ಭಾರತದಲ್ಲಿ ಎಲ್ಲಿ ತಯಾರಾಗುತ್ತವೆ ಅತ್ಯಧಿಕ ರೈಲಿನ ಬೋಗಿಗಳು? 2024ರಲ್ಲಿ ಬಂದ ಹೊಸ ಕೋಚ್‌ಗಳ ಸಂಖ್ಯೆಯಷ್ಟು?

By Mahmad Rafik  |  First Published Nov 7, 2024, 11:12 AM IST

ಭಾರತೀಯ ರೈಲ್ವೆಯ ಬೋಗಿಗಳನ್ನು ಚೆನ್ನೈ, ರಾಯ್‌ಬರೇಲಿ, ಲಾತೂರ್ ಮತ್ತು ಸೋನಿಪತ್‌ನಲ್ಲಿ ತಯಾರಿಸಲಾಗುತ್ತದೆ. ಚೆನ್ನೈನ ಇಂಟಿಗ್ರಲ್ ಕೋಚ್ ವಿಶ್ವದಲ್ಲೇ ಅತಿ ದೊಡ್ಡ ಫ್ಯಾಕ್ಟರಿಯಾಗಿದೆ.


ನವದೆಹಲಿ: ಭಾರತೀಯ ರೈಲ್ವೆ ವಿಶ್ವದ ಅತಿದೊಡ್ಡ ಜಾಲವಾಗಿದೆ. ಭಾರತೀಯ ರೈಲ್ವೆಯಲ್ಲಿ ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತಾರೆ. ಭಾರತೀಯ ರೈಲ್ವೆ ಇಲಾಖೆ ಸಹ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯಾಣದ ಜೊತೆಯಲ್ಲಿ ಹಲವು ಸೇವೆಗಳನ್ನು ಒದಗಿಸುತ್ತಿದೆ. ದೀಪಾವಳಿ, ದಸರಾ, ಯುಗಾದಿ ಸೇರಿದಂತೆ ಸಾಲು ಸಾಲು ರಜೆಗಳಿರೋ ಸಂದರ್ಭದಲ್ಲಿ ಜನಸಂದಣಿ ಹೆಚ್ಚಿರುವ ಕಡೆ ವಿಶೇಷ ರೈಲುಗಳನ್ನು ಚಲಿಸುತ್ತದೆ. ಸಾಮಾನ್ಯವಾಗಿ ಒಂದು ರೈಲಿಗೆ ಕನಿಷ್ಠ 9 ಕೋಚ್‌ಗಳನ್ನು ಅಳವಡಿಸಲಾಗಿರುತ್ತದೆ. ಇನ್ನು ದೀರ್ಘ ಪ್ರಯಾಣದ ಎಕ್ಸ್‌ಪ್ರೆಸ್‌ ರೈಲುಗಳಿಗೆ 20 ರಿಂದ 22 ಬೋಗಿ ಅಳವಡಿಸಲಾಗಿರುತ್ತದೆ. ವಿಶೇಷ ದಿನಗಳಲ್ಲಿ ಕೋಚ್ ಸಂಖ್ಯೆಯನ್ನು ಸಹ ರೈಲ್ವೆ ಇಲಾಖೆ ಹೆಚ್ಚಳ ಮಾಡುತ್ತದೆ. ಹಾಗಾದ್ರೆ ಈ ಭಾರತೀಯ ರೈಲಿನ ಅತ್ಯಧಿಕ ಕೋಚ್‌ಗಳು ಎಲ್ಲಿ ನಿರ್ಮಾಣವಾಗುತ್ತೆ ಎಂಬ ವಿಷಯ ನಿಮಗೆ ಗೊತ್ತಿದೆಯಾ? 2024ರಲ್ಲಿ ಎಷ್ಟು ಹೊಸ ಕೋಚ್‌ ನಿರ್ಮಾಣ ಮಾಡಲಾಗಿದೆ ಎಂಬುದರ  ಮಾಹಿತಿ ಈ ಲೇಖನದಲ್ಲಿದೆ. 

ಭಾರತೀಯ ರೈಲ್ವೆ ಜನರ ಜೀವನಾಡಿಯಾಗಿ ಕೆಲ ಮಾಡುತ್ತದೆ. ದೀರ್ಘ ಮತ್ತು ಕುಟುಂಬಸ್ಥರ ಜೊತೆಗೆ ಪ್ರಯಾಣಕ್ಕೆ ಭಾರತೀಯರು ರೈಲು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತದಲ್ಲಿ ಚೆನ್ನೈ, ರಾಯ್‌ಬರೇಲಿ, ಲಾತೂರ್ ಮತ್ತು ಸೋನಿಪತ್ ನಲ್ಲಿ ರೈಲು ಬೋಗಿಗಳ ನಿರ್ಮಾಣದ ಕೆಲಸ ನಡೆಯುತ್ತದೆ. ಆದ್ರೆ ತಮಿಳುನಾಡಿನ ಚೆನ್ನೈನ ರೈಲ್‌ ಕೋಚ್ ಫ್ಯಾಕ್ಟರಿ (ಆರ್‌ಸಿಎಫ್) ಮತ್ತು ಮಾಡ್ರನ್ ಕೋಚ್ ಫ್ಯಾಕ್ಟರಿಯಲ್ಲಿ (ಎಂಸಿಎಫ್‌)  ಅಧಿಕ ರೈಲು ಬೋಗಿಗಳ ನಿರ್ಮಾಣದ ಕೆಲಸ ನಡೆಯುತ್ತದೆ.

Latest Videos

ಚೆನ್ನೈನ ಇಂಟಿಗ್ರಿಲ್ ಕೋಚ್ ಫ್ಯಾಕ್ಟರಿ ಪ್ರಪಂಚದ ಅತಿದೊಡ್ಡ ರೈಲು ಬೋಗಿ ತಯಾರಿಕೆಯ ಕಾರ್ಖಾನೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಕೆಲ ವರದಿಗಳ ಚೆನ್ನೈನ ಫ್ಯಾಕ್ಟರಿಯಲ್ಲಿ ಪ್ರತಿವರ್ಷ 4,000 ಕೋಚ್‌ಗಳ ತಯಾರಿಕೆ ಆಗುತ್ತದೆ. ಆದರೆ 2024 ಜೂನ್‌ವರೆಗಿನ ಅವಧಿಯಲ್ಲಿ 75,000 ರೈಲಿನ ಬೋಗಿಗಳನ್ನು ತಯಾರಿಸಲಾಗಿದೆ. ಇದರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೋಚ್‌ಗಳು ಸಹ ಒಳಗೊಂಡಿವೆ. 

ಇದನ್ನೂ ಓದಿ: ರಿಸರ್ವೇಷನ್ ಮಾಡಿದ ಸೀಟ್‌ನಲ್ಲಿ ಬೇರೆ ಯಾರಾದ್ರು ಕುಳಿತು ಸೀಟ್ ಬಿಟ್ಟುಕೊಡದಿದ್ರೆ ಏನ್ ಮಾಡಬೇಕು?

ಇಂಟಿಗ್ರಿಲ್ ಕೋಚ್ ಫ್ಯಾಕ್ಟರಿಯಲ್ಲಿ ಶೆಲ್ ಡಿವಿಸನ್ ಮತ್ತು ಫಿನಿಶಿಂಗ್ ಡಿವಿಸನ್ ಎಂಬ ಎರಡು ಪ್ರತ್ಯೇಕ ಡಿಪಾರ್ಟ್‌ಮೆಂಟ್‌ಗಳಿವೆ. ಶೆಲ್ ಡಿವಿಸನ್‌ನಲ್ಲಿರುವ 14 ಯುನಿಟ್‌ಗಳು ಜೊತೆಯಾಗಿ, ಬೋಗಿಯ ಚೌಕಟ್ಟನ್ನು ನಿರ್ಮಾಣ ಮಾಡುತ್ತವೆ. ಬೋಗಿ ನಿರ್ಮಾಣದ ಬಳಿಕ ಹಳಿಗಳ ಮೇಲೆ ಇರಿಸಲಾಗುತ್ತದೆ. ಹಳಿಗಳ ಮೇಲೆ ನಿಂತ ನಂತರವೇ ಫಿನಿಶಿಂಗ್ ಡಿವಿಸನ್ ವಿಭಾಗ ಡಿಸೈನಿಂಗ್ ಸೇರಿದಂತೆ ಮತ್ತಿತ್ತರ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸುತ್ತದೆ. ಫಿನಿಶಿಂಗ್ ಡಿವಿಸನ್‌ಗೆ ಬೋಗಿಗಳ ತೂಕ ಕಡಿಮೆ ಮಾಡುವ ಗುರಿಯನ್ನು ನೀಡಲಾಗಿರುತ್ತದೆ. 

1955ರಲ್ಲಿ ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರು ಉದ್ಘಾಟಿಸಿದ್ದರು. 1962 ಅಕ್ಟೋಬರ್ 2ರಂದು ಪ್ರತ್ಯೇಕವಾಗಿ ಫಿನಿಶಿಂಗ್ ಡಿವಿಸನ್ ಆರಂಭಿಸಲಾಯ್ತು. 1955ರಲ್ಲಿ 7 ಕೋಟಿ 47 ಲಕ್ಷ ರೂ. ವೆಚ್ಚದಲ್ಲಿ ಚೆನ್ನೈನ ರೈಲ್ ಫ್ಯಾಕ್ಟರಿ ನಿರ್ಮಾಣವಾಗುತ್ತಿತ್ತು. ಚೆನ್ನೈ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಮೇಡ್ ಇನ್ ಇಂಡಿಯಾ ಕೋಚ್ ಗಳನ್ನು ತಯಾರಿಸುವುದರ ಜೊತೆಗೆ ಹೊರ ದೇಶಗಳಿಂದಲೂ ಕೋಚ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. 1967 ರಲ್ಲಿ ಥೈಲ್ಯಾಂಡ್‌ಗೆ ಭಾರತದಿಂದ ರೈಲು ಬೋಗಿಗಳನ್ನು ರಫ್ತು ಮಾಡಲಾಯಿತು. ಆಫ್ರಿಕಾ ಮತ್ತು ಏಷ್ಯಾದ 13 ದೇಶಗಳಿಗೆ ಬೋಗಿಗಳನ್ನು ರಫ್ತು ಮಾಡಲಾಗುತ್ತದೆ.

ಇದನ್ನೂ ಓದಿ:  ವಂದೇ ಭಾರತ್‌, ರಾಜಧಾನಿ ಎಕ್ಸ್‌ಪ್ರೆಸ್‌ ಆಗಲಿ 160 kmph ವೇಗದ ಈ ರೈಲಿಗೆ ದಾರಿ ಬಿಟ್ಟುಕೊಡಲೇಬೇಕು

click me!