ಚೀನಾ ಸ್ಮಾರ್ಟ್‌ಫೋನ್‌ ಪಾಲು ಶೇ.81ರಿಂದ ಶೇ.72ಕ್ಕೆ ಇಳಿಕೆ ಬೇಡಿಕೆ ಗಣನೀಯ ಕುಸಿತ!

By Suvarna News  |  First Published Jul 25, 2020, 5:41 PM IST

ಮಾರುಕಟ್ಟೆಯಲ್ಲಿ ಚೀನಾ ಸ್ಮಾರ್ಟ್‌ಫೋನ್‌ ಪಾಲು ಶೇ.81ರಿಂದ ಶೇ.72ಕ್ಕೆ ಇಳಿಕೆ ಬೇಡಿಕೆ ಗಣನೀಯ ಕುಸಿತ!| ಚೀನಾದ ಒಪ್ಪೊ, ವಿವೋ, ರಿಯಲ್‌ಮೀ ಬ್ರಾಂಡ್‌ ಮೊಬೈಲ್‌ಗಳ ಮಾರಾಟ ಕುಸಿತ


ನವದೆಹಲಿ(ಜು.25): ಜನವರಿ- ಮಾಚ್‌ರ್‍ ತ್ರೈಮಾಸಿಕದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೊಬೈಲ್‌ಗಳ ಪಾಲು ಶೇ.81ರಷ್ಟುಇದ್ದಿದ್ದು, ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಶೇ.72ಕ್ಕೆ ಕುಸಿದಿದೆ ಎಂದು ಕೌಂಟರ್‌ಪಾಯಿಂಟ್‌ ಅಧ್ಯಯನ ಸಂಸ್ಥೆ ಹೇಳಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಚೀನಾದ ಒಪ್ಪೊ, ವಿವೋ, ರಿಯಲ್‌ಮೀ ಬ್ರಾಂಡ್‌ ಮೊಬೈಲ್‌ಗಳು ಹೆಚ್ಚು ಬೇಡಿಕೆ ಹೊಂದಿವೆ. ಏಪ್ರಿಲ್‌, ಮೇನಲ್ಲಿ ಭಾರತ ಸರ್ಕಾರ ಲಾಕ್ಡೌನ್‌ ಹೇರಿದ ಪರಿಣಾಮ ಭಾರತದಲ್ಲಿ ಮೊಬೈಲ್‌ ವ್ಯಾಪಾರ ಶೇ.51ರಷ್ಟುಕುಸಿತ ಕಂಡಿತ್ತು ಎಂದೂ ವರದಿ ಹೇಳಿದೆ.

Tap to resize

Latest Videos

undefined

ಕೊರೋನಾ ಲಾಕ್‌ಡೌನ್‌, ಚೀನಾ ವಿರೋಧಿ ಅಲೆ, ಉತ್ಪಾದನೆ ಮತ್ತು ವಿತರಣೆಯಲ್ಲಿನ ತೊಂದರೆ ಕೂಡಾ ಮಾರಾಟ ಇಳಿಕೆಗೆ ಕಾರಣವಾಗಿದೆ ಎಂದು ಸಂಸ್ಥೆ ಹೇಳಿದೆ.

ಚೀನಾ ವಸ್ತು, ಸೇವೆ ಪಡೆಯಲು ಭಾರತದಿಂದ ಮತ್ತಷ್ಟು ನಿಷೇಧ!

ಭಾರತದೊಂದಿಗೆ ಗಡಿ ಹೊಂದಿಕೊಂಡಿರುವ ಯಾವುದೇ ದೇಶದಿಂದ ದೇಶದ ಯಾವುದೇ ಸರ್ಕಾರಿ ಸ್ವಾಮ್ಯದ ಕಂಪನಿಗಳು ಯಾವುದೇ ವಸ್ತು ಅಥವಾ ಸೇವೆಯನ್ನು ಪಡೆಯುವುದನ್ನು ನಿಷೇಧಿಸಿ ಭಾರತ ಸರ್ಕಾರ ಹೊರಡಿಸಿದೆ. ಸಾಮಾನ್ಯ ಹಣಕಾಸು ಕಾಯ್ದೆ 2017ಕ್ಕೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ಶುಕ್ರವಾರ ತಡರಾತ್ರಿ ಆದೇಶ ಹೊರಡಿಸಿದೆ.

ರಹಸ್ಯ ಕಾದಿಡಲು ಇನ್ನಷ್ಟು ಚೀನಾ ರಾಯಭಾರ ಕಚೇರಿ ಬಂದ್‌: ಟ್ರಂಪ್‌

ಆದೇಶದಲ್ಲಿ ಯಾವುದೇ ದೇಶಗಳ ಹೆಸರು ಹೇಳದೇ ಇದ್ದರೂ, ಅದು ನೇರವಾಗಿ ಚೀನಾ ದೇಶದ ಕಂಪನಿಗಳು ಭಾರತಕ್ಕೆ ಯಾವುದೇ ವಸ್ತುಗಳನ್ನು ರಫ್ತು ಮಾಡುವುದನ್ನು ತಡೆಯುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

ಅದರೆ ಈ ತಿದ್ದುಪಡಿಯಲ್ಲಿ ಕೆಲವೊಂದು ವಿನಾಯ್ತಿ ನೀಡಲಾಗಿದೆ. ವೈದ್ಯಕೀಯ ಸಾಮಗ್ರಿಗಳು ಆಮದಿಗೆ ಪೂರ್ಣ ವಿನಾಯ್ತಿ ನೀಡಲಾಗಿದೆ. ಜೊತೆಗೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಮಂಡಳಿಯಲ್ಲಿ ನೊಂದಾಯಿತ ಕಂಪನಿಗಳಿಗೆ ರಫ್ತು ಮಾಡಲು ಅವಕಾಶ ಕಲ್ಪಿಸಲಾಗಿದೆ.

click me!