ಗುರುಕುಲ ಇಂಟರ್ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ; ಅತೀ ಹೆಚ್ಚು ಅಂಕ ಪಡದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Jan 12, 2025, 1:02 PM IST

ಗುರುಕುಲ ಇಂಟರ್ನ್ಯಾಷನಲ್ ಶಾಲೆಯ 46ನೇ ವಾರ್ಷಿಕೋತ್ಸವದಲ್ಲಿ ಏಷಿಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ವತಿಯಿಂದ ಅತೀ ಹೆಚ್ಚು ಅಂಕಗಳನ್ನು ಪಡೆದ 22 ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನಡೆಸಲಾಯಿತು.  ವಿದ್ಯಾರ್ಥಿಗಳ ಜೊತೆ ಅತೀ ಹೆಚ್ಚು ಅಂಕಗಳನ್ನು ಪಡೆಯಲು ಕಾರಣವಾದ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರನ್ನು ಸನ್ಮಾನಿಸಲಾಯಿತು. ಇನ್ನು ಇದೇ ವೇಳೆ ವಿವಿಧ ತರಗತಿಯಿಂದ ಬೆಸ್ಟ್ ಸ್ಟೂಡೆಂಟ್ ಅವಾರ್ಡ್ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡಪ್ರಭ ಪತ್ರಿಕೆಯ ಸಮನ್ವಯ ವಿಶೇಷ ಯೋಜನೆ ಸಂಪಾದಕ ಬಿ.ವಿ ಮಲ್ಲಿಕಾರ್ಜುನಯ್ಯ, ಏಷ್ಯಾನೆಟ್ ಸುವರ್ಣ ನ್ಯೂಸ್ ಔಟ್ ಪುಟ್ ಎಡಿಟರ್ ಶೋಭಾ ಮಳವಳ್ಳಿ, ಕನ್ನಡಪ್ರಭ ಜನರಲ್ ಮ್ಯಾನೇಜರ್ ಮಂಜುನಾಥ್ ದ್ಯಾವನಗೌಡ್ರ, ವರದಿಗಾರ ಎಂ ಪ್ರಕಾಶ್, ಚಲನಚಿತ್ರ ನಟಿ ಸಿಂಧು ಲೋಕನಾಥ್, ಸಿನಿಮಾ ನಿರ್ದೇಶಕ ಎಸ್ ಮಹೇಶ್ ಕುಮಾರ್, ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ನಂಜುಂಡಯ್ಯ, ಪ್ರಾಂಶುಪಾಲ ನಟೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಸುಮಾರು 700ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ನಂಜುಂಡಯ್ಯ 1980 ರಲ್ಲಿ 60 ವಿದ್ಯಾರ್ಥಿಗಳಿಂದ ಕೇವಲ 15₹ ಶುಲ್ಕದೊಂದಿಗೆ ಆರಂಭಿಸಿದ ಶಾಲೆ ಇಂದು 2 ಸಾವಿರಕ್ಕೂ ಅಧಿಕ ಮಕ್ಕಳನ್ನು ಒಳಗೊಂಡಿದೆ.