ಆನ್ಲೈನ್ ಮೂಲಕ ಗಾಂಧಾರಿ ವಿದ್ಯೆ ಕಲಿತ ಹಿಮಬಿಂದು..,ಈ ಮಿಡ್‌ಬ್ರೈನ್‌ ಆಕ್ಟಿವೇಶನ್ ತಂತ್ರವಿದ್ಯೆಯ ರಹಸ್ಯ ಏನು..?

Jul 5, 2023, 11:11 AM IST

ಆಟ ಆಡುತ್ತಾ ಪಾಠ ಕಲಿಯಬೇಕಾದ ವಯಸ್ಸಿನಲ್ಲಿ. ಬಾಲಕಿ ಬಬ್ಬಳು ಗಾಂಧಾರಿ ವಿದ್ಯೆ  ಪ್ರವೀಣೆ ಆಗಿದ್ದಾಳೆ. ಈ ಬಾಲಕಿ12 ವರ್ಷದ  ಹಿಮಬಿಂದು. ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದ ಈಕೆ 6ನೇ ಕ್ಲಾಸ್ ಓದುತ್ತಿದ್ದಾಳೆ. ಆಟ ಆಡುತ್ತಾ ಪಾಠ ಕಲಿಯಬೇಕಾದ ವಯಸ್ಸಿನಲ್ಲೇ ಈ ಬಾಲಕಿ ಗಾಂಧಾರಿ ವಿದ್ಯೆಯ ಮೂಲಕ ಎಲ್ಲರನ್ನೂ ಬೆರಗುಗೊಳಿಸುತ್ತಿದ್ದಾಳೆ. 
ಗಾಂಧಾರಿ, ಕಠಿಣ ತಪಸ್ಸಿನ ಮೂಲಕ ದಿವ್ಯ ದೃಷ್ಟಿಯನ್ನ ಪಡೆದು ಕೊಂಡಿದ್ಲು ನಿಜ. ಆದರೆ ಈ ಮಕ್ಕಳಿಗೆ ಈ ವಿದ್ಯೆ ಇಷ್ಟು ಸುಲಭವಾಗಿ ಒಲಿತಾ ಇರೋದಾದ್ರೂ ಹೇಗೆ ಅನ್ನೊ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ . ಇತ್ತಿಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಈ ವಿದ್ಯೆ ಕಲಿಯಲು ಆಸಕ್ತರಾಗಿದ್ದಾರೆ. ಅಷ್ಟಕ್ಕೂ ಈ ವಿದ್ಯೆ ಕಲಿಯೋದ್ರಿಂದ ಆಗೋ ಲಾಭ ಏನೇನು?  ಇಷ್ಟಕ್ಕೂ ಇದಕ್ಕೆ  ಗಾಂಧಾರಿ ವಿದ್ಯೆ ಅನ್ನೋದ್ಯಾಕೆ..?ಮಿಡ್ ಬ್ರೇನ್ ಆ್ಯಕ್ಟಿವೇಶನ್ ತಂತ್ರವಿದ್ಯೆ ರಹಸ್ಯ.. ಏನು .ಈ ಹಿಂದೆ ಗುರುಕುಲದಲ್ಲೂ ವಿದ್ಯಾರ್ಥಿಗಳಿಗೆ ಈ ಗಾಂಧಾರಿ ವಿದ್ಯೆಕಲಿಸಲಾಗುತ್ತಿತ್ತು. ವಿದ್ಯಾರ್ಥಿಗಳೇ ಯಾಕೆ ಈ ವಿದ್ಯೆ ಕಲಿಯಲು ಇಷ್ಟು ಆಸಕ್ತರಾಗಿದ್ದಾರೆ ಗೊತ್ತಾ..?  ಈ ವಿಡಿಯೋ ನೋಡಿ