ಗಿಚ್ಚಿಗಿಲಿ ಗಿಲಿ ಧನರಾಜ್‌ ಆಚಾರ್‌ ಸ್ಟ್ರಗಲ್‌ ಸ್ಟೋರಿ, ಊಟಕ್ಕೂ ಪರದಾಡುವಾಗ ಹಣಕ್ಕಾಗಿ ಕಳ್ಳರ ದಾಳಿ!

By Gowthami K  |  First Published Aug 16, 2024, 8:12 PM IST

ಕಿರುತೆರೆ ಮತ್ತು ಯೂಟ್ಯೂಬ್‌ ಜಗತ್ತಿನಲ್ಲಿ ಮಿಂಚುತ್ತಿರುವ ಧನರಾಜ್‌ ಆಚಾರ್‌ ಅವರ ಸ್ಟ್ರಗಲ್‌ ಕಥೆ ಇದು. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಾ, ಮಠದಲ್ಲಿ ಊಟ, ವಸತಿ ಹುಡುಕಿಕೊಂಡು, ಮಧ್ಯರಾತ್ರಿ ದಾಳಿ ನಡೆದ ಬಗ್ಗೆ ಕೂಡ ಹೇಳಿದ್ದಾರೆ.


ಕಿರುತೆರೆ ಶೋ ಗಿಚ್ಚಿಗಿಲಿ ಗಿಲಿ ಶೋ ಮೂಲಕ ಫೇಮಸ್‌ ಆಗಿರುವ ನಟ, ಯೂಟ್ಯೂಬರ್‌ ಧನರಾಜ್ ಆಚಾರ್ ಅವರ ಮೇಲೆ ಬೆಂಗಳೂರಿನಲ್ಲಿ ಮಧ್ಯರಾತ್ರಿ ದಾಳಿಯಾದ ಬಗ್ಗೆ ದಿ ಪವರ್ ಹೌಸ್‌ ವೈನ್‌ ಯೂಟ್ಯೂಬ್ ಚಾನೆಲ್‌ ನಲ್ಲಿ ಹೇಳಿಕೊಂಡಿದ್ದಾರೆ.

ರಂಗಾಯಣದಲ್ಲಿ ನಟನೆಯನ್ನು ಕಲಿತ ಧನರಾಜ್ , ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನಲ್ಲಿ ಬಂದು ಸಿನೆಮಾ ಜಗತ್ತಿನಲ್ಲಿ ಅಥವಾ ಸೀರಿಯಲ್ ಇಂಡಸ್ಟ್ರೀಯಲ್ಲಿ ಹೆಸರು ಮಾಡಬೇಂಬುದು ಅವರ ಕನಸಾಗತ್ತು.

Latest Videos

undefined

ರಂಗಾಯಣ ಮುಗಿಸಿ ಬೆಂಗಳೂರಿಗೆ ಬಂದಾಗ ನನ್ನಲ್ಲಿ ದುಡ್ಡಿರಲಿಲ್ಲ. ಆ ಸಮಯದಲ್ಲಿ ಜೆಪಿ ನಗರದಿಂದ ಹುಳಿಮಾವು ವರೆಗೆ ಸುಮಾರು 16 ಕಿ.ಮೀ ಇತ್ತು. ನನ್ನ ಉಳಿದುಕೊಳ್ಳುವ ಜಾಗ 10 ಕಿಮೀ ದೂರ ಇದೆ ಎಂದಾಗ ಬಸ್ಸಿಂದ ಇಳಿಯುತ್ತಿದ್ದೆ. ಯಾಕೆಂದರೆ ನಾನು ದುಡ್ಡು ಉಳಿಸಬೇಕಿತ್ತು. ಆವಾಗಿನಿಂದಲೇ ನನಗೆ ಸೇವಿಂಗ್ಸ್ ಮಾಡುವುದನ್ನು ಕಲಿತುಕೊಂಡಿದ್ದು, ಬೆಂಗಳೂರಿಗೆ ಬಂದ ಆರಂಭದಲ್ಲಿ ಒಂದು ಸಿನೆಮಾದಲ್ಲಿ 8 ತಿಂಗಳು ಕೆಲಸ ಮಾಡಿದೆ. ದುಡ್ಡು ಕೊಡುತ್ತಿದ್ದರು. ಆದ್ರೆ ಆಮೇಲೆ ಸಿನೆಮಾ ಟೇಕ್ ಆಫ್ ಆಗಲಿಲ್ಲ. ಕೈನಲ್ಲಿ ದುಡ್ಡು ಇಲ್ಲ. ಕೆಲಸವೂ ಇಲ್ಲದ ಪರಿಸ್ಥಿತಿ ನಿರ್ಮಾಣ ಆಯ್ತು.

ರಾಷ್ಟ್ರಪ್ರಶಸ್ತಿಯ ಖುಷಿಯನ್ನು ವಿನಮ್ರದಿಂದ ಅಪ್ಪು, ಕನ್ನಡಿಗರಿಗೆ ಅರ್ಪಿಸಿದ ರಿಷಬ್ ಶೆಟ್ಟಿ

ನನ್ನ ಪುಣ್ಯಕ್ಕೆ ಸ್ನೇಹಿತರೊಬ್ಬರು ರಾಯರ ಮಠವೊಂದಿದೆ. ಅಲ್ಲಿ ಉಳಿದುಕೊಳ್ಳಬಹುದು ಎಂದು ವ್ಯವಸ್ಥೆ ಮಾಡಿದರು. 2 ದಿನಕ್ಕೆಂದು ಹೇಳಿದ್ದರು. ಆದರೆ ನನ್ನ ಒಡನಾಟ ನೋಡಿ ಇಲ್ಲೇ ಇರಬಹುದು ಎಂದು ಹೇಳಿದರು. ನನಗೆ ಮಠದಲ್ಲಿ ವಸತಿ, ಊಟ ಉಚಿತವಾಗಿತ್ತು. ಕೆಲಸ ಸಿಕ್ಕಿದ ಮೇಲೆ ದುಡ್ಡು ಕೊಡಬೇಕು ಮಠಕ್ಕೆ ಎಂದುಕೊಂಡಿದ್ದೆ. ಕೆಲಸ ಇಲ್ಲದ ಸಮಯವದು. ಮಠದಲ್ಲಿ ಕೊಟ್ಟ ಊಟವನ್ನು ಬುತ್ತಿಯಲ್ಲಿ ಕಟ್ಟಿಕೊಂಡು ಪಾರ್ಕ್ ಒಂದರಲ್ಲಿ ಕುಳಿತುಕೊಂಡು ವೀಕೆಂಡ್‌ ವಿಥ್ ರಮೇಶ್ ನೋಡುತ್ತಿದ್ದೆ. ಅದನ್ನು ಮೋಟಿವೇಶನ್ ಆಗಿ ತೆಗದುಕೊಳ್ಳುತ್ತಿದ್ದೆ. 

ಯಶ್ ಮೆಜೆಸ್ಟಿಕ್‌ ನಲ್ಲಿ ಕುಳಿತು ಅತ್ತುಕೊಂಡು ಮನೆಗೆ ಹೋಗಬೇಕಾ? ಅಥವಾ ಸಿನೆಮಾ ಇಂಡಸ್ಟ್ರೀಸ್‌ನಲ್ಲಿ  ಜೀವನ ಕಟ್ಟಿಕೊಳ್ಳಬೇಕಾ? ವೀಕೆಂಡ್‌ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಹೇಳುವ ಆ ಮಾತುಗಳೆಲ್ಲ ತುಂಬಾ ಜನಕ್ಕೆ ಕನೆಕ್ಟ್ ಆಗಿರಬಹುದು ನನಗೂ ಅದೇ ರೀತಿ ಆಯ್ತು.

ಕನ್ನಡ ಚಿತ್ರರಂಗಕ್ಕೆ ಫಲಿಸಿತೇ ಪೂಜಾಫಲ, ಕಾಂತಾರ, ಕೆಜಿಎಫ್‌ಗೆ ಎರಡೆರಡು ರಾಷ್ಟ್ರೀಯ ಪ್ರಶಸ್ತಿ!

ಡೈರೆಕ್ಟರ್ ನಂದ ಕಿಶೋರ್ ಅವರ ಮನೆಗೆ ಒಂದು ವಾರ ನಾನು ಅಲೆದಾಡಿದ್ದೇನೆ. ಆಗ ಅವರ ವಿಕ್ಟರಿ ಸಿನೆಮಾ ತೆರೆ ಕಂಡಿತ್ತು. ಅವರ ಮನೆ ಹತ್ತಿರದ ಪಾರ್ಕ್ ಗೆ ಹೋಗೋದು, ಅವರಿಗಾಗಿ ಕಾಯೋದು. ಆಗ ಕಾಟೇರ ನಿರ್ದೇಶಕ ತರುಣ್ ಸುಧೀರ್  ಅವರು ಬಂದು ಏನು ಮಾಡ್ತಿದ್ದೀಯಾ ಇಲ್ಲಿ, ಯಾವಾಗಲೂ ಬಂದು ನಿಲ್ಲುತ್ತೀಯಲ್ಲ ಎಂದು ಪ್ರಶ್ನಿಸಿದರು.

ಸರ್ ನನಗೆ ಡೈರೆಕ್ಷನ್‌ ನಲ್ಲಿ ಏನಾದರೂ ಮಾಡಬೇಕು ಎಂದು ಅಂದುಕೊಂಡಿದ್ದೇನೆ. ನನಗೆ ಹೇಗೆ ಅಂತ ಗೊತ್ತಿಲ್ಲ. ವಿಕ್ಟರಿ ಸಿನೆಮಾದ್ದು ಎಲ್ಲ ಸ್ಕ್ರಿಪ್ಟ್ ಬರೆದಿದ್ದೇನೆ ಎಂದು ಹೇಳಿದೆ.  ತರುಣ್ ನನಗೆ  ಸ್ಕ್ರಿಪ್ಟ್ ಗೆ ಆಟೋಗ್ರಾಫ್ ಕೊಟ್ಟರು. ಬಳಿಕ ತಮ್ಮ ಅಸಿಸ್ಟೆಂಟ್ ಬಳಿ ಮಾತನಾಡುವಂತೆ ಹೇಳಿ, ಯಾವಾಗ ನೀನು ಬರಬೇಕು ಎಂದು ತಿಳಿಸುತ್ತಾರೆ ಎಂದರು. ಖುಷಿಯಿಂದ ಆಯ್ತು ಸರ್ ಎಂದು ಹೋದೆ.

ತರುಣ್ ಅವರೇ ಚೆನ್ನಾಗಿ ಮಾತನಾಡಿಸಿದ್ದರು.  ಆದರೆ ಒಳಗೆ ಹೋದ ಮೇಲೆ ನನ್ನನ್ನು ಅವರ ಆಫೀಸ್ ಸ್ಟಾಫ್ ನೋಡುವ ರೀತಿಯೇ ಬದಲಾಯ್ತು. ಯಾವನ್ ನೀನು? ಯಾರು ನೀನು? ಏನಾಗ್ಬೇಕು? ಇಲ್ಲಿ ಕೆಲಸ ಇಲ್ಲ. ಹುಂ ನಂಬರ್ ಕೊಟ್ಟು ಹೋಗು. ಅದೇನಾಗುತ್ತೋ ನೋಡೋಣ. ಕಾಲ್ ಬರ್ಲಿಕ್ಕಿಲ್ಲ. ನೋಡೋಣ ಎಂದು ಅವರು ಮಾತನಾಡುವ ಶೈಲಿ ಮೆದುವಾಗಿರಲ್ಲಿ. ಹಾಗೇ ಹೇಳಿದ ಮೇಲೆ ನನಗೆ ಹೋಗಲು ಮನಸ್ಸು ಬರಲಿಲ್ಲ. ಸೀದಾ ಅಲ್ಲಿಂದ ಹೊರಟೆ. ತರುಣ್ ಸರ್‌ ಹುಡುಕಿಕೊಂಡು ಇನ್ನೊಂದು ದಿನ ಹೋದೆ ಅಲ್ಲಿರಲಿಲ್ಲ.  ಹಿಂತಿರುಗಿ ಬಂದೆ.

ನಾನು ಅನೇಕ ಫಿಲ್ಮ್ ನದ್ದು ಹೀಗೆ ಸ್ಕ್ರಿಪ್ಟ್  ಬರೆದು ಸರ್ ನಿಮ್ಮದೇ ಫಿಲ್ಮ್ ನದ್ದು  ಸ್ಕ್ರಿಪ್ಟ್  ಬರೆದಿದ್ದೇನೆ ಅಂತ ಅನೇಕ ನಿರ್ದೇಶಕರ ಬಳಿ ಹೋಗಿದ್ದೆ. ಒಂದು ಬಾರಿ ಯೋಗರಾಜ್ ಭಟ್ ಭೇಟಿಗೆ ಹೋದೆ. ಆದರೆ ಒಳಗೆ ಬಿಡಲಿಲ್ಲ. ಅವರಿಲ್ಲ ಯಾರನ್ನೂ ಒಳಗೆ ಬಿಡುವುದಿಲ್ಲ ಎಂದರು. ಆಗ ದನಕಾಯೋನು ಶೂಟಿಂಗ್ ನಡೆಯುತ್ತಿತ್ತು. ಆದ್ರೆ ನನ್ನ ಎದುರೇ ಯೋಗರಾಜ್ ಭಟ್ ಪಾಸ್ ಆದ್ರು. ನಾನು  ಅವರ ಕಾರು ತನಕ ಓಡಿಕೊಂಡು ಹೋಗಿ ಸರ್‌.... ಸರ್‌... ನಿಮ್ಮದೇ ಸಿನೆಮಾದ  ಸ್ಕ್ರಿಪ್ಟ್  ಬರೆದಿದ್ದೇನೆ ಎಂದು ಹೇಳಿದೆ.  ಅವರು ದಿನಕ್ಕೆ  ಈ ರೀತಿಯ ಅದೆಷ್ಟೋ ಜನರನ್ನು ನೋಡುತ್ತಾರೆ. ನಾವೆಲ್ಲ ಲೆಕ್ಕವಾ?

ಬಳಿಕ ನನ್ನ ಸ್ನೇಹಿತ ದತ್ತ ಎಂಬಾತ ರವಿ ಆರ್ ಗರಣಿ ಅವರ ನಂಬರ್ ಕೊಟ್ಟ. ಆಗ ಅವರ ಅಮೃತವರ್ಷಿಣಿ ಎಂಬ ಫೇಮಸ್‌ ಧಾರವಾಹಿಯಲ್ಲಿ 8 ತಿಂಗಳು ಡೈರೆಕ್ಷನ್‌ ವಿಭಾಗದಲ್ಲಿ ಕೆಲಸ ಮಾಡಿದೆ. ಅಲ್ಲಿ ಡೈರೆಕ್ಷನ್ ಬಗ್ಗೆ ಸ್ವಲ್ಪ ತಿಳಿಯಿತು. ಆಗ ನನಗೆ 5 ಸಾವಿರ ಸಂಬಳ ಇತ್ತು. ಕೆಲಸದ ಜಾಗದಿಂದ ಮಠಕ್ಕೆ 15 ಕಿ. ಮೀ ದೂರ ಇತ್ತು. ಶೂಟಿಂಗ್ ಮುಗಿಯುವಾಗ ರಾತ್ರಿ 12 ಗಂಟೆ ಆಗುತ್ತಿತ್ತು. ಶೂಟಿಂಗ್‌ ಕ್ಯಾಸೆಟ್‌ ಅನ್ನು ನಾನು 15 ಕಿಮೀ ದೂರ ಕೊಡಲು ಹೋಗಬೇಕಿತ್ತು. ಬಳಿಕ ಮಠಕ್ಕೆ ಬರಬೇಕಿತ್ತು. ನನಗೆ ದಿನಕ್ಕೆ 50 ರೂ ಬಸ್ ಚಾರ್ಜ್ ಕೊಡುತ್ತಿದ್ದರು.  ನಾನು ಮ್ಯಾನೇಜರ್ ಬಳಿ 75 ಕೊಡಿ ಸರ್‌ ಬಸ್‌ ಚಾರ್ಜ್ ಅಷ್ಟು ಆಗುತ್ತೆ ಅಂತ, ಆದರೆ ಅವರು ಕೊಡುತ್ತಲೇ ಇರಲಿಲ್ಲ. 

ಹೀಗಾಗಿ  ರಾತ್ರಿ 1 ಗಂಟೆ ಸಮಯದಲ್ಲಿ ಮಠಕ್ಕೆ ನಡೆದುಕೊಂಡು ಬರುತ್ತಿದ್ದೆ. ನಾನಿದ್ದದ್ದು ಹುಳಿ ಮಾವು ಗೇಟ್‌ನಲ್ಲಿ ಆಗ ಅದು ಡೆವಲೆಪ್‌ ಆಗದ ಪ್ರದೇಶವಾಗಿತ್ತು. ಕಾಡು ಪ್ರದೇಶವಾಗಿತ್ತು. ಆಗ ರಾತ್ರಿ ಮನುಷ್ಯರ ಮೇಲೆ ಕಳ್ಳರು ದಾಳಿ ಮಾಡುತ್ತಿದ್ದರು. ಮಠದಲ್ಲಿರುವ ನನ್ನ ಗೆಳೆಯರು ಈ ಬಗ್ಗೆ ಹೇಳಿದ್ದರು ಕೂಡ, ಬರುವಾಗ ಹುಷಾರಾಗಿ ಬಾ, ರಾಬರಿ ಆಗುತ್ತದೆ ಎಂದು. ನಾನು ಅದಕ್ಕಾಗಿ ಬ್ಯಾಗ್‌ ನಲ್ಲಿ ಕಲ್ಲು ತುಂಬಿಸಿಕೊಂಡೇ ಬರುತ್ತಿದೆ. ಯಾರಾದ್ರು ರಾಬರಿಗೆ ಬಂದ್ರೆ ಕಲ್ಲು ಬಿಸಾಡುವುದು ಅಂತ.   ಒಂದು ಸಲ ನನ್ನ ಮೇಲೆ ದಾಳಿ ಆಗಿತ್ತು. ಕಲ್ಲು ಬಿಸಾಡಿಕೊಂಡು ಓಡಿಕೊಂಡು ಹೋಗಿ ಮಠ ಸೇರಿದೆ. 

ಇದಾದ ನಂತರ 8 ತಿಂಗಳ ಬಳಿಕ ಒಂದು ಚಾಲನ್‌ ನಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್‌ ಆಗಿ ಕೆಲಸ ಆರಂಭಿಸಿದೆ. ಆಗ ಯಾವ ಮ್ಯಾನೇಜರ್ ನಿನಗೆ ದುಡ್ಡು ಕೊಡುವುದಿಲ್ಲ ಎಂದು ಗದರಿದ್ದರೂ, ಚಾನೆಲ್‌ ನಲ್ಲಿ ನನ್ನನ್ನು ನೋಡಿ ಮಾತನಾಡಿಸುವ ರೀತಿಯೇ ಬೇರೆಯಾಗಿತ್ತು. ಭಯಂಕರ ಗೌರವ ಕೊಟ್ಟು  ಸರ್‌  ಎಂದು ಕರೆದು ಮಾತನಾಡಿಸಿದರು. ಇದರಿಂದ ನಾನು  ದೇವರು, ದೈವದ ಕೃಪೆ ಯಾವಾಗಲೂ ನನ್ನ ಮೇಲಿದೆ ಎಂದು ನಂಬುತ್ತೇನೆ ಎಂದಿದ್ದಾರೆ.
 

click me!