ಕಸಬರಿಗೆ ಹಿಡಿದು ಟಾಯ್ಲೆಟ್ ಕ್ಲೀನ್ ಮಾಡ್ತಾರೆ ದರ್ಶನ್, ಇದಕ್ಕೆ ಬಳ್ಳಾರಿ ಜೈಲು ಬೇಡ ಅಂತಿರೋದಾ?

By Suvarna News  |  First Published Sep 14, 2024, 11:23 AM IST

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್‌ ಆದ ನಂತರ ನಟ ದರ್ಶನ್ ಮಂಕಾಗಿದ್ದಾರೆ. ಜೈಲಿನ ಊಟ ಸೇರುತ್ತಿಲ್ಲ. ಬೆಂಗಳೂರಿನಿಂದಲೂ ದೂರವಾಗಿರುವುದರಿಂದ ಬೇಕೆಂದಾಗ ಬರಲು ಮನೆಯವರಿಗೂ ಸಾಧ್ಯವಾಗ್ತಿಲ್ಲ. ಬಳ್ಳಾರಿ ಜೈಲು ನಿಜಕ್ಕೂ ದರ್ಶನ್ ಪಾಲಿಗೆ ಯಮಯಾತನೆಯಾಗಿದೆ. 


ಬಳ್ಳಾರಿ (ಸೆ.14) ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್‌ ಆದ ನಂತರ ನಟ ದರ್ಶನ್ ಮಂಕಾಗಿದ್ದಾರೆ. ಜೈಲಿನ ಊಟ ಸೇರುತ್ತಿಲ್ಲ. ಬೆಂಗಳೂರಿನಿಂದಲೂ ದೂರವಾಗಿರುವುದರಿಂದ ಬೇಕೆಂದಾಗ ಬರಲು ಮನೆಯವರಿಗೂ ಸಾಧ್ಯವಾಗ್ತಿಲ್ಲ. ಬಳ್ಳಾರಿ ಜೈಲು ನಿಜಕ್ಕೂ ದರ್ಶನ್ ಪಾಲಿಗೆ ಯಮಯಾತನೆಯಾಗಿದೆ. 

ಬಳ್ಳಾರಿ ಜೈಲಿಗೆ ಶಿಫ್ಟ್ ಆದನಂತರ ರಾಜಾತೀಥ್ಯಕ್ಕೆ ಬ್ರೇಕ್ ಬಿದ್ದಿದೆ. ಜೈಲಿನಲ್ಲಿ ತನ್ನ ಬಟ್ಟೆ ತಾನೇ ವಾಶ್ ಮಾಡ್ಕೊಳ್ತಾನೆ. ಒಳಉಡುಪುಗಳನ್ನು ಮಾತ್ರ ಪತ್ನಿ ವಿಜಯಲಕ್ಷ್ಮೀ ಭೇಟಿ ವೇಳೆ ಎಕ್ಸ್‌ಚೇಂಜ್ ಮಾಡ್ತಾರಂತೆ ದರ್ಶನ್. ಇನ್ನು ಪ್ರತಿದಿನ ಕಸಬರಗಿ ಹಿಡಿದು ತನ್ನ ಶೌಚಾಲಯ ತೊಳೆದು ಸ್ವಚ್ಛವಾಗಿ ಇಟ್ಟಿದ್ದಾನಂತೆ.  ಕಳೆದ 16 ದಿನಗಳಿಂದ ಬಟ್ಟೆ, ಶೌಚಾಲಯ ತಾನೇ ಕ್ಲೀನ್ ಮಾಡಿಕೊಳ್ತಿರುವ ದರ್ಶನ್. ಜೈಲಿನ ನಿಯಮಗಳ ಪ್ರಕಾರ ವಾರಕ್ಕೊಮ್ಮೆ ಸಿಬ್ಬಂದಿ ಬಂದು ಶೌಚಾಲಯ ಕ್ಲೀನ್ ಮಾಡ್ತಾರೆ ಆಮೇಲೆ ಬರೋದಿಲ್ಲ. ಉಳಿದ ದಿನ ತಾನೇ ಸ್ವಚ್ಛ ಮಾಡ್ಕೊಳ್ತಿರೋ ದರ್ಶನ್. ಸ್ಟಾರ್‌ ಹಿರೋ ಆಗಿ ಒಳ್ಳೆ ಕೆಲಸ ಮಾಡಿದ್ದಿದ್ರೆ ಆರಾಮಾಗಿ ಇರಬಹುದಿತ್ತು. ದುಷ್ಟರ ಸಂಗ ಸೇರಿ ಕೊಲೆಯಲ್ಲಿ ಭಾಗಿಯಾಗಿ ಇದೀಗ ಜೈಲಿನಲ್ಲಿ ಟಾಯ್ಲೆಟ್ ತೊಳೆದುಕೊಂಡು ಕಾಲ ಕಳೆಯಬೇಕಿ ಬಂದಿದೆ ಎನ್ನುತ್ತಾರೆ ಸಿಬ್ಬಂದಿ.

Tap to resize

Latest Videos

undefined

'ನನ್ನ ಬಗ್ಗೆ ಯಾರು ಏನೇ ಹೇಳಲಿ ನಾನು ಇರೋದೇ ಹೀಗೆ..' ಅಸಭ್ಯ ವರ್ತನೆ ಸಮರ್ಥಿಸಿಕೊಂಡ ದರ್ಶನ್!

ಟಿವಿ ನೀಡದ್ದಕ್ಕೆ ದರ್ಶನ್ ಅಸಮಾಧಾನ:

ದರ್ಶನ್ ಇರುವ ಹೈಸೆಕ್ಯೂರಿಟಿ ಕೋಣೆ ಟಿವಿ ಸೌಲಭ್ಯ ನೀಡಲಾಗ್ತಿದೆ ಎಂದು ಹೇಳಲಾಗಿತ್ತಾದರೂ ಇನ್ನೂ ಟಿವಿ ನೀಡದಿರುವ ಬಗ್ಗೆ ಜೈಲಾಧಿಕಾರಿಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಚಾರಣಾಧೀನ ಕೈದಿಗಳಿಗೆ ಟಿವಿ ನೀಡಬೇಕು ಎನ್ನುವ ನಿಯಮ ಇದ್ರೂ ಯಾಕೆ ನೀಡ್ತಿಲ್ಲ ಅಂತಾ ಪ್ರಶ್ನಿಸಿದ್ದಾರೆ. ಆದರೆ ದರ್ಶನ್ ಮೀಡಿಯಾಗಳ ವಿರುದ್ಧ ಅಸಭ್ಯ ವರ್ತನೆಯಿಂದಲೇ ಇನ್ನಷ್ಟು ರಾಡಿ ಮಾಡಿಕೊಂಡಿದ್ದಾನೆ. ಹೀಗಾಗಿ ಟಿವಿ ನೀಡಲು ಸಹ ಪೊಲೀಸರು ಹಿಂದೆಮುಂದೆ ನೋಡುವಂತಾಗಿದೆ.

click me!