May 28, 2020, 5:42 PM IST
ಬೆಂಗಳೂರು (ಮೇ. 28): ಕೊರೊನಾ ಲಾಕ್‌ಡೌನ್ ದಿನಗಳಲ್ಲಿ ರಿಟೇಲ್ ವ್ಯಾಪಾರ ವಲಯದಲ್ಲಿ ಬರೋಬ್ಬರಿ 9 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ದೇಶದ ಆರ್ಥಿಕತೆ ಪಾತಾಳದ ಕಡೆ ಮುಖ ಮಾಡಿತ್ತು. ನಮ್ಮ ದೇಶ ಅನಭವಿಸಿರುವ ನಷ್ಟ 30 ಲಕ್ಷ ಕೋಟಿ ರೂಪಾಯಿ. ಕಳೆದ 69 ವರ್ಷಗಳಲ್ಲಿ ಭಾರತ ಕೇವಲ 3 ಬಾರಿ ಮಾತ್ರ ಆರ್ಥಿಕ ಹಿಂಜರೆತ ಅನುಭವಿಸಿದೆ. ಈ ಬಾರಿಯ ಆರ್ಥಿಕ ಹೊಡೆತ ಎಲ್ಲಕ್ಕಿಂತ ಗಂಭೀರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕುಸಿದು ಹೋಗಿರುವ ಅರ್ಥ ವ್ಯವಸ್ಥೆಯನ್ನು ಸರಿಪಡಿಸಲು ಪ್ರಧಾನಿ ಮೋದಿ ಬತ್ತಳಿಕೆಯಲ್ಲಿ ಅಸ್ತ್ರಗಳೇನು? ಇಲ್ಲಿದೆ ನೋಡಿ..!