Dec 23, 2024, 4:34 PM IST
ಬಾಲಿವುಡ್ ಬ್ಯೂಟಿ ದಿಶಾ ಪಟಾನಿ ಅಂದ್ರೆ ಪಡ್ಡೆ ಹೈಕಳಿಗೆ ಅಚ್ಚುಮೆಚ್ಚು. ಅದ್ರಲ್ಲೂ ದಿಶಾ ಸೋಷಿಯಲ್ ಮಿಡಿಯಾದಲ್ಲಿ ಹಾಕೋ ಹಾಟ್ ಪಿಕ್ಸ್, ರೀಲ್ಸ್ ಈಕೆಯೆ ಸಿನಿಮಾಗಿಂತಲೂ ಹೆಚ್ಚು ವೀವ್ಸ್ ಪಡೆಯುತ್ವೆ. ಒಂದು ರೀತಿ ಎಣ್ಣೆ ಹೊಡೆಯದೇ ನಶೆ ಏರಿಸೋ ಮೈಮಾಟ ಈ ಬ್ಯೂಟಿದು. ಉತ್ತರ ಪ್ರದೇಶದಲ್ಲಿ ಹುಟ್ಟಿ, ಬಾಲಿವುಡ್ ಸಿನಿಮಾಗಳ ಮೂಲಕ ಪರಿಚಿತಳಾದ ದಿಶಾ 2013ರಲ್ಲಿ ನಡೆದ "ಪಾಂಡ್ಸ್ ಫೆಮಿನಾ ಮಿಸ್ ಇಂಡಿಯಾ ಇಂಡೋರ್" ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದಿದ್ಳು. ಚಿತ್ರರಂಗಕ್ಕೆ ಬಂದು ಒಂದು ದಶಕ ಕಳೆದರು ದಿಶಾ ನಶಾ ಕಮ್ಮಿಯಾಗಿಲ್ಲ. ದಿಶಾಳ ಸಪೂರ ಸೊಂಟ, ಮಾದಕ ಮೈಮಾಟ , ಕೊಲ್ಲುವ ನೋಟ ತನ್ನ ಆಕರ್ಷಣೆ ಕಳೆದುಕೊಂಡಿಲ್ಲ. ಎಲ್ಲಾ ನಟಿಮಣಿಯರು ಹೇಳುವಂತೆ ದಿಶಾ ಕೂಡ ತನ್ನ ಬ್ಯೂಟಿ ಹಿಂದಿನ ಸೀಕ್ರೆಟ್ ವರ್ಕೌಟ್ ಮತ್ತು ಡಯಟ್ ಅಂತಾಳೆ. ದಿಶಾ ಸೋಷಿಯಲ್ ಮಿಡಿಯಾದಲ್ಲಿ ತನ್ನ ಡಯಟ್ ಸೀಕ್ರೆಟ್ನ ಶೇರ್ ಮಾಡೋದ್ರ ಜೊತೆಗೆ ವರ್ಕೌಟ್ ವಿಡಿಯೋಸ್ನೂ ಶೇರ್ ಮಾಡ್ತಾ ಇರ್ತಾಳೆ. ದಿಶಾಳ ಸಪೂರ ಮೈಕಟ್ಟು ನೋಡಿದವರು ಈಕೆ ಇಂಥಾ ಕಠಿಣಾತಿಕಠಿಣ ವರ್ಕೌಟ್ ಮಾಡ್ತಾಳೆ ಅಂದ್ರೆ ನಂಬೋದೇ ಕಷ್ಟ. ಅಷ್ಟು ಟಫ್ ವರ್ಕೌಟ್ ಮಾಡೋ ಈ ಚೆಲುವೆ ಜಿಮ್ ನಲ್ಲಿ ಅನುದಿನ ಬೆವರಿಳಿಸ್ತಾಳೆ. ಈಕೆಯ ವರ್ಕೌಟ್ ವಿಡಿಯೋಸ್ ಸೋಷಿಯಲ್ ಮಿಡಿಯಾದಲ್ಲಿ ಅಕ್ಷರಶಃ ಕಿಚ್ಚು ಹಚ್ಚಿ ನಿಗಿ ನಗಿ ಮಿನುಗ್ತಾ ಇರುತ್ವೆ.