ಆ್ಯಪಲ್‌ಗೂ ಬಂತು ಕುತ್ತು- ಸ್ಫೋಟಗೊಂಡಿತು ಐ ಫೋನ್ ಮೊಬೈಲ್

By Web DeskFirst Published Nov 15, 2018, 8:42 PM IST
Highlights

ಆ್ಯಪಲ್ ಐ ಫೋನ್ ಮೊಬೈಲ್ ಸಾಫ್ಟ್‌ವೇರ್ ಅಪ್‌ಡೇಟ್ ವೇಳೆ ದಿಢೀರ್ ಸ್ಫೋಟಗೊಂಡಿದೆ. ದುಬಾರಿ ಬೆಲೆಯ ಆ್ಯಪಲ್ ಫೋನ್ ಸ್ಫೋಟಕ್ಕೆ ಕಾರಣವೇನು? ಇದಕ್ಕೆ ಆ್ಯಪಲ್ ಸಂಸ್ಥೆ ಹೇಳೋದೇನು? ಇಲ್ಲಿದೆ ಉತ್ತರ.

ನವದೆಹಲಿ(ನ.15): ಗರಿಷ್ಠ ಭದ್ರತೆ, ಹೆಚ್ಚು ಸುರಕ್ಷತೆ ಹೊಂದಿರುವ ದುಬಾರಿ ಆ್ಯಪಲ್ ಐ ಫೋನ್ ಕೂಡ ಸ್ಫೋಟಗೊಂಡಿದೆ. ಸಿರಿಯಾದ ರಾಕಿ ಮೊಹಮ್ಮದಾಲಿ ತಮ್ಮ ಐಫೋನ್ ಎಕ್ಸ್ ಮೊಬೈಲ್ ಸಾಫ್ಟ್‌ವೇರ್ ಅಪ್‌ಡೇಟ್ ವೇಳೆ ಮೊಬೈಲ್ ಬಿಸಿಯಾಗಿ ಸ್ಫೋಟಗೊಂಡಿದೆ.

12.1 IOS ಅಪ್‌ಡೇಟ್ ವೇಳೆ ಮೊಬೈಲ್ ಸ್ಫೋಟಗೊಂಡಿದೆ. ತಕ್ಷಣವೇ ಸ್ಫೋಟಗೊಂಡ ಫೋಟೋ ತೆಗೆದು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇಷ್ಟೇ ಅಲ್ಲ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದದ್ದಾರೆ.

 

iPhone X just got hot and exploded in the process of upgrading to 12.1 IOS. What’s going on here??? pic.twitter.com/OhljIICJan

— Rocky Mohamadali (@rocky_mohamad)

 

ಇದಕ್ಕೆ ಪ್ರತಿಕ್ರಿಯಿಸಿರುವ ಆ್ಯಪಲ್ ಸಂಸ್ಥೆ, ಆ್ಯಪಲ್ ಐ ಫೋನ್ ಸ್ಫೋಟಗೊಳ್ಳವುದಿಲ್ಲ. ನಿಮ್ಮ ಮಾಹಿತಿ ಹಂಚಿಕೊಳ್ಳಿ ಎಂದಿದೆ. ಈ ಕುರಿತು ಆ್ಯಪಲ್ ತನಿಖೆ ಆರಂಭಿಸಿದೆ. ಇತ್ತೀಚೆಗೆ ಚೀನಾದಲ್ಲಿ ಆ್ಯಪಲ್ ಐಫೋನ್ ಸ್ಫೋಟಗೊಂಡ ಭಾರಿ ಸುದ್ದಿಯಾಗಿತ್ತು. ಇದೀಗ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ.


 

That's definitely not expected behavior. DM us, so we can look into this with you: https://t.co/GDrqU22YpT

— Apple Support (@AppleSupport)
click me!
Last Updated Nov 15, 2018, 8:42 PM IST
click me!