ನಮ್ಮ ದೇಹದಲ್ಲಿ ಏನೆಲ್ಲ ಇದೆ, ಎಲ್ಲೆಲ್ಲಿದೆ, ಅದ್ರ ಕೆಲಸವೇನು ಎಂಬುದು ನಮಗೆ ಸರಿಯಾಗಿ ತಿಳಿದಿಲ್ಲ. ದೇಹದ ಬಗ್ಗೆ ಸೂಕ್ತ ಮಾಹಿತಿ ಇದ್ರೆ ಅದ್ರ ರಕ್ಷಣೆ ಸುಲಭವಾಗುತ್ತದೆ. ನಿಮ್ಮ ದೇಹದ ಇಂಚಿಂಚನ್ನು ತಿಳಿಯುವ ಆಸಕ್ತಿ ನಿಮಗಿದ್ದರೆ ಈ ವಸ್ತುಸಂಗ್ರಹಾಲಯಕ್ಕೊಮ್ಮೆ ಭೇಟಿ ನೀಡಿ.
ನಮ್ಮ ಕುತೂಹಲವನ್ನು ಹೆಚ್ಚಿಸುವ ಅನೇಕ ಸ್ಥಳಗಳು ಜಗತ್ತಿನಲ್ಲಿವೆ. ನೆದರ್ಲೆಂಡ್ ಲೇಡೆನ್ ನಗರ ಕೂಡ ಇದ್ರಲ್ಲಿ ಸೇರಿದೆ. ನಮ್ಮ ದೇಹದ ಎಲ್ಲ ಭಾಗಗಳನ್ನು ನಾವು ನೋಡಲು ಸಾಧ್ಯವಿಲ್ಲ. ಆದ್ರೆ ನೆದರ್ಲೆಂಡ್ ಈ ವಸ್ತು ಸಂಗ್ರಹಾಲಯದಲ್ಲಿ ನಮ್ಮ ದೇಹದ ಎಲ್ಲ ಅಂಗಗಳನ್ನು ನೋಡಬಹುದು, ಅದರ ಒಳಗೆ ಹೋಗಿ ಬರಬಹುದು. ನಮ್ಮ ದೇಹದ ಬಗ್ಗೆ ನಮಗಿರುವ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳಬಹುದು. ನಾವಿಂದು ನೆದರ್ಲೆಂಡ್ ವಸ್ತುಸಂಗ್ರಹಾಲಯದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ನೆದರ್ಲೆಂಡ್ (Netherland) ಲೈಡೆನ್ ನಗರದಲ್ಲಿ ಕಾರ್ಪಸ್ (Corpus) ಎಂಬ ಹೆಸರಿನ ಅತ್ಯಂತ ಪ್ರಸಿದ್ಧ, ಅಸಾಮಾನ್ಯ ವಸ್ತುಸಂಗ್ರಹಾಲಯ ಇದೆ. 35 ಮೀಟರ್ ಉದ್ದದ ಉಕ್ಕಿನ ಬೃಹತ್ ಆಕೃತಿಯನ್ನು ನೀವು ವಸ್ತುಸಂಗ್ರಹಾಲಯದ ಕಟ್ಟಡದಲ್ಲಿ ಮೊದಲು ನೋಡ್ಬಹುದು. ಅದ್ರ ಒಂದು ಬದಿಯಲ್ಲಿ ಏಳು ಅಂತಸ್ತಿನ ಕಟ್ಟಡವಿದೆ. ಅಲ್ಲಿ ಮಾನವ ದೇಹದ ವಸ್ತು ಸಂಗ್ರಹಾಲಯವಿದೆ. ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ಜನರಿಗಾಗಿ ಈ ವಸ್ತುಸಂಗ್ರಹಾಲಯವನ್ನು ವಿಶೇಷ ರೀತಿಯಲ್ಲಿ ನಿರ್ಮಿಸಲಾಗಿದೆ.
ಅರೆರೆ! ಇಲ್ಲಿ ನಿಂತು ಡಾ.ಬ್ರೋ ಇದೇನ್ ಮಾಡ್ತಿದ್ದಾರೆ? ಚೀನಾದಲ್ಲಿ ನಕ್ಕು ನಗಿಸುವ ಆಟವಿದು!
ಈ ಮ್ಯೂಸಿಯಂ (Museum ) ನಲ್ಲಿ ನೀವು ದೇಹದ ಪ್ರತಿಯೊಂದು ಭಾಗವನ್ನು ಒಳಗಿನಿಂದ ನೋಡಲು ಸಾಧ್ಯವಾಗುತ್ತದೆ. ಮಾನವ ದೇಹದ ಆಂತರಿಕ ಅಂಗಗಳಿಗೆ ಸಂಬಂಧಿಸಿದ ಜೀವಶಾಸ್ತ್ರದ ಜ್ಞಾನವನ್ನು ಮತ್ತಷ್ಟು ಅನ್ವೇಷಿಸಲು ಸಾಧ್ಯವಾಗುತ್ತದೆ.
ನೆದರ್‌ಲ್ಯಾಂಡ್ಸ್‌ನ ಕಾರ್ಪಸ್ ಮ್ಯೂಸಿಯಂ, ಮಾನವ ಅಂಗಗಳನ್ನು ಆಂತರಿಕವಾಗಿ ಅನ್ವೇಷಿಸಲು ಸಹಕಾರಿಯಾಗಿರುವ ವಿಶ್ವದ ಮೊದಲ ಮಾನವ ಜೀವಶಾಸ್ತ್ರದ ಸಂವಾದಾತ್ಮಕ ವಸ್ತುಸಂಗ್ರಹಾಲಯವಾಗಿದೆ. ಇಲ್ಲಿ ನೀವು ಅನ್ನನಾಳ, ಹೃದಯ, ಯಕೃತ್ತು, ಮೂತ್ರಪಿಂಡ, ಕರುಳು, ಸ್ನಾಯುಗಳು, ಮೂಳೆಗಳು, ಕಣ್ಣು, ಕಿವಿ, ಮೂಗು, ಶ್ವಾಸಕೋಶ ಸೇರಿದಂತೆ ಇತರ ಆಂತರಿಕ ಅಂಗಗಳನ್ನು ನೋಡಬಹುದು. ಅನೇಕ ಪರದೆಗಳು ಗಾಯ ಅಥವಾ ದೇಹಕ್ಕೆ ಇತರ ಹಾನಿಯಾದ್ರೆ ಅದ್ರ ಪರಿಣಾಮ ಏನಾಗುತ್ತದೆ ಎಂಬುದನ್ನು ತಿಳಿಸುತ್ತವೆ. ಸಂತಾನೋತ್ಪತ್ತಿ ಪ್ರಕ್ರಿಯೆಯು ಹೇಗೆ ಸಂಭವಿಸುತ್ತದೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ.
ಅಂಗದಿಂದ ಅಂಗಕ್ಕೆ ಚಲನೆಯು ಎಸ್ಕಲೇಟರ್‌ನಲ್ಲಿ ಆಗುತ್ತದೆ. ನಿಮಗೆ ಹೆಡ್‌ಫೋನ್‌ಗಳನ್ನು ನೀಡಲಾಗುತ್ತದೆ. ಇದರಲ್ಲಿ ಮಾನವ ದೇಹದ ಸಂಪೂರ್ಣ ರಚನೆ, ಅದರ ಕಾರ್ಯವನ್ನು ವಿವರವಾಗಿ ಮತ್ತು ವಿವಿಧ ಭಾಷೆಗಳಲ್ಲಿ ವಿವರಿಸಲಾಗುತ್ತದೆ. ನೀವು ಇಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಮ್ಮ ದೇಹದ ಅಂಗಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತೀರಿ. ಈ ವಸ್ತುಸಂಗ್ರಹಾಲಯದ ಸಹಾಯದಿಂದ ಮಾನವಕುಲದ ಸುದೀರ್ಘ ಇತಿಹಾಸದಲ್ಲಿ ಮೊದಲ ಬಾರಿಗೆ, ನಮ್ಮ ದೇಹವು ಹೇಗೆ ಜೀವಿಸುತ್ತದೆ ಎಂಬುದನ್ನು ಜನರು ನೋಡಬಹುದು, ಕೇಳಬಹುದು, ಸ್ಪರ್ಶಿಸಬಹುದು ಮತ್ತು ಅರ್ಥಮಾಡಿಕೊಳ್ಳಬಹುದು.
ಗಂಡಸರ ಬುದ್ಧಿ ಗೊತ್ತು ಮಾಡ್ಕೊಂಡ ದೇಶ, ಈ ಐಡಿಯಾದಿಂದ ಪಬ್ಲಿಕ್ ಟಾಯ್ಲೆಟ್ ಈಗ ಫುಲ್ ಕ್ಲೀನ್!
2008 ರ ಮಾರ್ಚ್ 14 ರಂದು ಅಂದಿನ ಇಂಗ್ಲೆಂಡ್ ರಾಣಿ ಬ್ಯಾಟ್ರಿಕ್ಸ್ ಈ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದ್ದರು. 2006 ರ ಕೊನೆಯಲ್ಲಿ ಈ ವಸ್ತು ಸಂಗ್ರಹಾಲಯದ ನಿರ್ಮಾಣ ಶುರುವಾಗಿತ್ತು. 27 ಮಿಲಿಯನ್ ಡಾಲರ್ ವೆಚ್ಚದಲ್ಲಿ ಈ ವಸ್ತುಸಂಗ್ರಹಾಲಯವನ್ನು ಆಗ ನಿರ್ಮಿಸಲಾಗಿದೆ. ವಸ್ತುಸಂಗ್ರಹಾಲಯವು ವಿಶ್ವದಲ್ಲೇ ಅತ್ಯಂತ ವಿಶಿಷ್ಟವಾದ ವಸ್ತುಸಂಗ್ರಹಾಲಯವಾಗಿದೆ. ಈ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವ ಜನರು ತಮ್ಮ ದೇಹದ ರಚನೆ, ಅದಕ್ಕೆ ತೊಂದ್ರೆ ಆದ್ರೆ ಆಗುವ ಸಮಸ್ಯೆಗಳ ಬಗ್ಗೆ ಸೂಕ್ತವಾದ ಮಾಹಿತಿ ಪಡೆಯುವ ಕಾರಣ ಆರೋಗ್ಯ ಮತ್ತು ದೀರ್ಘಾಯುಷ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲು ನೆರವಾಗುತ್ತದೆ ಎಂದು ವಸ್ತುಸಂಗ್ರಹಾಲಯದ ಸೃಷ್ಟಿಕರ್ತರು ನಂಬುತ್ತಾರೆ.
ಮ್ಯೂಸಿಯಂ ಆಫ್ ಹ್ಯೂಮನ್ ಬಾಡಿ (Museum of Human Body) ಫಂಡ್ 6 ವರ್ಷಕ್ಕಿಂತ ಮೇಲ್ಪಟ್ಟ ಜನರಿಗಾಗಿ ವಿನ್ಯಾಸಗೊಳಿಸಲಾಗಿದೆ. ಆಮ್ಸ್ಟರ್‌ಡ್ಯಾಮ್ - ಹೇಗ್ ಹೆದ್ದಾರಿಯಿಂದ ನೀವು ಹಾದು ಹೋಗುವಾಗ ವಸ್ತುಸಂಗ್ರಹಾಲಯವು ಸ್ಪಷ್ಟವಾಗಿ ಗೋಚರಿಸುತ್ತದೆ. ನೀವು ಅಲ್ಲಿಗೆ ಭೇಟಿ ನೀಡುವುದಾದ್ರೆ ಕಾರ್ಪಸ್ ಮ್ಯೂಸಿಯಂ ವೆಬ್‌ಸೈಟ್ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.