ಸೌಜನ್ಯಾ ಕೊಲೆ ಪ್ರಕರಣ ಮರು ತನಿಖೆಗೆ ಒತ್ತಾಯ; ಕೋರ್ಟ್ ತೀರ್ಪು ಬಳಿಕ ತನಿಖೆ ನಿರ್ಧಾರ: ಪರಂ

By Kannadaprabha News  |  First Published Aug 28, 2023, 9:46 PM IST

ಸೌಜನ್ಯಾ ಕೊಲೆ ಪ್ರಕರಣವನ್ನು ಮರು ತನಿಖೆಗೆ ವಹಿಸುವಂತೆ ಒತ್ತಾಯ, ಪರ​-ವಿರೋಧ ಪ್ರತಿಭಟನೆಗಳು ನಡೆಯುತ್ತಿವೆ. ಮತ್ತೊಂದೆಡೆ ಕೆಲವರು ನ್ಯಾಯಾಲಯಕ್ಕೂ ಹೋಗಿದ್ದಾರೆ. ನ್ಯಾಯಾಲಯದಿಂದ ಏನು ತೀರ್ಪು ಬರುತ್ತದೆ ನೋಡಿಕೊಂಡು ಮುಂದಿನ ತೀರ್ಮಾನ ಮಾಡೋಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.


ಬೆಂಗಳೂರು (ಆ.28) :  ಸೌಜನ್ಯಾ ಕೊಲೆ ಪ್ರಕರಣವನ್ನು ಮರು ತನಿಖೆಗೆ ವಹಿಸುವಂತೆ ಒತ್ತಾಯ, ಪರ​-ವಿರೋಧ ಪ್ರತಿಭಟನೆಗಳು ನಡೆಯುತ್ತಿವೆ. ಮತ್ತೊಂದೆಡೆ ಕೆಲವರು ನ್ಯಾಯಾಲಯಕ್ಕೂ ಹೋಗಿದ್ದಾರೆ. ನ್ಯಾಯಾಲಯದಿಂದ ಏನು ತೀರ್ಪು ಬರುತ್ತದೆ ನೋಡಿಕೊಂಡು ಮುಂದಿನ ತೀರ್ಮಾನ ಮಾಡೋಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸೌಜನ್ಯ ಕೊಲೆ ಪ್ರಕರಣ(Dharmathala soujanya murder case)ದ ಮರು ತನಿಖೆಗೆ ಒತ್ತಾಯ ಬರುತ್ತಿದೆ. ಪರ-ವಿರೋಧ ಪ್ರತಿಭಟನೆಗಳೂ ನಡೆಯುತ್ತಿವೆ. ಇದರ ನಡುವೆ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಾವು ಕೂಡ ಎಲ್ಲವನ್ನೂ ಗಮನಿಸುತ್ತಿದ್ದೇವೆ. ನ್ಯಾಯಾಲಯ ಏನು ಆದೇಶ ಕೊಡುತ್ತದೆ ನೋಡೋಣ. ನಾವು ಏನೋ ಮಾಡಲು ಹೋಗುವುದು, ನ್ಯಾಯಾಲಯ ಇನ್ನೊಂದು ಆದೇಶ ಮಾಡುವುದು. ಅದೆಲ್ಲಾ ಬೇಡ. ಅಂತಿಮವಾಗಿ ನ್ಯಾಯಾಲಯ ಏನು ತೀರ್ಪು, ನ್ಯಾಯ ಕೊಡುತ್ತದೆ ನೋಡಿಕೊಂಡು ಮುಂದಿನ ತೀರ್ಮಾನ ಮಾಡೋಣ ಎಂದರು.

Tap to resize

Latest Videos

ಬೆದರಿಕೆ ಎದುರಿಸುತ್ತಿರುವ ಸಾಹಿತಿಗಳಿಗೆ ಗನ್‌ಮ್ಯಾನ್‌: ಗೃಹ ಸಚಿವ ಪರಮೇಶ್ವರ

ತೀರ್ಪು ಬಳಿಕ ಪಿಎಸ್‌ಐ ಮರು ಪರೀಕ್ಷೆ: ಪಿಎಸ್‌ಐ ನೇಮಕಾತಿಗೆ ಮರು ಪರೀಕ್ಷೆ ನಡೆಸಲು ಹಿಂದಿನ ಸರ್ಕಾರವೇ ಅವಕಾಶ ಕೊಟ್ಟಿತ್ತು. ಆದರೆ, ಕೆಲವರು ಇದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಅಂತಿಮವಾಗಿ ಕೋರ್ಚ್‌ ಏನು ಆದೇಶ ನೀಡುತ್ತದೆ ಕಾದು ನೋಡಬೇಕು. ತೀರ್ಪು ಬಂದ ಬಳಿಕ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಇದೇ ವೇಳೆ ಗೃಹ ಸಚಿವರು ಸ್ಪಷ್ಟಪಡಿಸಿದರು.

ಆಪರೇಷನ್‌ ಹಸ್ತ: ತುಮಕೂರು ಜಿಲ್ಲೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್‌ನಿಂದ ಬಹಳ ಜನ ಕಾಂಗ್ರೆಸ್‌ ಸೇರುವವರಿದ್ದಾರೆ. ಈ ಬಗ್ಗೆ ವಿವಿಧ ಹಂತಗಳಲ್ಲಿ ಚರ್ಚೆಯಾಗುತ್ತಿದೆ. ಯಾರಾರ‍ಯರು ಬರುತ್ತಾರೆ ನೋಡೋಣ. ಯಾರನ್ನೇ ಸೇರಿಸಿಕೊಳ್ಳುವಾಗ ನಮ್ಮ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಪರಾಜಿತ ಅಭ್ಯರ್ಥಿಗಳು ಎಲ್ಲರ ಜೊತೆ ಚರ್ಚೆ ಮಾಡಿ ಪಕ್ಷದ ಜಿಲ್ಲಾಧ್ಯಕ್ಷ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದು ತೀರ್ಮಾನ ಮಾಡುತ್ತಾರೆ ಎಂದರು. 

ಗುಣಮಟ್ಟದ ಶಿಕ್ಷಣ ಸರ್ಕಾರದ ಜವಾಬ್ದಾರಿ: ಪರಂ

click me!