ರಿಲಯನ್ಸ್‌ ಜಿಯೋದಿಂದ ಮತ್ತೊಂದು ಆಫರ್

 |  First Published Jul 6, 2018, 8:16 AM IST

ರಿಲಾಯನ್ಸ್ ಜಿಯೋ ಇದೀಗ ತನ್ನ ಗ್ರಾಹಕರಿಗಾಗಿ ಮತ್ತೊಂದು ಹೊಸ ಆಫರ್ ನೀಡಿದೆ. ಹೊಸ ಸೆಟ್‌ ಟಾಪ್‌ ಬಾಕ್ಸ್‌ ಅನಾವರಣಗೊಳಿಸಿದೆ. ‘ಗಿಗಾ ಟೀವಿ’ ಎಂದು ಕರೆಯಲ್ಪಡುವ ಈ ಸೆಟ್‌ ಟಾಪ್‌ ಬಾಕ್ಸ್‌ ಟೀವಿ ಚಾನೆಲ್‌ಗಳನ್ನು 4000 ರೆಸೊಲ್ಯೂಶನ್‌ನಲ್ಲಿ ನೋಡಬಹುದಾಗಿದೆ.


ಮುಂಬೈ: ರಿಲಯನ್ಸ್‌ ಜಿಯೋ ತನ್ನ ಟೀವಿ ವೀಕ್ಷಕರಿಗಾಗಿ ಹೊಸ ಸೆಟ್‌ ಟಾಪ್‌ ಬಾಕ್ಸ್‌ ಅನಾವರಣಗೊಳಿಸಿದೆ. ‘ಗಿಗಾ ಟೀವಿ’ ಎಂದು ಕರೆಯಲ್ಪಡುವ ಈ ಸೆಟ್‌ ಟಾಪ್‌ ಬಾಕ್ಸ್‌ ಟೀವಿ ಚಾನೆಲ್‌ಗಳನ್ನು 4000 ರೆಸೊಲ್ಯೂಶನ್‌ನಲ್ಲಿ ನೋಡಬಹುದಾಗಿದ್ದು, ಅತ್ಯುತ್ಕೃಷ್ಟಗುಣಮಟ್ಟದ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ. 

‘ಭಾರತ ಏಕ್‌-ಭಾಷಾ ಅನೇಕ್‌’ ತತ್ವದ ಅಡಿಯಲ್ಲಿ ಈ ಸೇವೆ ನೀಡಲಾಗುತ್ತಿದೆ. 600 ಸಿನಿಮಾ ಚಾನೆಲ್‌ಗಳು ಇದರಲ್ಲಿ ಲಭ್ಯವಿರಲಿವೆ. ಜತೆಗೆ ಸಾವಿರಾರು ಚಲನಚಿತ್ರಗಳು ಹಾಗೂ ಹಾಡುಗಳನ್ನು ಈ ಸೇವೆಯಡಿ ಪ್ರೇಕ್ಷಕರಿಗೆ ಅನುಗುಣವಾಗಿ ಕೊಡಮಾಡಲಾಗುತ್ತದೆ.

Tap to resize

Latest Videos

click me!