Feb 14, 2022, 4:33 PM IST
ಚಿಕ್ಕಮಗಳೂರು : ಪ್ರೇಮಿಗಳ ದಿನದಂದೇ ಮೂಡಿಗೆರೆಯ ಬಸ್‌ಸ್ಟ್ಯಾಂಡ್ ವೊಂದರಲ್ಲಿ ಪ್ರೇಮಿಗಳು ಹಾಡಹಗಲೇ ಯಾರ ಚಿಂತೆಯೂ ಇಲ್ಲದೇ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯವನ್ನು ಯಾರೋ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಸಾರ್ವಜನಿಕ ಸ್ಥಳ ಎಂಬ ಯಾವುದೇ ಯೋಚನೆ ಇಲ್ಲದೇ ಜಗವನ್ನೇ ಮರೆತ ಪ್ರೇಮಿಗಳು ಪರಸ್ಪರ ಚುಂಬನದಲ್ಲಿ ತೊಡಗಿದ್ದಾರೆ. ಮೂಡಿಗೆರೆ ತಾಲೂಕಿನ ಮುದ್ರೆಮನೆ ಬಳಿಯ ಸಣ್ಣ ಬಸ್‌ಸ್ಟ್ಯಾಂಡ್‌ನಲ್ಲಿ ಪ್ರೇಮಿಗಳ ಈ ಲವ್ವಿ ಡವ್ವಿ ನಡೆದಿದೆ. ಆದರೆ ಯುವಕ ಯುವತಿಯ ಈ ಅಸಭ್ಯ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.