Feb 1, 2022, 10:32 AM IST
ಬೆಂಗಳೂರು (ಫೆ. 01): ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಸಾಕಷ್ಟುಕೊಡುಗೆ, ಹೊಸ ಯೋಜನೆ ಘೋಷಿಸುವ ನಿರೀಕ್ಷೆ ಇದೆ. ರೈಲ್ವೆ ಯೋಜನೆಗೆ ಹೆಚ್ಚು ಹಣ, ಕಾರಿಡಾರ್ ರಸ್ತೆ, ತಂತ್ರಜ್ಞಾನ ಆಧಾರಿತ ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಕ್ರಮ, ಹೊಸ ಐಐಟಿ ಸ್ಥಾಪನೆ, ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ ನೀಡಲು ನೂತನ ಯೋಜನೆ ಘೋಷಿಸುವ ನಿರೀಕ್ಷೆಯನ್ನು ರಾಜ್ಯದ ಜನತೆ ಹೊಂದಿದೆ.
ವಿಶೇಷವಾಗಿ ರೈಲ್ವೆಗೆ ಸಂಬಂಧಪಟ್ಟಂತೆ ಈಗಾಗಲೇ ಘೋಷಿಸಿರುವ ಹೊಸ ರೈಲು ಮಾರ್ಗಗಳಿಗೆ ಹಣ ಒದಗಿಸುವ ಮೂಲಕ ಕಾಮಗಾರಿಗಳಿಗೆ ಇನ್ನಷ್ಟುವೇಗ ನೀಡಬಹುದು. ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆ, ಶಿವಮೊಗ್ಗ-ಹರಿಹರ, ತುಮಕೂರು-ಚಿತ್ರದುರ್ಗ-ದಾವಣಗೆರೆ, ಶಿವಮೊಗ್ಗ-ಶೃಂಗೇರಿ-ಮಂಗಳೂರು, ಬಾಗಲಕೋಟೆ-ಕುಡಚಿ ಸೇರಿದಂತೆ ಹಲವು ಯೋಜನೆಗಳಿಗೆ ಹೆಚ್ಚಿನ ಹಣ ನೀಡುವ ನಿರೀಕ್ಷೆ ಇದೆ.