WhatsApp ನೀಡುತ್ತಿದೆ 1 ಕೋಟಿ 77 ಲಕ್ಷ ಗಳಿಸುವ ಅವಕಾಶ!: ನೀವು ಮಾಡಬೇಕಾದದ್ದಿಷ್ಟೇ...

By Web DeskFirst Published Feb 2, 2019, 12:40 PM IST
Highlights

ವಾಟ್ಸಾಪ್ 1 ಕೋಟಿ 77 ಲಕ್ಷ ಗಳಿಸುವ ಅವಕಾಶವೊಂದನ್ನು ನೀಡಿದೆ. ಇದನ್ನು ಗಳಿಸುವುದು ಕೂಡಾ ಸುಲಭ. ಹಾಗಾದ್ರೆ ಇದಕಲ್ಕಿರುವ ಮಾನದಂಡಗಳೇನು? ಇಲ್ಲಿದೆ ವಿವರ

ಭಾರತದಲ್ಲಿ ಉದ್ಯಮಿಗಳು ಹಾಗೂ ಸಣ್ಣ ವ್ಯಾಪಾರಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಫೇಸ್ ಬುಕ್ ಒಡೆತನದ ವಾಟ್ಸಾಪ್ ಮೆಸೇಜಿಂಗ್ ಆ್ಯಪ್ 'ಸ್ಟಾರ್ಟಪ್ ಇಂಡಿಯಾ ವಾಟ್ಸಾಪ್ ಗ್ಯಾಂಡ್ ಚಾಲೆಂಜ್'[Startup India Whatsapp Grand Challenge]ವನ್ನು ಘೋಷಿಸಿದೆ. ಈ ಕುರಿತಾಗಿ ಕಂಪೆನಿಯು ಹೇಳಿಕೆಯೊಂದನ್ನು ನೀಡುತ್ತಾ ಟಾಪ್ 5 ಸ್ಟಾರ್ಟಪ್ ಗಳಿಗೆ ಕಂಪೆನಿಯು ಒಟ್ಟು 2,50,000 ಡಾಲರ್[1 ಕೋಟಿ 77 ಲಕ್ಷ] ನೀಡುತ್ತದೆ ಎಂದಿದೆ.

ವಾಟ್ಸಾಪ್ ಕಂಪೆನಿಯ ವಕ್ತಾರರು ಈ ಕುರಿತಾಗಿ ಮಾಹಿತಿ ನೀಡುತ್ತಾ 'ವ್ಯಾಪಕವಾಗಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಭಾವ ಬೀರುವ ಹಾಗೂ ದೈನಂದಿನ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಮಾರ್ಗ ಸೂಚಿಸುವ ಹಾಗೂ ಬ್ಯುಸಿನೆಸ್ ಮಾಡೆಲ್ ಗಳು ಈ ಚಾಲೆಂಜ್ ಗೆ ಮಾರ್ಚ್ 10ರೊಳಗೆ ನಾಮ ನಿರ್ದೇಶನ ಮಾಡಬಹುದು' ಎಂದಿದ್ದಾರೆ.

ವಾಟ್ಸಾಪ್ ಜಗತದ್ತಿನಾದ್ಯಂತ ಬರೋಬ್ಬರಿ 1.3 ಬಿಲಿಯನ್ ಹಾಗೂ ಭಾರತದಲ್ಲಿ 20 ಕೋಟಿ ಬಳಕೆದಾರರನ್ನು ಹೊಂದಿದೆ. ಇದು ಕಳೆದ ಒಂದು ವರ್ಷದಿಂದ ಬ್ಯುಸಿನೆಸ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ವಾಟ್ಸಾಪ್ ಬ್ಯುಸಿನೆಸ್ ಆ್ಯಪ್ (WhatsApp Business Application) ಬಳಕೆಗೆ ಬಂದು ಒಂದು ವರ್ಷವಾಗುತ್ತಿದ್ದು, ಈವರೆಗೂ ಪ್ರತಿ ತಿಂಗಳು ಒಟ್ಟು 50 ಲಕ್ಷ ಜನರು ಉಪಯೋಗಿಸುತ್ತಿದ್ದಾರೆ. ಭಾರತದ ಶೇ. 84 ರಷ್ಟು ಸಣ್ಣ ಹಾಗೂ ಮಧ್ಯಮ ವರ್ಗದ ವ್ಯಾಪಾರಿಗಳು ವಾಟ್ಸಾಪ್ ಮೂಲಕ ಗ್ರಾಹಕರೊಂದಿಗೆ ಉತ್ತಮವಾಗಿ ವ್ಯವಹರಿಸಲು ಸಾಧ್ಯವಾಗಿದೆ ಎನ್ನುತ್ತಾರೆ. ಇನ್ನು ಶೇ. 80ರಷ್ಟು ವ್ಯಾಪಾರಿಗಳು ವಾಟ್ಸಾಪ್ ನಿಂದ ತಮ್ಮ ಉದ್ಯಮ ಯಶಸ್ಸು ಕಾಣುತ್ತಿದೆ ಎಂದಿದ್ದಾರೆ.

click me!