Praveen Nettaru Murder: ಶಫೀಕ್‌ ಕೊಲೆ ಮಾಡಿಲ್ಲ: ತಂದೆ, ಪತ್ನಿ ಸಮರ್ಥನೆ

By Govindaraj S  |  First Published Jul 29, 2022, 5:00 AM IST

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿ ಶಫೀಕ್‌ನನ್ನು ವಿಚಾರಣೆಗಾಗಿ ಪೊಲೀಸರು ಕರೆದೊಯ್ದಿದ್ದು, ಈಗ ಅವರೇ ಕೊಲೆ ಆರೋಪಿ ಎಂದು ಹಣೆಪಟ್ಟಿಕಟ್ಟಲಾಗುತ್ತಿದೆ ಎಂದು ಶಫೀಕ್‌ ಬೆಳ್ಳಾರೆ ಕುಟುಂಬಸ್ಥರು ಆರೋಪಿಸಿದ್ದಾರೆ. 


ಸುಳ್ಯ (ಜು.29): ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿ ಶಫೀಕ್‌ನನ್ನು ವಿಚಾರಣೆಗಾಗಿ ಪೊಲೀಸರು ಕರೆದೊಯ್ದಿದ್ದು, ಈಗ ಅವರೇ ಕೊಲೆ ಆರೋಪಿ ಎಂದು ಹಣೆಪಟ್ಟಿಕಟ್ಟಲಾಗುತ್ತಿದೆ ಎಂದು ಶಫೀಕ್‌ ಬೆಳ್ಳಾರೆ ಕುಟುಂಬಸ್ಥರು ಆರೋಪಿಸಿದ್ದಾರೆ. ಕೊಲೆ ನಡೆದ ಸಂದರ್ಭ ಶಫೀಕ್‌ ಮನೆಯಲ್ಲೇ ಇದ್ದ. ಮಧ್ಯರಾತ್ರಿ ವೇಳೆ ಪೊಲೀಸರು ಬಂದು ತನಿಖೆಗಾಗಿ ಕರೆದೊಯ್ದವರು ಇನ್ನೂ ಕಳುಹಿಸಿ ಕೊಟ್ಟಿಲ್ಲ. ಆತನಿಗೂ ಕೊಲೆಯ ಸುದ್ದಿ ಕೇಳಿ ಶಾಕ್‌ ಆಗಿತ್ತು. ಪೊಲೀಸರು ಸುಮ್ಮನೆ ಅವನ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಆತ ಅಡಕೆ ಅಂಗಡಿಯಲ್ಲಿ ಕೆಲಸಕ್ಕಿದ್ದು, ಅವನೇ ಮನೆಗೆ ಆಧಾರವಾಗಿದ್ದ ಎಂದು ಶಫೀಕ್‌ ತಂದೆ ಇಬ್ರಾಹಿಂ ಹೇಳಿದ್ದಾರೆ.

ತನ್ನ ಪತಿ ಶಫೀಕ್‌ ಪ್ರವೀಣ್‌ ಹತ್ಯೆ ಮಾಡಿಲ್ಲ. ಪ್ರವೀಣ್‌ ಸಾವಿನ ಸುದ್ದಿ ತಿಳಿದು ತನ್ನ ಪತಿಗೂ ಶಾಕ್‌ ಆಗಿತ್ತು ಎಂದು ಬಂಧಿತ ಶಫೀಕ್‌ ಪತ್ನಿ ಹನ್ಶಿಫಾ ಹೇಳಿದ್ದಾರೆ. ‘ನನ್ನ ಪತಿ ಶಫೀಕ್‌ಗೂ ಪ್ರವೀಣ್‌ಗೂ ಪರಿಚಯ ಇತ್ತು. ನನ್ನ ಮಾವ ಪ್ರವೀಣ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾವನನ್ನು ಕರೆದೊಯ್ಯಲು ಬೆಳಗ್ಗೆ ಪ್ರವೀಣ್‌ ನಮ್ಮ ಮನೆಗೆ ಬರುತ್ತಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಮಾವ ಪ್ರವೀಣ್‌ ಅಂಗಡಿಯಿಂದ ಕೆಲಸ ಬಿಟ್ಟು ಬೇರೆ ಕಡೆ ಚಿಕನ್‌ ಕಟ್‌ ಮಾಡುವ ಕೆಲಸಕ್ಕೆ ಸೇರಿದ್ದರು’ ಎಂದು ವಿವರಿಸಿದ್ದಾರೆ.

Tap to resize

Latest Videos

Praveen Nettaru murder; ಮುಸ್ಲಿಂ ಗೂಂಡಾಗಳಿಂದ ಈ ಹತ್ಯೆ, ಈಶ್ವರಪ್ಪ ಆರೋಪ

ಪ್ರವೀಣ್‌ ಹತ್ಯೆ ದಿನ ಬೆಳಗ್ಗೆಯಷ್ಟೇ ಪ್ರವೀಣ್‌ನನ್ನು ನೋಡಿದ್ದೆ ಅಂತ ಪತಿ ಹೇಳಿದ್ರು. ಆದರೆ ರಾತ್ರಿ 12.30ಕ್ಕೆ ಪೊಲೀಸರು ಬಂದು ವಿಚಾರಣೆ ಇದೆ ಅಂತ ಹೇಳಿ ಕರೆದುಕೊಂಡು ಹೋದರು. ಗುರುವಾರ ಇವರೇ ಆರೋಪಿಗಳು ಎಂದು ಸುದ್ದಿ ಬರುತ್ತಿರುವುದು ತಿಳಿದು ಪೊಲೀಸ್‌ ಸ್ಟೇಷನ್‌ಗೆ ಹೋದೆವು ಎಂದಿರುವ ಹನ್ಶಿಫಾ, ನನ್ನ ಗಂಡ ಪಿಎಫ್‌ಐನಲ್ಲಿದ್ದರು. ಮಸೂದ್‌ ಸತ್ತಾಗ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ ಕುರಿತು ಗೊತ್ತಿಲ್ಲ. ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಅಮಾಯಕ ಹುಡುಗ ಬಲಿಯಾದರೆ ತಪ್ಪಿತಸ್ಥರನ್ನು ಬಂಧಿಸಬೇಕು, ನನ್ನ ಗಂಡನನ್ನೇ ಯಾಕೆ ಅರೆಸ್ಟ್‌ ಮಾಡಿದ್ದಾರೆ ಅಂತ ಗೊತ್ತಿಲ್ಲ ಎಂದು ಹನ್ಶಿಫಾ ಪ್ರತಿಕ್ರಿಯಿಸಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ: ಇಬ್ಬರು ಪ್ರಮುಖ ಆರೋಪಿಗಳ ಬಂಧನ

ಪ್ರವೀಣ್‌ ಹತ್ಯೆ ದಿನ ಬೆಳಗ್ಗೆಯಷ್ಟೇ ಪ್ರವೀಣ್‌ನನ್ನು ನೋಡಿದ್ದೆ ಅಂತ ಪತಿ ಹೇಳಿದ್ರು. ಆದರೆ ರಾತ್ರಿ 12.30ಕ್ಕೆ ಪೊಲೀಸರು ಬಂದು ವಿಚಾರಣೆ ಇದೆ ಅಂತ ಹೇಳಿ ಕರೆದೊಯ್ದರು. ಇದೀಗ ಇವರೇ ಆರೋಪಿಗಳು ಎಂದು ಸುದ್ದಿ ಬರುತ್ತಿರುವುದು ತಿಳಿದು ಪೊಲೀಸ್‌ ಸ್ಟೇಷನ್‌ಗೆ ಹೋದೆವು. ನನ್ನ ಗಂಡ ಪಿಎಫ್‌ಐನಲ್ಲಿದ್ದರು. ಮಸೂದ್‌ ಸತ್ತಾಗ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ ಕುರಿತು ಗೊತ್ತಿಲ್ಲ. ನನ್ನ ಗಮನಕ್ಕೆ ಬಂದಿಲ್ಲ.
-ಹನ್ಶಿಫಾ, ಪ್ರವೀಣ್‌ ಹತ್ಯೆ ಕೇಸ್‌ನಲ್ಲಿ ಬಂಧಿತ ಶಫೀಕ್‌ ಪತ್ನಿ

click me!