ಸೂರ್ಯ ಅದೇಕೆ ವಿಚಿತ್ರವಾಗಿ ಸಿಡಿಯುತ್ತಲೇ ಇದ್ದಾನೆ?

By Ravi Janekal  |  First Published Feb 12, 2023, 1:00 PM IST

ವಿಜ್ಞಾನಿಗಳ ಊಹೆಗೂ ಮೀರಿ ಈಗ ಕೆಲ ದಿನಗಳಿಂದ ಸೂರ್ಯ ಸಿಡಿಯುತ್ತಿದ್ದಾನೆ. ಫೆಬ್ರವರಿ 7ರಿಂದ ಇದೀಗ ಎರಡು ಗಜಗಾತ್ರದ ಸೂರ್ಯಕಲೆಗಳನ್ನು ಗಮನಿಸಿ  ಬೃಹತ್ ಸಿಡಿತಗಳನ್ನು ಊಹಿಸಿ ಮುಂಬರಬಹುದಾದ ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. 


- ಡಾ. ಎ . ಪಿ . ಭಟ್  ಉಡುಪಿ

ವಿಜ್ಞಾನಿಗಳ ಊಹೆಗೂ ಮೀರಿ ಈಗ ಕೆಲ ದಿನಗಳಿಂದ ಸೂರ್ಯ ಸಿಡಿಯುತ್ತಿದ್ದಾನೆ. ಫೆಬ್ರವರಿ 7ರಿಂದ ಇದೀಗ ಎರಡು ಗಜಗಾತ್ರದ ಸೂರ್ಯಕಲೆಗಳನ್ನು ಗಮನಿಸಿ  ಬೃಹತ್ ಸಿಡಿತಗಳನ್ನು ಊಹಿಸಿ ಮುಂಬರಬಹುದಾದ ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. 

Tap to resize

Latest Videos

undefined

ಅತ್ಯಾಶ್ಚರ್ಯ, ಮೊನ್ನೆ ಕಂಡ ಸೂರ್ಯನ ಕಲೆ AR 3213. ನಿನ್ನೆ  ಫೆಬ್ರವರಿ 11 ರಂದು ಪುನಃ ಸಿಡಿದು ಸೌರ ಜ್ವಾಲೆ(Solar flare)ಯನ್ನು ಬಿತ್ತರಿಸಿದೆ. ಕೊತಕೊತ ಕುದಿವ ಪ್ಲಾಸ್ಮಾ(Plasma)ದ ಸೂರ್ಯ(Sun) ಉತ್ತರಧ್ರುವದ ಸಮೀಪ , ಸಿಡಿಯುತ್ತಲೇ ಇದ್ದಾನೆ.

ಸೂರ್ಯನಿಂದ ಬೇರ್ಪಟ್ಟ ಬೃಹತ್‌ ಭಾಗ..! ಖಗೋಳ ವಿಜ್ಞಾನಿಗಳಿಗೆ ತೀವ್ರ ಅಚ್ಚರಿ

ಸೂರ್ಯನ ಉತ್ತರಧ್ರುವದಲ್ಲಿ ಕಾಂತೀಯ ಸುಳಿ:

ಫೆಬ್ರವರಿ 9ರಂದು ಕಂಡ ಬೃಹತ್ ಸೂರ್ಯನಕಲೆ(Sunspots) ಕಾಣಿಸಿಕೊಂಡ ಬೆನ್ನಲ್ಲೇ ಸೂರ್ಯ ಉತ್ತರ ಧ್ರುವ(North Pole)ಸಮೀಪ ಕಾಂತೀಯ ಸುಂಟರಗಾಳಿ ನರ್ತಿಸುತ್ತ ಸಿಡಿಯುತ್ತಿರುವುದನ್ನು ನಾಸಾ(NASA) ಗಮನಿಸಿದೆ. ಈ ಆಯಸ್ಕಾಂತೀಯ ಸುಳಿ ಇಡೀ ಧ್ರುವ ಕ್ಕೆ ಸುತ್ತಿದಂತೆ ಕಂಡ ವಿಜ್ಞಾನಿಗಳು ಸೂರ್ಯನ ಚಿಪ್ಪೇ ಸಿಡಿದಂತೆ ಎಂದು ವರ್ಣಿಸಿದ್ದಾರೆ.

ಈ ರೀತಿಯ ಕಾಂತೀಯ ನರ್ತನ ಸೂರ್ಯನ ಗರ್ಭದಿಂದ ಹೊರನಡೆದಾಗ ವಿದ್ಯುತ್ ಕಾಂತೀಯ ಕಿರಣಗಳು ಚಿಮ್ಮುತ್ತವೆ. ಇವನ್ನು ಸೌರಮಾರುತಗಳು(Solar winds) ಎನ್ನುವರು. ಭೂಮಿಯಲ್ಲಿದ್ದವರಿಗೆ ಇದು ಸೂರ್ಯಕಲೆಯಾಗಿ ಕಾಣಿಸುತ್ತದೆ. ಆದರೆ ಕಾಂತೀಯ ಸುಳಿಯಲ್ಲಿ ವಿದ್ಯುತ್ ಕಾಂತೀಯ ಕಿರಣಗಳ ಪ್ರವಾಹದಲ್ಲಿ, ರೇಡಿಯೋ ಅಲೆಗಳಿಂದ ಪ್ರಾರಂಭಿಸಿ ಶಕ್ತಿಯುತ ಗಾಮಾ ಅಲೆ(Gamma wave)ಗಳ ವರೆಗೆ ಎಲ್ಲವೂ ಇರಬಹುದು. ದಶದಿಶೆಗೆ ಚಿಮ್ಮುವ ಇವಕ್ಕೆ ಸನ್ ಫ್ಲೇರ್ ಸೂರ್ಯ ಮಾರುತ ಎನ್ನುವರು. 

ಇವುಗಳಲ್ಲಿ ಶಕ್ತಿಯುತ  ಅತಿನೇರಳೆ ಹಾಗೂ ಎಕ್ಸ್ ಕಿರಣಗಳನ್ನು ಎಮ್ ಹಾಗೂ ಎಕ್ಸ್  ಸನ್ ಫ್ಲೇರ್ ಎನ್ನುವರು. ಎಮ್ ಸೂರ್ಯ ಮಾರುತಗಳಿಂದ ಭೂಮಿಯಲ್ಲಿ ಕೆಲ ಅವ್ಯವಸ್ಥೆಗಳು ನಡೆದರೆ ಎಕ್ಸ್ ಮಾರುತಗಳು ಗಂಡಾಂತರಕಾರಿ. ಈ ಕೆಲ ದಿನಗಳ ವಿದ್ಯಮಾನದಲ್ಲಿ ಎಮ್ ಕಿರಣಗಳು ಚೆಲ್ಲಿವೆ. ಹಾಗೆ ಎಕ್ಸ್ ಕಿರಣಗಳೂ ಬರಬಹುದೆಂದು ಅಂದಾಜಿಸಿದ್ದಾರೆ.

ಇವುಗಳಿಂದ ಭೂಮಿಯ ಕೆಲ ಭಾಗಗಳಲ್ಲಿ ವಿದ್ಯುತ್‌ನಲ್ಲಿ ವ್ಯತ್ಯಯ, ಗ್ಲೋಬಲ್ ಇಂಟರ್ನೆಟ್(Global Internet) ಗಳ ಮೇಲೆ , ರೇಡಿಯೊ ಅಲೆಗಳು ಸೆಲ್ಫೋನ್  ,   ಮೊಬೈಲ್ ಸಿಗ್ನಲ್ ಗಳ ಮೇಲೂ  ಕೆಲ ದಿನ ಪರಿಣಾಮ ಬೀರಬಹುದೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಕಾಂತೀಯ ಕಿರಣಗಳ ಪ್ರವಾಹದ ಹಿಂದಿಂದೆ ಮೆರವಣಿಗೆಯೋಪಾದಿಯಲ್ಲಿ ಶಕ್ತಿಯುತಕಣಗಳ ಸಿಡಿತ ಸಂಭವಿಸುತ್ತದೆ. ಇದನ್ನು  ಕೊರೋನಲ್ ಮಾಸ್ ಇಜೆಕ್ಸನ್(Coronal mass ejection) ಎನ್ನುವರು. ಇದರಿಂದ ಭೂಮಿಯ ಧ್ರುವ ಪ್ರದೇಶಗಳಲ್ಲಿ ಅತಿಯಾದ ಬಣ್ಣಬಣ್ಣದ ಧ್ರುವ ಪ್ರಭೆ ಯತೇಚ್ಛವಾಗಿ ಕಾಣಿಸಬಹುದು

ಸೂರ್ಯನ ಕಲೆಗಳ ಆವರ್ತ :

ಸುಮಾರು 11 ವರ್ಷಕ್ಕೊಮ್ಮೆ ಸೂರ್ಯನ ಕಲೆಗಳ ಆವರ್ತನ ನಡೆಯುತ್ತಿದೆ. ಈಗ 25ನೇ ಆವರ್ತನ ಡಿಸೆಂಬರ್ 2019 ರಿಂದ ಪ್ರಾರಂಭ. ಪ್ರತೀ 11 ವರ್ಷಗಳಲ್ಲಿ ಕೆಲ ವರ್ಷ ಅತೀ ಕಡಿಮೆ ಕಲೆಗಳು, ಕೆಲ ವರ್ಷ ಅತೀ ಹೆಚ್ಚು ಕಲೆಗಳನ್ನು ಗಮನಿಸುತ್ತಲೇ ಇದ್ದಾರೆ . ಈ ಬಾರಿ 25ನೇ ಆವರ್ತದಲ್ಲಿ 2023 ರಿಂದ 2026ರ ವರೆಗೆ ಹೆಚ್ಚಿಗೆ ಸೌರಕಲೆಗಳನ್ನು ಕಾಣಬಹುದೆಂದು ಅಂದಾಜಿಸಿದ್ದರು. ಹಾಗೆಯೇ ಈಗ ನಡೆಯುತ್ತಿರುವ 25ನೇ ಸೈಕಲ್ ಹೆಚ್ಚೇನೂ ವಿಶೇಷವಿರುವುದಿಲ್ಲವೆಂದು ವಿಜ್ಞಾನಿಗಳು ಅಂದಾಜಿಸಿದ್ದರು. ಆದರೆ ಸೂರ್ಯ, ಈಗ ಅದೆಲ್ಲವನ್ನೂ ತಲೆಕೆಳಗೆ ಮಾಡಿಸಿ ಈ 25 ನೇ ಸೈಕಲ್ ತುಂಬಾ ವಿಚಿತ್ರ ವೆಂಬಂತೆ ಸೂರ್ಯ ವಿಜ್ಞಾನಿಗಳನ್ನು  ದಿಗ್ಭ್ರಮೆಗೊಳಿಸುತ್ತಾ ಸಿಡಿಯುತ್ತಿದ್ದಾನೆ.

1337 ವರ್ಷಗಳಲ್ಲೇ ಭೂಮಿಗೆ ಅತಿ ಸಮೀಪ ಬರಲಿರುವ ಚಂದ್ರ! ಇಂದೇ ಈ ಖಗೋಳ ಕೌತುಕ

ಸೂರ್ಯನ ಕಾಂತೀಯ ವ್ಯವಸ್ಥೆ:

ನಮ್ಮ ಸೂರ್ಯ ನಮಗಿನ್ನೂ ಅರ್ಥವಾಗಿಲ್ಲ. ನಮ್ಮ ಸೂರ್ಯನ ಕಾಂತೀಯ ಧ್ರುವಗಳು ಭೂಮಿಯಂತೆ ಯಾವಾಗಲೂ ಒಂದೇ ಕಡೆ ಸ್ಥಿರವಲ್ಲ. 11 ವರ್ಷಕ್ಕೊಮ್ಮೆ ಕಾಂತೀಯ ಧ್ರುವಗಳು ಉತ್ತರದಿಂದ ದಕ್ಷಿಣಕ್ಕೆ ಪರಿವರ್ತನೆ ಗೊಳಗಾಗುತ್ತವೆ. 
ಇದಕ್ಕೆ ಸೂರ್ಯನ ಸಂಕೀರ್ಣ ಅಯಸ್ಕಾಂತೀಯ ವ್ಯವಸ್ಥೆಯೇ ಕಾರಣ.  ಈಗ ನಡೆಯುತ್ತಿರುವ ವಿದ್ಯಮಾನ ಮಾಮೂಲಿನಂತಿರದೆ ವಿಚಿತ್ರ ಅಯಸ್ಕಾಂತೀಯ ರುದ್ರ ನರ್ತನಕ್ಕೆ ಕಾರಣ ತಿಳಿಯಬೇಕಿದೆಯಷ್ಟೇ.

ಇದೊಂದು  ಸೂರ್ಯನ ವಿಚಿತ್ರ ವಿಸ್ಮಯ!

click me!