
ಭಾರತೀಯ ರೈಲ್ವೇ ಜಾಲ ಬರೋಬ್ಬರಿ 115,000 ಕಿಲೋಮೀಟರ್‌ಗಳಷ್ಟು ಉದ್ದವಿದ್ದು, ವಿಶ್ವದ ಅತಿ ದೊಡ್ಡ ರೈಲ್ವೆ ನೆಟ್‌ವರ್ಕ್‌ಗಳಲ್ಲಿ ಒಂದೆನಿಸಿದೆ. ಇಲ್ಲಿ 20,000ಕ್ಕೂ ಅಧಿಕ ಪ್ಯಾಸೆಂಜರ್ ಟ್ರೇನ್‌ಗಳು, 7000ಕ್ಕೂ ಅಧಿಕ ಫ್ರೈಟ್ ರೈಲುಗಳು ಪ್ರತಿದಿನ 7349 ಸ್ಟೇಶನ್‌ಗಳಿಂದ ಓಡುತ್ತವೆ. ನೀವು ರೈಲು ಸಂಚಾರ ಪ್ರಿಯರಾದರೆ, ದೇಶದ ಅತಿ ಉದ್ದದ ಟ್ರೇನ್ ಜರ್ನಿ ರೂಟ್‌ಗಳು ಇಲ್ಲಿವೆ ನೋಡಿ.
ಬದಲಾಗ್ತಾ ಇದೆ ಟ್ರೆಂಡ್ ; ಟೂರಿಸಂ ಕಡೆ ವಾಲುತ್ತಿದೆ ಯುವಕರ ಮನಸ್ಸು!
ವಿವೇಕ್ ಎಕ್ಸ್‌ಪ್ರೆಸ್
ಧೀಬ್ರೂಗಢದಿಂದ ಕನ್ಯಾಕುಮಾರಿಗೆ ಹೋಗುವ ವಿವೇಕ್ ಎಕ್ಸ್‌ಪ್ರೆಸ್ ವಾರಕ್ಕೊಮ್ಮೆ ಸಂಚರಿಸುತ್ತದೆ. ಇದು ದೂರ ಹಾಗೂ ಸಮಯದ ಲೆಕ್ಕದಲ್ಲಿ ಭಾರತದಲ್ಲೇ ಅತಿ ಉದ್ದದ ರೈಲು ಮಾರ್ಗವಾಗಿದ್ದು, ವಿಶ್ವದಲ್ಲಿ 24ನೆಯದಾಗಿದೆ. 2013ರಲ್ಲಿ ಸ್ವಾಮಿ ವಿವೇಕಾನಂದ ಅವರ 150ನೇ ಜಯಂತಿಯಂದು ಅದರ ಸ್ಮರಣಾರ್ಥವಾಗಿ ಅವರದೇ ಹೆಸರಿನಲ್ಲಿ ಆರಂಭವಾದ ಈ ರೈಲು ಮಾರ್ಗ 4273 ಕಿಲೋಮೀಟರ್‌ಗಳನ್ನು ಕವರ್ ಮಾಡುತ್ತದೆ. ಇದಕ್ಕೆ ಈ ರೈಲು ತೆಗೆದುಕೊಳ್ಳುವುದು 80 ಗಂಟೆಗಳನ್ನು. ಮಧ್ಯೆ 50ಕ್ಕೂ ಹೆಚ್ಚು ಸ್ಟಾಪ್‌ಗಳನ್ನು ನೀಡುತ್ತದೆ.
ತಿರುವನಂತಪುರಂ-ಸಿಲ್ಚಾರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
ಇದೂ ಕೂಡಾ ವಾರಕ್ಕೊಮ್ಮೆ ಓಡಾಟ ಮಾಡುತ್ತಿದ್ದು, ಅತಿ ಉದ್ದದ ರೈಲುಮಾರ್ಗದಲ್ಲಿ ಸಾಗುವ ಭಾರತದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಇದಾಗಿದೆ. ಇದು 76 ಗಂಟೆ, 35 ನಿಮಿಷಗಳಲ್ಲಿ 3932 ಕಿಲೋಮೀಟರ್ ದೂರ ಸಾಗುತ್ತದೆ. ಈ ಮಧ್ಯೆ 54 ಬಾರಿ ನಿಲ್ಲುತ್ತದೆ.
ಮಂಜು ಮುಸುಕಿದ ಊರಿನ ನೆನಪು; ತುಮರಿಯಲ್ಲೊಂದು ವೀಕೆಂಡು!
ಹಿಮಸಾಗರ್ ಎಕ್ಸ್‌ಪ್ರೆಸ್
ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದ ಶ್ರೀ ಮಠ ವೈಷ್ಣೋ ದೇವಿ ಕಾತ್ರಾದವರೆಗೆ ಸಂಚರಿಸುವ ಈ ರೈಲು ದೇಶದ 12 ರಾಜ್ಯಗಳ ನಡುವೆ ಹಾದು ಹೋಗುತ್ತದೆ. 73 ಸ್ಟೇಶನ್‌ಗಳಲ್ಲಿ ಸ್ಟಾಪ್ ನೀಡಿ 73 ಗಂಟೆಗಳಲ್ಲಿ 3785 ಕಿಲೋಮೀಟರ್ ದೂರ ಸಾಗುತ್ತದೆ. ದಕ್ಷಿಣ ಭಾರತದ ಯಾತ್ರಾರ್ಥಿಗಳು ವೈಷ್ಣೋದೇವಿ ಪ್ರವಾಸಕ್ಕೆ ಈ ರೈಲನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ.
ನವಯುಗ ಎಕ್ಸ್‌ಪ್ರೆಸ್
ಮಂಗಳೂರಿನಿಂದ ಹೊರಡುವ ನವಯುಗ ಎಕ್ಸ್‌ಪ್ರೆಸ್ ಜಮ್ಮುವಿನ ತಾವಿ ತಲುಪಲು 4 ದಿನಗಳ ಅವಧಿ ತೆಗೆದುಕೊಳ್ಳುತ್ತದೆ. ಈ ಮಧ್ಯೆ ರೈಲು 59 ಸ್ಟೇಶನ್‌ಗಳಲ್ಲಿ ನಿಲ್ಲುತ್ತದೆ. 3685 ಕಿಲೋಮೀಟರ್ ಕವರ್ ಮಾಡುವ ನವಯುಗ ಎಕ್ಸ್‌ಪ್ರೆಸ್ ದೇಶದ 15 ರಾಜ್ಯಗಳಲ್ಲಿ ಹಾದುಹೋಗುತ್ತದೆ. ಇಷ್ಟು ರಾಜ್ಯಗಳನ್ನು ಹಾಯುವ ಮತ್ತೊಂದು ರೈಲು ದೇಶದಲ್ಲಿಲ್ಲ. ಜಮ್ಮುಕಾಶ್ಮೀರದೊಂದಿಗೆ ಇತರೆ ಭಾರತೀಯ ರಾಜ್ಯಗಳ ಬಾಂಧವ್ಯ ಬೆಸೆಯುವ ಕಾರಣಕ್ಕಾಗಿ ಈ ರೈಲನ್ನು ಬಿಡಲಾಗಿದೆ.
ಟೆನ್ ಜಮ್ಮು ಎಕ್ಸ್‌ಪ್ರೆಸ್
ಇದು ವಾರಕ್ಕೆರಡು ಬಾರಿ ತಮಿಳುನಾಡಿನ ತಿರುನಲ್ವೇಲಿಯಿಂದ ಜಮ್ಮುಕಾಶ್ಮೀರದ ವೈಷ್ಣೋದೇವಿಗೆ ಸಂಚರಿಸುತ್ತದೆ. ಸುಮಾರು 3642 ಕಿಲೋಮೀಟರ್‌ಗಳನ್ನು 69 ಗಂಟೆಗಳಲ್ಲಿ ಕವರ್ ಮಾಡುವ ಈ ರೈಲು ಮಾರ್ಗ ಮಧ್ಯೆ 62 ಸ್ಟಾಪ್‌ಗಳನ್ನು ನೀಡುತ್ತದೆ. ಈ ಮಧ್ಯೆ ಇದು 11 ರಾಜ್ಯಗಳನ್ನು ಹಾಯುತ್ತದೆ.
ಅಮೃತಸರ್ ಕೊಚುವೆಲಿ ಎಕ್ಸ್‌ಪ್ರೆಸ್
ಗೋಲ್ಡನ್ ಟೆಂಪಲ್‌ಗೆ ಹೆಸರಾಗಿರುವ ಪಂಜಾಬ್‌ನ ಅಮೃತಸರಕ್ಕೆ ತಮಿಳುನಾಡಿನ ತಿರುವನಂಚಪುರಂ ಕೊಚುವೆಲಿಯಿಂದ ಈ ರೈಲು ಸಂಚರಿಸುತ್ತದೆ. ಪ್ರತಿ ವರ್ಷ ಲಕ್ಷಗಟ್ಟಲೆ ಜನರನ್ನು ಜಾಗತಿಕವಾಗಿ ಸೆಳೆಯುವ ಅಮೃತಸರಕ್ಕೆ ಹೋಗಲು ದಕ್ಷಿಣ ಭಾರತೀಯರಿಗೆ ವರವಾಗಿದೆ ಈ ರೈಲು. ಇದು ಪ್ರತಿ ಭಾನುವಾರ ಕೊಚುವೆಲಿಯಿಂದ ಅಮೃತಸರದ ನಡುವಿನ 3597 ಕಿಲೋಮೀಟರ್ ದೂರವನ್ನು 57 ಗಂಟೆಗಳಲ್ಲಿ ಕ್ರಮಿಸುತ್ತದೆ. ಮಾರ್ಗಮಧ್ಯೆ ಕೇವಲ 25 ಸ್ಟಾಪ್‌ಗಳನ್ನು ನೀಡುತ್ತದೆ.
ಭೂತದ ಕಾಟ ಕಾಡುವ ಭಾರತದ 6 ರೈಲು ನಿಲ್ದಾಣಗಳು
ಹಮ್ಸಫರ್ ಎಕ್ಸ್‌ಪ್ರೆಸ್
ಅಗರ್ತಳ ಹಾಗೂ ಬೆಂಗಳೂರು ಕಂಟೋನ್ಮೆಂಟ್ ನಡುವೆ ಸಂಚರಿಸುವ ಹಮ್ಸಫರ್ ಎಕ್ಸ್‌ಪ್ರೆಸ್ 3570 ಕಿಲೋಮೀಟರ್‌ಗಳನ್ನು 64 ಗಂಟೆ 15 ನಿಮಿಷಗಳಲ್ಲಿ ಕವರ್ ಮಾಡುತ್ತದೆ. ಮಧ್ಯೆ 28 ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತದೆ. ಪ್ರತಿ ಮಂಗಳವಾರ ಹಾಗೂ ಭಾನುವಾರ ಅಗರ್ತಳದಿಂದ ಬೆಂಗಳೂರಿಗೆ ಓಡಾಡುತ್ತದೆ ಹಮ್ಸಫರ್ ಎಕ್ಸ್‌ಪ್ರೆಸ್.
ಡೆಹ್ರಾಡೂನ್ ಕೊಚಿವೆಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್
25 ಸ್ಟೇಶನ್‌ಗಳಲ್ಲಿ ನಿಲ್ಲುವ, 9 ರಾಜ್ಯಗಳನ್ನು ಕವರ್ ಮಾಡುವ ಡೆಹ್ರಾಡೂನ್ ಕೊಚಿವೆಲಿ ಎಕ್ಸ್‌ಪ್ರೆಸ್ ಉತ್ತರಾಖಂಡದ ರಾಜಧಾನಿಯಿಂದ ಕೇರಳದ ರಾಜಧಾನಿವರೆಗೆ 3459 ಕಿಲೋಮೀಟರ್ ದೂರ ಓಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.