
1. ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ನಾಲ್ಕು ಮೂಲೆಯಲ್ಲಿ ಗೋಪುರ ಕಟ್ಟಿದ್ದರು. ಅದರಲ್ಲಿ ಒಂದು ಗೋಪುರ ಲಾಲ್‌ಬಾಗ್‌ನಲ್ಲಿದೆ. ಎಲ್ಲೆಲ್ಲಿ ಗೋಪುರ ಇದೆಯೋ ಅಲ್ಲಿ ಉದ್ಯಾನವನ ನಿರ್ಮಿಸುವ ಕನಸಿತ್ತು ಅವರಿಗೆ. ಹಾಗಾಗಿ 1537ರಲ್ಲಿ ಈ ಹೂವಿನತೋಟ ನಿರ್ಮಾಣವಾಗಿ ಅದಕ್ಕೆ ಕೆಂಪುತೋಟ ಎಂಬ ಹೆಸರು ಬಂತು. 34 ಎಕರೆಗಳಷ್ಟಿದ್ದ ಈ ತೋಟದಲ್ಲಿ 1569ರಲ್ಲಿ ನಾಡಪ್ರಭು ಕೆಂಪೇಗೌಡರ ಮಗ ಮಾಗಡಿ ಕೆಂಪೇಗೌಡರು ಕೂಡ ಈ ತೋಟವನ್ನು ಪೋಷಿಸಿದ್ದರು.
ಚಿತ್ರಗಳು: ಈ ಬಾರಿಯ ಲಾಲ್ ಬಾಗ್ ಪುಷ್ಪ ಪ್ರದರ್ಶನದಲ್ಲಿ ಎದ್ದು ನಿಂತ ವಿವೇಕಾನಂದ
2. 1722-1759 ಸಮಯದಲ್ಲಿ ಕೆಂಪುತೋಟ ಒಡೆಯರ್ ಸಾಮ್ರಾಜ್ಯದ ಅಧೀನದಲ್ಲಿತ್ತು. ಮರಾಠರನ್ನು ಮೈಸೂರಿನಲ್ಲಿ ಸೋಲಿಸಿ ಕಳುಹಿಸಿದರ ಕಾರಣಕ್ಕೆ ಹೈದರಾಲಿಗೆ ಜಹಗೀರಾಗಿ ಈ ಕೆಂಪುತೋಟವನ್ನು ನೀಡಲಾಯಿತು. ಹೈದರಾಲಿ ಮೈಸೂರಿನ ಮಹಾರಾಜರಿಗೆ ತಮಿಳುನಾಡಿನ ದಿಂಡಿಗಲ್‌ನಲ್ಲಿ ಸೇನಾಪತಿ ಆಗಿದ್ದ ವ್ಯಕ್ತಿ.
3. ಹೈದರಾಲಿ ಈ ತೋಟವನ್ನು ಮತ್ತಷ್ಟುವಿಸ್ತಾರ ಮತ್ತು ಚೆಂದಗೊಳಿಸಿದ. ಈ ತೋಟವನ್ನು ನೋಡಿಕೊಳ್ಳಲೆಂದೇ ತಮಿಳುನಾಡಿನಿಂದ ತಿಗಳ ಸಮುದಾಯವನ್ನು ಕರೆತಂದು ಅದ್ಭುತವಾಗಿ ತೋಟ ನಿರ್ವಹಿಸುವಂತೆ ನೋಡಿಕೊಂಡ.
4. ಹೈದರಾಲಿ ನಂತರ ಆತನ ಪುತ್ರ ಟಿಪ್ಪು ಸುಲ್ತಾನ್ ನಾನಾ ಬಗೆಯ ಹೂವು, ಹಣ್ಣಿನ ಗಿಡಗಳನ್ನು ನೆಡುವಂತೆ ಮಾಡಿ ತೋಟ ನಳನಳಿಸುವಂತೆ ನೋಡಿಕೊಂಡ. ಬ್ರಿಟಿಷರೊಂದಿಗೆ ನಡೆದ ಯುದ್ಧದಲ್ಲಿ 1799ರಲ್ಲಿ ಟಿಪ್ಪು ಸುಲ್ತಾನ್ ತೀರಿಕೊಂಡ ನಂತರ ಲಾಲ್‌ಬಾಗ್ ನಿರ್ವಹಣೆ ಹೊಣೆಯನ್ನು ಬ್ರಿಟಿಷರು ತಾವೇ ಹೊತ್ತುಕೊಂಡರು. ಬೆಂಜಮಿನ್ ಹೀನ್ ಎಂಬಾತನನ್ನು ಉದ್ಯಾನವನ ನಿರ್ವಹಣಾ ಅಧಿಕಾರಿಯನ್ನಾಗಿ ನೇಮಿಸಿದರು.
ಇನ್ನುಮುಂದೆ ಲಾಲ್ ಬಾಗ್ ನಲ್ಲಿ ಸ್ಮಾರ್ಟ್ ಪಾರ್ಕಿಂಗ್
5. 1760ರಿಂದ 1800ರವರೆಗೆ ಈ ತೋಟ ಸುಲ್ತಾನರ ವೈಯಕ್ತಿಕ ಉದ್ಯಾನವನವಾಗಿತ್ತು. ಆ ಸಮಯದಲ್ಲಿ ಈ ತೋಟಕ್ಕೆ ಸಾರ್ವಜನಿಕ ಪ್ರವೇಶ ಇರಲಿಲ್ಲ.
6. ಲಾಲ್‌ಬಾಗಿನಲ್ಲಿ ಪುಷ್ಪ ಪ್ರದರ್ಶನ ಆರಂಭಗೊಂಡಿದ್ದು 1857ರಲ್ಲಿ. ಆ ಪುಷ್ಪ ಪ್ರದರ್ಶನ ಎಷ್ಟುಜನಪ್ರಿಯವಾಯಿತು ಎಂದರೆ ಶೀಘ್ರದಲ್ಲೇ ವರ್ಷಕ್ಕೆ ಎರಡು ಪುಷ್ಪ ಪ್ರದರ್ಶನ ಆಯೋಜಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.
7. ಸುಲ್ತಾನರ ಕಾಲದಲ್ಲಿ ಲಾಲ್‌ಬಾಗ್ ಒಳಗೆ ಯಾವುದೇ ಕಟ್ಟಡಗಳಿರಲಿಲ್ಲ. ಬ್ರಿಟಿಷರ ಆಳ್ವಿಕೆಯಲ್ಲಿ ಒಂದೊಂದೇ ಕಟ್ಟಡಗಳು ನಿರ್ಮಾಣವಾದವು. 1867ರಲ್ಲಿ ಬ್ಯಾಂಡ್‌ಸ್ಟಾಂಡ್ ಕಟ್ಟಡ ನಿರ್ಮಾಣವಾಯಿತು. 1889ರಲ್ಲಿ ಗಾಜಿನ ಮನೆ ನಿರ್ಮಿಸಲಾಯಿತು.
8. 1874ರಲ್ಲಿ ಲಾಲ್‌ಬಾಗ್ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡ ಜಾನ್ ಕ್ಯಾಮೆರಾನ್ ಆಧುನಿಕ ಲಾಲ್‌ಬಾಗ್ ರೂಪಿಸಲು ಅಡಿಗಲ್ಲು ಹಾಕಿದರೆ ಅವರ ನಂತರ ಬಂದ ಗುಸ್ತಾವ್ ಹರ್ಮನ್ ಕೃಂಬಿಗಲ್ ಲಾಲ್‌ಬಾಗ್ ಅನ್ನು ಮತ್ತಷ್ಟುಅದ್ಭುತವಾಗಿ ರೂಪಿಸಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.