Apr 21, 2023, 10:41 AM IST
ನಟಿ ಪೂಜಾ ಹೆಗ್ಡೆ ಅವರು ನಟ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದಾರೆ. ಸಿನಿಪ್ರೇಕ್ಷಕರ ನೆಚ್ಚಿನ ರಾಕಿ ಭಾಯ್ ಬಗ್ಗೆ ನಟಿ ಪೂಜಾ ಹೆಗ್ಡೆ ಮುಕ್ತವಾಗಿ ಮಾತನಾಡಿ ಕೆಜಿಎಫ್ ನಟನನ್ನು ಲೆಜೆಂಡ್ ಎಂದು ಕರೆದಿದ್ದಾರೆ. ಕೆಜಿಎಫ್ ನಂತರ ರಾಕಿ ಭಾಯ್ ಒಬ್ಬರು ಲೆಜೆಂಡ್. ನಾನು ನಿಜಕ್ಕೂ ಅವರೊಂದಿಗೆ ಹೆಚ್ಚು ಮಾತನಾಡಿಲ್ಲ. ಅವರನ್ನು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆ. ನಾನು ಅವರೊಂದಿಗೆ ಬೇಗ ಕೆಲಸ ಮಾಡೋಕೆ ಸಾಧ್ಯವಾಗಲಿ ಎಂದು ಬಯಸುತ್ತೇನೆ ಎಂದಿದ್ದಾರೆ. ನಟಿ ಪೂಜಾ ಹೆಗ್ಡೆ ಮಾತನಾಡುವ ಸಂದರ್ಭ ರಾಕಿ ಭಾಯ್ ಜೊತೆ ನಟಿಸುವ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದು, ಅವರ ಈ ಮಾತುಗಳು ಈಗ ವೈರಲ್ ಆಗಿವೆ. ಶೀಘ್ರದಲ್ಲೇ ಎಂದರೆ ಯಶ್ ಮುಂದಿನ ಸಿನಿಮಾದಲ್ಲಿ ಪೂಜಾ ನಟಿಸುತ್ತಾರಾ ಎನ್ನುವ ಮಾತು ಕೇಳಿ ಬರುತ್ತಿದೆ. ಅಲ್ಲದೇ ಇತ್ತೀಚಿಗಷ್ಟೆ ಕೆಜಿಎಫ್-3 ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸುಳಿವು ನೀಡಿದೆ. ಹಾಗಾಗಿ ಕೆಜಿಎಫ್-3ನಲ್ಲೂ ಪೂಜಾ ಕಾಣಿಸಿಕೊಂಡರೂ ಅಚ್ಚರಿ ಇಲ್ಲ. ಸದ್ಯ ಪೂಜಾ ಹೆಗ್ಡೆ ಸದ್ಯ ಸಲ್ಮಾನ್ ಖಾನ್ ಜೊತೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.