ಜಿಲ್ಲೆಯಲ್ಲಿ ಬಂದೂಕು ಪರವಾನಗಿದಾರರು ಮೃತಪಟ್ಟತರುವಾಯ ಅದನ್ನು ಪುನಃ ಪಡೆದುಕೊಳ್ಳಲು ಅವರ ಕುಟುಂಬಸ್ಥರು ಆಸಕ್ತಿ ತೋರುತ್ತಿಲ್ಲ. ಹೀಗಾಗಿ 600ಕ್ಕೂ ಅಧಿಕ ಬಂದೂಕುಗಳು ಪೊಲೀಸ್ ಠಾಣೆಗಳಲ್ಲಿ ಧೂಳು ತಿನ್ನುತ್ತಿವೆ.
ಜಿ.ಡಿ. ಹೆಗಡೆ
ಕಾರವಾರ (ಜು.24) : ಜಿಲ್ಲೆಯಲ್ಲಿ ಬಂದೂಕು ಪರವಾನಗಿದಾರರು ಮೃತಪಟ್ಟತರುವಾಯ ಅದನ್ನು ಪುನಃ ಪಡೆದುಕೊಳ್ಳಲು ಅವರ ಕುಟುಂಬಸ್ಥರು ಆಸಕ್ತಿ ತೋರುತ್ತಿಲ್ಲ. ಹೀಗಾಗಿ 600ಕ್ಕೂ ಅಧಿಕ ಬಂದೂಕುಗಳು ಪೊಲೀಸ್ ಠಾಣೆಗಳಲ್ಲಿ ಧೂಳು ತಿನ್ನುತ್ತಿವೆ.
undefined
1994-95ರಿಂದ ಈ ವರೆಗೂ 600ಕ್ಕೂ ಅಧಿಕ ಬಂದೂಕುಗಳನ್ನು ಪರವಾನಗಿ ಹೊಂದಿದವರು ಮೃತಪಟ್ಟಕಾರಣ ಜಮಾ ಮಾಡಲಾಗಿದ್ದು, ಕುಟುಂಬಸ್ಥರು ತಮ್ಮ ಹೆಸರಿಗೆ ಮಾಡಿಕೊಳ್ಳಲು ಆಸಕ್ತಿ ತೋರದೇ ಬೇಡವೆಂದು ಬರೆದುಕೊಟ್ಟಿದ್ದಾರೆ.
ಈ ಮೊದಲು ಪರವಾನಗಿ ಹೊಂದಿದ್ದ ತಂದೆ ಮೃತಪಟ್ಟಾಗ ಆತನ ಮಕ್ಕಳು ತಮ್ಮ ಹೆಸರಿಗೆ ನವೀಕರಣ ಮಾಡಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಮಲೆನಾಡಿನ ತಾಲೂಕಿನಲ್ಲಿ ನಾಡಬಂದೂಕಿನಂತಹ ಹಳೆ ಶಸ್ತ್ರಾಸ್ತ್ರ ಇರುವುದರಿಂದ ನಿರಾಸಕ್ತಿ ಉಂಟಾದರೆ, ಕರಾವಳಿಯಲ್ಲಿ ಬಂದೂಕುಗಳ ಕಬ್ಬಿಣದ ಬಿಡಿ ಭಾಗ ಬೇಗ ತುಕ್ಕು ಹಿಡಿಯುವುದರಿಂದ ಅವುಗಳ ನಿರ್ವಹಣೆ ಕಷ್ಟಕರವಾಗಿದೆ. ಹೀಗಾಗಿ ಹೆಚ್ಚಿನ ಜನ ಶಸ್ತ್ರಾಸ್ತ್ರಗಳು ಬೇಡವೆಂದು ಬರೆದುಕೊಟ್ಟಿದ್ದಾರೆ.
ಇನ್ನು ಪ್ರಾಣಿಗಳನ್ನು ಹೊಡೆಯಬಾರದು, ಮರಣ ಹೊಂದಿದ ಪರವಾನಗಿದಾರನಿಂದ ಅವನ ಮಕ್ಕಳು ಹೊಸದಾಗಿ ಪರವಾನಗಿ ಪಡೆಯುವ ಪ್ರಕ್ರಿಯೆ ಸುದೀರ್ಘವಾಗಿ ಇದೆ. ಜತೆಗೆ ಚುನಾವಣೆ ಅಥವಾ ಬೇರೆ ಬೇರೆ ತುರ್ತು ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಜಮಾ ಮಾಡಬೇಕಾಗುತ್ತದೆ. ಗ್ರಾಮೀಣ ಭಾಗದಿಂದ ಇದೇ ಹೊರೆಯಾಗುತ್ತದೆ. ಕಾರಣ ಬಂದೂಕನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ.
Crime News: 18 ನಾಡ ಬಂದೂಕು ವಶ: ಇಬ್ಬರಿಗೆ ನ್ಯಾಯಾಂಗ ಬಂಧನ
ಪ್ರಕ್ರಿಯೆ ಹೇಗೆ?
ಉತ್ತರ ಕನ್ನಡ ಜಿಲ್ಲಾಡಳಿತದಿಂದ ಬೆಳೆ ರಕ್ಷಣೆಗೆಂದು 5672, ಸ್ವ ರಕ್ಷಣೆಗೆಂದು 698, ಒಟ್ಟು 6370 ಬಂದೂಕುಗಳಿಗೆ ಕಳೆದ ಮಾಚ್‌ರ್‍ವರೆಗೆ ಪರವಾನಗಿ ನೀಡಲಾಗಿದೆ. ಸ್ವರಕ್ಷಣೆಗೂ ಹೆಚ್ಚಿನ ಪ್ರಮಾಣದಲ್ಲಿ ಗನ್‌ಗಳನ್ನು ಪಡೆದಿರುವುದು ಗಮನಾರ್ಹವಾಗಿದೆ.
ಸಿಂಗಲ್ ಬ್ಯಾರಲ್ ಬ್ರಿಜ್ಡ್ ಲೋಡ್ (ಎಸ್‌ಬಿಎಂಎಲ್) 493, ಸಿಂಗಲ್ ಬ್ಯಾರಲ್ ಮಝಲ್ ಲೋಡ್ (ಡಿಬಿಎಂಎಲ್) 105, ಡಬ್ಬಲ್ ಬ್ಯಾರಲ್ ಬ್ರಿಜ್ಡ್ ಲೋಡ್ (ಎಸ್‌ಬಿಬಿಎಲ್) 32, ಡಬ್ಬಲ್ ಬ್ಯಾರಲ್ ಮಝಲ್ ಲೋಡ್ (ಡಿಬಿಬಿಎಲ್) 9, ಆರ್‌ಐಎಫ್‌ಎಲ್‌ಎ 1 ಒಟ್ಟು 640 ಬಂದೂಕುಗಳು ಕಳೆದ 25 ವರ್ಷಗಳಲ್ಲಿ ಪೊಲೀಸ್ ಇಲಾಖೆಗೆ ಜಮಾ ಆಗಿವೆ.
ಪೊಲೀಸ್ ಇಲಾಖೆಗೆ ಕುಟುಂಬಸ್ಥರು ಬಂದೂಕು ಬೇಡವೆಂದು ಮುಚ್ಚಳಿಕೆ ಬರೆದುಕೊಟ್ಟಾಗ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗುತ್ತದೆ. ಡಿಸಿ ಮುಟ್ಟುಗೋಲಿಗೆ ಆದೇಶಿಸಿದಾಗ ಅದನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಬಂದೂಕಿನ ಕಬ್ಬಿಣದ ವಸ್ತುಗಳನ್ನು ಹರಾಜು ಹಾಕಲಾಗುತ್ತದೆ. ಮರದ ವಸ್ತುಗಳನ್ನು ಸುಟ್ಟು ಹಾಕಲಾಗುತ್ತದೆ.
'ಆತ್ಮ ರಕ್ಷಣೆಗೆ ನಮಗೆ ಬಂದೂಕು ನೀಡಿ': ಸಿಎಂ ಮುಂದೆ ಹೊಸ ಬೇಡಿಕೆ ಇಟ್ಟ ರಾಯಚೂರು ಕುರಿಗಾಹಿಗಳು!
ಪರವಾನಗಿ ಹೊಂದಿದವರು ಮೃತಪಟ್ಟಾಗ ಇಲಾಖೆಗೆ ಹಸ್ತಾಂತರಿಸಬೇಕು. ಪುನಃ ಬಂದೂಕಿನ ಅವಶ್ಯಕತೆಯಿದ್ದರೆ ಪೊಲೀಸ್ ಇಲಾಖೆಯಿಂದ ನೀಡುವ ತರಬೇತಿ ಪಡೆದು ಅರ್ಜಿ ಸಲ್ಲಿಸಬಹುದು. ಅವಶ್ಯಕತೆ ಇಲ್ಲದಿದ್ದರೆ ಕುಟುಂಬದವರು ತಮಗೆ ಬೇಡವೆಂದು ಲಿಖಿತವಾಗಿ ನೀಡಬೇಕು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ಕಾನೂನಾತ್ಮಕ ಪ್ರಕ್ರಿಯೆ ಮುಗಿಸಿದ ಬಳಿಕವೇ ಅದನ್ನು ನಿಷ್ಕಿ್ರಯ ಮಾಡಲಾಗುತ್ತದೆ.
ಎನ್. ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠ