ಆಕಾಶದಲ್ಲಿ ಸಾಕಷ್ಟು ಅದ್ಭುತಗಳಿವೆ. ಅದನ್ನು ವೀಕ್ಷಿಸಲು ಅನೇಕರು ಇಷ್ಟಪಡ್ತಾರೆ. ಆದ್ರೆ ನಗರ ಪ್ರದೇಶಗಳಲ್ಲಿ ಆಕಾಶ ಸ್ಪಷ್ಟವಾಗಿ ಕಾಣೋದೇ ಕಷ್ಟ. ಇನ್ನು ಅದ್ರಲ್ಲಿರುವ ಕೌತುಕಗಳನ್ನು ಹೇಗೆ ನೋಡೋದು ಅನ್ನೋರನ್ನು ಲಡಾಖ್ ಕರೆಯಲಿದೆ.
ಪ್ರವಾಸಿ ಪ್ರಿಯರಿಗೆ ಖುಷಿ ಸುದ್ದಿಯೊಂದಿದೆ. ಬೇಸಿಗೆಯಲ್ಲಿ ಭಾರತದ ಮೊದಲ ಡಾರ್ಕ್ ಸ್ಕೈ ರಿಸರ್ವ್ ಅಥವಾ ನೈಟ್ ಸ್ಕೈ ಅಭಯಾರಣ್ಯ ನಿಮ್ಮನ್ನು ಸ್ವಾಗತಿಸಲಿದೆ. ಮೀಸಲು ಸಮುದ್ರ ಮಟ್ಟದಿಂದ 4,500 ಮೀಟರ್ ಎತ್ತರದಲ್ಲಿ ಹಾನ್ ಲೆ ಗ್ರಾಮದೊಳಗೆ ಇದು ನೆಲೆಗೊಂಡಿದೆ. ನೈಋತ್ಯ ಲಡಾಖ್‌ನಲ್ಲಿರುವ ಚಾಂಗ್‌ಥಾಂಗ್ ಶೀತಲ ಮರುಭೂಮಿ ವನ್ಯಜೀವಿ ಅಭಯಾರಣ್ಯದಲ್ಲಿ ಇದನ್ನು ನೀವು ನೋಡ್ಬಹುದು. ಇದು ಆಸ್ಟ್ರೋ ಟೂರಿಸಂಗೆ ಉತ್ತೇಜನ ನೀಡುತ್ತದೆ. ಆಪ್ಟಿಕಲ್ ಇನ್‌ಫ್ರಾ-ರೆಡ್ ಮತ್ತು ಗಾಮಾ ರೇ ಟೆಲಿಸ್ಕೋಪ್‌ಗಳನ್ನು ವಿಶ್ವದ ಅತಿ ಎತ್ತರದ ತಾಣಗಳಲ್ಲಿ ಒಂದಾದ ಹ್ಯಾನ್ ಲೆ ಯಲ್ಲಿ ಸ್ಥಾಪಿಸಲಾಗಿದೆ.
ನೈಟ್ ಸ್ಕೈ (Night sky) ಅಭಯಾರಣ್ಯ ಎಂದರೇನು?: ನೈಟ್ ಸ್ಕೈ ಅಭಯಾರಣ್ಯವು ಬೆಳಕಿನ ಮಾಲಿನ್ಯವನ್ನು ನಿಯಂತ್ರಿಸುವ ಪ್ರದೇಶವಾಗಿದೆ. ರಾತ್ರಿಯಲ್ಲಿ ಗರಿಷ್ಠ ಕತ್ತಲೆಯನ್ನು ಖಾತ್ರಿಪಡಿಸಲಾಗುತ್ತದೆ. ಇದರಿಂದ ಆಕಾಶದಲ್ಲಿರುವ ಗ್ರಹಗಳು ಮತ್ತು ನಕ್ಷತ್ರಗಳನ್ನು ಅಧ್ಯಯನ ಮಾಡಬಹುದು. ವೃತ್ತಿಪರ ಮತ್ತು ಹವ್ಯಾಸಿ ಖಗೋಳಶಾಸ್ತ್ರಜ್ಞರು ರಾತ್ರಿಯ ಆಕಾಶವನ್ನು ವೀಕ್ಷಿಸಲು ಏಕಾಂತ ಪ್ರದೇಶಗಳಿಗೆ ಚಾರಣ ನಡೆಸಲು ಇದು ಯೋಗ್ಯವಾಗಿದೆ. ಹ್ಯಾನ್ ಲೆ (Han Le) ರಿಸರ್ವ್ ಖಗೋಳ ಪ್ರವಾಸೋದ್ಯಮದ ಪರಿಸರ ಸ್ನೇಹಿ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ನಗರ, ಅರೆ-ನಗರ ಮತ್ತು ಗ್ರಾಮೀಣ ಭೂದೃಶ್ಯಗಳಿಗಿಂತ ಕಡಿಮೆ ಬೆಳಕಿನ ಮಾಲಿನ್ಯವನ್ನು ಹೊಂದಿರುವ ಸ್ಥಳಗಳು ರಾತ್ರಿ ಆಕಾಶ ವೀಕ್ಷಣೆಗೆ ಸೂಕ್ತವಾಗಿದೆ. ಲಡಾಖ್ ತಣ್ಣನೆಯ ಮರುಭೂಮಿಯಂತಿದೆ. ಇಲ್ಲಿ ವರ್ಷವಿಡೀ ಆಕಾಶವು ಸ್ಪಷ್ಟವಾಗಿರುತ್ತದೆ. ಅದಕ್ಕಾಗಿಯೇ ಲಡಾಖ್ ಯುಟಿ ಆಡಳಿತವು ಡಿಸೆಂಬರ್ 1, 2022 ರಂದು ಹ್ಯಾನ್ ಲೆಯನ್ನು ಭಾರತದ ಮೊದಲ ಡಾರ್ಕ್ ಸ್ಕೈ ರಿಸರ್ವ್ ಎಂದು ಸೂಚಿಸಿದೆ.
ಇದ್ರಿಂದ ಸ್ಥಳೀಯ ಸಮುದಾಯಗಳಿಗೆ ಹೆಚ್ಚುವರಿ ಆದಾಯ ಸಿಗಲಿದೆ. ಜೊತೆಗೆ ಬೆಳಗ್ಗೆ ಮತ್ತು ಮುಸ್ಸಂಜೆಯಲ್ಲಿ ಸಕ್ರಿಯವಾಗಿರುವ ಸಸ್ತನಿಗಳ ಸಂರಕ್ಷಣೆಯಾಗಲಿದೆ.
ಭಾರತದ ಅತೀ ಸ್ವಚ್ಛ ಗ್ರಾಮವಿದು, ಊರೆಲ್ಲಾ ಹುಡುಕಿದರೂ ಒಂಚೂರು ಕಸವಿಲ್ಲ
ಜಾಗತಿಕವಾಗಿ ಕೇವಲ 20 ಪ್ರಮಾಣೀಕೃತ ಮೀಸಲು ಮತ್ತು 16 ಅಭಯಾರಣ್ಯಗಳಿವೆ. ಅವುಗಳಲ್ಲಿ ಹೆಚ್ಚಿನವು ಯುರೋಪ್ ನಲ್ಲಿವೆ. ಇವುಗಳಲ್ಲಿ ಆಲ್ಪೆಸ್ ಅಜುರ್ ಮರ್ಕಂಟೂರ್ (ಫ್ರಾನ್ಸ್), ಕ್ರಾನ್‌ಬೋರ್ನ್ ಚೇಸ್ (ಇಂಗ್ಲೆಂಡ್), ಸೆಂಟ್ರಲ್ ಇಡಾಹೊ (ಯುಎಸ್), ರೋನ್ (ಜರ್ಮನಿ), ಕೆರ್ರಿ (ಐರ್ಲೆಂಡ್) ಮತ್ತು ಅರೋಕಿ ಮೆಕೆಂಜಿ (ನ್ಯೂಜಿಲೆಂಡ್) ಸೇರಿವೆ. ಹ್ಯಾನ್ ಲೆಯನ್ನು ಈ ಪಟ್ಟಿಗೆ ಸೇರಿಸಲು ಅಂತರಾಷ್ಟ್ರೀಯ ಏಜೆನ್ಸಿಗಳಾದ ಸ್ಟಾರ್‌ಲೈಟ್ ಫೌಂಡೇಶನ್ ಮತ್ತು ಇಂಟರ್ನ್ಯಾಷನಲ್ ಡಾರ್ಕ್-ಸ್ಕೈ ಅಸೋಸಿಯೇಷನ್ ಗೆ ಅರ್ಜಿ ಸಲ್ಲಿಸಲಾಗಿದೆ. ಅದ್ರಿಂದ ಪ್ರಮಾಣೀಕರಣದ ಅಗತ್ಯವಿದೆ.
ಜನರಿಗೆ ನೀಡಲಾಗ್ತಿದೆ ತರಬೇತಿ: ವನ್ಯಜೀವಿ ಸಂರಕ್ಷಣಾ ಇಲಾಖೆಯು 18 ಸಮುದಾಯ ದೂರದರ್ಶಕಗಳನ್ನು ಖರೀದಿಸಿದೆ ಮತ್ತು IIA 23 ಸಮುದಾಯ ಬೈನಾಕ್ಯುಲರ್‌ಗಳನ್ನು ಹ್ಯಾನ್ ಲೆಗೆ ನೀಡಿದೆ. ಸಮುದಾಯ ದೂರದರ್ಶಕಗಳನ್ನು ಈಗಾಗಲೇ ಫಲಾನುಭವಿಗಳ ಮನೆಗಳಲ್ಲಿ ಅಳವಡಿಸಲಾಗಿದೆ. ಖಗೋಳಶಾಸ್ತ್ರದ ರಾಯಭಾರಿಗಳಾಗಿ ಹಳ್ಳಿಗರಿಗೆ ತರಬೇತಿ ನೀಡಲಾಗ್ತಿದೆ. ಅಗತ್ಯವಿರುವಾಗ ಮತ್ತು ಎಲ್ಲಿ ಬೇಕಾದರೂ ಕನಿಷ್ಠ ಪ್ರಮಾಣದ ಬೆಳಕನ್ನು ಹೇಗೆ ಬಳಸಬೇಕೆಂದು ಹಳ್ಳಿಯ ಜನರಿಗೆ ತಿಳಿಸಲಾಗಿದೆ. ಹ್ಯಾನ್ ಲೆಯಲ್ಲಿ ವರ್ಷವಿಡೀ ಆಕಾಶವು ಸ್ವಚ್ಛವಾಗಿರುತ್ತದೆ. ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಬೆಚ್ಚಗಿನ ವಾತಾವರಣ ಇಲ್ಲಿರುವ ಕಾರಣ ಈ ವೇಳೆ ಪ್ರವಾಸಿಗರು ಬರೋದು ಹೆಚ್ಚು. ಚಳಿಗಾಲದಲ್ಲಿ ಹಿಮ ಚಿರತೆ, ಪಾಲಾಸ್ ಬೆಕ್ಕು, ಕಪ್ಪು ಕತ್ತಿನ ಕೊಕ್ಕರೆ ಮುಂತಾದ ವನ್ಯಜೀವಿಗಳನ್ನು ವೀಕ್ಷಿಸಲು ಇಲ್ಲಿಗೆ ಪ್ರವಾಸಿಗರು ಬರ್ತಾರೆ. ಖಗೋಳ ಪ್ರೇಮಿಗಳಿಗೆ ಇದು ಬಲು ಪ್ರೀತಿಯ ಸ್ಥಳವಾಗಲಿದೆ.
HOLI FESTIVAL : ಜೀವನದಲ್ಲಿ ಒಮ್ಮೆಯಾದ್ರೂ ಆ ಬಣ್ಣದೋಕುಳಿಯಲ್ಲಿ ಮಿಂದೇಳಿ..
ಬೆಳಕಿನ ಮಾಲಿನ್ಯ ಎಂದರೇನು?: ರಾತ್ರಿಯಲ್ಲಿ ಮನೆಗಳು ಮತ್ತು ಬೀದಿಗಳಿಂದ ಬರುವ ಬೆಳಕು ಭೂಮಿಯ ಮೇಲ್ಮೈಯಿಂದ ಪ್ರತಿಫಲಿಸುತ್ತದೆ. ಇದು ಆಕಾಶದ ವಸ್ತುಗಳನ್ನು ನೋಡಲು ತೊಂದರೆ ನೀಡುತ್ತದೆ. ಮಬ್ಬು ಸೃಷ್ಟಿಸುತ್ತದೆ. ನಗರ ಪ್ರದೇಶಗಳಲ್ಲಿ ಆಕಾಶವನ್ನು ಸ್ಪಷ್ಟವಾಗಿ ವೀಕ್ಷಣೆ ಮಾಡೋದು ಕಷ್ಟ. ಆಕಾಶದ ವಸ್ತುಗಳನ್ನು ವೀಕ್ಷಿಸಲು ಹ್ಯಾನ್ ಲೆ ಹಲವಾರು ನೈಸರ್ಗಿಕ ಪ್ರಯೋಜನಗಳನ್ನು ಹೊಂದಿದೆ. ಇಲ್ಲಿ ಆಕಾಶಕಾಯಗಳ ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯಲು ಸುಲಭ. ಅವುಗಳನ್ನು ಬರಿಗಣ್ಣಿನಿಂದ, ದೂರದರ್ಶಕಗಳು ಮತ್ತು ಕ್ಯಾಮೆರಾಗಳ ಮೂಲಕ ವೀಕ್ಷಿಸಬಹುದಾಗಿದೆ.