ಸ್ಯಾಮ್ಸಂಗ್‌ನಿಂದ ಮೊಟ್ಟಮೊದಲ ತ್ರಿಬಲ್ ಕ್ಯಾಮರ ಫೋನ್ ಬಿಡುಗಡೆ

By Web DeskFirst Published Sep 25, 2018, 8:54 PM IST
Highlights

ಸ್ಯಾಮ್ಸಂಗ್ ಮೊಬೈಲ್ ಭಾರತದಲ್ಲಿ ಮೊಟ್ಟ ಮೊದಲು ಮೂರು ಕ್ಯಾಮಾರ ಸೌಲಭ್ಯವುಳ್ಳ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ನೂತನ ಗ್ಯಾಲೆಕ್ಸಿ ಎ7 ಫೋನ್ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ.

ಬೆಂಗಳೂರು(ಸೆ.25): ಸ್ಯಾಮ್ಸಂಗ್ ಇದೀಗ ಭಾರತದಲ್ಲಿ ಮೊಟ್ಟಮೊದಲ ಮೂರು ಕ್ಯಾಮರ ಸೌಲಭ್ಯವುಳ್ಳ ಗೆಲಾಕ್ಸಿ ಎ7 ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಈ ಮೂಲಕ ಫೋನ್ ಮಾರುಕಟ್ಟೆಯಲ್ಲಿ ಮತ್ತೆ ಅಗ್ರಸ್ಥಾನ ಸಂಪಾದಿಸಲು ಸ್ಯಾಮ್ಸಂಗ್ ಮುಂದಾಗಿದೆ.

ಹೊಸ ಮೂರು ಕ್ಯಾಮೆರಾಗಳ ವ್ಯವಸ್ಥೆಯಲ್ಲಿ, ಹೆಚ್ಚುವರಿಯಾಗಿ 8 ಮೆಗಾಪಿಕ್ಸೆಲ್ 120 ಡಿಗ್ರಿ ಅಲ್ಟ್ರಾವೈಡ್ ಲೆನ್ಸ್ ಅಳವಡಿಸಲಾಗಿದ್ದು, ಇದು ಮನುಷ್ಯರ ಕಣ್ಣಿನಷ್ಟೇ ವಿಶಾಲ ಕೋನದ ದೃಷ್ಟಿ ಹರಿಸುತ್ತದೆ. ಇದು ಗ್ರಾಹಕರಿಗೆ ಯಾವುದೇ ನಿರ್ಬಂಧವಿಲ್ಲದ ವಿಶಾಲ ಕೋನದ ಫೋಟೊಗಳನ್ನು ನಾವು ನೋಡುವ ರೀತಿಯಲ್ಲೇ ತೆಗೆಯಲು ಅನುವು ಮಾಡಿಕೊಡುತ್ತದೆ.

24 ಎಂಪಿ ಪ್ರಾಥಮಿಕ ಮತ್ತು ಸೆಲ್ಫಿ ಕ್ಯಾಮೆರಾಗಳು ಕೂಡಾ ಹೊಸ ತಂತ್ರಜ್ಞಾನವಾದ ಪಿಕ್ಸೆಲ್ ಬಿನ್ನಿಂಗ್ ಗುಣಲಕ್ಷಣಗಳನ್ನು ಹೊಂದಿದೆ.  ಇದರಿಂದ ಫೋಟೋ ತಗೆಯುವ ವೇಳೆ ಹಾಗೂ ತೆಗೆದ ಬಳಿಕ ಸುಲಭವಾಗಿ ಎಡಿಟ್ ಮಾಡಬಹುದಾಗಿದೆ.

ಗೆಲಾಕ್ಸಿ ಎ7 ಕ್ಯಾಮೆರಾ ಸೆನ್ಸ್ ಆಪ್ಟಿಮೈಸರ್ ಎಂಬ ವಿಶಿಷ್ಟ ಸಾಧನವನ್ನು ಒಳಗೊಂಡಿದ್ದು, ಇದು 19 ಭಿನ್ನ ಚಿತ್ರಣಗಳನ್ನು ಅಂದರೆ ಆಹಾರ, ಹೂವು ಅಥವಾ ಸೂರ್ಯಾಸ್ತದಂಥ ಭಿನ್ನ ಸನ್ನಿವೇಶಗಳನ್ನು ಪತ್ತೆ ಮಾಡಿ, ಅತ್ಯುತ್ತಮ ಚಿತ್ರ ಸಂಯೋಜನೆಯನ್ನು ಸ್ವಯಂಚಾಲಿತವಾಗಿ ಮಾಡಿಕೊಂಡು, ಕ್ಲಿಕ್ಕಿಸುತ್ತದೆ. 6.0 ಇಂಚುಗಳ ಎಫ್‍ಎಚ್‍ಡಿ+ ಸೂಪರ್ ಅಮೋಲೆಡ್ ಡಿಸ್‍ಪ್ಲೇ , 2.5ಡಿ ಗ್ಲಾಸ್ ಬ್ಯಾಕ್ ವಿನ್ಯಾಸ, 7.5 ಎಂಎಂ ಸ್ಲಿಮ್ ಬಾಡಿ, ಬದಿಯಲ್ಲಿ ಬೆರಳಚ್ಚು ಸೆನ್ಸಾರ್ ಮತ್ತಿತರ ಸೌಲಭ್ಯಗಳನ್ನು ಹೊಂದಿದೆ.

ಎಕ್ಸಿನೋಸ್ 7885 2.2 ಗಿಗಾಹಟ್ರ್ಸ್ ಆಕ್ಟೊಕೋರ್ ಪ್ರೊಸೆಸರ್ ಶಕ್ತಿ ತುಂಬಿದೆ. ಈ ಸಾಧನವು 6 ಜಿಬಿ ಆರ್‍ಎಮ್/ 128 ಜಿಬಿ ಆರ್‍ಓಎಂ ಮತ್ತು 4 ಜಿಬಿ ರ್ಯಾಮ್ ಹಾಗೂ 64 ಜಿಬಿ ಆರ್‍ಓಎಂ ಅವತರಣಿಕೆಯಲ್ಲಿ ಲಭ್ಯ. ಇದನ್ನು 512 ಜಿಬಿ ವಿಸ್ತರಿಸಬಹುದಾದ ಮೆಮೊರಿ ಹೊಂದಿದೆ.

ಗೆಲಾಕ್ಸಿ ಎ7 ಶ್ರೇಣಿಯ ಬೆಲೆ 23,990 (4ಜಿಬಿ/64 ಜಿಬಿ ಅವತರಣಿಕೆ) ಮತ್ತು 28,990 (6ಜಿಬಿ/ 128 ಜಿಬಿ ಅವತರಣಿಕೆ) ಇದ್ದು, ಸ್ಟೈಲಿಶ್ ಬಣ್ಣಗಳಾದ ನೀಲಿ, ಕಪ್ಪು ಮತ್ತು ಚಿನ್ನದ ಬಣ್ಣದಲ್ಲಿ ಲಭ್ಯ. ಎಚ್‍ಡಿಎಫ್‍ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಪಾವತಿಸುವ ಗ್ರಾಹಕರಿಗೆ 2000 ರೂಪಾಯಿ ಕ್ಯಾಶ್‍ಬ್ಯಾಕ್ ಸೌಲಭ್ಯ ಸಿಗುತ್ತದೆ. ಸೆಪ್ಟೆಂಬರ್ ಅಂತ್ಯದಲ್ಲಿ ಎಲ್ಲಾ ಮೊಬೈಲ್ ಮಳಿಗೆ ಹಾಗೂ ಸೆ.27, 28ರಂದು ಫ್ಲಿಪ್ ಕಾರ್ಟ್, ಸ್ಯಾಮ್ಸಂಗ್ ಇ ಶಾಪ್‌ಗಳಲ್ಲಿ ಲಭ್ಯವಿದೆ.

click me!