ಮೇಕೆ ಉಚಿತ …ತೆಗೆದುಕೊಂಡು ಹೋಗಿ ಪ್ಲೀಸ್, ಯಾರು ಈ ರೀತಿ ಡಿಮ್ಯಾಂಡ್ ಮಾಡ್ತಿರೋದು?

By Suvarna News  |  First Published Apr 9, 2024, 5:21 PM IST

ಉಚಿತವಾಗಿ ಪ್ರಾಣಿ ಸಿಗುತ್ತೆ ಅಂದ್ರೆ ಯಾರು ಬಿಡ್ತಾರೆ.. ಅದ್ರಲ್ಲೂ ಮೇಕೆಯಂತ ಪ್ರಾಣಿಗೆ ಡಿಮ್ಯಾಂಡ್ ಹೆಚ್ಚು. ನಿಮಗೂ ಉಚಿತ ಮೇಕೆ ಬೇಕು ಅಂದ್ರೆ ಇಲ್ಲೊಂದು ಅವಕಾಶ ಇದೆ. ನಿಮ್ಮಿಷ್ಟದಷ್ಟು ಮೇಕೆಯನ್ನು ನೀವು ಉಚಿತವಾಗಿ ತರಬಹುದು. 
 


ಪ್ರಪಂಚದಲ್ಲಿ ಯಾರಿಗೆ ಸಮಸ್ಯೆ ಇಲ್ಲ ಹೇಳಿ? ಮನುಷ್ಯರಿಂದ ಹಿಡಿದು ಪ್ರಾಣಿಯವರೆಗೆ ಮಾತ್ರವಲ್ಲದೆ ಕಾಡು, ದ್ವೀಪ, ಸಮುದ್ರ ಹೀಗೆ ಪ್ರತಿಯೊಂದು ಪ್ರದೇಶವೂ ತನ್ನದೇ ಸಮಸ್ಯೆ ಹೊಂದಿದೆ. ನಾಡು ಹೆಚ್ಚಾಗುತ್ತಿದ್ದಂತೆ ಕಾಡು ಪ್ರಾಣಿಗಳಿಗೆ ವಾಸಿಸಲು ಜಾಗವಿಲ್ಲ. ಅನೇಕ ಕಾಡುಪ್ರಾಣಿ ನಾಡಿಗೆ ಬರ್ತಿದೆ. ಅದೇ ರೀತಿ ಕೆಲ ಪ್ರಾಣಿಗಳ ಸಂಖ್ಯೆ ವಿಪರೀತ ಹೆಚ್ಚಾದ ಸ್ಥಳಗಳಿವೆ.

ಪರಿಸರ (Environment) ಸಮತೋಲನದಲ್ಲಿರಬೇಕು. ಮನುಷ್ಯ, ಪ್ರಾಣಿ ಇದ್ರಲ್ಲಿ ಯಾರ ಸಂಖ್ಯೆ ಮಿತಿ ಮೀರಿದ್ರೂ ಸಮಸ್ಯೆಯಾಗುತ್ತದೆ. ಒಂದೇ ಜಾತಿಯ ಪ್ರಾಣಿ (Animal) ಗಳು ಹೆಚ್ಚಾದಾಗ ಅವುಗಳಿಗೆ ಸೂಕ್ತ ಆಹಾರ (Food) ಸಿಗೋದಿಲ್ಲ. ಆಗ ಅವು ಮನುಷ್ಯನಿಗೆ ಹಾನಿಮಾಡಲು ಶುರು ಮಾಡುತ್ವೆ. ಕೆಲ ಪ್ರದೇಶದಲ್ಲಿ ಮಂಗನ ಕಾಟ ಹೆಚ್ಚಾಗಿ ಜನರ ಬೆಳೆ ನಾಶವಾಗ್ತಿದೆ. ಅವುಗಳಿಂದ ಬೆಳೆ ರಕ್ಷಣೆ ಸವಾಲಾಗಿದೆ. ಇದೇ ರೀತಿ ದ್ವೀಪವೊಂದರಲ್ಲಿ ಮೇಕೆ ಕಾಟ ವಿಪರೀತ ಹೆಚ್ಚಾಗಿದೆ.  

Tap to resize

Latest Videos

ಯೂಟ್ಯೂಬರ್ ಆಗಿ ಮನೆ ಖರೀದಿಸಿದ ಟ್ರಕ್ ಡ್ರೈವರ್; ಇದಕ್ಕಿಂತ ಸ್ಪೂರ್ತಿ ಇನ್ನೇನು ಅಂದ್ರು ಆನಂದ್ ಮಹೀಂದ್ರ

ನೀವು ಮೇಕೆ ಸಾಕುವ ಆಲೋಚನೆಯಲ್ಲಿದ್ದರೆ ಮೇಕೆ ಉಚಿತವಾಗಿ ಸಿಗುವ ಜಾಗವೊಂದನ್ನು ನಾವು ಹೇಳ್ತೇವೆ. ಅಲ್ಲಿ ಮೇಕೆಗಳ ಸಂಖ್ಯೆ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಮೇಕೆಯನ್ನು ಉಚಿತವಾಗಿ ನೀಡಲಾಗ್ತಿದೆ.  ಉಚಿತವಾಗಿ ಸಿಗ್ತಿದೆ ಮೇಕೆ : ಇಟಲಿಯ ಅಲಿಕುಡಿ ಎಂಬ ದ್ವೀಪದಲ್ಲಿ ಮೇಕೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ನೀವು ಅಲಿಕುಡಿಗೆ ಹೋದ್ರೆ ನಿಮ್ಮ ಜೊತೆ ಮೇಕೆಯನ್ನು ನೀವು ತರಬಹುದು. ಅಲಿಕುಡಿಯ ಸ್ಥಳೀಯ ಸರ್ಕಾರ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ತುಂಬಿ ನೀವು ಅಲ್ಲಿಗೆ ಹೋದ್ರೆ ನಿಮಗೆ ಮೇಕೆ ಉಚಿತವಾಗಿ ಸಿಗುತ್ತದೆ. 

ನೀವು ಅರ್ಜಿಯನ್ನು ಇಮೇಲ್ ಮೂಲಕ ಭರ್ತಿ ಮಾಡಬಹುದು. ಈ ಒಪ್ಪಂದವನ್ನು ಅಧಿಕೃತಗೊಳಿಸಲು 17 ಡಾಲರ್ ಅಂದರೆ 1400 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇದರ ನಂತ್ರ ನಿಮಗೆ ಹದಿನೈದು ದಿನಗಳ ಅವಕಾಶ ನೀಡಲಾಗುವುದು. ನಂತ್ರ ನೀವು ಅಲ್ಲಿಗೆ ಹೋಗಿ, ನಿಮ್ಮಿಷ್ಟದ ಮೇಕೆಯನ್ನು ಹಿಡಿದು ಅದನ್ನು ನಿಮ್ಮೂರಿಗೆ ಕರೆದುಕೊಂಡು ಬರಬಹುದು. ದ್ವೀಪದಲ್ಲಿ ಮೇಕೆಗಳ ಸಂಖ್ಯೆ ಕಡಿಮೆ ಆಗುವವರೆಗೂ ಈ ಆಫರನ್ನು ನೀಡಲಾಗುವುದು ಎಂದು ಅಲ್ಲಿನ ಸರ್ಕಾರ ಹೇಳಿದೆ. 

ಇದು ಕಳೆದ ಇಪ್ಪತ್ತು ವರ್ಷಗಳ ಹಿಂದಿನ ಕಥೆ. ಆ ಸಮಯದಲ್ಲಿ ರೈತನೊಬ್ಬ ಮೇಕೆಯನ್ನು ಅಲಿಕುಡಿ ದ್ವೀಪಕ್ಕೆ ತಂದು ಬಿಟ್ಟಿದ್ದ. ಆ ವೇಳೆ ಅಲಿಕುಡಿ ದ್ವೀಪದಲ್ಲಿ ಕೆಲವೇ ಕೆಲವು ಮೇಕೆ ಇತ್ತು. ಆದ್ರೆ ಮೇಕೆಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಲೇ ಹೋಯ್ತು. ಈಗ ಮೇಕೆಗಳ ಸಂಖ್ಯೆ 600ಕ್ಕಿಂತ ಹೆಚ್ಚಾಗಿದೆ. ವಿಚಿತ್ರ ಅಂದ್ರೆ ಅಲಿಕುಡಿ ದ್ವೀಪದಲ್ಲಿ ಜನರಿಗಿಂತ ಮೇಕೆಗಳ ಸಂಖ್ಯೆಯೇ ಹೆಚ್ಚಿದೆ. ಈ ದ್ವೀಪದಲ್ಲಿ ಬರೀ ನೂರು ಜನರಿದ್ದಾರೆ. ಮೇಕೆಗಳು ಮನೆಯ ಮೇಲೆ ದಾಳಿ ನಡೆಸಿ ಹಾನಿ ಮಾಡ್ತಿವೆ. 

ಮೇಕೆಯ ಕಾಟಕ್ಕೆ ಬೇಸತ್ತಿರುವ ಮೇಯರ್ ರಿಕಾರ್ಡೊ ಗುಲ್ಲೋ, ಮೇಕೆಯನ್ನು ಅಡಾಪ್ಟ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅಲ್ಲಿಗೆ ಯಾರು ಬೇಕಾದ್ರೂ ಬರಬಹುದು. ಮೇಕೆಯನ್ನು ದತ್ತು ಪಡೆಯಲು ಯಾವುದೇ ವಿಶೇಷ ನಿಯಮವಿಲ್ಲ. ಮೇಕೆಗಳ ಸಂಖ್ಯೆ ನೂರಕ್ಕೆ ಇಳಿದ ನಂತ್ರ ದತ್ತು ಕಾರ್ಯವನ್ನು ನಿಲ್ಲಿಸೋದಾಗಿ ರಿಕಾರ್ಡೊ ಗುಲ್ಲೋ ಹೇಳಿದ್ದಾರೆ. 

ನೀತಾ ಅಂಬಾನಿ ಕಸ್ಟಮೈಸ್ ಮಾಡಿಸಿಕೊಂಡಿರೋ ಈ ಹೊಸ ಪಿಂಕ್ ರೋಲ್ಸ್ ರಾಯ್ಸ್ ಬೆಲೆ ಇಷ್ಟೊಂದಾ?!

ಅಲಿಕುಡಿಯು ವಾಸಿಸಲು ಅಷ್ಟು ಸೂಕ್ತ ಸ್ಥಳವಲ್ಲ. ದ್ವೀಪವಾಸಿಗಳು ಕಡಿದಾದ ಬೆಟ್ಟಗಳ ಮೇಲೆ ಮೀನುಗಾರಿಕೆ ಮತ್ತು ಕೃಷಿಯಿಂದ ತಮ್ಮ ಜೀವನೋಪಾಯ ನಡೆಸುತ್ತಿದ್ದಾರೆ. ಈ ದ್ವೀಪದಲ್ಲಿ ಜೀವನ ನಡೆಸಲು ಸಾಧ್ಯವಾಗದೆ ಕೆಲ ನಿವಾಸಿಗಳು ದ್ವೀಪ ಖಾಲಿ ಮಾಡಿದ್ದಾರೆ. ಇಲ್ಲಿ ಹಾಲಿಡೇ ಹೋಮ್ ಗಳಿದ್ದು, ಪ್ರವಾಸೋದ್ಯಮಕ್ಕೆ ನಿಧಾನವಾಗಿ ಪ್ರಾಮುಖ್ಯತೆ ಸಿಗ್ತಿದೆ. ಪ್ರವಾಸಿಗರು ದೋಣಿ ಮೂಲಕ  ಅಲಿಕುಡಿಗೆ ತಲುಪಬಹುದು. 

click me!