ತಾಲೂಕು ಬೂದನೂರು ಗ್ರಾಮದ ಸರ್ವೇ ನಂ.313ರಲ್ಲಿ ವಕ್ಫ್ ಆಸ್ತಿ 30 ಗುಂಟೆಗೆ ಬದಲಾಗಿ 1 ಎಕರೆ 13 ಗುಂಟೆ ಸರ್ಕಾರಿ ಕಟ್ಟೆ ಜಾಗವನ್ನು ಮುಸ್ಲಿಂ ಮಕಾನ್‌ಗೆ ತಿದ್ದುಪಡಿ ಆದೇಶ ಹೊರಡಿಸಿ ಆನಂತರ ಗ್ರಾಮಸ್ಥರ ವಿರೋಧದ ಹಿನ್ನೆಲೆಯಲ್ಲಿ ದಾಖಲೆಗಳನ್ನೆಲ್ಲಾ ಮರುಪರಿಶೀಲಿಸಿದ ಜಿಲ್ಲಾಧಿಕಾರಿ.
ಮಂಡ್ಯ ಮಂಜುನಾಥ
ಮಂಡ್ಯ (ನ.04): ತಾಲೂಕು ಬೂದನೂರು ಗ್ರಾಮದ ಸರ್ವೇ ನಂ.313ರಲ್ಲಿ ವಕ್ಫ್ ಆಸ್ತಿ 30 ಗುಂಟೆಗೆ ಬದಲಾಗಿ 1 ಎಕರೆ 13 ಗುಂಟೆ ಸರ್ಕಾರಿ ಕಟ್ಟೆ ಜಾಗವನ್ನು ಮುಸ್ಲಿಂ ಮಕಾನ್‌ಗೆ ತಿದ್ದುಪಡಿ ಆದೇಶ ಹೊರಡಿಸಿ ಆನಂತರ ಗ್ರಾಮಸ್ಥರ ವಿರೋಧದ ಹಿನ್ನೆಲೆಯಲ್ಲಿ ದಾಖಲೆಗಳನ್ನೆಲ್ಲಾ ಮರುಪರಿಶೀಲಿಸಿದ ಜಿಲ್ಲಾಧಿಕಾರಿ ಅವರು ಆರ್‌ಟಿಸಿಯಲ್ಲಿ ಮುಸಲ್ಮಾನರ ಮಕಾನ್ ಎಂದು ನಮೂದಾಗಿದ್ದನ್ನು ರದ್ದುಪಡಿಸಿದ್ದ ಸಂಗತಿ ರಾಜ್ಯಾದ್ಯಂತ ರಾಡಿ ಎಬ್ಬಿಸಿರುವ ವಕ್ಫ್ ಆಸ್ತಿ ವಿವಾದಕ್ಕೆ ಹೊಸ ತಿರುವು ನೀಡಿದೆ.
undefined
ರಾಜ್ಯಾದ್ಯಂತ ವಕ್ಫ್ ಆಸ್ತಿ ವಿವಾದ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದು, ರೈತರು, ಸಾಮಾನ್ಯ ಜನರನ್ನೂ ಗೊಂದಲ, ಆತಂಕಕ್ಕೀಡಾಗುವಂತೆ ಮಾಡಿದೆ. ಇದರ ನಡುವೆ ೨೦೧೭ರಲ್ಲಿ ಸರ್ಕಾರಿ ಕಟ್ಟೆ ಜಾಗವನ್ನು ಮುಸ್ಲಿಂ ಮಕಾನ್ ಎಂದು ದಾಖಲೆಗಳನ್ನು ತಿದ್ದಿರುವುದು ಬಹಿರಂಗವಾಗಿದೆ. ಅಲ್ಲದೆ, ಬೂದನೂರು ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ವಾಸವಿಲ್ಲದಿದ್ದರೂ ಮುಸ್ಲಿಂ ಮಕಾನ್‌ಗೆ ಜಾಗ ನಿಗದಿಪಡಿಸಿದ್ದು ಹೇಗೆ ಎನ್ನುವುದು ಪ್ರಶ್ನಾರ್ಹವಾಗಿದೆ.
ಉತ್ತರ ಕರ್ನಾಟಕದಲ್ಲಿದೆ ಇಡೀ ಕರ್ನಾಟಕದ ಭವ್ಯ ಭವಿಷ್ಯ: ಸಂಸದ ಬೊಮ್ಮಾಯಿ
ಮೂಲ ಹೇಗಿತ್ತು?: ಬೂದನೂರು ಗ್ರಾಮದ ಸರ್ವೇ ನಂ.೩೧೩ರ ವಿಸ್ತೀರ್ಣ ೧ ಎಕರೆ ೧೩ ಗುಂಟೆ ಜಮೀನು ಆಕಾರ್‌ಬಂದ್‌ನಂತೆ ಬಿ- ಖರಾಬಿನಲ್ಲಿ ದಾಖಲಾಗಿದ್ದು, ಟಿಪ್ಪಣಿ ಪುಸ್ತಕದಲ್ಲಿ ಕರ್ದಾ ಸರ್ಕಾರಿ ಕಟ್ಟೆ ಎಂದು ನಮೂದಾಗಿದೆ. ೧೯೬೯- ೭೦ನೇ ಸಾಲಿನಿಂದ ೧೯೭೬- ೭೭ನೇ ಸಾಲಿನವರೆಗೆ ಕೈ ಬರಹದ ಆರ್‌ಟಿಸಿಯಲ್ಲಿ ಸರ್ಕಾರಿ ಎಂದು ನಮೂದಾಗಿ ನಂತರ ೧೯೭೭- ೭೮ನೇ ಸಾಲಿನಿಂದ ೩೦ - ೫ - ೨೦೧೭ರವರೆಗೆ ಸರ್ಕಾರಿ ಸ್ಮಶಾನ ಎಂದೇ ಕೈಬರಹ ಮತ್ತು ಗಣಕೀಕೃತ ಆರ್‌ಟಿಸಿಯಲ್ಲೂ ಇದೆ. ೧೯೬೩ರಲ್ಲಿ ವಕ್ಫ್ ಅಧಿನಿಯಮದ ಉಪಬಂಧಗಳಂತೆ ನಕ್ಷೆ ತಯಾರಿಸಿದ್ದು, ನೋಟಿಸ್, ಮಹಜರ್ ಪ್ರತಿ ನಿರ್ದಿಷ್ಟಪಡಿಸಿದ ನಮೂನೆಯಲ್ಲಿ ಮಾಹಿತಿ ಭರ್ತಿ ಮಾಡಿ ಸ.ನಂ.೩೧೩ರಲ್ಲಿ ೩೦ ಗುಂಟೆ ಪ್ರದೇಶವನ್ನು ವಕ್ಫ್ ಆಸ್ತಿ ಎಂದು ದಾಖಲಿಸಿರುತ್ತದೆ.
ಜೊತೆಗೆ ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳು ವಾಸವಿರುವುದಿಲ್ಲ ಎಂದೂ ದಾಖಲಿಸಲಾಗಿದೆ. ೩೧ ಅಕ್ಟೋಬರ್ ೧೯೬೪ರಂದು ೩೦ ಗುಂಟೆ ಜಮೀನು ವಕ್ಫ್ ಆಸ್ತಿ ಎಂದು ಗೆಜೆಟ್ ಅಧಿಸೂಚನೆಯಾಗಿದ್ದು, ಇದರ ಪ್ರಕಾರ ಪರಿಶೀಲಿಸಲಾಗಿ ಹೊಸ ಬೂದನೂರಲ್ಲಿ ೩೦ ಗುಂಟೆ ಮಾತ್ರ ಅಧಿಸೂಚನೆಯಾಗಿದ್ದು, ಇದರಲ್ಲಿ ಸರ್ವೇ ನಂಬರನ್ನು ನಮೂದಿಸಿರುವುದಿಲ್ಲ. ಆದರೆ, ಪೂರ್ವಭಾವಿ ನಮೂನೆಗಳಲ್ಲಿ ಜಮೀನಿನ ಸರ್ವೇ ನಂ.೩೧೩ ಆಗಿರುವುದು ಕಂಡುಬಂದಿದೆ.
೨೦೧೭ರಲ್ಲಿ ತಿದ್ದುಪಡಿ ಆದೇಶ: ಮಂಡ್ಯ ಉಪವಿಭಾಗಾಧಿಕಾರಿ ೨೪ -೪ - ೨೦೧೭ರಲ್ಲಿ ಮಾಡಿರುವ ಆದೇಶದಲ್ಲಿ ಸರ್ಕಾರಿ ಜಾಗ ಎಂಬುದನ್ನು ಮುಸಲ್ಮಾನರ ಮಕಾನ್ ಎಂದು ಖಾತೆ ಅಂಗೀಕರಿಸಿದ್ದಾರೆ. ಅಲ್ಲಿಂದ ೨೦೨೨ರವರೆಗೂ ಗಣಕೀಕೃತ ಆರ್‌ಟಿಸಿಯಲ್ಲಿ ಮುಸಲ್ಮಾನರ ಮಕಾನ್ ಎಂದು ನಮೂದಾಗಿದೆ. ಸರ್ವೇ ನಂ.೩೧೩ರಲ್ಲಿ ೩೦ ಗುಂಟೆ ಬದಲಿಗೆ ೧ ಎಕರೆ ೧೩ ಗುಂಟೆ ಜಮೀನು ವಕ್ಫ್ ಬೋರ್ಡ್‌ಗೆ ಹಕ್ಕು ಬದಲಾವಣೆಯಾಗಿರುವುದು ಕಂಡುಬಂದಿದೆ. ಕರ್ನಾಟಕ ರಾಜ್ಯ ವಕ್ಫ್‌ಬೋರ್ಡ್ನ್‌ವರು ೨೪ - ೪ - ೨೦೧೮ರಂದು ಗೆಜೆಟ್ ನೋಟಿಫಿಕೇಷನ್ ೩೧ - ೧೦ - ೧೯೬೪ರ ಪ್ರಕಾರ ಹೊಸಬೂದನೂರಿನಲ್ಲಿ ೩೦ ಗುಂಟೆ ಜಮೀನನ್ನು ಬೂದನೂರು ಗ್ರಾಮದ ಸರ್ವೇ ನಂ.೧ ಎಕರೆ ೧೩ ಗುಂಟೆಯನ್ನು ಖಬರಸ್ಥಾನ್ ಎಂದು ತಿದ್ದುಪಡಿ ಮಾಡಿ ಆದೇಶ ಮಾಡಿದೆ. ಆದರೆ, ೧ ಎಕರೆ ೧೩ ಗುಂಟೆ ವಿಸ್ತೀರ್ಣಕ್ಕೆ ಗೆಜೆಟ್ ಅಧಿಸೂಚನೆಯಾಗಿರುವ ದಾಖಲೆಗಳು ಕಂಡುಬಂದಿಲ್ಲದಿರುವುದು ಸ್ಪಷ್ಟವಾಗಿದೆ.
37.82 ಲಕ್ಷ ರು. ಪರಿಹಾರ: ಬೂದನೂರು ಗ್ರಾಮದ ಸರ್ವೇ ನಂ.೩೧೩ರಲ್ಲಿ ೧೫೪೩ ಚ.ಮೀ. (೧೫.೨೫ ಗುಂಟೆ) ಜಮೀನು ರಾಷ್ಟ್ರೀಯ ಹೆದ್ದಾರಿ -೨೭೫ಕ್ಕೆ ಭೂಸ್ವಾಧೀನವಾಗಿದ್ದು, ಭೂಸ್ವಾಧೀನದ ಪರಿಹಾರ ಹಣ ೩೭,೮೨,೪೯೯ ರು. ರಾಜ್ಯ ವಕ್ಫ್ ಬೋರ್ಡ್‌ರವರಿಗೆ ಪಾವತಿಸಿರುವುದು ಅವಾರ್ಡ್ ನೋಟೀಸ್‌ನಿಂದ ಕಂಡುಬಂದಿದೆ.
14.75 ಗುಂಟೆ ವಕ್ಫ್ ವಶಕ್ಕೆ: ಬೂದನೂರು ಗ್ರಾಮದ ಸರ್ವೇ ನಂ.೩೧೩ರ ೧ ಎಕರೆ ೧೩ ಗುಂಟೆ ಜಮೀನು ಮೂಲತಃ ಆಕಾರ್‌ಬಂದ್‌ನಂತೆ ಬಿ- ಖರಾಬು ಜಮೀನಾಗಿದ್ದು, ೧೯೬೯- ೭೦ನೇ ಸಾಲಿನಿಂದ ೩೦ ಮೇ ೨೦೧೭ರವರೆಗೆ ಸರ್ಕಾರಿ ಹಾಗೂ ಸರ್ಕಾರಿ ಸ್ಮಶಾನ ಎಂದು ನಮೂದಾಗಿ ಕೈಬರಹದ ಆರ್‌ಟಿಸಿ ಮತ್ತು ಗಣಕೀಕೃತ ಆರ್‌ಟಿಸಿಗಳು ಬಂದಿವೆ. ಹೊಸಬೂದನೂರು ಗ್ರಾಮದಲ್ಲಿ ಮಾತ್ರ ವಕ್ಫ್‌ಬೋರ್ಡ್ ಆಸ್ತಿ ೩೦ ಗುಂಟೆ ಇದ್ದು ಅದರಲ್ಲಿ ೧೫.೨೫ ಗುಂಟೆ ಜಮೀನು ರಾಷ್ಟ್ರೀಯ ಹೆದ್ದಾರಿಗೆ ಭೂಸ್ವಾಧೀನವಾಗಿ ಪರಿಹಾರವೂ ವಕ್ಫ್‌ಬೋರ್ಡ್‌ನವರಿಗೆ ಪಾವತಿಯಾಗಿರುವುದರಿಂದ ೧೪.೭೫ ಗುಂಟೆ ಜಮೀನನ್ನು ಮಾತ್ರ ವಕ್ಫ್‌ಬೋರ್ಡ್‌ಗೆ ಕಾಯ್ದಿರಿಸಿ ೨೩ ಗುಂಟೆ ಜಮೀನನ್ನು ಮೂಲ ಸರ್ವೇ ಕರ್ದಾ ದಾಖಲೆಯಂತೆ ಸರ್ಕಾರಿ ಕಟ್ಟೆ ಎಂದು ಆರ್‌ಟಿಸಿ ಇಂಡೀಕರಿಸುವಂತೆ ೨ - ೨ - ೨೦೨೨ರಲ್ಲಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಮುಸ್ಲಿಂ ಮಕಾನ್ ವಿರೋಧಿಸಿದ್ದ ಹೊಸಬೂದನೂರು ಗ್ರಾಮಸ್ಥರು: ಊರಿನಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬದವರು ವಾಸವಿರದಿದ್ದರೂ ಬೂದನೂರು ಗ್ರಾಮದ ಸ.ನಂ.೩೧೩ರಲ್ಲಿ ೧.೧೩ ಎಕರೆ ಜಮೀನನ್ನು ಮುಸ್ಲಿಂ ಮಕಾನ್ ಆಗಿ ಆರ್‌ಟಿಸಿಯಲ್ಲಿ ನಮೂದಿಸಿರುವುದರ ವಿರುದ್ಧ ಹೊಸಬೂದನೂರು ಗ್ರಾಮಸ್ಥರು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ಜಮೀನನ್ನು ಆದಿ ದ್ರಾವಿಡ ಮತ್ತು ಹಿಂದೂ ಜನಾಂಗದವರ ಸ್ಮಶಾನಕ್ಕೆ ಕಾಯ್ದಿರಿಸುವಂತೆ ಒತ್ತಾಯಿಸಿದ್ದರು. ಗ್ರಾಮಸ್ಥರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ವಕ್ಫ್ ಅಧಿಕಾರಿಯನ್ನೊಳಗೊಂಡ ತಂಡ ರಚಿಸಿ ಸ್ಕೆಚ್ ತಯಾರಿಸಿ ಪೂರಕ ದಾಖಲೆಗಳೊಂದಿಗೆ ಸಮಿತಿ ಅಧ್ಯಕ್ಷರು- ಸದಸ್ಯರನ್ನೊಳಗೊಂಡ ತಂಡದ ಮೇಲುಸ್ತುವಾರಿಯಲ್ಲಿ ಭೂ ದಾಖಲೆಗಳ ಉಪ ನಿರ್ದೇಶಕರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.
ಸುಸ್ಥಿರ ಮಾದರಿಗಳ ಮೂಲಕ ಸಮಾಜದ ಪ್ರಗತಿ ಸಾಧ್ಯ: ರವಿ ಹೆಗಡೆ
2017ರಲ್ಲಿ ಜಿಯಾವುಲ್ಲಾ ಮಂಡ್ಯ ಜಿಲ್ಲಾಧಿಕಾರಿಯಾಗಿದ್ದರು. ಆ ಸಮಯದಲ್ಲೇ ತಿದ್ದುಪಡಿ ಆದೇಶ ಮಾಡಲಾಗಿದೆ. ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಕಟ್ಟೆ ಜಾಗವನ್ನು ಅದಕ್ಕಾಗಿಯೇ ಮೀಸಲಿಡಬೇಕು. ಅದರ ಹಿಂದೆ ಯಾವುದೇ ಆದೇಶವಾಗಿದ್ದರೂ ರದ್ದುಪಡಿಸಬೇಕೆಂಬ ಆದೇಶವಿದೆ. ವಕ್ಫ್ ಆಸ್ತಿಗೆ ನಿರ್ದಿಷ್ಟ ಸರ್ವೇ ನಂಬರ್ ಇಲ್ಲದಿದ್ದರೂ ಯಾವ ಆಧಾರದ ಮೇಲೆ ೩೦ ಗುಂಟೆ ಜಮೀನನ್ನು ಆರ್‌ಟಿಸಿಯಲ್ಲಿ ಇಂಡೀಕರಿಸಿದ್ದಾರೆ. ಸರ್ಕಾರಿ ಕಟ್ಟೆ ಜಾಗವನ್ನು ಮುಸ್ಲಿಂ ಮಕಾನ್ ಆಗಿ ತಿದ್ದುಪಡಿ ಮಾಡಿರುವ ಆದೇಶ ಮತ್ತು ಅಕ್ರಮವಾಗಿ ವಕ್ಫ್ ಬೋರ್ಡ್ ಪಡೆದಿರುವ ೩೭.82 ಲಕ್ಷ ರು. ಪರಿಹಾರದ ವಿರುದ್ಧ ಕಾನೂನು ಹೋರಾಟ ಮಾಡುವೆ, ಸಿಬಿಐಗೆ ದೂರು ನೀಡುವೆ.
-ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರ