ಆನ್‌ಲೈನ್ ಗೇಮ್ ಸಾಲ ತೀರಿಸಲು ದರೋಡೆ; ಮರ ಕತ್ತರಿಸುವ ಯಂತ್ರದಿಂದ ಅಡ್ಡ ಬಂದವರನ್ನು ಕತ್ತರಿಸಿದ ಇಬ್ರಾಹಿಂ!

By Sathish Kumar KH  |  First Published Dec 22, 2024, 3:36 PM IST

ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಆನ್‌ಲೈನ್ ಗೇಮ್‌ನಿಂದಾದ ಸಾಲ ತೀರಿಸಲು ದರೋಡೆಗೆ ಹೋದ ವ್ಯಕ್ತಿಯೊಬ್ಬ ರೈತನನ್ನು ಮರ ಕತ್ತರಿಸುವ ಯಂತ್ರದಿಂದ ಕೊಲೆಗೈದಿದ್ದಾನೆ. ದರೋಡೆಗೆ ಅಡ್ಡ ಬಂದವರನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಆರೋಪಿ, ಮನೆಯಲ್ಲಿದ್ದ ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.


ಮಂಡ್ಯ (ಡಿ.22): ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯ ಹೊರವಲಯದ ತೋಟದಲ್ಲಿದ್ದ ಒಂಟಿ ಮನೆಯಲ್ಲಿ ರೈತನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಸಂಬಂಧ ಪೊಲೀಸರು ಆರೋಪಿಯ ಕೃತ್ಯದ ಬಗ್ಗೆ ಕೇಳಿ ಬೆಚ್ಚಿ ಬಿದ್ದಿದ್ದಾರೆ. ತಾನ್ ಆನ್‌ಲೈನ್ ಗೇಮ್‌ನಿಂದ ಮಾಡಿಕೊಂಡಿದ್ದ ಸಾಲ ತೀರಿಸಲು ದರೋಡೆ ಮಾಡಲು ಹೋಗಿದ್ದು, ಅಡ್ಡ ಬಂದ ಎಲ್ಲರನ್ನೂ ಮರ ಕತ್ತರಿಸುವ ಯಂತ್ರದಿಂದ ಕತ್ತರಿಸಿ ಹಣ ಲಪಟಾಯಿಸಲು ಮುಂದಾಗಿದ್ದಾಗಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ  ಕ್ಯಾತನಹಳ್ಳಿ ಬರ್ಬರ ಹತ್ಯೆ ಪ್ರಕರಣದ ಸಂಬಂಧ ಪೊಲೀಸರಿಂದ ಹಂತಕನ ತೀವ್ರ ವಿಚಾರಣೆ ಮಾಡಲಾಗಿದೆ. ವಿಚಾರಣೆ ವೇಳೆ ಕೊಲೆಪಾತಕಿ ಶಾಕಿಂಗ್ ವಿಚಾರ ಬಾಯಿಬಿಟ್ಟಿದ್ದಾನೆ. ಇನ್ನು ಪೊಲೀಸರು ಕೊಲೆಗಡುಕನ ಹಿಸ್ಟರಿ ಕೇಳಿ ಶಾಕ್ ಆಗಿದ್ದಾರೆ. ಕೊಲೆ ಆರೋಪಿ ಮೊಹಮದ್ ಇಬ್ರಾಹಿಂ ಪೊಲೀಸರ ಮುಂದೆ ಕೊಲೆಗೆ ಕಾರಣ ಬಿಚ್ಚಿಟ್ಟಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ನಿವಾಸಿ ಆಗಿರುವ ಮೊಹಮ್ಮದ್ ಇಬ್ರಾಹಿಂ, ಆನ್ ಲೈನ್ ಗೇಮ್ ಸುಳಿಗೆ ಸಿಲುಕಿದ್ದಾರೆ. ಈ ಗೇಮ್ ನಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಪರದಾಡಿದ್ದಾನೆ.

Tap to resize

Latest Videos

undefined

ನಂತರ ತಾನು ಆನ್‌ಲೈನ್ ಗೇಮ್‌ಗಾಗಿ ಮಾಡಿದ ತೀರಿಸಲು ದರೋಡೆಗೆ ಪ್ಲಾನ್ ಮಾಡಿದ್ದಾನೆ. ಆದರೆ, ದರೋಡೆಗಾಗಿ ಹೋಗುವಾಗ ಯಾರಾದರೂ ಅಡ್ಡಬಂದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಮರ ಕತ್ತರಿಸುವ ಯಂತ್ರದಿಂದ ಕತ್ತರಿಸಲು ಕ್ರೂರ ಯೋಜನೆ ರೂಪಿಸಿದ್ದಾರೆ. ನಂತರ, ದರೋಡೆಗಾಗಿ ಒಂಟಿ ಮನೆಗಳನ್ನೆ ಟಾರ್ಗೆಟ್ ಮಾಡಿದ್ದಾನೆ. ಕ್ಯಾತನಹಳ್ಳಿಗೂ ಮುನ್ನ ಕೆನ್ನಾಳು ಗ್ರಾಮದಲ್ಲಿ ದರೋಡೆಗೆ ಯತ್ನ ಮಾಡಿದ್ದಾನೆ. ಆದರೆ, ಮನೆಯಲ್ಲಿ ಹೆಚ್ಚು ಜನ ಹಾಗೂ ಸಿಸಿಟಿವಿ ಇದ್ದಿದ್ದರಿಂದ ಅಲ್ಲಿಂದ ವಾಪಸ್ಸು ಆಗಿದ್ದಾನೆ.

ಇದನ್ನೂ ಓದಿ: Bigg Boss Kannada 11 ಮತ್ತೆ ಬಂದ ಗೋಲ್ಡ್ ಸುರೇಶ್, ತ್ರಿವಿಕ್ರಮ್‌ ಎಲಿಮಿನೇಟ್‌!

ಬಳಿಕ ಕ್ಯಾತನಹಳ್ಳಿ ಬಳಿಯ ಒಂಟಿ ಮನೆಗೆ ಬಂದಿದ್ದಾನೆ. ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಇದ್ದ ತೋಟದ ಮನೆಗೆ ಹೋಗಿ ಬಾಗಿಲು ಬಡಿದಿದ್ದಾನೆ. ಮನೆಯಲ್ಲಿ ವಯಸ್ಸಾದ ದಂಪತಿ ಇದ್ದಿದ್ದರಿಂದ ಕೊಲೆಗೈದು ದರೋಡೆಗೆ ಯತ್ನ ಮಾಡಿದ್ದಾನೆ. ಮನೆಯಿಂದ ಹೊರಗೆ ಬಂದ ಮಹಿಳೆ ಯಶೋಧಮ್ಮನಿಗೆ ನೀವು ಮರ ಕತ್ತರಿಸುವ ಯಂತ್ರ ಆರ್ಡರ್ ಮಾಡಿದ್ದೀರಿ ತೆಗೆದುಕೊಳ್ಳಿ ಎಂದು ಹೇಳಿದ್ದಾನೆ. ನಾವು ಆರ್ಡರ್ ಮಾಡಿಲ್ಲವೆಂದು ಹೇಳಿದರೂ ಕೇಳದೇ ಮನೆಯೊಳಗೆ ಮರ ಕತ್ತರಿಸುವ ಯಂತ್ರವನ್ನು ಬ್ಯಾಗ್‌ನಿಂದ ತೆಗೆದು ಮಹಿಳೆಯ ಮುಖಕ್ಕೆ ಹಿಡಿದು ಸ್ವಲ್ಪ ಭಾಗವನ್ನು ಕೊಯ್ದಿದ್ದಾನೆ. ಕೂಡಲೇ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.

ನಂತರ ಒಳಗೆ ಹೋದ ಇಬ್ರಾಹಿಂ ಹಾಸಿಗೆ ಮೇಲೆ ಸ್ಟ್ರೋಕ್ ಆಗಿ ಬಿದ್ದಿದ್ದ ರೈತ ರಮೇಶ್ ನೀನು ಯಾರೆಂದು ವಿಚಾರಿಸಿ ಜೋರಾಗಿ ಧ್ವನಿ ಮಾಡುತ್ತಿದ್ದಂತೆ ಆತನ ಕುತ್ತಿಗೆಯನ್ನು ಮರದ ದಿಮ್ಮಿ ಕತ್ತರಿಸುವಂತೆ ಕತ್ತರಿಸಿದ್ದಾರೆ. ಇದರ ನಡುವೆ ಗಂಭೀರ ಗಾಯದ ನಡುವೆಯೂ ಯಶೋದಮ್ಮ ಮನೆಯಿಂದ ಹೊರಬಂದು ಬಾಗಿಲು ಲಾಕ್ ಮಾಡಿದ್ದಾಳೆ. ನಂತರ ಬಾಗಿಲು ತೆರೆಯುವಂತೆ ಮಹಿಳೆಗೆ ಬೆದರಿಕೆ ಹಾಕಿದ್ದು, ಇಲ್ಲದಿದ್ದರೆ ನಿನ್ನ ಗಂಡನನ್ನು ಕೊಲೆ ಮಾಡುವುದಾಗಿ ಹೇಳಿ ಮರ ಕತ್ತರಿಸುವ ಯಂತ್ರದಿಂದ ಮನಸೋ ಇಚ್ಛೆ ಕತ್ತರಿಸಿದ್ದಾನೆ. ಆಗ ಮಹಿಳೆ ಧೈರ್ಯ ಕಳೆದುಕೊಳ್ಳದೇ ಇತರರನ್ನು ಸಹಾಯಕ್ಕೆ ಕರೆದು, ಕಳ್ಳನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾಳೆ.

ಇದನ್ನೂ ಓದಿ: ಮಂಡ್ಯ: ಪಾರ್ಸಲ್​ ಡೆಲಿವರಿ ನೆಪದಲ್ಲಿ ಒಂಟಿ ಮನೆಗೆ ಬಂದು, ಮರದ ಯಂತ್ರದಿಂದ ರೈತನ ಕತ್ತು ಕೊಯ್ದ!

click me!