ರಶ್ ಮಾಡಿ ಬಿಸಾಕ್ತಾ ಇದ್ದಾರೆ. ಅಸಲಿಗೆ ರಶ್ಮಿಕಾ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಆದ್ರೆ ಈಕೆ ನೋಡಿದ ಮೊದಲ ಸಿನಿಮಾ ಮಾತ್ರ ತಮಿಳಿನದ್ದಂತೆ. ರಶ್ಮಿಕಾ ದಳಪತಿ ಫ್ಯಾನ್ಸ್ ಮೆಚ್ಚಿಸೋದಕ್ಕೆ ಈ ರೀತಿ ಹೇಳಿದ್ದಾಳೆ ಅಂತ ಕೆಲವರು ಟ್ರೋಲ್ ಮಾಡ್ತಾ ಇದ್ದಾರೆ. ರಶ್ಮಿಕಾ ಆಯಾ ರಾಜ್ಯಕ್ಕೆ ಹೋದಾಗ ಅಲ್ಲಿನವರನ್ನ ಮೆಚ್ಚಿಸೋಕೆ ಈ ತರಹ ಡ್ರಾಮಾ ಮಾಡ್ತಾಳೆ. ಅಪ್ಪಿ ತಪ್ಪಿಯೂ ಕನ್ನಡದ ಹೆಸರೆತ್ತೆಲ್ಲ.. ಬೆಳೆಯೋವರೆಗೂ ಬೇಕಿದ್ದ ಕನ್ನಡ ಚಿತ್ರರಂಗ ಈಗ ಈಕೆಗೆ ಬೇಕಾಗಿಲ್ಲ ಅಂತ ಅನೇಕ ಕನ್ನಡ ಫ್ಯಾನ್ಸ್ ರಶ್ಮಿಕಾಗೆ ಬೆಂಡೆತ್ತಾ ಇದ್ದಾರೆ.
ರಶ್ಮಿಕಾ ಈ ಹಿಂದೆಯೂ ಅನೇಕ ಬರಿ ಪೆದ್ದು ಪೆದ್ದಾಗಿ ಮಾತನಾಡಿ ಟ್ರೋಲ್ ಆಗಿದ್ದಾಳೆ. ಅದೆಷ್ಟೇ ಎತ್ತರಕ್ಕೆ ಬೆಳೆದ್ರೂ ಈಕೆಯ ಮಾತಿನ ತೂಕ ಮಾತ್ರ ಜಾಸ್ತಿ ಆಗಿಲ್ಲ. ಆ ವಿಚಾರದಲ್ಲಿ ಕಿರಿಕ್ ಬ್ಯೂಟಿ ಇನ್ನೂ ಮಾಗಿಲ್ಲ. ಇತ್ತೀಚಿಗೆ ರಶ್ಮಿಕಾಗೆ ನೀವು ಯಾವ ತಾರೆಯರಿಂದ ಸ್ಪೂರ್ತಿ ಪಡೆದ್ರಿ ಅಂತ ಕೇಳಿದಾಗ ರಶ್ಮಿಕಾ, ಬೇರೆಲ್ಲಾ ಭಾಷೆಯ ನಟರ ಹೆಸರು ಹೇಳಿದ್ಳು. ಅಪ್ಪಿ ತಪ್ಪಿಯೂ ಒಬ್ಬ ಕನ್ನಡ ನಟರ ಹೆಸರು ಹೇಳಲಿಲ್ಲ. ಇದನ್ನ ನೋಡಿದವರು ಈಕೆ ಶ್ರೀವಲ್ಲಿ ಅಲ್ಲ ಊಸರವಳ್ಳಿ ಅಂತ ಟ್ರೋಲ್ ಮಾಡಿದ್ರು. ಒಟ್ಟಾರೆ ಅದೆಷ್ಟೇ ಸಕ್ಸಸ್ ಬಂದ್ರೂ ರಶ್ಮಿಕಾ ಟ್ರೋಲ್ ಆಗೋದು ಮಾತ್ರ ಕಮ್ಮಿ ಆಗಿಲ್ಲ. ಕಿರಿಕ್ ಬ್ಯೂಟಿಯ ಮಾತಿನ ಧಾಟಿ ನೋಡ್ತಾ ಇದ್ರೆ, ಮುಂದೆಯೂ ಈ ಟ್ರೋಲ್ ಎಪಿಸೋಡ್ಸ್ ನಿಲ್ಲಲ್ಲ.