ವಿಐಪಿ ಪಾಸ್ ಹೆಸರಲ್ಲಿ ತಿಮ್ಮಪ್ಪನ ಭಕ್ತರಿಗೆ ನಾಮ ಹಾಕುತ್ತಿದ್ದ ಖದೀಮನ ಬಂಧನ

Dec 18, 2024, 3:15 PM IST

ಗೃಹ ಸಚಿವ ಪರಮೇಶ್ವರ್​ ಹೆಸರಲ್ಲಿ ತಿಮ್ಮಪ್ಪನ ದರ್ಶನಕ್ಕೆ ವಿಐಪಿ ಪಾಸ್​ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಯಲಹಂಕ ಮೂಲದ ಮಾರುತಿ ಬಂಧೀತ ವ್ಯಕ್ತಿ. ವೃತ್ತಿಯಲ್ಲಿ ಸಿವಿಲ್​ ಕಂಟ್ರಾಕ್ಟರ್​ ಆಗಿರೋ ಮಾರುತಿ ಸಚಿವ ಜಿ. ಪರಮೇಶ್ವರ್ ಅವರ  ನಕಲಿ ಲೆಟರ್​ಹೆಡ್​ ಬಳಸಿ ತಿಮ್ಮಪ್ಪನ ಭಕ್ತರಿಗೆ ನಾಮ ಹಾಕಲು ಯತ್ನಿಸಿದ್ದಾನೆ. ಭಕ್ತಾಧಿಗಳಿಂದ 6 ಸಾವಿರದಿಂದ 10 ಸಾವಿರದವರೆಗೆ ಹಣ ವಸೂಲಿ ಮಾಡಿದ್ದಲ್ಲದೇ ಆಂಧ್ರ ಸಿಎಂ ಕಚೇರಿಗೆ ನಕಲಿ ಲೆಟರ್​ ಹೆಡ್, ಪರಮೇಶ್ವರ್​ ಹೆಸರಲ್ಲಿ ಕಾಲ್ ಮಾಡಿದ್ದಾನೆ. ತಿಮ್ಮಪ್ಪನ ದರ್ಶನಕ್ಕೆ ಅನುವು ಮಾಡದಿದ್ದರೆ ಅಮಾನತು ಮಾಡಿಸ್ತೇನೆಂದು ಬೆದರಿಕೆ ಹಾಕಿದ್ದಾನೆ. ನಕಲಿ ಲೆಟರ್​ ಬಗ್ಗೆ ಪರಮೇಶ್ವರ್​ ಕಚೇರಿಯಲ್ಲಿ ಮರು ಪರಿಶೀಲನೆ ನಡೆಸಿದ ನಂತರ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ ತುಮಕೂರು ನಗರ ಠಾಣೆಗೆ ದೂರು ನೀಡಿದ್ದರು. ನಾಗಣ್ಣ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯಲಹಂಕ ನ್ಯೂಟೌನ್ ಬಳಿಯಿದ್ದ ಆರೋಪಿ ಮಾರುತಿಯನ್ನು ಬಂಧಿಸಿದ್ದಾರೆ.