ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪವಿತ್ರಾ ಗೌಡ ಜೈಲು ಸಿಬ್ಬಂದಿ ಕೊಟ್ಟ ಚಾಪೆ ಮೇಲೆ ಮಲಗದೇ ಇಡೀ ರಾತ್ರಿ ಚಡಪಡಿಸಿದ್ದಾರೆ. ದರ್ಶನ್ ಇಲ್ಲದೆ ಪವಿತ್ರಾ ಗೌಡಗೆ ಒಂಟಿತನ ಕಾಡುತ್ತಿದ್ಯಾ?
ಬೆಂಗಳೂರು (ಜೂ.22): ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪ್ರೇಯಸಿ ಪವಿತ್ರಾ ಗೌಡ ಸೇರಿ 17 ಜನ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ವಿಚಾರಣೆ ಬಳಿಕ ನಟ ದರ್ಶನ್ ಪೊಲೀಸ್ ಕಸ್ಟಡಿಗೊಪ್ಪಿಸಿ ಪವಿತ್ರಾ ಗೌಡರನ್ನ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು.
ಪರಪ್ಪನ ಅಗ್ರಹಾರ ಪ್ರವೇಶಿಸುತ್ತಲೇ ಭವಿಷ್ಯ ನೆನೆದು ಗಳಗಳನೇ ಅತ್ತಿದ್ದ ಪವಿತ್ರಾ ಗೌಡ. ಜೈಲಿನೊಳಗೆ ಸರಿಯಾಗಿ ನಿದ್ರೆ ಮಾಡದೇ ಇಡೀ ರಾತ್ರಿ ಜಾಗರಣೆ ಮಾಡಿರುವ ಪ್ರೇಯಸಿ ಪವಿತ್ರಾ ಗೌಡ. ಅಲ್ಲಿವರೆಗೆ ಬದುಕು ಬಿಂದಾಸ್ ಆಗಿತ್ತು. ಸುಖದ ಸುಪ್ಪೊತ್ತಿಗೆಯಲ್ಲಿ ಮಲಗಿದ್ದ ಪವಿತ್ರಾ ಗೌಡ ಇದೀಗ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿ ಜೈಲು ಸಿಬ್ಬಂದಿ ಕೊಟ್ಟ ಚಾಪೆಯಲ್ಲಿ ಮಲಗು ಎಂದರೆ ನಿದ್ದೆಯಾದರೂ ಹೇಗೆ ಬಂದೀತು?
ಇಂದು ಮಧ್ಯಾಹ್ನ ನಟ ದರ್ಶನ್ ನ್ಯಾಯಾಲಯಕ್ಕೆ; ಅಭಿಮಾನಿಗಳು ಸೇರುವ ಹಿನ್ನೆಲೆ ಬಿಗಿ ಭದ್ರತೆ!
ಜೈಲು ಸಿಬ್ಬಂದಿ ನೀಡಿದ್ದ ಚಾಪೆ ಮೇಲೆ ಮಲಗಲು ನಿದ್ದೆ ಬಾರದೆ ಇಡೀ ರಾತ್ರಿ ಚಡಪಡಿಸಿರುವ ಪವಿತ್ರಾ ಗೌಡ ಬೆಳಗ್ಗೆ 5.30 ರ ಸುಮಾರಿಗೆ ಎದ್ದು ಕೆಲ ಹೊತ್ತು ಬ್ಯಾರಕ್ ನಲ್ಲಿ ವಾಕಿಂಗ್ ಮಾಡಿ, ನ್ಯೂಸ್ ಪೇಪರ್ ಓದಿ ಹೊರಗಿನ ವಿದ್ಯಮಾನಗಳನ್ನು ತಿಳಿದುಕೊಂಡ ಪವಿತ್ರಾ ಬಳಿಕ ಜೈಲು ಸಿಬ್ಬಂದಿ ನೀಡಿದ ಕಾಫಿ ಕುಡಿದಿದ್ದಾರೆ. ಜೈಲೂಟ ಮೆನುವಿನಂತೆ ಬೆಳಗ್ಗೆ ಚಿತ್ರಾನ್ನ ನೀಡಿದ ಜೈಲು ಸಿಬ್ಬಂದಿ.
ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಸಾಯಿಸಿದ್ದಾರೆ; ಕೋರ್ಟ್‌ಗೆ ಸರ್ಕಾರಿ ವಕೀಲರಿಂದ ಮಾಹಿತಿ
ಅತ್ತ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಒಂಟಿಯಾಗಿ ಮಾನಸಿಕವಾಗಿ ಕುಗ್ಗಿಹೋಗಿರುವ ಪವಿತ್ರಾ ಗೌಡ. ಜೈಲಿಗೆ ಬಂದ ದಿನದಿಂದ ಒಂಟಿತನ ಕಾಡುತ್ತಿದೆ. ಮಹಿಳಾ ವಿಭಾಗದ ಸಹ ಬಂಧಿಗಳ ಜೊತೆ ಇದ್ದರೂ ದರ್ಶನ್ ಇಲ್ಲದೆ ಒಂಟಿತನ ನೋವು ಅನುಭವಿಸುತ್ತಿರುವ ಪವಿತ್ರಾ ಗೌಡ. ಇಂದು ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ ದರ್ಶನ್ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ವಿಚಾರಣೆ ಬಳಿಕ ಪರಪ್ಪನ ಅಗ್ರಹಾರಕ್ಕೆ ಸೇರುವ ಸಾಧ್ಯತೆ ಹಿನ್ನೆಲೆ ದರ್ಶನ್ ಬರುವಿಕೆಗೆ ಕಾಯುತ್ತಿರುವ ಪವಿತ್ರಾ ಗೌಡ. ಇಂದು ವಿಚಾರಣೆ ಬಳಿಕ ದರ್ಶನ್ ಮುಂದಿನ ಭವಿಷ್ಯ ತಿಳಿಯಲಿದೆ.