ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ಎರಡೂ ಮಾರ್ಗದ ರೈಲು ಸೇವೆಯಲ್ಲಿ ವ್ಯತ್ಯಯ

By Girish GoudarFirst Published Oct 17, 2024, 5:36 PM IST
Highlights

ಪುಣೆ-ಮಿರಜ್ ಭಾಗದಲ್ಲಿ ಜೋಡಿ ಮಾರ್ಗ ಕಾಮಗಾರಿ ಹಿನ್ನಲೆಯಲ್ಲಿ, ಅಕ್ಟೋಬರ್ 22, 2024 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16210 ಮೈಸೂರು-ಅಜ್ಮೀರ್ ಬೈ-ವೀಕ್ಲಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ ಮಧ್ಯ ರೈಲ್ವೆ 

ಬೆಂಗಳೂರು(ಅ.17):  ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಹಾಗೂ ಅಜ್ಮೀರ್ ಎಕ್ಸ್ ಪ್ರೆಸ್ ರೈಲು ಸೇವೆಯಲ್ಲಿ ತಾತ್ಕಾಲಿಕವಾಗಿ ನಿಯಂತ್ರಣವಾಗಲಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.

ಬಾಗೇಶಪುರ ಮತ್ತು ಕೋರವಂಗಲ ಸೆಕ್ಷನ್ ನಡುವೆ ನಡೆಯುತ್ತಿರುವ ಹಳಿ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ, ರೈಲು ಸಂಖ್ಯೆ 16222 ಮೈಸೂರು-ತಾಳಗುಪ್ಪ ಕುವೆಂಪು ಡೈಲಿ ಎಕ್ಸ್ ಪ್ರೆಸ್ ರೈಲು ಅಕ್ಟೋಬರ್ 19, 21, 23, 26, 28, 30, ನವೆಂಬರ್ 2, 4, 6, 9, 11, 13, 16, 18, 20, 23, 25, 27, 30,  ಡಿಸೆಂಬರ್  2, 4, 7, 9, 11, 14, 16 ಮತ್ತು 18, 2024 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

Latest Videos

ರೈಲ್ವೆ ಟಿಕೆಟ್‌ ಬುಕ್ಕಿಂಗ್‌ನಲ್ಲಿ ದೊಡ್ಡ ಬದಲಾವಣೆ, 120 ದಿನಗಳ ಮುಂಚೆ ಮುಂಗಡ ಟಿಕೆಟ್‌ ಮಾಡೋ ಹಾಗಿಲ್ಲ!

ಅಜ್ಮೀರ್ ಎಕ್ಸ್ ಪ್ರೆಸ್ ರೈಲು ತಾತ್ಕಾಲಿಕ ನಿಯಂತ್ರಣ

ಪುಣೆ-ಮಿರಜ್ ಭಾಗದಲ್ಲಿ ಜೋಡಿ ಮಾರ್ಗ ಕಾಮಗಾರಿ ಹಿನ್ನಲೆಯಲ್ಲಿ, ಅಕ್ಟೋಬರ್ 22, 2024 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16210 ಮೈಸೂರು-ಅಜ್ಮೀರ್ ಬೈ-ವೀಕ್ಲಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ ಎಂದು ಮಧ್ಯ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ. 

click me!