Dec 18, 2019, 6:14 PM IST
ಇಂದೋರ್(ಡಿ.18): ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಮೇಲೆ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಕಟ್ಟಬೇಕು. ಪೊಲೀರು ಇಲ್ಲ, ಸಿಸಿಟಿವಿ ಕೂಡ ಇಲ್ಲ ಎಂದು ನಿಯಮ ಉಲ್ಲಂಘನೆ ಮಾಡಿದರೆ, ಸಾರ್ವಜನಿಕರಿಂದ ತಪ್ಪಿಸಿಕೊಳ್ಳೋಕೆ ಅಸಾಧ್ಯ. ಹೀಗೆ ನಿಯಮ ಉಲ್ಲಂಘಿಸಿದ ಬಸ್ ಚಾಲಕನನ್ನು ನಿಲ್ಲಿಸಿದ ಸಾರ್ವಜನಿಕರು, ಬಸ್ಕಿ ಶಿಕ್ಷೆ ನೀಡಿದ್ದಾರೆ.
ಇದನ್ನೂ ಓದಿ: ರೊಚ್ಚಿಗೆದ್ದ ಗ್ರಾಹಕನಿಂದ ಕತ್ತೆ ವಾಹನ ಬೋರ್ಡ್; ಕೋರ್ಟ್ ಮೆಟ್ಟಿಲೇರಿದ MG !.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ. ಅಜಾಗರೂಕತೆಯಿಂದ ಹಾಗೂ ವೇಗವಾಗಿ ಬಸ್ ಓಡಿಸಿದ ಕಾರಣಕ್ಕೆ ಬಸ್ ತಡೆದ ಸಾರ್ವಜನಿಕರೂ, ಬಸ್ ಚಾಲಕನನ್ನು ಬಸ್ ಮೇಲೆ ಹತ್ತಿಸಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಸಾರ್ವಜನಿಕ ದಾರಿಯಲ್ಲಿ ಬಸ್ ಚಾಲಕನಿಗೆ ಶಿಕ್ಷೆ ವಿಧಿಸಿದ್ದಾರೆ.