Oct 23, 2019, 2:50 PM IST
ಸತತ ಬರಗಾಲದಿಂದ ಕೂಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೀಗ ಅಲ್ಲಲ್ಲಿ ಪುಟ್ಟ ಜಲಪಾತಗಳು ಹುಟ್ಟಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಜಡಮಡಗು ಫಾಲ್ಸ್‌ನಲ್ಲಿ ಬಿಳಿ ನೀರಿನ ಜಲಧಾರೆ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಜಿಲ್ಲೆಯತ್ತ ಬರುತ್ತಿದೆ. ಮೂರು ತಿಂಗಳ ಹಿಂದೆ ಬರದ ಹಣೆಪಟ್ಟಿ ಕಟ್ಟಿಕೊಂಡಿದ್ದ ಜಿಲ್ಲೆ 10 ದಿನ ಸುರಿದ ಮಳೆಗೆ ಸೌಂದರ್ಯವನ್ನೇ ತುಂಬಿಕೊಂಡು ನಿಂತಿದೆ.