Karnataka Rain Updates: ಚಿಕ್ಕಮಗಳೂರಲ್ಲಿ ಮರ ಬಿದ್ದು ಮಹಿಳೆ ಸಾವು

ರಾಜ್ಯದೆಲ್ಲೆಡೆ ಮಳೆ ಆರ್ಭಟ ಮುಂದುವರಿದಿದ್ದು, ರಾಜ್ಯದ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚುತ್ತಿದೆ. ಕೆಲವು ಕಡೆ ನೀರಿನ ಮಟ್ಟ ಗರಿಷ್ಠ ಮಟ್ಟಕ್ಕೆ ತಲುಪಿಸಿದೆ. ಮಂಡ್ಯದ ಕೃಷ್ಣ ರಾಜ ಆಣೆಕಟ್ಟೆಯಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದ್ದು, ಜಲಾಶಯದಿಂದ ನೀರು ಹೊರಬಿಡಲಾಗುತ್ತಿದೆ. ಶಿವಮೊಗ್ಗ-ಉಡುಪಿ-ದಕ್ಷಿಣ ಕನ್ನಡವನ್ನೆ ಬೆಸೆಯುವ ಆಗುಂಬೆ ಘಾಟಿಯಲ್ಲಿ ಮರ ಉರುಳಿದ್ದು, ವಾಹನಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದೇ ಮೊದಲ ಮೊದಲ ಬಾರಿಗೆ ಚಿಕ್ಕಮಗಳೂರಲ್ಲಿ ಮರ ಬಿದ್ದು, ಕಾಫಿ ತೋಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಕೆಯೊಬ್ಬಳು ಅಸುನೀಗಿದ್ದಾಳೆ. ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ವರ್ಷಧಾರೆಯಿಂದ ಎಲ್ಲೆಡೆ ಸುಂದಾರವಾದ ಜಲಪಾತಗಳು ಸೃಷ್ಟಿಯಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿವೆ. ನಿಲ್ಲದ ಮಳೆ ನಡುವೆಯೆ ಮುಸ್ಲಿಮ್ ಬಾಂಧವರು ಬಕ್ರೀದ್ ಪ್ರಾರ್ಥನೆ ಸಲ್ಲಿಸುತ್ತಿದ್ದು, ಪರಸ್ಪರ ಶುಭಾಶಯ ಕೋರುತ್ತಿದ್ದಾರೆ.  ಯಾವ ಜಿಲ್ಲೆಗಳಲ್ಲಿ ಮಳೆ ಹೇಗಾಗಿದೆ, ಪರಿಸ್ಥಿತಿ ಏನಿದೆ ಎಂದು ತಿಳಿಯಲು ಸುವರ್ಣನ್ಯೂಸ್.ಕಾಮ್ ಲೈವ್‌ ಬ್ಲಾಗಿಗೆ ಲಾಗಿನ್ ಆಗಿರಿ. 

11:09 AM

ಕೆಆರ್‌ಎಸ್‌ ನೀರಿನಿಂದ ರಂಗನತ್ತಿಟ್ಟು ನಡುಗಡ್ಡೆಗಳು

ಕೆಆರ್‌ಎಸ್ ಡ್ಯಾಂನಿಂದ 50,573 ಕ್ಯೂಸೆಕ್ ನೀರು ಬಿಡುಗಡೆ ಹಿನ್ನಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಮುಳುಗಡೆಯಾಗಿದ್ದು ವಿದೇಶಿ ಹಕ್ಕಿಗಳು ಸಂಕಷ್ಟಕ್ಕೆ ಸಿಲುಕಿವೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟುವಿನಲ್ಲಿರುವ ಪಕ್ಷಿಧಾಮ. ಪಕ್ಷಿಧಾಮದಲ್ಲಿರುವ 40 ಕ್ಕೂ ಹೆಚ್ಚು ನಡುಗಡ್ಡೆಗಳು ಮುಳುಗಡೆಯಾಗಿದ್ದು, ಪಕ್ಷಿ ಸಂಕುಲ ಸಂಕಷ್ಟದಲ್ಲಿದೆ. ಪಕ್ಷಿಗಳು ಗೂಡು, ಮೊಟ್ಟೆ, ಮರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಪರದಾಡುತ್ತಿವೆ. ಈಗಾಗಲೇ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸಂಪೂರ್ಣ ಬಂದ್ ಮಾಡಲಾಗಿದ್ದು, ಬೋಟಿಂಗ್ ಇಲ್ಲದ ಕಾರಣ ರಂಗನತಿಟ್ಟಿಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. 

4:02 PM

ಕಾಫಿ ನಾಡಲ್ಲಿ ಮಹಾಮಳೆಗೆ ಮೊದಲ ಬಲಿ

ಚಿಕ್ಕಮಗಳೂರು : ಕಾಫಿನಾಡಲ್ಲಿ ಮಹಾಮಳೆಗೆ ಮೊದಲ ಬಲಿ. ಮಲೆನಾಡು ಭಾಗದಲ್ಲಿ ಹೆಚ್ಚಿದ ಮಳೆಯ ಅಬ್ಬರ.  ಕೆಲಸ ಮಾಡುವಾಗ ಮರ ಬಿದ್ದು ಮಹಿಳೆ ಸಾವು. ಕಳಸ ತಾಲೂಕಿನ ಹೊರನಾಡಿನಲ್ಲಿ ಘಟನೆ.  ಹೂವಿನ ಹಿತ್ತಲು ಗ್ರಾಮದ ಪ್ರಿಯಾಂಕ (22) ಮೃತ ದುರ್ದೈವಿ. ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಮರ ಬಿದ್ದು ಸಾವು.  ಹರಪನಹಳ್ಳಿ ಮೂಲದ ಕೂಲಿ ಕಾರ್ಮಿಕ ಮಹಿಳೆ ಕ ಳಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

3:46 PM

ಕೊಡಗು: ಕಿಂಡಿ ಅಣೆಕಟ್ಟಿನಿಂದ ಮನೆಗಳಿಗೆ ನೀರು, 4 ಮನೆ ಜಲಾವೃತ

ಕೊಡಗು: ಕಿಂಡಿ ಅಣೆಕಟ್ಟಿನಿಂದ ಮನೆಗಳಿಗೆ ನುಗ್ಗಿದ ನೀರು-ನಾಲ್ಕು ಮನೆಗಳು ಜಲಾವೃತ. -ಕೊಯನಾಡು ಬಳಿ ಕಿಂಡಿ ಅಣೆಕಟ್ಟಿಗೆ ಅಡ್ಡಲಾಗಿ ನಿಂತ ಮರ. ಅಣೆಕಟ್ಟಿನಿಂದ ಮನೆಗಳತ್ತ ನುಗ್ಗಿದ ನೀರು. ಪ್ರವಾಹಕ್ಕೆ ಸಿಲುಕಿದ ನಾಲ್ಕು ಮನೆಗಳು ಜಲಾವೃತ.

3:45 PM

ನಿಲ್ಲದ ಮಳೆ, ಚಿಕ್ಕಮಗಳೂರಲ್ಲಿ ಮತ್ತೆರಡು ದಿನ ಶಾಲೆಗೆ ರಜೆ

ಚಿಕ್ಕಮಗಳೂರು: ಮುಂದುವರೆದ ಮಳೆ, ಜಿಲ್ಲೆಯ 6 ತಾಲ್ಲೂಕಿನ ಶಾಲಾ, ಕಾಲೇಜುಗಳಿಗೆ 2 ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕಳೆದ ವಾರದಿಂದಲೂ ಬಿಡದೇ ಸುರಿಯುತ್ತಿರುವ ಮಳೆ ಸ್ವಲ್ಪ ತಣ್ಣಗಾದಂತೆ ಕಾಣಿಸುತ್ತಿತ್ತು. ಆದರೆ, ಮತ್ತೆ ವರುಣ ತನ್ನ ಆರ್ಭಟ ತೋರುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ನೀಡಿರುವ ರಜೆಯನ್ನು ವಿಸ್ತರಿಸಲಾಗಿದೆ.

1:50 PM

Mandya: KRS ಡ್ಯಾಂನಿಂದ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಮಂಡ್ಯ: KRS ಡ್ಯಾಂನಿಂದ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ. ಡ್ಯಾಂ 123 ಅಡಿ ಭರ್ತಿಯಾಗುತ್ತಿದ್ದಂತೆ, ನೀರು ಬಿಡುಗಡೆ. 
124.80 ಅಡಿ ಗರಿಷ್ಠ ಮಟ್ಟ ಹೊಂದಿರುವ KRS ಡ್ಯಾಂ. ಒಳ ಹರಿವು ಹೆಚ್ಚಿನ ಪ್ರಮಾಣದಲ್ಲಿ ಬರ್ತಿರೊ ಹಿನ್ನೆಲೆಯಲ್ಲಿ 15 ಗೇಟ್ ಮೂಲಕ ನದಿಗೆ ನೀರು ಬಿಡುಗಡೆ ಮಾಡಿದ KRS ಅಧಿಕಾರಿಗಳು. 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಿಂದ ಮೈದುಂಬಿದ ಕಾವೇರಿ ನದಿ. ನಿನ್ನೆ ಮಧ್ಯಾಹ್ನದಿಂದ 10 ಸಾವಿರ ನೀರು ಬಿಡಲಾಗುತ್ತಿತ್ತು. 123 ಅಡಿ ಭರ್ತಿಯಾಗುತ್ತಿದ್ದಂತೆ, ಹೊರ ಹರಿವಿನ ಪ್ರಮಾಣ ಹೆಚ್ಚಿಸಿದ್ದಾರೆ ಅಧಿಕಾರಿಗಳು. ಸದ್ಯ ಡ್ಯಾಂಗೆ 30,216 ಒಳ ಹರಿವು ಬರ್ತಿದೆ. ಸಂಜೆ ವೇಳೆಗೆ ಒಳ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ. ಒಳ ಹರಿವು ಹೆಚ್ಚಾದಂತೆ ಹೊರ ಹರಿವು ಬಿಡುಗಡೆ.

1:48 PM

Karawar: ಭಾನುವಾರ ಸಂತೆ ಪೂರ್ತಿ ನೀರೇ ನೀರು

ಕಾರವಾರ (ಉತ್ತರಕನ್ನಡ): ಕಾರವಾರದಲ್ಲಿ ಸುರಿದ ಗಾಳಿ ಮಳೆಗೆ ಭಾನುವಾರ ಸಂತೆ ನೀರಿನಿಂದ ತುಂಬಿ ಹೋಗಿದೆ. ಗಾಳಿ- ಮಳೆಯ ಅಬ್ಬರಕ್ಕೆ ತರಕಾರಿ- ಹಣ್ಣುಹಂಪಲುಗಳನ್ನು ಬಿಟ್ಟು ಓಡಿದ ಬೀದಿ ಬದಿ ವ್ಯಾಪಾರಿಗಳು. ಹಾಕಿದ್ದ ಟಾರ್ಪಾಲುಗಳು ಬೀಳದಂತೆ ತಡೆಯಲು ಹರಸಾಹಸಪಟ್ಟ ವ್ಯಾಪಾರಿಗಳು. ಕೆಲವು ವ್ಯಾಪಾರಿಗಳಂದ ಟಾರ್ಪಾಲನ್ನೇ ಹೊದ್ದುಕೊಂಡು ಮಳೆಯಿಂದ ರಕ್ಷಣೆ ಪಡೆದು ಕೊಂಡರು. ಹಾವೇರಿ, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿಯಿಂದ ಬಂದು ಪ್ರತೀ ಭಾನುವಾರ ಕಾರವಾರದಲ್ಲಿ ವ್ಯಾಪಾರ ನಡೆಸುತ್ತಾರೆ ಜನರು. ಆದರೆ, ಮಳೆಯ ಆರ್ಭಟಕ್ಕೆ ತರಕಾರಿ, ಹಣ್ಣುಹಂಪಲು, ಮಳೆಯಿಂದ ರಕ್ಷಣೆಗೆ ಹಾಕಿದ್ದ ಟಾರ್ಪಾಲು ಎಲ್ಲವೂ ಅಸ್ತವ್ಯಸ್ತವಾಗಿವೆ. ಜನಜಂಗುಳಿಯೇ ಸೇರುತ್ತಿದ್ದ ಕಾರವಾರ ಮಾರುಕಟ್ಟೆಯಲ್ಲಿ ಮಳೆಯಿಂದಾಗಿ ಬೆರಳೆಣಿಕೆಯ ಜನ ಮಾತ್ರ ಕಾಣಿಸಿಕೊಂಡರು. ಮಳೆಯೇಟಿನಿಂದ ಗ್ರಾಹಕರ ಕೊರತೆಯಾಗಿ ನಷ್ಟ ಅನುಭವಿಸುತ್ತಿರುವ ವ್ಯಾಪಾರಿಗಳು.

12:32 PM

Chikkamagaluru: ಇನಾಂ ದತ್ತಾತ್ರೇಯ ಪೀಠ ರಸ್ತೆ ಸಂಚಾರ ಅಸ್ತವ್ಯಸ್ತ

ಚಿಕ್ಕಮಗಳೂರು : ಮಲೆನಾಡಿನಲ್ಲಿ ಮುಂದುವರೆದ ವರುಣನ ಆರ್ಭಟ. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಿರಂತರ ಭೂಕುಸಿತ. ಚಿಕ್ಕಮಗಳೂರು ಇನಾಂ ದತ್ತಾತ್ರೇಯ ಪೀಠ ರಸ್ತೆ ಸಂಚಾರ ಅಸ್ತವ್ಯಸ್ತ. ರಸ್ತೆಯ ಮುಕ್ಕಾಲು ಭಾಗಕ್ಕೆ ಕುಸಿದ ಗುಡ್ಡ, ಕಾರ್ ಬೈಕ್ ಹೊರತು ಪಡಿಸಿ ಭಾರಿ ವಾಹನಗಳ ಸಂಚಾರ ಬಂದ್. ಐಡಿ ಪೀಠಕ್ಕೆ ತೆರಳೋಕೆ ಆಗದೆ ನಿರಾಸೆಯಲ್ಲಿರೋ ಪ್ರವಾಸಿಗರು. ಐಡಿ ಪೀಠದ ರಸ್ತೆಗೆ ಮೂರು ನಾಲ್ಕು ಕಡೆ ರಸ್ತೆಗೆ ಉರುಳಿದ ಮಣ್ಣು, ಕಲ್ಲು, ಮರ. ಚರಂಡಿ ಇಲ್ಲದೇ ರಸ್ತೆಯ ಮೇಲೆ ಹರಿಯುತ್ತಿದೆ ನೀರು.  ಪ್ರವಾಸಿಗರ ವಾಹನಗಳಿಂದಲೇ ಟ್ರಾಫಿಕ್ ಜಾಮ್ ಆಗುತ್ತಿದ್ದ ರಸ್ತೆಯಲ್ಲಿ ಮಳೆ‌ ನೀರು. ರಸ್ತೆಯಲ್ಲಿ ಬಿದ್ದಿರುವ ಕಲ್ಲು, ಮಣ್ಣಿನ ರಾಶಿ ನೋಡಿ ಭೀತಿಗೊಳಗಾದ ಪ್ರವಾಸಿಗರು.  ಪ್ರವಾಸವನ್ನು ಮಟಕುಗೊಳಿಸಿ ಊರಿಗೆ ತೆರಳಿದ ಪ್ರವಾಸಿಗರು. ದತ್ತಪೀಠ ಕ್ಕೆ ತೆರಳೋ ಸರ್ಪಹಾದಿಯಲ್ಲೂ ಭೂ ಕುಸಿತ. ಗಿರಿಶ್ರೇಣಿಯಲ್ಲಿ ಇನ್ನಷ್ಟು ಕಡೆ  ಕುಸಿಯೋ ಆತಂಕ.

12:23 PM

Udupi: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

ಉಡುಪಿ: ಕಳೆದೊಂದು ವಾರದಿಂದ ಉಡುಪಿಯಲ್ಲಿ ಸುರಿಯುತ್ತಿದೆ ಭಾರಿ ಮಳೆ. ಮಳೆಯಿಂದ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು. ನದಿ ತೀರದ ದ್ವೀಪ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಆತಂಕ. ಸದ್ಯ ಮನೆಯ ಆವರಣವನ್ನು ತಲುಪಿರುವ ಮಳೆ ನೀರು. ಮಳೆ ಮುಂದುವರಿದರೆ ಮನೆಯೊಳಗೆ ನೀರು ನುಗ್ಗುವ ಸಾಧ್ಯತೆ. ಸುರಕ್ಷತಾ ದೃಷ್ಟಿಯಿಂದ ಜಾನುವಾರುಗಳನ್ನು ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. ಅಪಾಯ ರೀತಿಯಲ್ಲಿ ಜಾನುವಾರುಗಳ ಜೊತೆಗೆ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ತೆಕ್ಕಟೆಯ ಕುದ್ರುಬೈಲು ದ್ವೀಪದ ನಿವಾಸಿಗಳು.

12:17 PM

Agumbe ಘಾಟಿಯಲ್ಲಿ ಗುಡ್ಡ ಕುಸಿದ

ಶಿವಮೊಗ್ಗ ಜಿಲ್ಲೆಯನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳೊಂದಿಗೆ ಬೆಸೆಯುವ ಆಗುಂಬೆ ಘಾಟಿಯಲ್ಲಿ ಗುಡ್ಡು ಕುಸಿತವಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ  ಮಳೆಯಿಂದಾಗಿ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದಿದೆ. ಭಾರಿ ಪ್ರಮಾಣದ ಮಣ್ಣು ಮತ್ತು ಮರ ರಸ್ತೆಗೆ ಬಿದ್ದಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ. ಗುಡ್ಡ ಕುಸಿತವಾಗಿರುವುದರಿಂದ ಉಡುಪಿ ಕಡೆಯಿಂದ ಬರುವ ವಾಹನಗಳನ್ನು ಸೋಮೇಶ್ವರ ಚೆಕ್ ಪೋಸ್ಟ್ ಬಳಿ ಹಾಗು ಶಿವಮೊಗ್ಗ ಕಡೆಯಿಂದ ಹೋಗುವ ವಾಹನಗಳನ್ನು ಆಗುಂಬೆ ಚೆಕ್‌ಪೋಸ್ಟ್​ ಹತ್ತಿರ ತಡೆಯಲಾಗುತ್ತಿದೆ. ಈಗಾಗಲೇ ಶಿವಮೊಗ್ಗ-ಉಡುಪಿ ಎರಡೂ ಕಡೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸಿಬ್ಬಂದಿಯ ಮೂಲಕ ಮಣ್ಣು ತೆರವು ಮಾಡುವ ಕಾರ್ಯ ನಡೆಸುತ್ತಿದ್ದಾರೆ.
 
11:37 AM

Chikkamagaluru: ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಭಾರಿ

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮುಂದುವರೆದ ಮಳೆ ಅಬ್ಬರ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ರಸ್ತೆಗೆ ಉರುಳುತ್ತಿರುವ ಮರ, ಮಣ್ಣು, ಬಂಡೆ. ಕವಿಕಲ್ ಗಂಡಿಯಿಂದ ಕೊಳಗಾಮೆ ರಸ್ತೆಯಲ್ಲಿ ಭಾರೀ ಭೂಕುಸಿತ. ಗುಡ್ಡ ಜರಿದು ರಸ್ತೆಗೆ ಬಿದ್ದ ಮಣ್ಣು, ಕಲ್ಲು,  ಮರ. ರಸ್ತೆ ಸಂಚಾರ ಸಂಪೂರ್ಣ ಬಂದ್. ಕೊಳೆಗಾಮೆ ಮುತ್ತೋಡಿ ಸಂಪರ್ಕ ಕಲ್ಪಿಸುವ ಗಿರಿ ಭಾಗದ ರಸ್ತೆ. ಹಲವು ಗ್ರಾಮಗಳ ಸಂಪರ್ಕ ಕಡಿತ. ತೋಟದ ಕೆಲಸಕ್ಕೆ ತೆರಳಿದ ಕಾರ್ಮಿಕರ ಪರದಾಟ. ರಸ್ತೆಗೆ ಬಿದ್ದಿರುವ ಮಣ್ಣು, ಬಂಡೆ, ಮರ ನೋಡಿ ಆತಂಕಕ್ಕೆ ಒಳಾಗದ ಕಾರ್ಮಿಕರು. 
ರಸ್ತೆಯಲ್ಲಿ ಬಿದ್ದಿರುವ ಮಣ್ಣು ಕಲ್ಲು ಮರ ತೆರವುಗೊಳಿಸುವಲ್ಲಿ ನಿರತರಾಗಿರುವ ಕಾರ್ಮಿಕರು. ಚಿಕ್ಕಮಗಳೂರು ತಾಲೂಕಿನ ಕೊಳಗಾಮೆ ರಸ್ತೆ.

11:24 AM

Vijayapura: ಆಲಮಟ್ಟಿ ಜಲಾಶಯ ಭರ್ತಿಯಾಗಲು ಕೆಲವೇ ಮೀ. ಬಾಕಿ

ವಿಜಯಪುರ: ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ನೀರಿನ ಮಟ್ಟ. 
ಗರಿಷ್ಠ ಮಟ್ಟ: 519.60 ಮೀಟರ್.
ಇಂದಿನ ಮಟ್ಟ: 516.37 ಮೀಟರ್
ಒಳಹರಿವು: 78149 ಕ್ಯೂಸೆಕ್.
ಹೊರಹರಿವು: 451 ಕ್ಯೂಸೆಕ್.
ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ.
ಇಂದಿನ ನೀರಿನ ಸಂಗ್ರಹ: 77.032 ಟಿಎಂಸಿ.

11:15 AM

Shivamogga: ಹಲವೆಡೆ ಗುಡ್ಡ ಕುಸಿತ

ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಮಳೆ ಅವಾಂತರ. ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಗುಡ್ಡ ಕುಸಿತ. ಸಾಗರ ತಾಲೂಕಿನ ಅಡಗಳಲೆ ಗ್ರಾಮದಲ್ಲಿಯೂ ಗುಡ್ಡ ಕುಸಿತ. ಸಾಗರ ತಾಲೂಕಿನ ಸಂಕಣ್ಣ ಶಾನುಭೋಗ್ ಗ್ರಾ.ಪಂ ವ್ಯಾಪ್ತಿಯ ಅಡಗಳಲೆ ಗ್ರಾಮ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಡಗಳಲೆ ಗ್ರಾಮದ ಸುಧಾ ಸಂತೋಷ್, ಜಿನದತ್ತ, ಮಂಜಮ್ಮ ಅವರ ತೋಟ, ಗದ್ದೆಯ ಬಳಿ ಕುಸಿದ ಗುಡ್ಡ. ಗುಡ್ಡ ಕುಸಿತದಿಂದ 10ಕ್ಕೂ ಹೆಚ್ಚು ಎಕರೆ ಅಡಿಕೆ ತೋಟ ಹಾಗೂ ಗದ್ದೆ ಸಂಪೂರ್ಣ ಮಣ್ಣುಪಾಲು. ಗದ್ದೆ, ತೋಟದಲ್ಲಿ ಕೊಚ್ಚಿಕೊಂಡು ಹೋಗಿ ನಿಂತಿರುವ ಗುಡ್ಡದ ಮಣ್ಣು. ಗುಡ್ಡಕುಸಿತದಿಂದ ತೋಟ, ಗದ್ದೆಯ ಮೇಲೆ ಹರಿದು ಹೋಗುತ್ತಿರುವ ಹಳ್ಳದ ನೀರು. ಗುಡ್ಡ ಕುಸಿತದಿಂದ ಮೂಲ ಸ್ವರೂಪವನ್ನೇ ಕಳೆದುಕೊಂಡ ಕೃಷಿ ಭೂಮಿ. ಮಳೆ ಮುಂದುವರಿದರೇ ಜಿಲ್ಲೆಯಲ್ಲಿ ಮತ್ತಷ್ಟು ಅವಘಡಗಳು ನಡೆಯುವ ಸಾಧ್ಯತೆ. ಕಳೆದ 3 ವರ್ಷದಿಂದ ಜಿಲ್ಲೆಯ ವಿವಿಧ ಭಾಗದಲ್ಲಿ ಉಂಟಾಗುತ್ತಿರುವ ಗುಡ್ಡ ಕುಸಿತ. ಕಳೆದ ವರ್ಷ ತೀರ್ಥಹಳ್ಳಿಯ ಹೆಗಲತ್ತಿ, ಸಾಗರದ ಆರೋಡಿ ಬಳಿಯೂ ಸಹ ಗುಡ್ಡ ಕುಸಿತ ಉಂಟಾಗಿತ್ತು.

10:31 AM

Kodagu: ಮಳೆಯ ನಡುವೆ ಮತ್ತು ಕಂರಿಸಿದ ಭೂಮಿ

ಕೊಡಗು: ಮಳೆಯ ನಡುವೆ ಮತ್ತೆ ಕಂಪಿಸಿದ ಭೂಮಿ. ಗಡಿ ಗ್ರಾಮ‌ ಚೆಂಬು ಸುತ್ತ-ಮುತ್ತ ಕಂಪನದ ಅನುಭವ. ಬೆಳಗ್ಗೆ 6:24ರ ಸಮಯದಲ್ಲಿ ಕಂಪನದ ಅನುಭವ. ನಿನ್ನೆ ರಾತ್ರಿ ಭೂಮಿಯಿಂದ ಜೋರಾದ ಶಬ್ದ ಕೇಳಿಬಂದಿತ್ತು. ಇಂದು ಬೆಳಗ್ಗೆ ಶಬ್ದದೊಂದಿಗೆ ಭೂಕಂಪನದ ಅನುಭವ. ಸರಣಿ ಭೂಕಂಪವಾಗಿದ್ದ ಗ್ರಾಮಗಳಲ್ಲಿ ಮತ್ತೆ ಆತಂಕ. ಒಂದೆಡೆ ವ್ಯಾಪಕ ಮಳೆ, ಮತ್ತೊಂದೆಡೆ ಭೂಕಂಪನದ ಆತಂಕ.

10:04 AM

Mangalore: ನದಿಗೆ ಬಿದ್ದ ಕಾರು

ಮಂಗಳೂರು: ಉಕ್ಕಿಹರಿಯುವ ಹೊಳೆಗೆ ಬಿದ್ದ ಕಾರು.  ಸಿಸಿಟಿವಿಯಲ್ಲಿ ಅವಘಡದ ದೃಶ್ಯ ಸೆರೆ. ಮಧ್ಯರಾತ್ರಿ ಭಾರೀ ವೇಗವಾಗಿ ಬಂದು ಉಕ್ಕಿಹರಿಯುವ ಹೊಳೆಗೆ ಬಿದ್ದ ಕಾರು. ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಮಧ್ಯರಾತ್ರಿ 12 ಗಂಟೆಗೆ ಘಟನೆ. ಅಪಘಾತದ ವೇಗಕ್ಕೆ ಸೇತುವೆಯ ತಡೆಬೇಲಿ ಜಖಂ. ಮೂರು ಕಂಬಗಳು ಮುರಿದು ಕಬ್ಬಿಣ ನೇತಾಡುತ್ತಿದೆ. ಕಾರು ಮತ್ತು ಕಾರಿನಲ್ಲಿದ್ದವರು ನಾಪತ್ತೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿರೋ ಶಂಕೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕಾಣಿಯೂರಿನಲ್ಲಿ ಅವಘಡ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌.

10:03 AM

Hassan: ನೆಲಕ್ಕೆ ಕುಸಿದಿವೆ ಮನೆಗಳು

ಹಾಸನ ಜಿಲ್ಲೆಯಲ್ಲಿ ಸುರಿಯುತ್ತಿದೆ ಧಾರಾಕಾರ ಮಳೆ. ಕಳೆದ ಒಂದು ವಾರದಿಂದ‌ ನಿರಂತರ ಮಳೆ. ಭಾರಿ ಮಳೆಗೆ ಹಲವು ಮನೆಗಳು ಕುಸಿತ, ಕೆಲವು ಮನೆಗಳಿಗೆ ಭಾಗಶಃ ಹಾನಿ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ, ರಾಮನಾಥಪುರ ಹೋಬಳಿಯಲ್ಲಿ ಹದಿನೈದು ಮನೆಗಳಿಗೆ ಹಾನಿ. ಮರವಳಲು, ಮಲ್ಲಿರಾಜಪಟ್ಟಣ ಗ್ರಾಮಗಳ ಮನೆಗಳಿಗೆ ಭಾಗಶಃ ಹಾನಿ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತರ ಒತ್ತಾಯ. ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಸಿ.ಸ್ವಾಮಿ ಭೇಟಿ, ಪರಿಶೀಲನೆ.

10:01 AM

Kodagu: ಉಕ್ಕ ಹರಿದ ಪಯಸ್ವಿನಿ ನದಿ

ಕೊಡಗು: ಕೊಡಗು ದಕ್ಷಿಣಕನ್ನಡ ಗಡಿಯಲ್ಲಿ ಭಾರೀ ಮಳೆ ಹಿ‌ನ್ನಲೆಯಲ್ಲಿ ಕೊಯನಾಡು ಬಳಿಯಲ್ಲಿ ಉಕ್ಕಿ ಹರಿದ ಪಯಸ್ವಿನಿ ನದಿ. ಕೊಯನಾಡು ಗ್ರಾಮದ ನಾಲ್ಕು ಮನೆಗಳಿಗೆ ನುಗ್ಗಿದ ನೀರು. ಕಿಂಡಿ ಅಣೆಕಟ್ಟು ಬಳಿ ಮರ ಬ್ಲಾಕ್ ಆಗಿ ಮನೆಗಳಿಗೆ ನೀರು ನುಗ್ಗಿದ್ದು, ಸಂಪೂರ್ಣ ಜಲಾವೃತವಾಗಿವೆ  ಗ್ರಾಮದ 4 ಮನೆಗಳು. ಮನೆಗಳಲ್ಲಿ ಇದ್ದವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ. ಸ್ಥಳಕ್ಕೆ ಅಧಿಕಾರಿಗಳು, ರಕ್ಷಣಾ ತಂಡದ ಸಿಬ್ಬಂದಿ ದೌಡು.

10:00 AM

Chikkodi: 6 ಸೇತುವೆ ಜಲಾವೃತ

ಚಿಕ್ಕೋಡಿ: ಮುಂದುವರೆದ ಮಹಾ ಮಳೆ 6 ಸೇತುವೆಗಳು ಜಲಾವೃತ. ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ 6 ಸೇತುವೆಗಳು ಜಲಾವೃತ. ಕಾರದಗಾ- ಬೋಜ,ಭೋಜವಾಡಿ- ಕುನ್ನೂರ, ಜತ್ರಾಟ- ಭೀವಶಿ,ಅಕ್ಕೋಳ ಸಿದ್ನಾಳ, ಮಲಿಕವಾಡ- ದತವಾಡ,ಕಲ್ಲೋಳ- ಯಡೂರ ಸೇತುವೆಗಳು ಜಲಾವೃತ. ವೇದಗಂಗಾ, ದೂಧಗಂಗಾ, ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳು, ಈಗಾಗಲೇ ಮೈದುಂಬಿ ಹರಿಯುತ್ತಿರುವ ಕೃಷ್ಣಾ ಹಾಗೂ ಉಪನದಿಗಳು. ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದರೆ ಇನ್ನು ಹೆಚ್ಚಿನ ನೀರು ಬರುವ ಸಾಧ್ಯತೆ,

9:58 AM

ಮಳೆ ನಡುವೆ ಸುಳ್ಯದಲ್ಲಿ ಕಂಪಿಸಿದ ಭೂಮಿ

ಇಂದೂ ಕಂಪಿಸಿದ ಭೂಮಿ. 6.24 ಕ್ಕೆ ಹಲವೆಡೆ ಭೂ ಕಂಪನ. ಸುಳ್ಯ ಹಾಗೂ ಕೊಡಗು ಗಡಿ ಪ್ರದೇಶದ ಹಲವೆಡೆ ಇಂದು ಬೆಳಿಗ್ಗೆ ಕೂಡಾ ಭೂಮಿ ಕಂಪಿಸಿದೆ. ಹಲವೆಡೆ ಹಲವು ರೀತಿಯಲ್ಲಿ ಇದರ ಪ್ರತಿಫಲನ ವ್ಯಕ್ತವಾಗಿದೆ. ಭೂಮಿಯೊಳಗಿನಿಂದ ಗುಡುಗಿನ ಶಬ್ದದಂತೆ ಕೇಳಿ ಬಂತು ಎಂದು ಅನೇಕರು ಹೇಳಿಕೊಳ್ಳುತ್ತಿದ್ದಾರೆ. ಮಲಗಿದ್ದ ನಾನು ಶಬ್ದಕ್ಕೆ ಬೆಚ್ಚಿಬಿದ್ದೆ. ಗಡ ಗಡ ಅಲ್ಲಾಡಿದ ಅನುಭವವಾಯಿತು ಎಂದು ಅರಂಬೂರಿನಿಂದ ಪ್ರಭಾಕರ ನಾಯರ್ ಅನುಭವ ಹೇಳಿಕೊಂಡಿದ್ದಾರೆ.

11:09 AM IST:

ಕೆಆರ್‌ಎಸ್ ಡ್ಯಾಂನಿಂದ 50,573 ಕ್ಯೂಸೆಕ್ ನೀರು ಬಿಡುಗಡೆ ಹಿನ್ನಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಮುಳುಗಡೆಯಾಗಿದ್ದು ವಿದೇಶಿ ಹಕ್ಕಿಗಳು ಸಂಕಷ್ಟಕ್ಕೆ ಸಿಲುಕಿವೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟುವಿನಲ್ಲಿರುವ ಪಕ್ಷಿಧಾಮ. ಪಕ್ಷಿಧಾಮದಲ್ಲಿರುವ 40 ಕ್ಕೂ ಹೆಚ್ಚು ನಡುಗಡ್ಡೆಗಳು ಮುಳುಗಡೆಯಾಗಿದ್ದು, ಪಕ್ಷಿ ಸಂಕುಲ ಸಂಕಷ್ಟದಲ್ಲಿದೆ. ಪಕ್ಷಿಗಳು ಗೂಡು, ಮೊಟ್ಟೆ, ಮರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಪರದಾಡುತ್ತಿವೆ. ಈಗಾಗಲೇ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸಂಪೂರ್ಣ ಬಂದ್ ಮಾಡಲಾಗಿದ್ದು, ಬೋಟಿಂಗ್ ಇಲ್ಲದ ಕಾರಣ ರಂಗನತಿಟ್ಟಿಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. 

4:07 PM IST:

ಚಿಕ್ಕಮಗಳೂರು : ಕಾಫಿನಾಡಲ್ಲಿ ಮಹಾಮಳೆಗೆ ಮೊದಲ ಬಲಿ. ಮಲೆನಾಡು ಭಾಗದಲ್ಲಿ ಹೆಚ್ಚಿದ ಮಳೆಯ ಅಬ್ಬರ.  ಕೆಲಸ ಮಾಡುವಾಗ ಮರ ಬಿದ್ದು ಮಹಿಳೆ ಸಾವು. ಕಳಸ ತಾಲೂಕಿನ ಹೊರನಾಡಿನಲ್ಲಿ ಘಟನೆ.  ಹೂವಿನ ಹಿತ್ತಲು ಗ್ರಾಮದ ಪ್ರಿಯಾಂಕ (22) ಮೃತ ದುರ್ದೈವಿ. ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಮರ ಬಿದ್ದು ಸಾವು.  ಹರಪನಹಳ್ಳಿ ಮೂಲದ ಕೂಲಿ ಕಾರ್ಮಿಕ ಮಹಿಳೆ ಕ ಳಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

3:46 PM IST:

ಕೊಡಗು: ಕಿಂಡಿ ಅಣೆಕಟ್ಟಿನಿಂದ ಮನೆಗಳಿಗೆ ನುಗ್ಗಿದ ನೀರು-ನಾಲ್ಕು ಮನೆಗಳು ಜಲಾವೃತ. -ಕೊಯನಾಡು ಬಳಿ ಕಿಂಡಿ ಅಣೆಕಟ್ಟಿಗೆ ಅಡ್ಡಲಾಗಿ ನಿಂತ ಮರ. ಅಣೆಕಟ್ಟಿನಿಂದ ಮನೆಗಳತ್ತ ನುಗ್ಗಿದ ನೀರು. ಪ್ರವಾಹಕ್ಕೆ ಸಿಲುಕಿದ ನಾಲ್ಕು ಮನೆಗಳು ಜಲಾವೃತ.

3:45 PM IST:

ಚಿಕ್ಕಮಗಳೂರು: ಮುಂದುವರೆದ ಮಳೆ, ಜಿಲ್ಲೆಯ 6 ತಾಲ್ಲೂಕಿನ ಶಾಲಾ, ಕಾಲೇಜುಗಳಿಗೆ 2 ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕಳೆದ ವಾರದಿಂದಲೂ ಬಿಡದೇ ಸುರಿಯುತ್ತಿರುವ ಮಳೆ ಸ್ವಲ್ಪ ತಣ್ಣಗಾದಂತೆ ಕಾಣಿಸುತ್ತಿತ್ತು. ಆದರೆ, ಮತ್ತೆ ವರುಣ ತನ್ನ ಆರ್ಭಟ ತೋರುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ನೀಡಿರುವ ರಜೆಯನ್ನು ವಿಸ್ತರಿಸಲಾಗಿದೆ.

1:50 PM IST:

ಮಂಡ್ಯ: KRS ಡ್ಯಾಂನಿಂದ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ. ಡ್ಯಾಂ 123 ಅಡಿ ಭರ್ತಿಯಾಗುತ್ತಿದ್ದಂತೆ, ನೀರು ಬಿಡುಗಡೆ. 
124.80 ಅಡಿ ಗರಿಷ್ಠ ಮಟ್ಟ ಹೊಂದಿರುವ KRS ಡ್ಯಾಂ. ಒಳ ಹರಿವು ಹೆಚ್ಚಿನ ಪ್ರಮಾಣದಲ್ಲಿ ಬರ್ತಿರೊ ಹಿನ್ನೆಲೆಯಲ್ಲಿ 15 ಗೇಟ್ ಮೂಲಕ ನದಿಗೆ ನೀರು ಬಿಡುಗಡೆ ಮಾಡಿದ KRS ಅಧಿಕಾರಿಗಳು. 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಿಂದ ಮೈದುಂಬಿದ ಕಾವೇರಿ ನದಿ. ನಿನ್ನೆ ಮಧ್ಯಾಹ್ನದಿಂದ 10 ಸಾವಿರ ನೀರು ಬಿಡಲಾಗುತ್ತಿತ್ತು. 123 ಅಡಿ ಭರ್ತಿಯಾಗುತ್ತಿದ್ದಂತೆ, ಹೊರ ಹರಿವಿನ ಪ್ರಮಾಣ ಹೆಚ್ಚಿಸಿದ್ದಾರೆ ಅಧಿಕಾರಿಗಳು. ಸದ್ಯ ಡ್ಯಾಂಗೆ 30,216 ಒಳ ಹರಿವು ಬರ್ತಿದೆ. ಸಂಜೆ ವೇಳೆಗೆ ಒಳ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ. ಒಳ ಹರಿವು ಹೆಚ್ಚಾದಂತೆ ಹೊರ ಹರಿವು ಬಿಡುಗಡೆ.

1:48 PM IST:

ಕಾರವಾರ (ಉತ್ತರಕನ್ನಡ): ಕಾರವಾರದಲ್ಲಿ ಸುರಿದ ಗಾಳಿ ಮಳೆಗೆ ಭಾನುವಾರ ಸಂತೆ ನೀರಿನಿಂದ ತುಂಬಿ ಹೋಗಿದೆ. ಗಾಳಿ- ಮಳೆಯ ಅಬ್ಬರಕ್ಕೆ ತರಕಾರಿ- ಹಣ್ಣುಹಂಪಲುಗಳನ್ನು ಬಿಟ್ಟು ಓಡಿದ ಬೀದಿ ಬದಿ ವ್ಯಾಪಾರಿಗಳು. ಹಾಕಿದ್ದ ಟಾರ್ಪಾಲುಗಳು ಬೀಳದಂತೆ ತಡೆಯಲು ಹರಸಾಹಸಪಟ್ಟ ವ್ಯಾಪಾರಿಗಳು. ಕೆಲವು ವ್ಯಾಪಾರಿಗಳಂದ ಟಾರ್ಪಾಲನ್ನೇ ಹೊದ್ದುಕೊಂಡು ಮಳೆಯಿಂದ ರಕ್ಷಣೆ ಪಡೆದು ಕೊಂಡರು. ಹಾವೇರಿ, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿಯಿಂದ ಬಂದು ಪ್ರತೀ ಭಾನುವಾರ ಕಾರವಾರದಲ್ಲಿ ವ್ಯಾಪಾರ ನಡೆಸುತ್ತಾರೆ ಜನರು. ಆದರೆ, ಮಳೆಯ ಆರ್ಭಟಕ್ಕೆ ತರಕಾರಿ, ಹಣ್ಣುಹಂಪಲು, ಮಳೆಯಿಂದ ರಕ್ಷಣೆಗೆ ಹಾಕಿದ್ದ ಟಾರ್ಪಾಲು ಎಲ್ಲವೂ ಅಸ್ತವ್ಯಸ್ತವಾಗಿವೆ. ಜನಜಂಗುಳಿಯೇ ಸೇರುತ್ತಿದ್ದ ಕಾರವಾರ ಮಾರುಕಟ್ಟೆಯಲ್ಲಿ ಮಳೆಯಿಂದಾಗಿ ಬೆರಳೆಣಿಕೆಯ ಜನ ಮಾತ್ರ ಕಾಣಿಸಿಕೊಂಡರು. ಮಳೆಯೇಟಿನಿಂದ ಗ್ರಾಹಕರ ಕೊರತೆಯಾಗಿ ನಷ್ಟ ಅನುಭವಿಸುತ್ತಿರುವ ವ್ಯಾಪಾರಿಗಳು.

12:32 PM IST:

ಚಿಕ್ಕಮಗಳೂರು : ಮಲೆನಾಡಿನಲ್ಲಿ ಮುಂದುವರೆದ ವರುಣನ ಆರ್ಭಟ. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಿರಂತರ ಭೂಕುಸಿತ. ಚಿಕ್ಕಮಗಳೂರು ಇನಾಂ ದತ್ತಾತ್ರೇಯ ಪೀಠ ರಸ್ತೆ ಸಂಚಾರ ಅಸ್ತವ್ಯಸ್ತ. ರಸ್ತೆಯ ಮುಕ್ಕಾಲು ಭಾಗಕ್ಕೆ ಕುಸಿದ ಗುಡ್ಡ, ಕಾರ್ ಬೈಕ್ ಹೊರತು ಪಡಿಸಿ ಭಾರಿ ವಾಹನಗಳ ಸಂಚಾರ ಬಂದ್. ಐಡಿ ಪೀಠಕ್ಕೆ ತೆರಳೋಕೆ ಆಗದೆ ನಿರಾಸೆಯಲ್ಲಿರೋ ಪ್ರವಾಸಿಗರು. ಐಡಿ ಪೀಠದ ರಸ್ತೆಗೆ ಮೂರು ನಾಲ್ಕು ಕಡೆ ರಸ್ತೆಗೆ ಉರುಳಿದ ಮಣ್ಣು, ಕಲ್ಲು, ಮರ. ಚರಂಡಿ ಇಲ್ಲದೇ ರಸ್ತೆಯ ಮೇಲೆ ಹರಿಯುತ್ತಿದೆ ನೀರು.  ಪ್ರವಾಸಿಗರ ವಾಹನಗಳಿಂದಲೇ ಟ್ರಾಫಿಕ್ ಜಾಮ್ ಆಗುತ್ತಿದ್ದ ರಸ್ತೆಯಲ್ಲಿ ಮಳೆ‌ ನೀರು. ರಸ್ತೆಯಲ್ಲಿ ಬಿದ್ದಿರುವ ಕಲ್ಲು, ಮಣ್ಣಿನ ರಾಶಿ ನೋಡಿ ಭೀತಿಗೊಳಗಾದ ಪ್ರವಾಸಿಗರು.  ಪ್ರವಾಸವನ್ನು ಮಟಕುಗೊಳಿಸಿ ಊರಿಗೆ ತೆರಳಿದ ಪ್ರವಾಸಿಗರು. ದತ್ತಪೀಠ ಕ್ಕೆ ತೆರಳೋ ಸರ್ಪಹಾದಿಯಲ್ಲೂ ಭೂ ಕುಸಿತ. ಗಿರಿಶ್ರೇಣಿಯಲ್ಲಿ ಇನ್ನಷ್ಟು ಕಡೆ  ಕುಸಿಯೋ ಆತಂಕ.

12:32 PM IST:

ಚಿಕ್ಕಮಗಳೂರು : ಮಲೆನಾಡಿನಲ್ಲಿ ಮುಂದುವರೆದ ವರುಣನ ಆರ್ಭಟ. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಿರಂತರ ಭೂಕುಸಿತ. ಚಿಕ್ಕಮಗಳೂರು ಇನಾಂ ದತ್ತಾತ್ರೇಯ ಪೀಠ ರಸ್ತೆ ಸಂಚಾರ ಅಸ್ತವ್ಯಸ್ತ. ರಸ್ತೆಯ ಮುಕ್ಕಾಲು ಭಾಗಕ್ಕೆ ಕುಸಿದ ಗುಡ್ಡ, ಕಾರ್ ಬೈಕ್ ಹೊರತು ಪಡಿಸಿ ಭಾರಿ ವಾಹನಗಳ ಸಂಚಾರ ಬಂದ್. ಐಡಿ ಪೀಠಕ್ಕೆ ತೆರಳೋಕೆ ಆಗದೆ ನಿರಾಸೆಯಲ್ಲಿರೋ ಪ್ರವಾಸಿಗರು. ಐಡಿ ಪೀಠದ ರಸ್ತೆಗೆ ಮೂರು ನಾಲ್ಕು ಕಡೆ ರಸ್ತೆಗೆ ಉರುಳಿದ ಮಣ್ಣು, ಕಲ್ಲು, ಮರ. ಚರಂಡಿ ಇಲ್ಲದೇ ರಸ್ತೆಯ ಮೇಲೆ ಹರಿಯುತ್ತಿದೆ ನೀರು.  ಪ್ರವಾಸಿಗರ ವಾಹನಗಳಿಂದಲೇ ಟ್ರಾಫಿಕ್ ಜಾಮ್ ಆಗುತ್ತಿದ್ದ ರಸ್ತೆಯಲ್ಲಿ ಮಳೆ‌ ನೀರು. ರಸ್ತೆಯಲ್ಲಿ ಬಿದ್ದಿರುವ ಕಲ್ಲು, ಮಣ್ಣಿನ ರಾಶಿ ನೋಡಿ ಭೀತಿಗೊಳಗಾದ ಪ್ರವಾಸಿಗರು.  ಪ್ರವಾಸವನ್ನು ಮಟಕುಗೊಳಿಸಿ ಊರಿಗೆ ತೆರಳಿದ ಪ್ರವಾಸಿಗರು. ದತ್ತಪೀಠ ಕ್ಕೆ ತೆರಳೋ ಸರ್ಪಹಾದಿಯಲ್ಲೂ ಭೂ ಕುಸಿತ. ಗಿರಿಶ್ರೇಣಿಯಲ್ಲಿ ಇನ್ನಷ್ಟು ಕಡೆ  ಕುಸಿಯೋ ಆತಂಕ.

12:23 PM IST:

ಉಡುಪಿ: ಕಳೆದೊಂದು ವಾರದಿಂದ ಉಡುಪಿಯಲ್ಲಿ ಸುರಿಯುತ್ತಿದೆ ಭಾರಿ ಮಳೆ. ಮಳೆಯಿಂದ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಗಳು. ನದಿ ತೀರದ ದ್ವೀಪ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಆತಂಕ. ಸದ್ಯ ಮನೆಯ ಆವರಣವನ್ನು ತಲುಪಿರುವ ಮಳೆ ನೀರು. ಮಳೆ ಮುಂದುವರಿದರೆ ಮನೆಯೊಳಗೆ ನೀರು ನುಗ್ಗುವ ಸಾಧ್ಯತೆ. ಸುರಕ್ಷತಾ ದೃಷ್ಟಿಯಿಂದ ಜಾನುವಾರುಗಳನ್ನು ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. ಅಪಾಯ ರೀತಿಯಲ್ಲಿ ಜಾನುವಾರುಗಳ ಜೊತೆಗೆ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ತೆಕ್ಕಟೆಯ ಕುದ್ರುಬೈಲು ದ್ವೀಪದ ನಿವಾಸಿಗಳು.

12:18 PM IST:

ಶಿವಮೊಗ್ಗ ಜಿಲ್ಲೆಯನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳೊಂದಿಗೆ ಬೆಸೆಯುವ ಆಗುಂಬೆ ಘಾಟಿಯಲ್ಲಿ ಗುಡ್ಡು ಕುಸಿತವಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ  ಮಳೆಯಿಂದಾಗಿ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದಿದೆ. ಭಾರಿ ಪ್ರಮಾಣದ ಮಣ್ಣು ಮತ್ತು ಮರ ರಸ್ತೆಗೆ ಬಿದ್ದಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ. ಗುಡ್ಡ ಕುಸಿತವಾಗಿರುವುದರಿಂದ ಉಡುಪಿ ಕಡೆಯಿಂದ ಬರುವ ವಾಹನಗಳನ್ನು ಸೋಮೇಶ್ವರ ಚೆಕ್ ಪೋಸ್ಟ್ ಬಳಿ ಹಾಗು ಶಿವಮೊಗ್ಗ ಕಡೆಯಿಂದ ಹೋಗುವ ವಾಹನಗಳನ್ನು ಆಗುಂಬೆ ಚೆಕ್‌ಪೋಸ್ಟ್​ ಹತ್ತಿರ ತಡೆಯಲಾಗುತ್ತಿದೆ. ಈಗಾಗಲೇ ಶಿವಮೊಗ್ಗ-ಉಡುಪಿ ಎರಡೂ ಕಡೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸಿಬ್ಬಂದಿಯ ಮೂಲಕ ಮಣ್ಣು ತೆರವು ಮಾಡುವ ಕಾರ್ಯ ನಡೆಸುತ್ತಿದ್ದಾರೆ.
 
11:37 AM IST:

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮುಂದುವರೆದ ಮಳೆ ಅಬ್ಬರ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ರಸ್ತೆಗೆ ಉರುಳುತ್ತಿರುವ ಮರ, ಮಣ್ಣು, ಬಂಡೆ. ಕವಿಕಲ್ ಗಂಡಿಯಿಂದ ಕೊಳಗಾಮೆ ರಸ್ತೆಯಲ್ಲಿ ಭಾರೀ ಭೂಕುಸಿತ. ಗುಡ್ಡ ಜರಿದು ರಸ್ತೆಗೆ ಬಿದ್ದ ಮಣ್ಣು, ಕಲ್ಲು,  ಮರ. ರಸ್ತೆ ಸಂಚಾರ ಸಂಪೂರ್ಣ ಬಂದ್. ಕೊಳೆಗಾಮೆ ಮುತ್ತೋಡಿ ಸಂಪರ್ಕ ಕಲ್ಪಿಸುವ ಗಿರಿ ಭಾಗದ ರಸ್ತೆ. ಹಲವು ಗ್ರಾಮಗಳ ಸಂಪರ್ಕ ಕಡಿತ. ತೋಟದ ಕೆಲಸಕ್ಕೆ ತೆರಳಿದ ಕಾರ್ಮಿಕರ ಪರದಾಟ. ರಸ್ತೆಗೆ ಬಿದ್ದಿರುವ ಮಣ್ಣು, ಬಂಡೆ, ಮರ ನೋಡಿ ಆತಂಕಕ್ಕೆ ಒಳಾಗದ ಕಾರ್ಮಿಕರು. 
ರಸ್ತೆಯಲ್ಲಿ ಬಿದ್ದಿರುವ ಮಣ್ಣು ಕಲ್ಲು ಮರ ತೆರವುಗೊಳಿಸುವಲ್ಲಿ ನಿರತರಾಗಿರುವ ಕಾರ್ಮಿಕರು. ಚಿಕ್ಕಮಗಳೂರು ತಾಲೂಕಿನ ಕೊಳಗಾಮೆ ರಸ್ತೆ.

11:24 AM IST:

ವಿಜಯಪುರ: ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ನೀರಿನ ಮಟ್ಟ. 
ಗರಿಷ್ಠ ಮಟ್ಟ: 519.60 ಮೀಟರ್.
ಇಂದಿನ ಮಟ್ಟ: 516.37 ಮೀಟರ್
ಒಳಹರಿವು: 78149 ಕ್ಯೂಸೆಕ್.
ಹೊರಹರಿವು: 451 ಕ್ಯೂಸೆಕ್.
ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ.
ಇಂದಿನ ನೀರಿನ ಸಂಗ್ರಹ: 77.032 ಟಿಎಂಸಿ.

11:15 AM IST:

ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಮಳೆ ಅವಾಂತರ. ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಗುಡ್ಡ ಕುಸಿತ. ಸಾಗರ ತಾಲೂಕಿನ ಅಡಗಳಲೆ ಗ್ರಾಮದಲ್ಲಿಯೂ ಗುಡ್ಡ ಕುಸಿತ. ಸಾಗರ ತಾಲೂಕಿನ ಸಂಕಣ್ಣ ಶಾನುಭೋಗ್ ಗ್ರಾ.ಪಂ ವ್ಯಾಪ್ತಿಯ ಅಡಗಳಲೆ ಗ್ರಾಮ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಡಗಳಲೆ ಗ್ರಾಮದ ಸುಧಾ ಸಂತೋಷ್, ಜಿನದತ್ತ, ಮಂಜಮ್ಮ ಅವರ ತೋಟ, ಗದ್ದೆಯ ಬಳಿ ಕುಸಿದ ಗುಡ್ಡ. ಗುಡ್ಡ ಕುಸಿತದಿಂದ 10ಕ್ಕೂ ಹೆಚ್ಚು ಎಕರೆ ಅಡಿಕೆ ತೋಟ ಹಾಗೂ ಗದ್ದೆ ಸಂಪೂರ್ಣ ಮಣ್ಣುಪಾಲು. ಗದ್ದೆ, ತೋಟದಲ್ಲಿ ಕೊಚ್ಚಿಕೊಂಡು ಹೋಗಿ ನಿಂತಿರುವ ಗುಡ್ಡದ ಮಣ್ಣು. ಗುಡ್ಡಕುಸಿತದಿಂದ ತೋಟ, ಗದ್ದೆಯ ಮೇಲೆ ಹರಿದು ಹೋಗುತ್ತಿರುವ ಹಳ್ಳದ ನೀರು. ಗುಡ್ಡ ಕುಸಿತದಿಂದ ಮೂಲ ಸ್ವರೂಪವನ್ನೇ ಕಳೆದುಕೊಂಡ ಕೃಷಿ ಭೂಮಿ. ಮಳೆ ಮುಂದುವರಿದರೇ ಜಿಲ್ಲೆಯಲ್ಲಿ ಮತ್ತಷ್ಟು ಅವಘಡಗಳು ನಡೆಯುವ ಸಾಧ್ಯತೆ. ಕಳೆದ 3 ವರ್ಷದಿಂದ ಜಿಲ್ಲೆಯ ವಿವಿಧ ಭಾಗದಲ್ಲಿ ಉಂಟಾಗುತ್ತಿರುವ ಗುಡ್ಡ ಕುಸಿತ. ಕಳೆದ ವರ್ಷ ತೀರ್ಥಹಳ್ಳಿಯ ಹೆಗಲತ್ತಿ, ಸಾಗರದ ಆರೋಡಿ ಬಳಿಯೂ ಸಹ ಗುಡ್ಡ ಕುಸಿತ ಉಂಟಾಗಿತ್ತು.

10:31 AM IST:

ಕೊಡಗು: ಮಳೆಯ ನಡುವೆ ಮತ್ತೆ ಕಂಪಿಸಿದ ಭೂಮಿ. ಗಡಿ ಗ್ರಾಮ‌ ಚೆಂಬು ಸುತ್ತ-ಮುತ್ತ ಕಂಪನದ ಅನುಭವ. ಬೆಳಗ್ಗೆ 6:24ರ ಸಮಯದಲ್ಲಿ ಕಂಪನದ ಅನುಭವ. ನಿನ್ನೆ ರಾತ್ರಿ ಭೂಮಿಯಿಂದ ಜೋರಾದ ಶಬ್ದ ಕೇಳಿಬಂದಿತ್ತು. ಇಂದು ಬೆಳಗ್ಗೆ ಶಬ್ದದೊಂದಿಗೆ ಭೂಕಂಪನದ ಅನುಭವ. ಸರಣಿ ಭೂಕಂಪವಾಗಿದ್ದ ಗ್ರಾಮಗಳಲ್ಲಿ ಮತ್ತೆ ಆತಂಕ. ಒಂದೆಡೆ ವ್ಯಾಪಕ ಮಳೆ, ಮತ್ತೊಂದೆಡೆ ಭೂಕಂಪನದ ಆತಂಕ.

10:04 AM IST:

ಮಂಗಳೂರು: ಉಕ್ಕಿಹರಿಯುವ ಹೊಳೆಗೆ ಬಿದ್ದ ಕಾರು.  ಸಿಸಿಟಿವಿಯಲ್ಲಿ ಅವಘಡದ ದೃಶ್ಯ ಸೆರೆ. ಮಧ್ಯರಾತ್ರಿ ಭಾರೀ ವೇಗವಾಗಿ ಬಂದು ಉಕ್ಕಿಹರಿಯುವ ಹೊಳೆಗೆ ಬಿದ್ದ ಕಾರು. ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಮಧ್ಯರಾತ್ರಿ 12 ಗಂಟೆಗೆ ಘಟನೆ. ಅಪಘಾತದ ವೇಗಕ್ಕೆ ಸೇತುವೆಯ ತಡೆಬೇಲಿ ಜಖಂ. ಮೂರು ಕಂಬಗಳು ಮುರಿದು ಕಬ್ಬಿಣ ನೇತಾಡುತ್ತಿದೆ. ಕಾರು ಮತ್ತು ಕಾರಿನಲ್ಲಿದ್ದವರು ನಾಪತ್ತೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿರೋ ಶಂಕೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕಾಣಿಯೂರಿನಲ್ಲಿ ಅವಘಡ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌.

10:03 AM IST:

ಹಾಸನ ಜಿಲ್ಲೆಯಲ್ಲಿ ಸುರಿಯುತ್ತಿದೆ ಧಾರಾಕಾರ ಮಳೆ. ಕಳೆದ ಒಂದು ವಾರದಿಂದ‌ ನಿರಂತರ ಮಳೆ. ಭಾರಿ ಮಳೆಗೆ ಹಲವು ಮನೆಗಳು ಕುಸಿತ, ಕೆಲವು ಮನೆಗಳಿಗೆ ಭಾಗಶಃ ಹಾನಿ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ, ರಾಮನಾಥಪುರ ಹೋಬಳಿಯಲ್ಲಿ ಹದಿನೈದು ಮನೆಗಳಿಗೆ ಹಾನಿ. ಮರವಳಲು, ಮಲ್ಲಿರಾಜಪಟ್ಟಣ ಗ್ರಾಮಗಳ ಮನೆಗಳಿಗೆ ಭಾಗಶಃ ಹಾನಿ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತರ ಒತ್ತಾಯ. ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಸಿ.ಸ್ವಾಮಿ ಭೇಟಿ, ಪರಿಶೀಲನೆ.

10:01 AM IST:

ಕೊಡಗು: ಕೊಡಗು ದಕ್ಷಿಣಕನ್ನಡ ಗಡಿಯಲ್ಲಿ ಭಾರೀ ಮಳೆ ಹಿ‌ನ್ನಲೆಯಲ್ಲಿ ಕೊಯನಾಡು ಬಳಿಯಲ್ಲಿ ಉಕ್ಕಿ ಹರಿದ ಪಯಸ್ವಿನಿ ನದಿ. ಕೊಯನಾಡು ಗ್ರಾಮದ ನಾಲ್ಕು ಮನೆಗಳಿಗೆ ನುಗ್ಗಿದ ನೀರು. ಕಿಂಡಿ ಅಣೆಕಟ್ಟು ಬಳಿ ಮರ ಬ್ಲಾಕ್ ಆಗಿ ಮನೆಗಳಿಗೆ ನೀರು ನುಗ್ಗಿದ್ದು, ಸಂಪೂರ್ಣ ಜಲಾವೃತವಾಗಿವೆ  ಗ್ರಾಮದ 4 ಮನೆಗಳು. ಮನೆಗಳಲ್ಲಿ ಇದ್ದವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ. ಸ್ಥಳಕ್ಕೆ ಅಧಿಕಾರಿಗಳು, ರಕ್ಷಣಾ ತಂಡದ ಸಿಬ್ಬಂದಿ ದೌಡು.

10:00 AM IST:

ಚಿಕ್ಕೋಡಿ: ಮುಂದುವರೆದ ಮಹಾ ಮಳೆ 6 ಸೇತುವೆಗಳು ಜಲಾವೃತ. ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ 6 ಸೇತುವೆಗಳು ಜಲಾವೃತ. ಕಾರದಗಾ- ಬೋಜ,ಭೋಜವಾಡಿ- ಕುನ್ನೂರ, ಜತ್ರಾಟ- ಭೀವಶಿ,ಅಕ್ಕೋಳ ಸಿದ್ನಾಳ, ಮಲಿಕವಾಡ- ದತವಾಡ,ಕಲ್ಲೋಳ- ಯಡೂರ ಸೇತುವೆಗಳು ಜಲಾವೃತ. ವೇದಗಂಗಾ, ದೂಧಗಂಗಾ, ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳು, ಈಗಾಗಲೇ ಮೈದುಂಬಿ ಹರಿಯುತ್ತಿರುವ ಕೃಷ್ಣಾ ಹಾಗೂ ಉಪನದಿಗಳು. ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದರೆ ಇನ್ನು ಹೆಚ್ಚಿನ ನೀರು ಬರುವ ಸಾಧ್ಯತೆ,

9:58 AM IST: