ಚಂದ್ರಶೇಖರ ಗುರೂಜಿ ಹತ್ಯೆ: 800 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

By Govindaraj S  |  First Published Oct 7, 2022, 8:57 AM IST

ಸರಳವಾಸ್ತುವಿನಿಂದ ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಿದ್ದ ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸ್‌ ಕಮಿಷನರೇಟ್‌ ನ್ಯಾಯಾಲಯಕ್ಕೆ ಬರೋಬ್ಬರಿ 800 ಪುಟಗಳ ಚಾಜ್‌ರ್‍ಶೀಟ್‌ ಸಲ್ಲಿಸಿದೆ. ಇಲ್ಲಿನ ಜೆಎಂಎಫ್‌ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾಜ್‌ಶೀಟ್‌ನಲ್ಲಿ ಕೊಲೆಗೆ ಏನು ಕಾರಣ ಎಂಬುದನ್ನು ಸ್ಪಷ್ಟಪಡಿಸಿದೆ. 


ಹುಬ್ಬಳ್ಳಿ (ಅ.07): ಸರಳವಾಸ್ತುವಿನಿಂದ ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಿದ್ದ ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸ್‌ ಕಮಿಷನರೇಟ್‌ ನ್ಯಾಯಾಲಯಕ್ಕೆ ಬರೋಬ್ಬರಿ 800 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದೆ. ಇಲ್ಲಿನ ಜೆಎಂಎಫ್‌ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾಜ್‌ಶೀಟ್‌ನಲ್ಲಿ ಕೊಲೆಗೆ ಏನು ಕಾರಣ ಎಂಬುದನ್ನು ಸ್ಪಷ್ಟಪಡಿಸಿದೆ. 

ಆದರೆ ಮಾಧ್ಯಮಗಳಿಗೆ ವಿವರ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಜುಲೈ 5ರಂದು ಇಲ್ಲಿನ ಉಣಕಲ್‌ ಶ್ರೀನಗರ ಕ್ರಾಸ್‌ ಬಳಿಯಿರುವ ಖಾಸಗಿ ಹೋಟೆಲ್‌ನಲ್ಲಿ ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಅವರು ಗುರೂಜಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಈ ಇಬ್ಬರು ಗುರೂಜಿ ಬಳಿಯೇ ಕೆಲಸಕ್ಕೆ ಇದ್ದು, ಅವರ ಆಪ್ತರಾಗಿದ್ದರು. ಆದಾಗ್ಯೂ ಹಾಡಹಗಲೇ ಖಾಸಗಿ ಹೋಟೆಲ್‌ನ ಲಾಂಜ್‌ನಲ್ಲಿ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದರು. ಬರೋಬ್ಬರಿ 46 ಬಾರಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದರು. 

Latest Videos

undefined

ಹುಬ್ಬಳ್ಳಿ: ಗುರೂಜಿ ಹತ್ಯೆ ಆರೋಪಿಗಳು ಮತ್ತೆ 6 ದಿನ ಪೊಲೀಸ್‌ ಕಸ್ಟಡಿಗೆ

ಇದು ಇಡೀ ನಗರವನ್ನೇ ತಲ್ಲಣಗೊಳಿಸಿತ್ತು. ಪ್ರಕರಣದ ತನಿಖೆಗಾಗಿ ಪೊಲೀಸ್‌ ಕಮಿಷನರ್‌ ಎಸಿಪಿ ವಿನೋದ ಮುಕ್ತೇದಾರ ನೇತೃತ್ವದಲ್ಲಿ ತಂಡ ರಚಿಸಿದ್ದರು. ಈ ತಂಡವು ಘಟನೆ ನಡೆದ 4 ತಾಸಿನೊಳಗೆ ಬೆಳಗಾವಿ ಜಿಲ್ಲೆ ರಾಮದುರ್ಗ ಬಳಿ ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬಂಧಿಸಿತ್ತು. ತೀವ್ರ ವಿಚಾರಣೆಗೊಳಪಡಿಸಿದ್ದ ಪೊಲೀಸರು ಕೊಲೆಗೆ ಕಾರಣವಾದ ವಿಷಯಗಳನ್ನು ಹೆಕ್ಕಿ ಹೊರತೆಗೆದಿದ್ದರು. ಸಂಬಂಧಪಟ್ಟದಾಖಲೆ ಸೇರಿದಂತೆ ಇತರೆ ವಿಷಯಗಳ ಕಲೆ ಹಾಕಲಾದ ಮಾಹಿತಿ ಹಾಗೂ ಸಂಗ್ರಹಿಸಿದ ಸಾಕ್ಷಿಗಳು ಸೇರಿ ಬರೋಬ್ಬರಿ 800 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರೂಜಿ ಹತ್ಯೆ ಆರೋಪಿಗಳು ನ್ಯಾಯಾಂಗ ವಶಕ್ಕೆ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಆರೋಪಿಗಳಿಬ್ಬರನ್ನು ಒಂದನೇ ದಿವಾಣಿ ಹೆಚ್ಚುವರಿ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಂಗ ವಶಕ್ಕೆ ನೀಡಿದೆ. ಪೊಲೀಸ್‌ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮಹಾಂತೇಶ ಶಿರೂರು ಹಾಗೂ ಮಂಜುನಾಥ ಮರೇವಾಡ ಅವರನ್ನು ಪೊಲೀಸರು ಸೋಮವಾರ ಕೋರ್ಚ್‌ಗೆ ಹಾಜರು ಪಡಿಸಿದರು. 

ತನಿಖೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪುನಃ ತಮ್ಮ ಕಸ್ಟಡಿಗೆ ಪೊಲೀಸರು ಕೇಳಿಲ್ಲ ಎಂದು ಮೂಲಗಳು ತಿಳಿಸಿವೆ. ಆರೋಪಿಗಳಿಬ್ಬರನ್ನು ಜು. 12ರಂದು ಕೋರ್ಚ್‌ಗೆ ಹಾಜರುಪಡಿಸಿದ್ದ ವಿದ್ಯಾನಗರ ಪೊಲೀಸರು ಹೆಚ್ಚಿನ ತನಿಖೆಗಾಗಿ ಇನ್ನೂ 10 ದಿನ ವಶಕ್ಕೆ ನೀಡುವಂತೆ ಕೋರಿದ್ದರು. ನ್ಯಾಯಾಲಯ 6 ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿತ್ತು. ಸೋಮವಾರ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಮಂಗಳವಾರ ಕೋರ್ಚ್‌ಗೆ ಹಾಜರುಪಡಿಸುವ ನಿರೀಕ್ಷೆಯಿತ್ತು. ಅವಧಿ ಮುಕ್ತಾಯದ ದಿನವೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಹುಬ್ಬಳ್ಳಿ: ಗುರೂಜಿ ಹತ್ಯೆ, ಆಂತರಿಕ ವಿಚಾರ ಬಯಲಿಗೆ ಪ್ರತ್ಯೇಕ ತಂಡ

ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಪಟ್ಟಂತೆ ಬಂಧಿತ ಆರೋಪಿಗಳಿಬ್ಬರ ವಿರುದ್ಧ ಸ್ಥಳೀಯ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ತನಿಖೆ ವೇಳೆ ಸಂಗ್ರಹಿಸಿದ ದಾಖಲೆಗಳ ಸಮೇತ 800 ಪುಟಗಳ ಚಾರ್ಜ್‌ಶೀಟ್‌ ಇದಾಗಿದೆ.
ಲಾಬೂರಾಮ್‌, ಪೊಲೀಸ್‌ ಆಯುಕ್ತರು

click me!