ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 10 ರಿಂದ 30 ರೂಪಾಯಿಗಳಲ್ಲಿ ರೈಲಿನಲ್ಲಿ ಪ್ರಯಾಣಿಸಬಹುದು. ಆದರೆ, ಸಮಯದ ಅನಿಶ್ಚಿತತೆ ಮತ್ತು ಮಾಹಿತಿ ಕೊರತೆಯಿಂದಾಗಿ ಜನರು ಈ ಸೇವೆಯನ್ನು ಬಳಸಿಕೊಳ್ಳುತ್ತಿಲ್ಲ.
ಬೆಂಗಳೂರು (ಆ.29): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಕ್ಯಾಬ್ ಮೂಲಕ ತೆರಳಲು ಅಂದಾಜು 1 ರಿಂದ 1500 ರೂಪಾಯು ಖರ್ಚಾಗುತ್ತದೆ. ಇನ್ನು ಬಸ್‌ಗಳಲ್ಲಿ ಹೋದರೆ, 200ರಿಂದ 300 ರೂಪಾಯಿ ಖರ್ಚಾಗುತ್ತದೆ. ಆದರೆ, ಕಡಿಮೆ ದರದಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಬೇಕೆಂದರೆ ರೈಲುಗಳು ಅಗ್ಗದ ಆಯ್ಕೆ. ಬರೀ 10 ರಿಂದ 30 ರೂಪಾಯಿ ಒಳಗೆ ನೀವು ಮೆಜೆಸ್ಟಿಕ್‌ನಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಯಾಣ ಮಾಡಬಹುದು. ಅದರೆ, ಈ ಸೇವೆಯನ್ನು ಬಳಸಿಕೊಳ್ಳಲು ಜನರಿಗೆ ಉತ್ಸಾಹವಿಲ್ಲ. ನೈಋತ್ಯ ರೈಲ್ವೆ (SWR) ಪ್ರಕಾರ KIA ಹಾಲ್ಟ್ ನಿಲ್ದಾಣಕ್ಕೆ ಪ್ರಯಾಣಿಸುವ ಜನರ ದೈನಂದಿನ ಸರಾಸರಿ ಕೇವಲ 30 ಆಗಿದೆ. ಬೆಂಗಳೂರಿನ ಹೆಚ್ಚಿನವರಿಗೆ ವಿಮಾನ ನಿಲ್ದಾಣಕ್ಕೆ ಹೀಗೊಂದು ರೈಲು ಸೇವೆ ಇದೆ ಅನ್ನೋದೇ ತಿಳಿದಿಲ್ಲ. ಇದನ್ನು ವಿಮಾನ ನಿಲ್ದಾಣವಾಗಲಿ, ರೈಲು ನಿಲ್ದಾಣದ ಅಧಿಕಾರಿಗಳಾಗಲಿ ಪ್ರಚಾರ ಮಾಡಿಲ್ಲ. ಇದರ ಬಗ್ಗೆ ತಿಳಿದಿದ್ದ ಕೆಲವರೂ ಕೂಡ, ರೈಲು ಹೋಗುವ ಸಮಯ ಹಾಗೂ ತಮ್ಮ ವಿಮಾನದ ಸಮಯಗಳು ಹೊಂದಿಕೆಯಾಗದ ಕಾರಣ ರೈಲಿನಲ್ಲಿ ಪ್ರಯಾಣ ಮಾಡಿಲ್ಲ ಎಂದಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣವನ್ನು ತಲುಪಲು ಪ್ರಯಾಣಿಕರು ಸ್ವಂತ ಕಾರ್‌ಗಳು, ಓಲಾ, ಉಬರ್ ಕ್ಯಾಬ್‌ಗಳಿ ಅಥವಾ BMTC ಯ ವಾಯು ವಜ್ರ ಬಸ್‌ಗಳನ್ನು ಬಳಸುತ್ತಾರೆ. ಸೆಂಟ್ರಲ್ ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಕ್ಯಾಬ್‌ನಲ್ಲಿ ಪ್ರಯಾಣಿಸಲು ಸಾಮಾನ್ಯವಾಗಿ ಸಾವಿರ ರೂಪಾಯಿ ವೆಚ್ಚವಾಗುತ್ತದೆ. BIAL ಇತ್ತೀಚೆಗೆ ರೈಡ್-ಹೇಲಿಂಗ್ ಸಂಸ್ಥೆಗಳಿಗೆ ಪಿಕಪ್ ಶುಲ್ಕವನ್ನು ಕೂಡ ಹೆಚ್ಚಿಸಿದೆ. ಇನ್ನೊಂದೆಡೆ SWR ಕೆಎಸ್ಆರ್ ಬೆಂಗಳೂರು, ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳನ್ನು KIA ಹಾಲ್ಟ್ ನಿಲ್ದಾಣದೊಂದಿಗೆ ಸಂಪರ್ಕಿಸುವ ಆರು ರೈಲುಗಳನ್ನು ನಿರ್ವಹಿಸುತ್ತದೆ. ಇವುಗಳು DEMU (ಡೀಸೆಲ್-ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ಮತ್ತು MEMU (ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲುಗಳ ಮಿಶ್ರಣವಾಗಿದೆ ಮತ್ತು ಎಂಟರಿಂದ 12 ಬೋಗಿಗಳನ್ನು ಇದು ಹೊಂದಿದೆ.
ಆಗಿರುವ ಸಮಸ್ಯೆ ಏನು?: ಹೆಚ್ಚಿನ ಬೆಂಗಳೂರಿಗರಿಗೆ ರೈಲು ನಂ.1 ಆಯ್ಕೆ ಆಗುವುದು ಸದ್ಯದ ಮಟ್ಟಿಗಂತೂ ಅನುಮಾನ ಎಂದು ನಗರವಾಸಿಯಾಗಿರುವ ಧವಾಲ್ ಮಾನೆ ಹೇಳತ್ತಾರೆ. "ನಾನು ವಿವೇಕ್ ನಗರದಲ್ಲಿ ವಾಸಿಸುತ್ತಿದ್ದೇನೆ ಮತ್ತು ಹತ್ತಿರದ ರೈಲು ನಿಲ್ದಾಣವೆಂದರೆ ಬೆಂಗಳೂರು ಕಂಟೋನ್ಮೆಂಟ್, 30 ನಿಮಿಷಗಳ ದೂರದಲ್ಲಿದೆ. ನಿಮ್ಮ ಸಾಮಾನುಗಳನ್ನು ಎಷ್ಟು ಬಾರಿ ಲೋಡ್ ಮಾಡಲು ಮತ್ತು ಇಳಿಸಲು ನೀವು ಬಯಸುತ್ತೀರಿ?" ಎಂದು ಅವರು ಪ್ರಶ್ನೆ ಮಾಡುತ್ತಾರೆ. ಹಾಗೇನಾದರೂ ಸಹ ಪ್ರಯಾಣಿಕರು ಸಾಥ್ ನೀಡಿದರೆ, ನನಗೆ ಸಾಕಷ್ಟು ಸಮಯವಿದ್ದಲ್ಲಿ ಮಾತ್ರವೇ ರೈಲು ಪ್ರಯಾಣ ಮಾಡುತ್ತೇನೆ ಎನ್ನುತ್ತಾರೆ.
ವಸಂತನಗರ ನಿವಾಸಿ ದುಗರ್ ಮೂರು ಬಾರಿ ರೈಲನ್ನು ಬಳಸಿದ್ದಾರೆ, ಇತ್ತೀಚೆಗೆ ಏಪ್ರಿಲ್‌ನಲ್ಲಿ ಪ್ರಯಾಣ ಮಾಡಿದ್ದೆ, ಈ ವೇಳೆ ಆದ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. “ರೈಲುಗಳು ಸಮಯಕ್ಕೆ ಸರಿಯಾಗಿ ಹೊರಡುತ್ತವೆ ಆದರೆ ದಾರಿಯಲ್ಲಿ ಎಲ್ಲೋ ನಿಲ್ಲುತ್ತದೆ. ಒಮ್ಮೆ, ಚನ್ನಸಂದ್ರದ ಬಳಿ ಕ್ರಾಸಿಂಗ್‌ಗೆ ಮುಂಚಿತವಾಗಿ ಸುಮಾರು ಅರ್ಧ ಘಂಟೆಯವರೆಗೆ ರೈಲು ನಿಂತಿತು. ವಿಮಾನ ಪ್ರಯಾಣದ ವ್ಯಕ್ತಿಯು ಅಂತಹ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳಲು ಎಂದಿಗೂ ಬಯಸುವುದಿಲ್ಲ, ”ಎಂದು ಅವರು ಹೇಳುತ್ತಾರೆ.
ರೈಲು ಹೋರಾಟಗಾರ ಕೆ ಎನ್ ಕೃಷ್ಣ ಪ್ರಸಾದ್ ಮಾತನಾಡಿದ್ದು ವಿಮಾನ ನಿಲ್ದಾಣದ ಪ್ರಯಾಣಕ್ಕಾಗಿ ರೈಲುಗಳನ್ನು ವಿನ್ಯಾಸಗೊಳಿಸದಿರುವುದು ಸಮಸ್ಯೆಗಳಿಗೆ ಕಾರಣವಾಗಿದೆ. "ಈ ರೈಲುಗಳು ಚಿಕ್ಕಬಳ್ಳಾಪುರ ಮತ್ತು ಕೋಲಾರದವರೆಗೆ ಓಡುತ್ತವೆ" ಎಂದು ಅವರು ವಿವರಿಸುತ್ತಾರೆ. “ಮತ್ತು ಯಲಹಂಕದ ನಂತರ ಒಂದೇ ಟ್ರ್ಯಾಕ್ ಇದೆ. ಇದು ವಿಳಂಬ ಮತ್ತು ಅನಿಶ್ಚಿತತೆಗೆ ಕಾರಣವಾಗುತ್ತದೆ' ಎಂದು ಹೇಳಿದ್ದಾರೆ. ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸಲು, ಈಗ ಇನ್ನೂ ನಾಲ್ಕು ರೈಲುಗಳು ಬೆಟ್ಟಹಲಸೂರು ಮತ್ತು ದೊಡ್ಡಜಾಲದಲ್ಲಿ ನಿಲ್ಲುತ್ತವೆ ಎಂದು ರೈಲ್ವೆ ಪ್ರತಿನಿಧಿ ಹೇಳುತ್ತಾರೆ.
ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣಕ್ಕೆ 7 ಸ್ಥಳಗಳು ಆಯ್ಕೆ; ಸರ್ಕಾರದಿಂದ ಗಂಭೀರ ಚರ್ಚೆ!
ವಿಮಾನ ನಿಲ್ದಾಣಕ್ಕೆ ರೈಲಿನಲ್ಲಿ ಹೋಗುವುದು ಬರುವುದು ಹೇಗೆ? SWR ಪ್ರಸ್ತುತ ಆರು ರೈಲುಗಳನ್ನು ನಿರ್ವಹಿಸುತ್ತದೆ - KSR ಬೆಂಗಳೂರು (SBC), ಯಶವಂತಪುರ (YPR), ಮತ್ತು ಬೆಂಗಳೂರು ಕಂಟೋನ್ಮೆಂಟ್ (BNC) ನಿಲ್ದಾಣಗಳಿಂದ ಹೊರಟು KIA ಹಾಲ್ಟ್ ನಿಲ್ದಾಣದಲ್ಲಿ (KIAD) ನಿಲ್ಲುತ್ತದೆ. ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಚನ್ನಸಂದ್ರ, ಯಲಹಂಕ, ಬೆಟ್ಟಹಲಸೂರು, ದೊಡ್ಡಜಾಲ, ಮಲ್ಲೇಶ್ವರಂ, ಲೊಟ್ಟೆಗೊಲ್ಲಹಳ್ಳಿ ಮತ್ತು ಕೊಡಿಗೇಹಳ್ಳಿ ನಿಲ್ದಾಣಗಳು ಇದರಲ್ಲಿ ಸೇರಿವೆ. BIAL ನಿಲ್ದಾಣ ಮತ್ತು ಎರಡು ವಿಮಾನ ನಿಲ್ದಾಣಗಳ ನಡುವೆ ಉಚಿತ ಬಸ್ ಶಟಲ್ ಅನ್ನು ನಡೆಸುತ್ತದೆ. ರೈಲು ನಿಲ್ದಾಣಕ್ಕೆ ಬರುವ ಐದು ನಿಮಿಷಗಳ ಮೊದಲು ಶಟಲ್ ಬಸ್ ಬರುತ್ತದೆ. ಭಾನುವಾರ ಯಾವುದೇ ರೈಲುಗಳು ಇರೋದಿಲ್ಲ. ಇದರ ಪ್ರಯಾಣ ದರ 10 ರಿಂದ 30 ರೂಪಾಯಿ.
822 ಮೆಟ್ರಿಕ್ ಟನ್ ಮಾವಿನ ಹಣ್ಣನ್ನು 60 ಅಂತಾರಾಷ್ಟ್ರೀಯ ಸ್ಥಳಗಳಿಗೆ ರವಾನೆ: ದಾಖಲೆ ನಿರ್ಮಿಸಿದ ಬೆಂಗಳೂರು ಏರ್‌ಪೋರ್ಟ್
ವಿಮಾನ ನಿಲ್ದಾಣಕ್ಕೆ ಹೋಗುವ ರೈಲುಗಳಲ್ಲಿ, ಬೆಂಗಳೂರು ಕಂಟೋನ್ಮೆಂಟ್‌ನಿಂದ ಬೆಳಿಗ್ಗೆ 5.10 ಕ್ಕೆ ಮೊದಲ ರೈಲು ಹೊರಡುತ್ತದೆ. ಕೊನೆಯದು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಸಂಜೆ 6.20 ಕ್ಕೆ ಹೊರಡುತ್ತದೆ. ಕೆಐಎ ನಿಲ್ದಾಣದಿಂದ ಬೆಂಗಳೂರಿನ ಕಡೆಗೆ ಮೊದಲ ರೈಲು ಬೆಳಿಗ್ಗೆ 8.18 ಕ್ಕೆ ಮತ್ತು ಕೊನೆಯದು ಸಂಜೆ 7.23 ಕ್ಕೆ ಹೊರಡುತ್ತದೆ. Android ಮತ್ತು iOS ನಲ್ಲಿ NTES ಅಪ್ಲಿಕೇಶನ್‌ನಲ್ಲಿ ವೇಳಾಪಟ್ಟಿಯನ್ನು ನೋಡಿ ಮತ್ತು 'ನಿಲ್ದಾಣಗಳ ನಡುವಿನ ರೈಲುಗಳು' ಟ್ಯಾಬ್‌ಗಾಗಿ ಹುಡುಕಿದರೆ ಇದರ ಮಾಹಿತಿ ಸಿಗುತ್ತದೆ.