May 12, 2020, 6:46 PM IST
ಚಾಮರಾಜನಗರ(ಮೇ.12): ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಕರ್ನಾಟಕದ ಹಲವು ಪ್ರದೇಶಗಳನ್ನು ರೆಡ್ ಝೋನ್ ಎಂದು ಗುರುತಿಸಲಾಗಿದೆ. ಇದರಲ್ಲಿ ಮೈಸೂರು ಕೂಡ ಒಂದು. ಹೀಗಾಗಿ ಮೈಸೂರು ಹಾಗು ಸುತ್ತಮುತ್ತಲ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡಲಾಗಿದೆ. ಆದರೆ ಗುಂಡ್ಲುಪೇಟೆ ಬಿಜೆಪಿ ಶಾಸಕ ನಿರಂಜನ್ ಕುಮಾರ್ ಪುತ್ರ ಭುವನ್ ಕುಮಾರ್‌ಗೆ ಇದು ಅನ್ವಯವಾಗಿಲ್ಲ.
ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭುವನ್ ಕುಮಾರ್ ಮಾಸ್ಕ್ ಧರಿಸಿದೆ ಕುದುರಿ ಸವಾರಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಾಕ್‌ಡೌನ್ ನಿಯಮವಿರುವಾಗ ಸುಖಾಸುಮ್ಮನೆ ತಿರುಗಾಡಿದ್ದು ಮಾತ್ರವಲ್ಲ, ಮಾಸ್ಕ್ ಧರಿಸಿದೆ ಕುದುರೆ ಸವಾರಿ ಮಾಡಿದ್ದಾರೆ. ಚಾಮರಾಜನಗರ ಪೊಲೀಸರು ವಿಡಿಯೋ ತನಿಖೆ ಮಾಡಿ, ನಿಯಮ ಉಲ್ಲಂಘಿಸಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರ.