ಚಟ್ನಿಗೆ ವಿಷ ಬೆರೆಸಿ ಇಸ್ರೋ ವಿಜ್ಞಾನಿ ಹತ್ಯೆ ಯತ್ನ!

By Kannadaprabha News  |  First Published Jan 6, 2021, 7:14 AM IST

 ಬೇಹುಗಾರರ ಕೃತ್ಯ: ಇಸ್ರೋದ ಹಿರಿಯ ವಿಜ್ಞಾನಿ ತಪನ್‌ ಮಿಶ್ರಾ ಆರೋಪ | ಹತ್ಯೆಯಲ್ಲಿ ಅಮೆರಿಕ ಇಲ್ಲವೇ ಇಸ್ರೋದ ಹಿರಿಯ ಅಧಿಕಾರಿಗಳ ಕೈವಾಡದ ಶಂಕೆ


ಬೆಂಗಳೂರು(ಜ.06): ದೋಸೆ ಮತ್ತು ಚಟ್ನಿಯಲ್ಲಿ ಆರ್ಸೆನಿಕ್‌ ಟ್ರಯಾಕ್ಸೈಡ್‌ ಬೆರೆಸಿ ತನ್ನನ್ನು ಹತ್ಯೆ ಮಾಡುವ ಯತ್ನ ನಡೆದಿತ್ತು ಎಂದು ಇಸ್ರೋದ ಹಿರಿಯ ವಿಜ್ಞಾನಿ ತಪನ್‌ ಮಿಶ್ರಾ ಗಂಭೀರ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಈ ಕುರಿತು ಕೇಂದ್ರ ಸರ್ಕಾರ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

"

Tap to resize

Latest Videos

1979ರಲ್ಲಿ ನಡೆದ ವಿಕ್ರಂ ಸಾರಾಭಾಯ್‌, 1999ರಲ್ಲಿ ನಡೆದ ನಡೆದ ಡಾ. ಶ್ರೀನಿವಾಸನ್‌ ಅವರ ನಿಗೂಢ ಸಾವು ಮತ್ತು 1994ರಲ್ಲಿ ನಡೆದ ಡಾ.ನಂಬಿಯಾರ್‌ ಪ್ರಕರಣಗಳ ಬೆನ್ನಲ್ಲೇ ಇಂಥ ಯತ್ನ ನಡೆದಿದೆ. ನನ್ನ ಮೇಲಿನ ದಾಳಿಯ ಇಂಥ ಯತ್ನಗಳ ಬಗ್ಗೆ ಇಸ್ರೋದ ಇಬ್ಬರು ಮುಖ್ಯಸ್ಥರ ಬಳಿ ನೋವು ನೋಡಿಕೊಂಡರೂ ಅವರಿಂದ ನೆರವು ಸಿಗಲಿಲ್ಲ. ಇನ್ನು ಮತ್ತೋರ್ವ ಅಧ್ಯಕ್ಷ ಕಿರಣ್‌ಕುಮಾರ್‌ ಇದ್ದಿದ್ದರಲ್ಲಿ ಸ್ವಲ್ಪ ನನ್ನ ನೆರವಿಗೆ ಬಂದರು. ಉಳಿದಂತೆ ಈಗಲೂ ನನಗೆ ನಿಗೂಢ ರೀತಿಯಲ್ಲಿ ನಾನಾ ಕಿರುಕುಳ ನೀಡಲಾಗುತ್ತಿದೆ ಎಂದು ಮಿಶ್ರಾ ಸ್ಫೋಟಕ ಆರೋಪ ಮಾಡಿದ್ದಾರೆ. ಈ ಕುರಿತು ಅವರು ಫೇಸ್‌ಬುಕ್‌ನಲ್ಲಿ ಸುದೀರ್ಘವಾಗಿ ಮಾಹಿತಿ ನೀಡಿದ್ದಾರೆ.

ಚಟ್ನಿಯಲ್ಲಿ ವಿಷ:

‘2017ರ ಮೇ 23ರಂದು ಇಸ್ರೋ ಮುಖ್ಯ ಕಚೇರಿಯಲ್ಲಿ ನಡೆದ ಸಭೆಯೊಂದರ ಬಳಿಕ ದೋಸೆ ಹಾಗೂ ಚಟ್ನಿಯನ್ನು ನೀಡಲಾಗಿತ್ತು. ಈ ವೇಳೆ ಚಟ್ನಿಯಲ್ಲಿ ಆರ್ಸೆನಿಕ್‌ ಟ್ರೈಆಕ್ಸೈಡ್‌ ಎಂಬ ಮಾರಣಾಂತಿಕ ವಿಷಯುಕ್ತ ರಾಸಾಯನಿಕವನ್ನು ಬೆರೆಸಿ ನೀಡಲಾಗಿತ್ತು. ಇದಾದ ಬಳಿಕ 2017ರ ಜುಲೈನಲ್ಲಿ ನನ್ನನ್ನು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಭೇಟಿ ಮಾಡಿ ‘ನಿಮಗೆ ವಿಷ ಉಣಿಸುವ ಸಾಧ್ಯತೆ ಇದೆ. ಎಚ್ಚರಿಕೆ ವಹಿಸಿ’ ಎಂದಿದ್ದರು ಹಾಗೂ ವೈದ್ಯರ ನೆರವು ನೀಡಿದ್ದರು’ ಎಂದು ಮಿಶ್ರಾ ವಿವರಿಸಿದ್ದಾರೆ.

ಜ.13ರಿಂದ ಜನಸಾಮಾನ್ಯರಿಗೆ ಕೊರೋನಾ ಲಸಿಕೆ ಲಭ್ಯ; ಕಾಂಗ್ರೆಸ್‌ಗೆ ಹೆಚ್ಚಾಯ್ತು ಅನುಮಾನ!

ಆರ್ಸೆನಿಕ್‌ ಸೇವನೆಯ ನಂತರವೂ ನಾನು ಬದುಕುಳಿದಿದ್ದೇ ಪವಾಡ ಎಂದು ವೈದ್ಯರೇ ಅಚ್ಚರಿ ಪಟ್ಟಿದ್ದರು. ಅದರಿಂದ ಚೇತರಿಸಿಕೊಳ್ಳಲು ನನಗೆ ಸುಮಾರು 2 ವರ್ಷ ಬೇಕಾಯಿತು. ಬಳಿಕವೂ ನನಗೆ ಉಸಿರಾಟ ಸಮಸ್ಯೆ, ಚರ್ಮದ ಸೋಂಕಿನಂಥ ಆರೋಗ್ಯ ಸಮಸ್ಯೆಗಳಾದವು’ ಎಂದಿರುವ ಅವರು, ತಮಗೆ ವಿಷ ಉಣಿಸಿದ್ದನ್ನು ಖಚಿತಪಡಿಸುವ ದಿಲ್ಲಿ ಏಮ್ಸ್‌ ವೈದ್ಯಕೀಯ ವರದಿಯನ್ನೂ ಲಗತ್ತಿಸಿದ್ದಾರೆ.

ಕಾರಣ ಏನು?:

ಮಿಲಿಟರಿಗೆ ಸಂಬಂಧಿಸಿದ ನೆರವಿನ ಯೋಜನೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಇನ್ನಿಲ್ಲದಂತೆ ಮಾಡಲು, ವಿಜ್ಞಾನಿಗಳನ್ನೇ ಹತ್ಯೆ ಮಾಡುವ ಯತ್ನ ಅಪರೂಪವೇನಲ್ಲ. ನನ್ನ ಪ್ರಕರಣದಲ್ಲೂ ಹಾಗೇ ಆಗಿರಬಹುದು. ಇಂಥ ಯತ್ನದಲ್ಲಿ ಅಮೆರಿಕದ ಕೈವಾಡ ಅಲ್ಲಗಳೆಯುವಂತಿಲ್ಲ. ಅದಲ್ಲವಾದರೆ, ನಮ್ಮದೇ ಕಚೇರಿಯಲ್ಲಿ ಹಿರಿಯರೂ ಇಂಥದ್ದೊಂದು ಯತ್ನ ಮಾಡಿದ್ದನ್ನು ತಳ್ಳಿಹಾಕುವಂತಿಲ್ಲ ಎಂದು ಮಿಶ್ರಾ ಶಂಕಿಸಿದ್ದಾರೆ.

ಅಮೆರಿಕ ವಿಜ್ಞಾನಿ:

ಇದೆಲ್ಲದರ ನಡುವೆ 2019ರಲ್ಲಿ ಇದ್ದಕ್ಕಿದ್ದಂತೆ ನನ್ನ ಕಚೇರಿಗೆ ಬಂದ ಅಮೆರಿಕದ ಹಿರಿಯ ವಿಜ್ಞಾನಿಯೊಬ್ಬರು, ಹತ್ಯೆ ಯತ್ನದ ಕುರಿತು ಒಂದೇ ಒಂದು ಮಾತು ಆಡಬಾರದು. ಬಾಯಿ ಮುಚ್ಚಿಕೊಂಡಿರಬೇಕು ಎಂದು ಬೆದರಿಕೆ ಹಾಕಿದರು. ಅಲ್ಲದೆ ಬಾಯಿ ಮುಚ್ಚಿಕೊಂಡಿದ್ದರೆ ನನ್ನ ಮಗನಿಗೆ ಅಮೆರಿಕದ ಉನ್ನತ ವಿವಿಯಲ್ಲಿ ಸ್ಥಾನ ನೀಡುವ ಆಫರ್‌ ನೀಡಿದ್ದರು. ಆದರೆ ನಾನು ಅದನ್ನು ತಿರಸ್ಕರಿಸಿದ್ದೆ. ಅದಾದ ಬಳಿಕ ನೂರಾರು ಇ ಮೇಲ್‌ಗಳ ಮೂಲಕವೂ ನನಗೆ ಧಮಕಿ ಹಾಕಲಾಗಿತ್ತು ಎಂದು ಮಿಶ್ರಾ ಹೇಳಿದ್ದಾರೆ.

ವಿಷ ಸರ್ಪ:

ಇದೆಲ್ಲದರ ಬಳಿಕವೂ ನನ್ನ ಕುಟುಂಬದ ಮೇಲಿನ ದಾಳಿ ಯತ್ನ ನಿಂತಿಲ್ಲ. ಕಳೆದ ಕೆಲ ತಿಂಗಳಲ್ಲಿ ನನ್ನ ಮನೆಯ ಆವರಣದಲ್ಲಿ ಹಲವು ಬಾರಿ ನಿಗೂಢವಾಗಿ ವಿಷ ಸರ್ಪಗಳು ಪತ್ತೆಯಾಗಿವೆ. ಅದೃಷ್ಟವಶಾತ್‌ ನನ್ನ ಸಾಕು ನಾಯಿಗಳು ಮತ್ತು ಭದ್ರತಾ ಸಿಬ್ಬಂದಿಯ ನೆರವಿನಿಂದ ನಾವು ತೊಂದರೆಯಿಂದ ಪಾರಾಗಿದ್ದೇವೆ. ತೀವ್ರ ತಪಾಸಣೆ ಬಳಿಕ ನನ್ನ ಮನೆಯ ಕಾಂಪೌಂಡ್‌ ಹೊರಭಾಗದಿಂದ ಒಳಭಾಗಕ್ಕೆ ಹಾವು ಕಳುಹಿಸಲು ಸುರಂಗ ತೋಡಿದ್ದು ಪತ್ತೆಯಾಯ್ತು. ಅದನ್ನು ಮುಚ್ಚಿದ ಬಳಿಕ ಹಾವಿನ ಕಾಟ ಕಡಿಮೆಯಾಯ್ತು ಎಂದು ಮಿಶ್ರಾ ಹೇಳಿದ್ದಾರೆ.

Long Kept Secret We, in ISRO, occasionally heard about highly suspicious death of Prof. Vikram Sarabhai in 1971. Also...

Posted by Tapan Misra on Tuesday, January 5, 2021

‘ಈ ಬಗ್ಗೆ ಕೇಂದ್ರ ಸರ್ಕಾರ ತನಿಖೆ ಮಾಡಬೇಕು’ ಎಂದು ಅವರು ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿ ಒತ್ತಾಯಿಸಿದ್ದಾರೆ. ಆದರೆ ಈ ಬಗ್ಗೆ ಇಸ್ರೋ ಪ್ರತಿಕ್ರಿಯೆಗೆ ಲಭಿಸಲಿಲ್ಲ ಎಂದು ಸುದ್ದಿಸಂಸ್ಥೆ ಹೇಳಿದೆ.

ನಾನು ಮೇ 23, 2017 ರಂದು ಬೆಂಗಳೂರಿನ ಇಸ್ರೋ ಹೆಚ್ಕ್ಯುನಲ್ಲಿ ಸೈನ್ಸ್ /ಎಂಜಿನಿಯರಿಂಗ್ ಎಸ್ಎಫ್ ನಿಂದ ಎಸ್ಜಿಗೆ ಪ್ರಚಾರ ನೀಡೋ ಸಂದರ್ಶನದಲ್ಲಿ ಮಾರಕ ಆರ್ಸೆನಿಕ್ ಟ್ರೈಆಕ್ಸೈಡ್‌ನೊಂದಿಗೆ ವಿಷ ನೀಡಲಾಗಿತ್ತು. ಇದನ್ನು ದೋಸೆ ಮತ್ತು ಚಟ್ನಿಯಲ್ಲಿ ಸೇರಿಸಲಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ನಡೆದ ಗುದ ರಕ್ತಸ್ರಾವದ ಮೂಲಕ 30-40% ರಷ್ಟು ರಕ್ತಸ್ರಾವವಾಗಿತ್ತು.

ನಾನು ಬೆಂಗಳೂರಿನಿಂದ ಹಿಂತಿರುಗಲು ಸಾಧ್ಯವಾಗಲಿಲ್ಲ ಮತ್ತು ಅಹಮದಾಬಾದ್‌ನ ಝೈಲಸ್ ಕ್ಯಾಡಿಲಾ ಆಸ್ಪತ್ರೆಗೆ ಸಾಗಿಸಲಾಯಿತು. ಇದರ ನಂತರ ತೀವ್ರವಾದ ಉಸಿರಾಟದ ತೊಂದರೆ, ಅಸಾಮಾನ್ಯ ಚರ್ಮದ ಸಮಸ್ಯೆ, ಉಗುರು ಹೋಗುವುದು, ಹೈಪೋಕ್ಸಿಯಾದಿಂದ ಉಂಟಾದ ಭಯಾನಕ ನರವೈಜ್ಞಾನಿಕ ಸಮಸ್ಯೆಗಳು, ಅಸ್ಥಿ ನೋವು ಕಾಣಿಸಿಕೊಂಡಿತು. ಖ್ಯಾತ ವಿಧಿವಿಜ್ಞಾನ ತಜ್ಞ ಡಾ. ಸುಧೀರ್ ಗುಪ್ತಾ ತಮ್ಮ ಇಡೀ ವೃತ್ತಿಜೀವನದಲ್ಲಿ, ಮೊದಲ ಬಾರಿಗೆ ಹತ್ಯೆಯ ಪ್ರಯತ್ನದಲ್ಲಿ ಬದುಕುಳಿದವರ ನೇರ ಮಾದರಿಯನ್ನು ನೋಡುತ್ತಿದ್ದೇನೆ ಎಂದು ಹೇಳಿದರು. ಇಲ್ಲದಿದ್ದರೆ ಅವರ ಅನುಭವವು ಶವಗಳಿಗೆ ಮಾತ್ರ ಸೀಮಿತವಾಗಿತ್ತು ಎಂದೂ ಬರೆದಿದ್ದಾರೆ.

click me!