ಸುಳ್ಳು ಸುದ್ದಿ ಪತ್ತೆ ಮಾಡಿದ್ರೆ ವಾಟ್ಸಾಪ್ ನಿಂದ ಸಿಗುತ್ತೆ 50 ಸಾವಿರ ಡಾಲರ್

 |  First Published Jul 7, 2018, 4:11 PM IST

ವಾಟ್ಸಾಪ್ ಇದೀಗ ತನ್ನ ಬಳಕೆ ದಾರರಿಗೆ ಹೊಸ ಆಫರ್ ಒಂದನ್ನು ನೀಡಿದೆ. ಸುಳ್ಳು ಸುದ್ದಿಗಳ ಬಗ್ಗೆ ಸಂಶೋಧನೆ ಮಾಡಿ ವರದಿ ನೀಡಿದಲ್ಲಿ ಅವರಿಗೆ 50 ಸಾವಿರ ಡಾಲರ್ ಹಣವನ್ನು ನೀಡವುದಾಗಿ ಆಫರ್ ನೀಡಿದೆ.


ವಾಷಿಂಗ್ಟನ್ :  ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 

ಇಂತಹ ಸುಳ್ಳು ಸುದ್ದಿಗಳಿಗೆ ಕಡವಾಣ ಹಾಕುವ ನಿಟ್ಟಿನಲ್ಲಿ ಇದೀಗ ವಾಟ್ಸಾಪ್ ಹಾಗೂ ಅದರ ಮಾತೃ ಸಂಸ್ಥೆಯಾದ ಫೇಸ್ ಬುಕ್ ಹೊಸ ಐಡಿಯಾವೊಂದನ್ನು ರೂಪಿಸಿದೆ. 

Tap to resize

Latest Videos

ಸುಳ್ಳು ಸುದ್ದಿಗಳನ್ನು  ಸಂಶೋಧನೆ ಮಾಡಿ ಅಧ್ಯಯನದ ವರದಿ ನೀಡಲು ತಿಳಿಸಿದೆ. ಇಂತಹ ಸಂಶೋಧನೆ ಮಾಡಿದ ಸಂಶೋಧಕರಿಗೆ ವಾಟ್ಸಾಪ್ 50 ಸಾವಿರ ಅಮೆರಿಕನ್ ಡಾಲರ್ ಹಣವನ್ನು ನೀಡುವುದಾಗಿ ಆಫರ್ ನೀಡಿದೆ. 

ವಾಟ್ಸಾಪ್ ಇದಕ್ಕೆ ಯಾವುದೇ ರೀತಿಯಾದ ಡಾಟಾ ಸಹಕಾರವನ್ನೂ ಕೂಡ ನೀಡುವುದಿಲ್ಲ. ಆದರೆ ಸ್ವತಃ ಸಂಶೋಧನೆ ಮಾಡುವವರೇ ಸಂಪೂರ್ಣ ಡಾಟಾ ಸಂಗ್ರಹ ಮಾಡಬೇಕು ಎಂದು ಹೇಳಿದೆ.

click me!