Jul 26, 2024, 12:59 PM IST
ಶಾರುಖ್ ಖಾನ್ ಅವರ ಮುದ್ದು ಮಗಳು ಸುಹಾನಾ ಖಾನ್ ಇತ್ತೀಚೆಗೆ 'ಆರ್ಚೀಸ್' ಮೂಲಕ ಓಟಿಟಿಗೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯನಂದ ಅವರೊಂದಿಗೆ ನಟಿಸಿದ್ದಾರೆ. ಜೊತೆಗೆ ಇವರಿಬ್ಬರ ಡೇಟಿಂಗ್ ಗಾಸಿಪ್ ಬಹಳ ದಿನಗಳಿಂದ ಸುದ್ದಿಯಲ್ಲಿವೆ. ಅಲ್ಲದೇ ಇಬ್ಬರೂ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಸುಹಾನಾ ಅಗಸ್ತ್ಯನಂದ ಇಬ್ಬರೂ ಮುಂಬೈನ ಬಾಂದ್ರಾದ ಕಟ್ಟಡದಿಂದ ಹೊರಗೆ ಬಂದು ಕಾರಿನಲ್ಲಿ ಕುಳಿತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಅಭಿಷೇಕ್ ಬಚ್ಚನ್ ಮತ್ತು ನವ್ಯಾ ನವೇಲಿ ನಂದಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಇನ್ನು ಅಗಸ್ತ್ಯಾ ಸುಹಾನಾ ಡೇಟಿಂಗ್ ವಿಚಾರ ಕೆಲ ಸಮಯದಿಂದ ಸದ್ದು ಮಾಡುತ್ತಿದೆ. ಕ್ಯಾಮರಾಗಳನ್ನು ಕಂಡ ಅಗಸ್ತ್ಯ ಕ್ಯಾಶುವಲ್ ಆಗಿ ಸ್ಮೈಲ್ ಕೊಟ್ಟರೆ, ಸುಹಾನಾ ಕೊಂಚ ನಾಚಿದಂತೆ ತೋರುತ್ತಿದೆ. ಸುಹಾನಾ ಜೊತೆ ನವ್ಯಾ ಕೂಡ ಕುಳಿತಿದ್ದರು. ಅಗಸ್ತ್ಯ ಮತ್ತು ನವ್ಯಾ, ಅಭಿಷೇಕ್ ಸಹೋದರಿ ಶ್ವೇತಾ ಬಚ್ಚನ್ ನಂದಾ ಅವರ ಮಕ್ಕಳು.