ಎಷ್ಟು ವೇಗದಲ್ಲಿ ಡಿಕ್ಕಿ ಹೊಡೆದ್ರೆ ಹೇಗೆ ಎಫೆಕ್ಟ್‌: ಬಸ್‌ ಅಪಘಾತದ ಗ್ರಾಫಿಕ್ ವೀಡಿಯೋ ವೈರಲ್

By Anusha Kb  |  First Published Jul 5, 2023, 2:48 PM IST

ಈಗ ಬಸ್ ಎಷ್ಟು ವೇಗದಲ್ಲಿ ಚಲಿಸಿ ಡಿಕ್ಕಿ ಹೊಡೆದರೆ ಯಾವ ರೀತಿಯ ಅನಾಹುತ ಸಂಭವಿಸುತ್ತದೆ ಎಂದು ತೋರಿಸುವ ಗ್ರಾಫಿಕ್ಸ್ ವೀಡಿಯೋವೊಂದು ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, 7 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ. 


ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದಲ್ಲಿ ಬಸ್ಸೊಂದು ಡಿಕ್ಕಿ ಹೊಡೆದು ಬೆಂಕಿ ಹತ್ತಿಕೊಂಡ ಪರಿಣಾಮ 25 ಜನ ಸಜೀವ ದಹನಗೊಂಡಿದ್ದರು.  ಮಹಾರಾಷ್ಟ್ರದ ಬುಲ್ಧಾನಾದ ಸಮೃದ್ಧಿ ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ  ಅಪಘಾತ ಸಂಭವಿಸಿತ್ತು.  ಸವಿನಿದ್ರೆಯಲ್ಲಿದ್ದ 25 ಜನ ಸಾವನ್ನಪ್ಪಿದ್ದರೆ ಇತರರು ಗಾಯಗೊಂಡಿದ್ದರು. ಈಗ ಬಸ್ ಎಷ್ಟು ವೇಗದಲ್ಲಿ ಚಲಿಸಿ ಡಿಕ್ಕಿ ಹೊಡೆದರೆ ಯಾವ ರೀತಿಯ ಅನಾಹುತ ಸಂಭವಿಸುತ್ತದೆ ಎಂದು ತೋರಿಸುವ ಗ್ರಾಫಿಕ್ಸ್ ವೀಡಿಯೋವೊಂದು ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, 7 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ. 

Wall Street Silver (@WallStreetSilv) ಎಂಬ ಖಾತೆಯಿಂದ ಈ ವೀಡಿಯೋ ಪೋಸ್ಟ್ ಆಗಿದ್ದು,  ಅಪಘಾತ ಪರೀಕ್ಷೆ, ಗಂಟೆಗೆ 8 ಮೈಲು ವೇಗದಲ್ಲಿ ಸಾಗುವ ವಾಹನದಿಂದ ಆರಂಭವಾಗಿ  ಗಂಟೆಗೆ 150 ಮೈಲು ವೇಗದಲ್ಲಿ ಚಲಿಸುವ ವಾಹನದವರೆಗೆ ಅಪಘಾತದ ಪರಿಣಾಮ ಹೇಗಿರುತ್ತದೆ ಎಂಬುದನ್ನು ಈ ವೀಡಿಯೋ ತೋರಿಸುತ್ತಿದೆ. 

Latest Videos

undefined

ವೀಡಿಯೋದಲ್ಲಿ ತೋರಿಸುವಂತೆ ಗಂಟೆಗೆ 8 ಮೈಲು ವೇಗದಲ್ಲಿ ಚಲಿಸುವ ಬಸ್  ರಸ್ತೆ ಮಧ್ಯೆಯ ವಿಭಾಜಕಕ್ಕೆ ಡಿಕ್ಕಿ ಹೊಡೆದರೆ ಬಸ್‌ನ ಮುಂದಿನ ಗಾಜುಗಳಷ್ಟೇ ಹಾನಿಗೊಳಗಾಗುತ್ತವೆ. ಗಂಟೆಗೆ  15 ಮೈಲು ವೇಗದಲ್ಲಿ ಡಿಕ್ಕಿ ಹೊಡೆದರೆ ಒಳಗಿರುವ ಪ್ರಯಾಣಿಕರಿಗೆ ಅಲ್ಪಸ್ವಲ್ಪ ಗಾಯಗಳಾಗುತ್ತವೆ. ಗಂಟೆಗೆ 25 ಮೈಲು ವೇಗದಲ್ಲಿ ಡಿಕ್ಕಿ ಹೊಡೆದರೆ ಬಸ್‌ನ ಕೆಲ ಭಾಗಗಳು ಕಳಚುವ ಜೊತೆಗೆ ಪ್ರಯಾಣಿಕರಿಗೆ ಸ್ವಲ್ಪ ತೀವ್ರ ಗಾಯಗಳಾಗುತ್ತವೆ.  ಹಾಗೆಯೇ ಗಂಟೆಗೆ 35 ಮೈಲು ವೇಗದಲ್ಲಿ ಡಿಕ್ಕಿ ಹೊಡೆದರೆ ಆ ರಭಸಕ್ಕೆ ಕೆಲವರು ಬಸ್‌ನಿಂದ ಹೊರಗೆ ತೂರಿ ಹೋಗುತ್ತಾರೆ. ಅಲ್ಲದೇ ಕೆಲವರು ಕೆಳಗೆ ಬೀಳುತ್ತಾರೆ.  

ಮಹಾರಾಷ್ಟ್ರ ಬಸ್‌ ದುರಂತಕ್ಕೆ ‘ರೋಡ್‌ ಹಿಪ್ನೋಸಿಸ್‌’ ಕಾರಣ: 25 ಜನರ ಜೀವವನ್ನೇ ತೆಗೆದ ಈ ಸಮಸ್ಯೆ!

ಹಾಗೆಯೇ ಗಂಟೆಗೆ 50 ಮೈಲು ವೇಗದಲ್ಲಿ ಬಸ್ ಡಿಕ್ಕಿ ಹೊಡೆದರೆ ಅದರ ಪರಿಣಾಮ ಇನ್ನಷ್ಟು ತೀವ್ರವಾಗಲಿದ್ದು, ಇನ್ನಷ್ಟು ಜನರು ಬಸ್‌ನಿಂದ ಕೆಳಗೆ ಬಿದ್ದು ಗಾಯಗೊಳ್ಳಲಿದ್ದಾರೆ. ಜೊತೆಗೆ ಬಸ್‌ನ ಮುಂಭಾಗ ತೀವ್ರವಾಗಿ ಡ್ಯಾಮೇಜ್ ಆಗಲಿದೆ. ಅದೇ ರೀತಿ  ಗಂಟೆಗೆ 70 ಮೈಲು ವೇಗದಲ್ಲಿ ಬಸ್ ಡಿಕ್ಕಿ ಹೊಡೆದರೆ  ಬಸ್ ಸಂಪೂರ್ಣ ನಜ್ಜುಗುಜ್ಜಾಗುವುದಲ್ಲದೇ ಬಸ್‌ನಿಂದ ಅನೇಕರು ಹೊರಗೆ ಬಿದ್ದು ಸಾವಿಗೆ ಕಾರಣವಾಗುತ್ತದೆ. ಗಂಟೆಗೆ 90 ಮೈಲು ವೇಗದಲ್ಲಿ ಡಿಕ್ಕಿ ಹೊಡೆದರೆ ಇದಕ್ಕಿಂತ ಪರಿಣಾಮ ಸ್ವಲ್ಪ ತೀವ್ರವಾಗಿದ್ದು, ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಾಗಲಿದೆ. ಪ್ರಯಾಣಿಕರ ದೇಹಗಳೆಲ್ಲವೂ ದೂರ ಚದುರಿ ಹೋಗಲಿದೆ.

ಹಾಗೆಯೇ ಗಂಟೆಗೆ  110 ಮೈಲು ವೇಗದಲ್ಲಿ ಬಸ್ ಡಿಕ್ಕಿ ಹೊಡೆದರೆ ಬಸ್‌ನ ಮೇಲ್ಭಾಗವೂ ತೆರೆದುಕೊಂಡು ಬಹುತೇಕ ಎಲ್ಲಾ ಪ್ರಯಾಣಿಕರು ಬಸ್‌ನಿಂದ ಹೊರಗೆ ಬೀಳುತ್ತಾರೆ. ಬಸ್‌ ಸಂಪೂರ್ಣ ತಿರುಗಿ ಹೋಗಿ ನಿಲ್ಲುತ್ತದೆ. ಜೊತೆಗೆ ಬಸ್‌ ಮುಂಭಾಗವೂ ಸಂಪೂರ್ಣ ನಜ್ಜುಗುಜ್ಜಾಗಿರುತ್ತದೆ. ಇನ್ನು ಗಂಟೆಗೆ 150 ಮೈಲು ವೇಗದಲ್ಲಿ  ಹೋಗಿ ಡಿಕ್ಕಿ ಹೊಡೆಯುವ ಬಸ್ ದೂರಕ್ಕೆ ಚಿಮ್ಮಿ ಹೋಗಿ ಪಲ್ಟಿ ಹೊಡೆಯುತ್ತದೆ, ಬಸ್‌ನ ಭಾಗಗಳೆಲ್ಲಾ ತೆರೆದುಕೊಂಡು ಪ್ರಯಾಣಿಕರೆಲ್ಲಾ ಕೆಳಗೆ ಬೀಳುತ್ತಾರೆ. ಹಾಗೆಯೇ 200 ಮೈಲು ವೇಗದಲ್ಲಿ ಡಿಕ್ಕಿ ಹೊಡೆಯುವ ಬಸ್ ಸಂಪೂರ್ಣ ಅಪ್ಪಚ್ಚಿ ಆಗಿದ್ದು, ಅದರಲ್ಲಿ ಒಬ್ಬರು ಬದುಕುಳಿಯುವ ಸಾಧ್ಯತೆಯೇ ಇಲ್ಲಹಾಗೆಯೇ 250 ಮೈಲು ವೇಗದಲ್ಲಿ ಬಸ್ ಡಿಕ್ಕಿ ಹೊಡೆದರೆ ಬಸ್‌ ಡಿಕ್ಕಿ ಹೊಡೆದ ರಭಸಕ್ಕೆ ದೂರ ಚಿಮ್ಮಿ 4 ಸುತ್ತು ಸುತ್ತಲಿದ್ದು  ಬಸ್‌ನಲ್ಲಿದ್ದವರೆಲ್ಲಾ ಕೆಳಗುರುಳಿ ದೂರ ದೂರ ಚದುರಿ ಹೋಗಿದ್ದಾರೆ. ಬಸ್ ಸಂಪೂರ್ಣ ಚಪ್ಪಟೆಯಾಗಿದೆ. ಹಾಗೆಯೇ 300 ಮೈಲು ವೇಗದಲ್ಲಿ ಡಿಕ್ಕಿ ಹೊಡೆದರೆ  ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ ಪಲ್ಟಿಯಾಗಿ ರಸ್ತೆಯಲ್ಲೇ ಸುಮಾರು ದೂರದವರೆಗೆ ಎಳೆದುಕೊಂಡು ಹೋಗಿದ್ದು, ಪ್ರಯಾಣಿಕರೆಲ್ಲಾ ಅಪಘಾತದ ರಭಸಕ್ಕೆ ದೂರ ಚಿಮ್ಮಿ ಹೋಗಿದ್ದರೆ, ಅಲ್ಲದೇ ಬಸ್ ಹಲವು ತುಂಡುಗಳಾಗಿದೆ. 

ಮಹಾರಾಷ್ಟ್ರದಲ್ಲಿ ಭೀಕರ ಬಸ್‌ ಅಪಘಾತ: ಸವಿನಿದ್ರೆಯಲ್ಲಿದ್ದ 25 ಮಂದಿ ಸಜೀವ ದಹನ

ಈ ಡಬ್ಬಲ್ ಡೆಕ್ಕರ್ ಬಸ್ ಅಪಘಾತಕ್ಕೀಡಾಗುವ ದೃಶ್ಯವನ್ನು ತೋರಿಸುವ ವೀಡಿಯೋ ಇದಾಗಿದ್ದು,  ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ.  ಯಾವಾಗಲೂ ಹಿಂಭಾಗದ ಸೀಟನ್ನೇ ಆಯ್ಕೆ ಮಾಡುವಂತೆ ಒಬ್ಬರು ಹೇಳಿದ್ದಾರೆ. 

Crash Test ( decapitation at 25MPH)

The best outcomes seems to be 8 mph and 150 mph. 🧐

🔊 pic.twitter.com/k58P4kb3Lw

— Wall Street Silver (@WallStreetSilv)

 

click me!