ಕೆಂಪು ಗ್ರಹಕ್ಕೆ ಹೋಗಿ ಬರಲು ಎಷ್ಟು ಖರ್ಚು?: ಆಸ್ತಿ ಮಾರಿ ಅಂತಾರೆ ಮಸ್ಕ್!

By Web Desk  |  First Published Feb 13, 2019, 9:50 PM IST

ಮಾನವರನ್ನು ಮಂಗಳ ಗ್ರಹಕ್ಕೆ ಕರೆದೊಯ್ಯಲು ಎಷ್ಟು ಖರ್ಚಾಗುತ್ತದೆ| ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಉತ್ತರವೇನು? ಮಂಗಳಕ್ಕೆ ಹೋಗುವವರಿಗೆ ಟಿಟರ್ನ್ ಟಿಕೆಟ್ ಉಚಿತವಂತೆ| ಮಂಳ ಗ್ರಹಕ್ಕೆ ಹೋಗಿ ನೆಲೆಸುವುದು ಇನ್ನು ಕನಸಲ್ಲ ಅಂತಾರೆ ಎಲಾನ್ ಮಸ್ಕ್


ಕ್ಯಾಲಿಫೋರ್ನಿಯಾ(ಫೆ.13): ಮಂಗಳ ಗ್ರಹಕ್ಕೆ ಹೋಗಿ ಬರಲು ಮಾನವನಿಗೆ ಒಟ್ಟು 150,000 ಅಮೆರಿಕನ್ ಡಾಲರ್ ವೆಚ್ಛ ಆಗಲಿದೆ ಎಂದು  ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ಮಂಗಳ ಗ್ರಹಕ್ಕೆ ಮಾನವ ಹೋಗಲು 500,000 ಅಮೆರಿಕನ್ ಡಾಲರ್ ಮರಳಿ ಬರಲು 100,000  ಅಮೆರಿಕನ್ ಡಾಲರ್ ವೆಚ್ಛ ಬೀಳಲಿದೆ ಎಂದು ಮಾಹಿತಿ ನೀಡಿದ್ದಾರೆ.

Tap to resize

Latest Videos

undefined

ಚಂದ್ರ ಅಥವಾ ಮಂಗಳ ಗ್ರಹಕ್ಕೆ ಪ್ರವಾಸ ಕೈಗೊಳ್ಳುವ ಟಿಕೆಟ್ ದರ ಎಷ್ತಾಗಲಿದೆ ಎಂಬ ಪ್ರಶ್ನೆಗೆ ಮಸ್ಕ್ ಉತ್ತರಿಸಿದ್ದಾರೆ. ಅಲ್ಲದೇ ಇದರಲ್ಲಿ ಉಚಿತ ರಿಟರ್ನ್ ಟಿಕೆಟ್ ಕೂಡ ಸೇರಲಿದೆ ಎಂದು ಹೇಳಿದ್ದಾರೆ.  

ಮುಂದುವರಿದ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಜನರು ಭೂಮಿಯಲ್ಲಿರುವ ತಮ್ಮ ಮನೆಗಳನ್ನು ಮಾರಾಟ ಮಾಡಿ, ಮಂಗಳ ಗ್ರಹಕ್ಕೆ ತೆರಳಿ ವಾಸಿಸಬಹುದಾಗಿದೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
 

click me!