Bengaluru crime: ಪತ್ನಿ ಜತೆ ಅಕ್ರಮ ಸಂಬಂಧ ಶಂಕೆ; ನೌಕರನಿಂದ ಹೊಟೇಲ್ ಕ್ಯಾಷಿಯರ್ ಹತ್ಯೆ

By Kannadaprabha News  |  First Published Jul 21, 2023, 4:43 AM IST

ತನ್ನ ಪತ್ನಿ ಜತೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಹೋಟೆಲ್‌ವೊಂದರ ಕ್ಯಾಶಿಯರ್‌ನನ್ನು ಅದೇ ಹೋಟೆಲ್‌ನ ಸ್ವಚ್ಛತಾ (ಹೌಸ್‌ಕೀಪರ್‌) ಕೆಲಸಗಾರ ಹತ್ಯೆಗೈದು ಪರಾರಿಯಾಗಿರುವ ಘಟನೆ ಜೆ.ಬಿ.ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.


ಬೆಂಗಳೂರು (ಜು.21) :  ತನ್ನ ಪತ್ನಿ ಜತೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಹೋಟೆಲ್‌ವೊಂದರ ಕ್ಯಾಶಿಯರ್‌ನನ್ನು ಅದೇ ಹೋಟೆಲ್‌ನ ಸ್ವಚ್ಛತಾ (ಹೌಸ್‌ಕೀಪರ್‌) ಕೆಲಸಗಾರ ಹತ್ಯೆಗೈದು ಪರಾರಿಯಾಗಿರುವ ಘಟನೆ ಜೆ.ಬಿ.ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ಮರುಗೇಶ್‌ ಪಾಳ್ಯದ ಸಿಟಾಡೆಲ್‌ ಹೋಟೆಲ್‌ನ ಕ್ಯಾಶಿಯರ್‌ ಸುಭಾಷ್‌ (26) ಹತ್ಯೆಯಾದ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿ ಅಭಿಷೇಕ್‌ ಪತ್ತೆಗೆ ತನಿಖೆ ನಡೆದಿದೆ. ಹೋಟೆಲ್‌ ಆವರಣದ ಸೋಫಾ ಮೇಲೆ ಮಲಗಿದ್ದಾಗ ಸುಭಾಷ್‌ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಂದು ಅಭಿಷೇಕ್‌ ಪರಾರಿಯಾಗಿದ್ದಾನೆ. ಈ ಚೀರಾಟ ಕೇಳಿ ಹೋಟೆಲ್‌ ಸಿಬ್ಬಂದಿ ಜಮಾಯಿಸುತ್ತಿದ್ದಂತೆ ಆತ ಕಾಲ್ಕಿತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Tap to resize

Latest Videos

ಜೀವಕ್ಕೆ ಜೀವ ಕೊಡ್ತೀನೆಂದು ಪ್ರೀತಿಸಿ ಮದ್ವೆಯಾಗಿ, ಹೆಂಡ್ತಿ ಜೀವವನ್ನೇ ತೆಗೆದುಬಿಟ್ಟ ಕುಡುಕ ಪತಿ

ದರೋಡೆ ಎಂಬಂತೆ ಬಿಂಬಿಸಲು ಯತ್ನ:

ಸಿಟಡೆಲ್‌ ಹೋಟೆಲ್‌ನಲ್ಲಿ ತಿಂಗಳ ಹಿಂದೆ ಪಶ್ಚಿಮ ಬಂಗಾಳ ಮೂಲದ ಸುಭಾಷ್‌ ಕೆಲಸಕ್ಕೆ ಸೇರಿದ್ದು, ಹೋಟೆಲ್‌ನಲ್ಲೇ ಆತ ವಾಸವಾಗಿದ್ದ. ಇನ್ನು ಅದೇ ಹೋಟೆಲ್‌ನಲ್ಲಿ ಆರು ತಿಂಗಳಿಂದ ಪಶ್ಚಿಮ ಬಂಗಾಳದ ಅಭಿಷೇಕ್‌ ಹೌಸ್‌ಕೀಪರ್‌ ಆಗಿದ್ದ. ಒಂದೇ ರಾಜ್ಯದವರಾಗಿದ್ದರಿಂದ ಇಬ್ಬರ ಮಧ್ಯೆ ಆತ್ಮೀಯತೆ ಮೂಡಿದೆ. ಆಗ ಗೆಳೆಯನ ಪತ್ನಿ ಪರಿಚಯವಾಗಿ ಸುಭಾಷ್‌ಗೆ ಸಲುಗೆ ಬೆಳೆದಿದೆ. ಈ ಸ್ನೇಹದ ವಿಚಾರ ತಿಳಿದು ಕೋಪಗೊಂಡ ಅಭಿಷೇಕ್‌, ಪತ್ನಿಗೆ ಸುಭಾಷ್‌ ಸಹವಾಸ ಬಿಡುವಂತೆ ತಾಕೀತು ಮಾಡಿದ್ದ. ಅಲ್ಲದೆ ಗೆಳೆಯನಿಗೂ ಸಹ ತನ್ನ ಸಂಸಾರದಲ್ಲಿ ಎರವಾಗದಂತೆ ಆತ ಎಚ್ಚರಿಕೆ ನೀಡಿದ್ದ. ಹೀಗಿದ್ದರೂ ಪತ್ನಿ ಜತೆ ಸುಭಾಷ್‌ ಸ್ನೇಹ ಮುಂದುವರೆಸಿದ್ದ ಅಭಿಷೇಕ್‌ನನ್ನು ಕೆರಳಿಸಿತು. ಈ ಹಿನ್ನಲೆಯಲ್ಲಿ ಕೊನೆಗೆ ಗೆಳೆಯನ ಹತ್ಯೆ ನಿರ್ಧರಿಸಿದ ಅಭಿಷೇಕ್‌, ಹೋಟೆಲ್‌ ರಾತ್ರಿ ಪಾಳಿಯದಲ್ಲಿದ್ದ ನಸುಕಿನಲ್ಲಿ ನಿದ್ರೆಯಲ್ಲಿದ್ದ ದೊಣ್ಣೆಯಿಂದ ಹೊಡೆದು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿಸಿದ ಗಂಡನನ್ನೇ ಜೈಲಿಗಟ್ಟಿದ್ದ ಸರ್ಕಾರಿ ಅಧಿಕಾರಿ ಜ್ಯೋತಿ ಮೌರ್ಯ ಲವರ್ ಸಸ್ಪೆಂಡ್‌

ಹಣ ದೋಚಿದ ಆರೋಪಿ

ಈ ಹತ್ಯೆ ಬಳಿಕ ಹೋಟೆಲ್‌ ಗಲ್ಲಾದ ಪೆಟ್ಟಿಗೆಯಲ್ಲಿದ್ದ ಹಣ ದೋಚಿ ಆರೋಪಿ ಪರಾರಿಯಾಗಿದ್ದಾನೆ. ಅಲ್ಲದೆ ಕೊಲೆಗೂ ಮುನ್ನ ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾವನ್ನು ಸಹ ಜಖಂಗೊಳಿಸಿದ್ದಾನೆ. ಹೀಗಾಗಿ ಮೇಲ್ನೋಟಕ್ಕೆ ದರೋಡೆ ಕೃತ್ಯ ಎಂಬಂತೆ ಬಿಂಬಿಸಲು ಆತ ಯತ್ನಿಸಿದ್ದಾನೆ ಎನ್ನಲಾಗಿದೆ.

click me!