
ಕಾರಿಗೆ ಲಾಕ್ ಹಾಕಿ ನಾಲ್ಕು ಬಾರಿ ಚೆಕ್ ಮಾಡಿ ಹೋದ್ರೂ ಕೆಲವು ಕಡೆ ಗ್ಲಾಸ್ ಒಡೆದು ಕಾರ್ ಒಳಗಿರೋದನ್ನು ದೋಚುತ್ತಾರೆ. ಮತ್ತೆ ಕೆಲವರು ಒಂದು ಕೈ ಮುಂದೆ ಹೋಗಿ ಕಾರನ್ನೇ ದೋಚುತ್ತಾರೆ. ಇನ್ನು ಕಾರ್ ಲಾಕ್ ಹಾಕದೆ ಹೋದ್ರೆ ಕಥೆ ಮುಗಿದಂತೆ. ನಾಲ್ಕು ಹೆಜ್ಜೆ ಮುಂದೆ ಹೋಗಿ ಹಿಂತಿರುಗಿ ನೋಡಿದ್ರೆ ಕಾರ್ ಮಾಯವಾಗಿರುತ್ತದೆ. ಆದ್ರೆ ಕೆನಡಾದ ಒಂದು ಊರಿನಲ್ಲಿ ಕಾರ್ ಎಲ್ಲೇ ಇರಲಿ, ಅದರ ಬಾಗಿಲು ಲಾಕ್ ಮಾಡೋದೇ ಇಲ್ಲ. ಕೀ ಹಾಕದೆ ಹೋದ್ರೂ ಜನರು ಕಾರನ್ನು ಯಾರೂ ತೆಗೆದುಕೊಂಡು ಹೋಗೋದಿಲ್ಲ. ಇದ್ರ ಹಿಂದೆ ಯಾವುದೇ ಪದ್ಧತಿ, ಸಂಪ್ರದಾಯವಿಲ್ಲ. ಮಾನವೀಯತೆ ಅಡಗಿದೆ. ನಾವಿಂದು ಯಾವ ಊರಿನಲ್ಲಿ ಕಾರನ್ನು ಲಾಕ್ ಮಾಡದೆ ಹೋಗ್ತಾರೆ ಹಾಗೆ ಯಾಕೆ ಹೀಗೆ ಮಾಡ್ತಾರೆ ಎಂಬುದನ್ನು ನಿಮಗೆ ಹೇಳ್ತೇವೆ.
ಕಾರ (Car) ನ್ನು ಲಾಕ್ ಮಾಡಲ್ಲ ಈ ಊರಿನ ಜನ : ಕೆನಡಾ (Canada) ದಲ್ಲಿ ಚರ್ಚಿಲ್ ಎಂಬ ಸಣ್ಣ ನಗರವಿದೆ. ಹಡ್ಸನ್ ಕೊಲ್ಲಿಯ ಪಶ್ಚಿಮ ತುದಿಯಲ್ಲಿ ಈ ನಗರವಿದೆ. ಇಲ್ಲಿನ ಜನರು ತಮ್ಮ ಕಾರನ್ನು ಪಾರ್ಕಿಂಗ್ ಪ್ಲೇಸ್ ಸೇರಿದಂತೆ ರಸ್ತೆ ಬದಿಯಲ್ಲಿ ಎಲ್ಲಿ ನಿಲ್ಲಿಸಿದ್ರೂ ಅನ್ಲಾಕ್ ಮಾಡಿ ಹೋಗ್ತಾರೆ.
ಬೆಂಗಳೂರು ಮತದಾರರಿಗೆ ಗುಡ್ ನ್ಯೂಸ್: ಏ.26ರಂದು ನಮ್ಮ ಮೆಟ್ರೋ ಸಂಚಾರದ ಅವಧಿ ವಿಸ್ತರಿಸದ ಬಿಎಂಆರ್‌ಸಿಎಲ್
ಜನರು ಹೀಗೆ ಮಾಡಲು ಕಾರಣ ಹಿಮಕರಡಿ. ಚರ್ಚಿಲ್ (Churchill ) ಪ್ರದೇಶದಲ್ಲಿ ಹಿಮಕರಡಿ ಹೆಚ್ಚಿನ ಸಂಖ್ಯೆಯಲ್ಲಿದೆ. ಹಾಗಾಗಿಯೇ ಚರ್ಚಿಲನ್ನು ಹಿಮಕರಡಿಯ ರಾಜಧಾನಿ ಎಂದು ಕರೆಯಲಾಗುತ್ತದೆ. ಕೆನಡಾವು ವಿಶ್ವದ ಶೇಕಡಾ 60ರಷ್ಟು ಹಿಮಕರಡಿಗಳಿಗೆ ನೆಲೆಯಾಗಿದೆ. ಈ ಹಿಮಕರಡಿಯು ತುಂಬಾ ಮುದ್ದಾಗಿರುತ್ತದೆ. ಅವು ಏನೂ ಮಾಡೋದಿಲ್ಲ ಅಂತಾ ನೀವು ಅವುಗಳ ಬಳಿ ಹೋದ್ರೆ ನಿಮ್ಮ ಕಥೆ ಮುಗಿದಂತೆ. ಯಾಕೆಂದ್ರೆ ಹಿಮಕರಡಿ ತುಂಬಾ ಅಪಾಯಕಾರಿ. ಅವು ಅನೇಕ ಬಾರಿ ಮನುಷ್ಯನ ಮೇಲೆ ದಾಳಿ ಮಾಡ್ತಿರುತ್ತವೆ. ಹಿಮಕರಡಿ ಸೈಬೀರಿಯನ್ ಹುಲಿಗಿಂತ ದೊಡ್ಡದಾಗಿರುತ್ತದೆ. ಅವುಗಳನ್ನು ಕರಡಿಯಲ್ಲೇ ಅತ್ಯಂತ ಅಪಾಯಕಾರಿ ಮಾಂಸಹಾರಿ ಪ್ರಾಣಿ ಎಂದು ಪರಿಗಣಿಸಲಾಗಿದೆ. ಅವುಗಳ ಮುಂದೆ ಗಲಾಟೆ ಮಾಡದೆ ನಿಧಾನವಾಗಿ ನಿಮ್ಮ ಪ್ರಾಣ ಉಳಿಸಿಕೊಳ್ಳಬೇಕಾಗುತ್ತದೆ. ಹಿಮಕರಡಿ ಚರ್ಚಿಲ್ ನಲ್ಲಿ ಹೆಚ್ಚಿರುವ ಕಾರಣ ಅದರಿಂದ ತಪ್ಪಿಸಿಕೊಳ್ಳಲು ಕಷ್ಟವಾಗಬಹುದು. ಯಾರನ್ನಾದ್ರೂ ಹಿಮಕರಡಿ ಹಿಂಬಾಲಿಸಿಕೊಂಡು ಬರ್ತಿದ್ದರೆ ಅವರು ಕಾರಿನಲ್ಲಿ ಕುಳಿತು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಎನ್ನುವ ಕಾರಣಕ್ಕೆ ಕಾರಿನ ಲಾಕ್ ಹಾಕದೆ ಜನರು ಹೋಗ್ತಾರೆ. ಚರ್ಚಿಲ್ ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮ ಇಲ್ಲ. ಜನರು ಮಾನವೀಯತೆಯಿಂದ ಈ ಕೆಲಸವನ್ನು ಮಾಡ್ತಿದ್ದಾರೆ.
ಪ್ರೇಮ ಸೌಧದ ಮುಂದೆ ಪತಿ ಜೊತೆ ಲವ್ ಮೂಡಲ್ಲಿ ಸತ್ಯ ಸೀರಿಯಲ್ ನಟಿ ಗೌತಮಿ ಜಾದವ್
ಹಿಮಕರಡಿ ವಿಶೇಷತೆ : ಹಿಮಕರಡಿಗಳು ಕೆನಡಾ, ಅಲಾಸ್ಕಾ , ಗ್ರೀನ್ಲ್ಯಾಂಡ್, ರಷ್ಯಾ ಮತ್ತು ನಾರ್ವೆಯ ಆರ್ಕ್ಟಿಕ್ನ ಹೆಪ್ಪುಗಟ್ಟಿದ ಕಾಡುಗಳಲ್ಲಿ ಕಂಡುಬರುತ್ತವೆ. ವಯಸ್ಕ ಹಿಮಕರಡಿಗಳು 2.5 ಮೀಟರ್ ಎತ್ತರ ಮತ್ತು ಸುಮಾರು 680 ಕಿಲೋಗ್ರಾಂಗಳಷ್ಟು ತೂಕವಿರುತ್ತವೆ. ಅದರ ಅಗಾಧ ಗಾತ್ರ ಮತ್ತು ತೂಕ ಅವುಗಳನ್ನು ಭೂಮಿಯ ಮೇಲಿನ ಅತಿದೊಡ್ಡ ಜೀವಂತ ಮಾಂಸಾಹಾರಿ ಪ್ರಾಣಿಯನ್ನಾಗಿಸಿದೆ. 16 ಕಿಮೀ ದೂರದವರೆಗೂ ಬೇಟೆಯ ವಾಸನೆ ಪಡೆಯಬಲ್ಲ ಈ ಹಿಮಕರಡಿಗಳು ಈಜುವುದರಲ್ಲೂ ಮುಂದಿವೆ. ಹೆಣ್ಣು ಹಿಮಕರಡಿಗಳು ಹಿಮದ ಗುಹೆಗಳಲ್ಲಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ತಮ್ಮ ಮರಿಗಳಿಗೆ ಜನ್ಮ ನೀಡುತ್ತವೆ. ಜನನದ ಸಮಯದಲ್ಲಿ ಮರಿಗಳು ಕೇವಲ 30 ಸೆಂ.ಮೀ ಉದ್ದವಿರುತ್ತವೆ. ಹಮಾವಾನ ಬದಲಾವಣೆ ಈ ಹಿಮಕರಡಿಗಳಿಗೆ ಶತ್ರುವಾಗಿದೆ. ಅವರಿಗೆ ಆಹಾರ ಸಿಗದ ಕಾರಣ ಅನೇಕ ಹಿಮಕರಡಿಗಳು ನಗರ ಪ್ರದೇಶಗಳಿಗೆ ಬರ್ತಿವೆ. ಇದೇ ಕಾರಣಕ್ಕೆ ಚರ್ಚಿಲ್ ನಲ್ಲಿ ಹಿಮಕರಡಿಗಳ ಸಂಖ್ಯೆ ಹೆಚ್ಚಾಗ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.