Karnataka News live updates: ಚಿಂತನ ಮಂಥನ ಸಭೆ ನಡುವೆ ಪ್ರವಾಹ ಪೀಡಿತ ಜಿಲ್ಲೆಗಳ ಸಭೆ

ಇಂದು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಬಂದ್? ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದ್ದಕ್ಕೆ  ವಿದ್ಯಾರ್ಥಿಗಳ ಆಕ್ರೋಶ. ಇಂದು ತರಗತಿ ಬಹಿಷ್ಕರಿಸಿ ಬಂದ್ ಗೆ ಮುಂದಾಗಿದ್ದ ವಿದ್ಯಾರ್ಥಿನಿಯರು. NSUI ವಿದ್ಯಾರ್ಥಿ ಸಂಘಟನೆಯಿಂದ ವಿದ್ಯಾರ್ಥಿನಿಯರಿಂದ ಬಂದ್‌ಗೆ ಕರೆ. ಆದ್ರೆ ವಿದ್ಯಾರ್ಥಿನಿಯರಿಗೆ ಬೆದರಿಸಿ ತರಗತಿಗೆ ಹಾಜರಾಗುವಂತೆ ಒತ್ತಡ ಆರೋಪ. ಒತ್ತಡ ಹಾಕಿ ತರಗತಿಗೆ ಹಾಜರಾಗುವಂತೆ ಹೇಳಿದ್ದಾರೆಂದು ವಿದ್ಯಾರ್ಥಿನಿಯರ ಆರೋಪ. ಪ್ರತಿಭಟನೆಯಲ್ಲಿ ಭಾಗಿಯಾದ್ರೆ ಇಂಟರ್ನಲ್ಸ್ ಕಡಿತಗೊಳಿಸೊ ಬೆದರಿಕೆ. ಕಳೆದ 2 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿನಿಯರು. ಬಿಕಾಂ, ಬಿಬಿಎ ಹಾಗೂ ಬಿಎ ವಿದ್ಯಾರ್ಥಿನಿಯರಿಂದ ಶುಲ್ಕ ಕಡಿತಕ್ಕೆ ಆಗ್ರಹ. ಏಕಾಏಕಿ 5 ಸಾವಿರದಿಂದ 13 ಸಾವಿರಕ್ಕೆ ಶುಲ್ಕ ಏರಿಸಿದ ಆಡಳಿತ ಮಂಡಳಿ.

3:26 PM

ಚಿಂತನ ಮಂಥನ ಸಭೆಯ ಬ್ರೇಕ್ ಟೈಮ್ ನಲ್ಲಿ ಸಿಎಂ ರಿಂದ ಪ್ರವಾಹದ ಸಭೆ

ಅತಿವೃಷ್ಠಿಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಡಳಿತಗಳ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ಆರಂಭವಾಗಿದೆ. ದೇವನಹಳ್ಳಿ ಸಮೀಪದ ರೆಸಾರ್ಟ್‌ನಿಂದಲೇ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿರುವ ಸಿಎಂ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಬಳ್ಳಾಪುರ, ಹಾಸನ, ಬೀದರ, ಬೆಳಗಾವಿ, ಕಲಬುರಗಿ, ಮೈಸೂರು, ಹಾವೇರಿ, ಧಾರವಾಡ, ದಾವಣಗೆರೆ, ಯಾದಗಿರಿ, ಬಾಗಲಕೋಟ, ವಿಜಯಪುರ, ರಾಯಚೂರು, ವಿಜಯನಗರ, ಚಾಮರಾಜನಗರ, ಮಂಡ್ಯ, ಬಳ್ಳಾರಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ, ಸಿಇಒ, ಎಸ್ಪಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ. ಸಭೆಯಲ್ಲಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ ಮತ್ತು ಹಾನಿಯ ಬಗ್ಗೆ ಮಾಹಿತಿ ಪಡೆಯುತ್ತಿರುವ ಸಿಎಂ. ಸಂಬಂಧಿಸಿದ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ. ಮಳೆ ಹಾನಿ ಪರಿಹಾರ ಕಾರ್ಯಗಳ ಬಗ್ಗೆ ಸಿಎಂ ಸಮಾಲೋಚನೆ ನಡೆಸುತ್ತಿದ್ದಾರೆ.

3:02 PM

ಉತ್ತರಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಬ್ಬರಿಸಿದ ಮಳೆ

ಕಾರವಾರ (ಉತ್ತರಕನ್ನಡ): ಉತ್ತರಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಬ್ಬರಿಸಿದ ಮಳೆ. ಶಿರಸಿ, ಸಿದ್ದಾಪುರ ಭಾಗದಲ್ಲಿ ಭಾರೀ ಮಳೆ. ವರದಾ ನದಿ ಪ್ರವಾಹದಿಂದ  ಅಡಿಕೆ, ಅನಾನಸ್ ತೋಟ, ಭತ್ತದ ಗದ್ದೆಗೆ ನುಗ್ಗಿದ ನದಿ ನೀರು. ಶಿರಸಿ ತಾಲೂಕಿನ ಬನವಾಸಿಯ ಬಾಸಿ ಗ್ರಾಮಪಂಚಾಯತ್ ಮೊಗಳ್ಳಿ ಗ್ರಾಮದಲ್ಲಿ ವರದಾ ನದಿಯಿಂದ ಪ್ರವಾಹ. 400 ಎಕರೆಗೂ ಹೆಚ್ಚು ಪ್ರದೇಶಕ್ಕೆ ನುಗ್ಗಿದ ವರದಾ ನದಿ ನೀರು. ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದ್ದರಿಂದ ತುಂಬಿ ಹರಿದ ವರದಾ. 

ನಿರಂತರ ಗಾಳಿ, ಮಳೆಗೆ ಉರುಳಿ ಬಿದ್ದ ಬೃಹತ್ ಆಲದ ಮರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೇಅಂಗಡಿ ಗ್ರಾಮದ ಬಳಿ ಘಟನೆ. ಒಂದು ಗಂಟೆಗೂ ಅಧಿಕ ಕಾಲ 
ರಸ್ತೆ ಸಂಚಾರ ಬಂದ್. ಸಾಲ್ಕೋಡು, ಕೆರೆಕೋಣ, ದರ್ಬೆಜಡ್ಡಿ, ಕಾನಕ್ಕಿ ಹೋಗುವ ರಸ್ತೆ ಸಂಚಾರ ಅಸ್ತವ್ಯಸ್ತ. ಆಲದ ಮರ ಧರೆಗೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೂ ಹಾನಿ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ, ಸ್ಥಳೀಯ ಅಧಿಕಾರಿಗಳು ಬೇಟಿ ಪರಿಶೀಲನೆ. ಸ್ಥಳೀಯರ ಸಹಾಯದಿಂದ ಆಲದ ಮರ ತೆರವು.

2:49 PM

ರಾಜ್ಯದಲ್ಲಿ ಮಳೆ: ಅಧಿಕಾರಿಗಳೊಂದಿಗೆ ಸಿಎಂ ಸಭೆ

ಸಿಎಂ ರಿಂದ ಪ್ರವಾಹ ಪೀಡಿತ ಜಿಲ್ಲಾಡಳಿತಗಳ ಜೊತೆ ಸಭೆ ಹಿನ್ನೆಲೆ. ಸಭೆಯಲ್ಲಿ ಸಿಎಂಗೆ ಅಧಿಕಾರಿಗಳಿಂದ ಮಾಹಿತಿ. ಉತ್ತರ ಕನ್ನಡ ಮತ್ತೆ ಕೊಡಗಿನಲ್ಲಿ ಯೆಲ್ಲೋ ಅಲರ್ಟ್ ಆಗಿದೆ. ಈ ಎರಡು ಜಿಲ್ಲೆಗಳನ್ನು ಯೆಲ್ಲೋ ಅಲರ್ಟ್ ಆಗಿ ಮುಂದುವರಿಬೇಕಾಗುತ್ತದೆ. ತುಂಗಭದ್ರಾ ಡ್ಯಾಮ್ ನಲ್ಲಿ ಒಳ ಹರಿವು ಜಾಸ್ತಿ ಇದೆ. ಭದ್ರ ಡ್ಯಾಮ್ ಬಿಂದ 45 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಹೊರ ಹರಿವು ಜಾಸ್ತಿಯಿಂದ ಭದ್ರಾವತಿ ಟೌನ್‌ ನಲ್ಲಿ ನಾಲ್ಕು ಕಡೆ ನೀರು ನುಗ್ಗಿದೆ ಎಂದು ಮಾಹಿತಿ. ಈ  ವೇಳೆ ಸಿಎಂ ಹೇಳಿಕೆ.

ಮಳೆಯಿಂದ ಡ್ಯಾಮೇಜ್ ಆದ ಮನೆಗಳನ್ನು ಗುರುತಿಸಿ ಪಟ್ಟಿ ಮಾಡಿ, ಹಾನಿಯಾಗಿರುವ ಮನೆಗಳಿಗೆ ಪರಿಹಾರವಾಗಿ 10 ಸಾವಿರ ಸ್ಥಳದಲ್ಲಿ ವಿತರಿಸಿ. ಲ್ಲೆಯ ಎಲ್ಲ ಕಂದಾಯ ಅಧಿಕಾರಿಗಳು ನೆರೆ ಪೀಡಿತ ಸ್ಥಳದಲ್ಲೇ ಇರಬೇಕು. ಪರಿಹಾರ ವಿತರಣೆ ಹಾಗು ಪುನರ್ವಸತಿ ಕಾರ್ಯಾಚರಣೆ ಯಲ್ಲಿ ಯಾವುದೇ ಚ್ಯುತಿ ಬರಬಾರದು. ವೀಡಿಯೋ ಕಾನ್ಪೆರೆನ್ಸ್ ನಲ್ಲಿ ಅಧಿಕಾರಿಗಳಿಗೆ ಸಿಎಂ ಸೂಚನೆ.

2:12 PM

ಸರಕಾರಿ ಕಚೇರಿಯಲ್ಲಿ ಫೋಟೋ ತೆಗೆಯುವಂತಿಲ್ಲ: ಸರಕಾರದ ಹೊಸ ಆದೇಶ

ಸರ್ಕಾರಿ ಕಚೇರಿಯ ಗಳಲ್ಲಿ ಇನ್ಮುಂದೆ ಪೋಟೋ ಮತ್ತು ವಿಡಿಯೋ ಚಿತ್ರಿಕರಣ ಮಾಡುವಂತಿಲ್ಲ.ಖಾಸಗಿ ವ್ಯಕ್ತಿಗಳು ಅನುಮತಿ ಇಲ್ಲದೇ ಚಿತ್ರಿಕರಣ ಮಾಡಬಾರದು. ಸರ್ಕಾರಿ ಕಚೇರಿಗಳ ವೇಳೆಯಲ್ಲಿ ಪೋಟೋ ಮತ್ತು ವಿಡಿಯೋ ಚಿತ್ರಿಕರಣ ಮಾಡಬಾರದು..ಸರ್ಕಾರದ ಅಧಿಕೃತ ಆದೇಶಕ್ಕೆ ಎಲ್ಲೆಡೆಯಿಂದ ವ್ಯಕ್ತವಾಗುತ್ತಿದೆ ವಿರೋಧ. 

2:06 PM

ಸಿದ್ದರಾಯಮಯ್ಯನವರ ಅತಿ ಓಲೈಕೆಯಿಂದ ಮುಸ್ಲಿಂ ಸಮುದಾಯಕ್ಕೆ ಬದುಕಲು ಕಷ್ಟವಾಗ್ತಿದೆ: ರಹೀಂ ಉಚ್ಚಿಲ

ಬಾಗಲಕೋಟೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದ ವೇಳೆ ಹೈಡ್ರಾಮಾ ನಡೆದಿದೆ. ಇತ್ತೀಚಿಗೆ,ಕೆರೂರ ಗುಂಪು ಘರ್ಷಣೆ ಹಿಂದೂ ಮುಸ್ಲಿಂ ಗುಂಪು ಘಷ೯ಣೆಯಲ್ಲಿ ಗಾಯಗೊಂಡವರಿಗೆ ಪರಿಹಾರ ಧನ ನೀಡಲು ಸಿದ್ದರಾಮಯ್ಯ ಮುಂದಾದಾಗ ಆ ಹಣವನ್ನು  ಮಹಿಳೆಯೊಬ್ಬಳು ವಾಪಸ್ ನೀಡಿದ್ದಾರೆ. ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಮತ ಕೇಳಲು ಬರುತ್ತಾರೆ.ನಂತರ ಯಾವುದೇ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ.ಹಿಂದೂ ಮುಸ್ಲಿಂ ಎನ್ನದೇ ಎಲ್ಲರಿಗೂ ಸಮಾನರಾಗಿ ಕಾಣಬೇಕು.ಆದರೆ ನಾವು ಏನು ತಪ್ಪು ಮಾಡದೆ ಇದ್ದರೂ,ವಿನಾಕಾರಣ ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮುಸ್ಲಿಂ ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು.

1:01 PM

ಬಿಜೆಪಿ ಚಿಂತನ ಸಭೆಗೆ ಎಂಬಿಪಿ ಗರಂ

ರಾಜ್ಯದಲ್ಲಿ ಭಾರೀ ಮಳೆ ಹಾನಿಯಾಗಿದೆ, ಈ ವೇಳೆ ಸಚಿವರ ಚಿಂತನ ಮಂಥನ ಬೈಠಕ್ ನಡೆಯುತ್ತಿರುವ ವಿಚಾರಕ್ಕೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಮಳೆ ಹಾನಿ‌ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಮಾತನಾಡಿದ್ದು, ಪ್ರವಾಹದ ಬಗ್ಗೆ ಚಿಂತನ ಮಂಥನ ಮಾಡಬೇಕಿತ್ತು. ಮುಂದೆ ಚುನಾವಣೆಲಿ ಏನಾಗುತ್ತದೆ ಅನ್ನೋ ಚಿಂತೆ ಅವರಿಗೆ ಹೆಚ್ಚಾಗಿದೆ ಎಂದಿದ್ದಾರೆ. ಆಂತರಿಕ ಸಮೀಕ್ಷೆಯಲ್ಲಿ ಏನೋ ವರದಿ ಬಂದಿರಬೇಕು ಅದಕ್ಕಾಗಿ ಈ ಸಭೆ ಮಾಡಲಾಗ್ತಿದೆ. ಪ್ರವಾಹವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಬಿಜೆಪಿಗೆ ಸೋಲಿನ ಭೀತಿ ಆರಂಭ ಆಗಿದೆ. ಹಾಗಾಗಿ ಚಿಂತನ ಮಂಥನ ಸಭೆ  ಮಾಡ್ತಾ ಇದ್ದಾರೆ. ಜನರ ಸಮಸ್ಯೆ ಬಿಜೆಪಿಗೆ ಬೇಕಿಲ್ಲ. ಈಗಾಗಲೇ ಬಿಜೆಪಿ ಸೋಲತ್ತೆ ಅಂತ ಆಂತರಿಕ ವರದಿ ಬಂದಿದೆ. ಅದಕ್ಕಾಗಿ ಗೆಲ್ಲುವುದರ ಬಗ್ಗೆ ಸಭೆ ಮಾಡುತ್ತಿದ್ದಾರೆ. ಆದ್ರೆ ಈಗ ಸಭೆ ಮಾಡಿ ಯಾವುದೇ ಪ್ರಯೋಜನ ಇಲ್ಲ. ಪ್ರವಾಹ ಪೀಡಿತ ಸ್ಥಳಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕಳೆದ ಬಾರಿ ಪ್ರವಾಹಕ್ಕೆ ಪರಿಹಾರ ಸಿಕ್ಕಿಲ್ಲ ಎಂದು ಎಂಬಿ ಪಾಟೀಲ್ ಹೇಳಿದರು. 

12:55 PM

ಸಕಲೇಶಪುರದಲ್ಲಿ ಭಾರೀ ಮಳೆ

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆ. ಸಕಲೇಶಪುರ ಪಟ್ಟಣದ ಹೇಮಾವತಿ ನದಿ ದಂಡೆಯ ಹೊಳೆ ಮಲ್ಲೇಶ್ವರನಿಗೆ ಜಲ ದಿಗ್ಬಂಧನ. ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರೊ ಹೇಮಾವತಿ ನದಿ. ನೀರಲ್ಲಿ ಮುಳುಗಿದ ದೇಗುಲದ ಮೆಟ್ಟಿಲು. ಪ್ರವಾಹದ ನೀರಲ್ಲಿ ಸಂಪೂರ್ಣ ಮುಚ್ಚಿಹೋದ ಮೆಟ್ಟಿಲುಗಳು. ತುಂಬಿ ಹರಿಯುತ್ತಿರೊ ನದಿ ನೋಡಲು ದೇಗುಲದ ಬಳಿ ಬರ್ತಿರೋ ನೂರಾರು ಜನರು. ಸತತ ಎರಡು ವಾರಗಳಿಂದ ಸುರಿಯುತ್ತಿರೊ ಮಳೆಯಿಂದ ತುಂಬಿ ಹರಿಯುತ್ತಿರೋ ಹೇಮಾವತಿ ನದಿ. ನದಿಯ ಪ್ರವಾಹದಿಂದ ಜಲಾವೃತವಾದ ದೇಗುಲದ ಮೆಟ್ಟಿಲುಗಳು.

12:26 PM

ಬಿಜೆಪಿ ಚಿಂತನಾ ಸಭೆಯಲ್ಲಿ ರಮೇಶ್ ಜಾರಿಕಹೊಳಿ ಭಾಗಿ

ಕೆಲವು ವಿವಾದಗಳ ನಂತರ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದ ಗೋಕಾಕ್ ಬಿಜೆಪ್ ಶಾಸಕ ರಮೇಶ್ ಜಾರಕಿಹೊಳಿ ಇಂದು ನಡೆಯುತ್ತಿರುವ ಚಿಂತನಾ ಸಭೆಯಲ್ಲಿ ಭಾಗಿಯಾಗಿದ್ದಾರೆ. 
 
12:06 PM

ಖಾನಾಪುರದಲ್ಲಿ ನಿಲ್ಲದ ಮಳೆ: ಉಕ್ಕಿ ಹರಿಯುತ್ತಿರುವ ಹಾಲಾತ್ರಿ ಹಳ್ಳ

ಬೆಳಗಾವಿ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆ. ಧಾರಾಕಾರ ಮಳೆಯಿಂದ ಉಕ್ಕಿ ಹರಿಯುತ್ತಿರುವ ಹಾಲಾತ್ರಿ ಹಳ್ಳ. ಮಂತುರ್ಗಾ ಗ್ರಾಮದ ಬಳಿ ಸೇತುವೆ ಮುಳುಗಡೆ. ಸಿಂಧನೂರು - ಹೆಮ್ಮಡಗಾ ಅಂತರ್‌ರಾಜ್ಯ ಹೆದ್ದಾರಿ ಮೇಲೆ ಹರಿಯುತ್ತಿರುವ ನೀರು. ಖಾನಾಪುರ ಪಟ್ಟಣದಿಂದ 30 ಹಳ್ಳಿಗಳ ಸಂಪರ್ಕ ಕಟ್. ಜೀವಭಯದಲ್ಲೇ ಮುಳುಗಡೆಯಾದ ಸೇತುವೆ ಮೇಲೆ ಬೈಕ್ ಸವಾರರ ಸಂಚಾರ. ಪುಟ್ಟ ಪುಟ್ಟ  ಮಕ್ಕಳನ್ನು ಹೆಗಲ ಮೇಲೆ ಹೊತ್ತಿಕೊಂಡು ಬಂದ ವ್ಯಕ್ತಿ. ಕಣಕುಂಬಿ ಅರಣ್ಯ ವ್ಯಾಪ್ತಿಯಲ್ಲಿ 15.2 ಸೆಂಟಿಮೀಟರ್ ಮಳೆ.

10:28 AM

ಬಿಜೆಪಿ ಚಿಂತನ ಮಂಥನ ಸಭೆ ಆರಂಭ

ದೇವನಹಳ್ಳಿ ಸಮೀಪದ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ನಡೆಯುತ್ತಿರುವ ಚಿಂತನ ಮಂಥನ ಸಭೆ. ಆರ್‌ಎಸ್ಎಸ್ ಮುಖಂಡರಾದ ಮುಕುಂದ್, ತಿಪ್ಪೇಸ್ವಾಮಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ನೇತೃತ್ವದಲ್ಲಿ ಸಭೆ. ಸಿಎಂ ಬೊಮ್ಮಾಯಿ, ಸರ್ಕಾರದ ಸಚಿವರು, ಕೋರ್‌ಕಮಿಟಿ ಸದಸ್ಯರು, ಪಕ್ಷದ ಪದಾಧಿಕಾರಿಗಳು ಸೇರಿ ಸುಮಾರು 60 ಜನ ಭಾಗಿ. ಸರ್ಕಾರದ ವರ್ಚಸ್ಸು ಹೆಚ್ಚಿಸುವ ಬಗ್ಗೆ ಸಮಾಲೋಚನೆ. ಸರ್ಕಾರದ ಸಾಧನೆಗಳ ಪರಾಮರ್ಶೆ, ಸಚಿವರ ಮೌಲ್ಯಮಾಪನ ನಡೆಯಲಿದೆ. ನಂದಿ ಬೆಟ್ಟದ ಬಳಿ ಇರುವ ರೆಸಾರ್ಟ್ ನಲ್ಲಿ ಬಿಜೆಪಿ ಸಭೆ. ಸಭೆಯ ಸ್ಥಳದಲ್ಲಿ ಸಿಎಂ, ಸಚಿವರ ಗನ್‌ಮ್ಯಾನ್‌ಗಳಿಗಿಲ್ಲ ಪ್ರವೇಶ. ಬಿಜೆಪಿ ನಾಯಕರ ಹೊರತು ಪಡಿಸಿ ಬೇರೆ ಯಾರಿಗೂ ಇಲ್ಲ ಪ್ರವೇಶ. ನಾಯಕರನ್ನು ಬಿಟ್ಟು, ಹೊರ ಬಂದ ಗನ್‌ಮ್ಯಾನ್‌ಗಳು ಹಾಗೂ ಕಾರು ಚಾಲಕರು. ರೆಸಾರ್ಟ್ ಒಳಗೆ ಮಾಧ್ಯಮಗಳಿಗೆ ನಿರ್ಬಂಧ. ಬಿಜೆಪಿ ನಾಯಕರಿಂದ ರಹಸ್ಯ ರಣತಂತ್ರಗಾರಿಕೆ.

10:24 AM

ವಿಜಯಪುರ: ಸರಣಿ ಅಪಘಾತ, ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು

ವಿಜಯಪುರ: ಊರಲ್ಲಿ ಅಪಘಾತವಾಗಿ ಸಾವು ಹಿನ್ನೆಲೆ, ಗ್ರಾಮಸ್ಥರಿಂದ ವಿಶಿಷ್ಟ ಆಚರಣೆ. ಸರಣಿ ಸಾವಿಗೆ ಹೆದರಿದ ನಿವಾಸಿಗಳು. ವಿಜಯಪುರ ನಗರದ ಕಾಲೇಭಾಗ ಪ್ರದೇಶದಲ್ಲಿ ವಿಶಿಷ್ಟ ಆಚರಣೆ. ಕಾಲಲ್ಲಿ ಚಪ್ಪಲಿ ಹಾಕದೇ, ವಾಹನಗಳನ್ನು ಬಳಸದೆ, ಕೆಲಸಕ್ಕೂ ಹೋಗದೆ, ಊಟ ಮಾಡದೇ ವಾರ ಆಚರಣೆ. ಊರಿನ ಕೆಲ ಯುವಕರು ಅಪಘಾತದಲ್ಲಿ ನಿಧನ ಹೊಂದಿದ ಕಾರಣ ಈ ಆಚರಣೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಆರು ಮಂದಿ ನಿಧನರಾದ ಕಾರಣ ಆತಂಕದಲ್ಲಿದ್ದ ಜನರು. ಬಳಿಕ ದೇವರ ಮೊರೆ ಹೋದ ಜನರು. ಅವಘಡ ನಡೆಯದಂತೆ ತಡೆಯಲು ವಾರ ಆಚರಣೆ ಮಾಡಲು ಸೂಚನೆ ನೀಡಿದ ಪೂಜಾರಿಗಳು‌.ಅದರಂತೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಈ ಆಚರಣೆ. 500ಕ್ಕೂ ಅಧಿಕ ಮನೆಗಳಿರುವ ಕಾಲೇಭಾಗ ಪ್ರದೇಶ. ಕಟ್ಟಡ ನಿರ್ಮಾಣ ‌ಕೆಲಸ ಮಾಡಿ ಜೀವನ ನಡೆಸುವ ಕಾಲೇಭಾಗ ಪ್ರದೇಶದ ಬಹುತೇಕ ಜನರು. ಕಡ್ಡಾಯವಾಗಿ ಶುಕ್ರವಾರ ಹಾಗೂ ಮಂಗಳವಾರ ಕೆಲಸಕ್ಕೂ ಹೋಗದೆ ವಾರ ಆಚರಣೆ. ಈ ಆಚರಣೆಯಿಂದಾಗಿ ಗ್ರಾಮದಲ್ಲಿ ಅಪಘಾತ ಪ್ರಕರಣಗಳು ಕಡಿಮೆ ಆಗುತ್ತದೆ ಅನ್ನೋ ನಂಬಿಕೆ ಅಲ್ಲಿಯ ಜನರದ್ದು.

10:17 AM

ಈದ್ಗಾ ಮೈದಾನ ವಿವಾದ: ಚಾಮರಾಜನಗರ ಬಂದ್ ಯಶಸ್ವಿ

ಚಾಮರಾಜಪೇಟೆ ಬಂದ್ ಯಶಸ್ವಿಯಾಗಿ ನಡೆಯಿತು. ಜುಲೈ ೧೨ ಕ್ಕೆ ಕರೆ ಕೊಟ್ಟ ಚಾಮರಾಜಪೇಟೆ ಬಂದ್ ಗೆ ಸ್ಥಳೀಯರು, ಅಂಗಡಿ ಮಾಲೀಕರು ತಮ್ಮ ಸಂಪೂರ್ಣ ಬೆಂಬಲ ನೀಡಿದ್ರು. ಬಂದ್ ಗೆ ಸಹಕಾರ ಕೊಟ್ಟ ಎಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಚಾಮರಾಜಪೇಟೆ ಆಟದ ಮೈದಾನದವಾಗಿಯೇ ಇರುತ್ತದೆ. ಅದು ಬಿಬಿಎಂಪಿ ಆಟದ ಮೈದಾನ. ಇಲ್ಲಿ ಹಬ್ಬಗಳ ಆಚರಣೆಗೆ ಯಾರ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ. ಸ್ವಾತಂತ್ರ್ಯ ಬಂದು‌ 75 ವರ್ಷಗಳು ಕಳೆದಿವೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಾವು ರಾಷ್ಟ್ರ ಧ್ವಜ ಹಾರಿಸಲಿದ್ದೇವೆ. 
ಒಂದು ವೇಳೆ ರಾಷ್ಟ್ರ ಧ್ವಜ ಹಾರಿಸಲು ಅವಕಾಶ ಕೊಡದಿದ್ದರೆ ಇದು ದೇಶಕ್ಕೆ ಮಾಡಿದ ಅಪಮಾನ. ಆಗಸ್ಟ್ ೧೫ ರಂದು ರಾಷ್ಟ್ರ ಧ್ವಜ ಹಾರಿಸಲು ಅನುಮತಿ‌ ಕೊಡಲೇಬೇಕು. ಕನ್ನಡ ರಾಜ್ಯೋತ್ಸವ, ಅಂಬೇಡ್ಕರ್ ಜಯಂತಿ, ಗಣೇಶ ಉತ್ಸವ ಮಾಡಲು ಅವಕಾಶ ಕೋರಿ ಮನವಿ ಸಲ್ಲಿಸಲಾಗಿದೆ. ಇದು ಬಿಬಿಎಂಪಿ ಆಟದ ಮೈದಾನ, ಇದಕ್ಕೆ ಜಯಚಾಮರಾಜೇಂದ್ರ ಆಟದ ಮೈದಾನ ಹೆಸರಿಡಲು ನಾನು ಆಗ್ರಹಿಸಿದ್ದೇನೆ. ಇಲ್ಲಿ ದೇಶ ವಿರೋಧಿ ಚಟುವಟಿಕೆ ಯಾರು ಮಾಡುತ್ತಿಲ್ಲ. ಹೀಗಾಗಿ ನಮಗೂ ಹಬ್ಬದ ಆಚರಣೆಗೆ ಅವಕಾಶ ಕೊಡಬೇಕು. ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆ ಕಮಿಷನರ್ ಹೇಳಿದ್ದಾರೆ. ವಾರದೊಳಗೆ ತೀರ್ಮಾನ ಮಾಡುವ ಬಗ್ಗೆ ಕಮಿಷನರ್ ಭರವಸೆ ನೀಡಿದ್ದಾರೆ. ಅವಕಾಶ ಕೊಡದಿದ್ದರೂ ರಾಷ್ಟ್ರಧ್ವಜ ಹಾರಿಸಿಯೇ ತೀರುತ್ತೇವೆ. ಚಾಮರಾಜಪೇಟೆ ಆಟದ ಮೈದಾನ ಸರ್ಕಾರದ ಸ್ವತ್ತು. ವರ್ಷಕ್ಕೊಂದು ಸಲ ಮೈದಾನವನ್ನು ಅವರ ಪ್ರಾರ್ಥನೆಗೂ ಅವಕಾಶ ಕೊಡಿ, ಇದಕ್ಕೆ ನಮ್ಮ ಅಭ್ಯಂತರ ಇಲ್ಲವೆಂದ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್. 

10:02 AM

ದಾವಣಗೆರೆ: ತುಂಬಿ ಹರಿಯುತ್ತಿದ್ದಾಳೆ ತುಂಗಾ-ಭದ್ರಾ

ದಾವಣಗೆರೆ ಜಿಲ್ಲೆಯಲ್ಲಿ ಉಕ್ಕಿಹರಿಯುತ್ತಿರುವ ತುಂಗಾಭದ್ರಾ ನದಿ. ಹೊನ್ನಾಳಿ ಬಾಲ್ ರಾಜ್ ಘಾಟ್  ನ 22 ಮನೆಗಳಿಗೆ ನುಗ್ಗಿದ ನೀರು. ರಾತ್ರೋರಾತ್ರಿ ನಿವಾಸಿಗಳ ಸ್ಥಳಾಂತರ . ಶಾಸಕ ರೇಣುಕಾಚಾರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು. ನಮಗೆ ಪ್ರವಾಹ ಸಂಕಷ್ಟ ಅನುಭವಿಸಿ ಸಾಕಾಗಿದೆ. ಶಾಸಕರು ಸೈಟ್ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ನಮ್ಮ ಎದುರಿಗೆ ಬಂದು ಆ ಮಾತು ಹೇಳಲಿ ಎಂದು ವಾಪನ್ ಚಾಲೆಂಜ್ ಹಾಕಿದ ನಿವಾಸಿಗಳು. ಎಷ್ಟು ವರ್ಷ ಈ ಸಮಸ್ಯೆ ಅನುಭವಿಸಿದು ಎಂದು ಶಾಸಕರ ವಿರುದ್ಧ ಆಕ್ರೋಶ. ಕಾಳಜಿ ಕೇಂದ್ರದಲ್ಲಿ ಆಸರೆ ಪಡೆದಿರುವ ಪ್ರವಾಹ ಸಂತ್ರಸ್ಥರು. ಅನ್ನಭಾಗ್ಯ ಅಕ್ಕಿ ಅನ್ನಮಾಡಿ ಹಾಕಿ ಚೆನ್ನಾಗಿದಿಯಾ ಚೆನ್ನಾಗಿದಿಯಾ ಎಂದು ರೀಲು ಮಾಡುವ ಶಾಸಕರು . ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಟ್ಟಿಕೊಂಡು ವಾಸ ಮಾಡುವ ಶಾಸಕರು ನಮ್ಮ ಜೊತೆ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

9:58 AM

ಮೈಸೂರು: ಸಂಸದ ಪ್ರತಾಪ್‌ಸಿಂಹ v/s ಕಾಂಗ್ರೆಸ್ ನಾಯಕರ ನಡುವೆ ಕ್ರೆಡಿಟ್‌ ವಾರ್

ಮೈಸೂರು ಅಭಿವೃದ್ಧಿ ಕುರಿತಂತೆ ಸಂಸದ ಪ್ರತಾಪ್‌ಸಿಂಹ v/s ಕಾಂಗ್ರೆಸ್ ನಾಯಕರ ನಡುವೆ ಕ್ರೆಡಿಟ್‌ ವಾರ್ ಹಿನ್ನೆಲೆ. ಪ್ರತಾಪ್‌ಸಿಂಹಗೆ ಟಾಂಗ್ ಕೊಟ್ಟ ಸ್ವಪಕ್ಷೀಯ ಶಾಸಕ ಎಲ್.ನಾಗೇಂದ್ರ.
ನಾವು ಮಾಡಿದ ಕೆಲಸವನ್ನ ಜನರು ಗುರತಿಸಬೇಕು. ನಾನೇ ಮಾಡಿದ್ದು ಅಂತ ಯಾಕೆ‌ ಕ್ರೆಡಿಟ್‌ಗೆ ಇಳಿಯಬೇಕು? ಮೋದಿ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರು-ಮೈಸೂರು ಹೆದ್ದಾರಿ ಅಭಿವೃದ್ಧಿಗೆ ಹಣ ನೀಡಿದ್ದು. 2014ರಿಂದ ಕೇಂದ್ರದಲ್ಲಿ ಬಿಜೆಪಿ‌ ಸರ್ಕಾರವೇ ಅಧಿಕಾರದಲ್ಲಿರೋದು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಉಸ್ತುವಾರಿ ಸಚಿವರ ಬದಲಾವಣೆ ಸಿಎಂ ಪರಮಾಧಿಕಾರ. ಸ್ಥಳೀಯರು ಹೊರಗಿನವರು ಅಂತ ಏನಿಲ್ಲ. ಮೂಲ, ವಲಸಿಗ ಎಂಬುದೂ ಇಲ್ಲ. ಬೆಜೆಪಿ ನಂಬಿ ಬಂದ‌ ಎಲ್ಲರಿಗೂ ಪಕ್ಷ ಮಾತಿನಂತೆ ನಡೆದಿದೆ. ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಯಲ್ಲಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಹೊಸಬರಿಗೂ ಆದ್ಯತೆ ನೀಡಬೇಕು ಅಂತ ಸಿಎಂ ಬದಲಾವಣೆ ಮಾಡುತ್ತಿದ್ದಾರೆ‌. ಮೈಸೂರಿನಿಂದ‌ ನಾನು ಯಾರಿಗೂ ಶಿಫಾರಸು ಮಾಡಿಲ್ಲ. ಪಕ್ಷ ನಿಷ್ಠಾವಂತರನ್ನ ಗುರುತಿಸಿ ಶಿಫಾರಸು ಮಾಡುತ್ತೆ‌. ಚಾಮುಂಡಿ ಬೆಟ್ಟದಲ್ಲಿ ಶಾಸಕ ಎಲ್.ನಾಗೇಂದ್ರ ಹೇಳಿಕೆ.

9:56 AM

ಕಳಸದಲ್ಲಿ ಭೂ ಕುಸಿತ

ಚಿಕ್ಕಮಗಳೂರು: ಕಾಫಿನಾಡ ಮಲೆನಾಡಲ್ಲಿ ಮುಂದುವರಿದ ಮಳೆ ಆರ್ಭಟ. ಕಳಸ ತಾಲೂಕಿನ ಬಲಿಗೆ ಬಳಿ ಭೂಕುಸಿತ. ರಸ್ತೆಯತ್ತ ಬಂದು ಬೀಳುತ್ತಿರುವ ಬೃಹತ್ ಬಂಡೆಗಳು. ಹೊರನಾಡು-ಬಲಿಗೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ಭೂಕುಸಿತ. ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು

3:26 PM IST:

ಅತಿವೃಷ್ಠಿಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಡಳಿತಗಳ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ಆರಂಭವಾಗಿದೆ. ದೇವನಹಳ್ಳಿ ಸಮೀಪದ ರೆಸಾರ್ಟ್‌ನಿಂದಲೇ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿರುವ ಸಿಎಂ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಬಳ್ಳಾಪುರ, ಹಾಸನ, ಬೀದರ, ಬೆಳಗಾವಿ, ಕಲಬುರಗಿ, ಮೈಸೂರು, ಹಾವೇರಿ, ಧಾರವಾಡ, ದಾವಣಗೆರೆ, ಯಾದಗಿರಿ, ಬಾಗಲಕೋಟ, ವಿಜಯಪುರ, ರಾಯಚೂರು, ವಿಜಯನಗರ, ಚಾಮರಾಜನಗರ, ಮಂಡ್ಯ, ಬಳ್ಳಾರಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ, ಸಿಇಒ, ಎಸ್ಪಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ. ಸಭೆಯಲ್ಲಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ ಮತ್ತು ಹಾನಿಯ ಬಗ್ಗೆ ಮಾಹಿತಿ ಪಡೆಯುತ್ತಿರುವ ಸಿಎಂ. ಸಂಬಂಧಿಸಿದ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ. ಮಳೆ ಹಾನಿ ಪರಿಹಾರ ಕಾರ್ಯಗಳ ಬಗ್ಗೆ ಸಿಎಂ ಸಮಾಲೋಚನೆ ನಡೆಸುತ್ತಿದ್ದಾರೆ.

3:02 PM IST:

ಕಾರವಾರ (ಉತ್ತರಕನ್ನಡ): ಉತ್ತರಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಬ್ಬರಿಸಿದ ಮಳೆ. ಶಿರಸಿ, ಸಿದ್ದಾಪುರ ಭಾಗದಲ್ಲಿ ಭಾರೀ ಮಳೆ. ವರದಾ ನದಿ ಪ್ರವಾಹದಿಂದ  ಅಡಿಕೆ, ಅನಾನಸ್ ತೋಟ, ಭತ್ತದ ಗದ್ದೆಗೆ ನುಗ್ಗಿದ ನದಿ ನೀರು. ಶಿರಸಿ ತಾಲೂಕಿನ ಬನವಾಸಿಯ ಬಾಸಿ ಗ್ರಾಮಪಂಚಾಯತ್ ಮೊಗಳ್ಳಿ ಗ್ರಾಮದಲ್ಲಿ ವರದಾ ನದಿಯಿಂದ ಪ್ರವಾಹ. 400 ಎಕರೆಗೂ ಹೆಚ್ಚು ಪ್ರದೇಶಕ್ಕೆ ನುಗ್ಗಿದ ವರದಾ ನದಿ ನೀರು. ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದ್ದರಿಂದ ತುಂಬಿ ಹರಿದ ವರದಾ. 

ನಿರಂತರ ಗಾಳಿ, ಮಳೆಗೆ ಉರುಳಿ ಬಿದ್ದ ಬೃಹತ್ ಆಲದ ಮರ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರೇಅಂಗಡಿ ಗ್ರಾಮದ ಬಳಿ ಘಟನೆ. ಒಂದು ಗಂಟೆಗೂ ಅಧಿಕ ಕಾಲ 
ರಸ್ತೆ ಸಂಚಾರ ಬಂದ್. ಸಾಲ್ಕೋಡು, ಕೆರೆಕೋಣ, ದರ್ಬೆಜಡ್ಡಿ, ಕಾನಕ್ಕಿ ಹೋಗುವ ರಸ್ತೆ ಸಂಚಾರ ಅಸ್ತವ್ಯಸ್ತ. ಆಲದ ಮರ ಧರೆಗೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೂ ಹಾನಿ. ಸ್ಥಳಕ್ಕೆ ಅರಣ್ಯ ಸಿಬ್ಬಂದಿ, ಸ್ಥಳೀಯ ಅಧಿಕಾರಿಗಳು ಬೇಟಿ ಪರಿಶೀಲನೆ. ಸ್ಥಳೀಯರ ಸಹಾಯದಿಂದ ಆಲದ ಮರ ತೆರವು.

2:49 PM IST:

ಸಿಎಂ ರಿಂದ ಪ್ರವಾಹ ಪೀಡಿತ ಜಿಲ್ಲಾಡಳಿತಗಳ ಜೊತೆ ಸಭೆ ಹಿನ್ನೆಲೆ. ಸಭೆಯಲ್ಲಿ ಸಿಎಂಗೆ ಅಧಿಕಾರಿಗಳಿಂದ ಮಾಹಿತಿ. ಉತ್ತರ ಕನ್ನಡ ಮತ್ತೆ ಕೊಡಗಿನಲ್ಲಿ ಯೆಲ್ಲೋ ಅಲರ್ಟ್ ಆಗಿದೆ. ಈ ಎರಡು ಜಿಲ್ಲೆಗಳನ್ನು ಯೆಲ್ಲೋ ಅಲರ್ಟ್ ಆಗಿ ಮುಂದುವರಿಬೇಕಾಗುತ್ತದೆ. ತುಂಗಭದ್ರಾ ಡ್ಯಾಮ್ ನಲ್ಲಿ ಒಳ ಹರಿವು ಜಾಸ್ತಿ ಇದೆ. ಭದ್ರ ಡ್ಯಾಮ್ ಬಿಂದ 45 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಹೊರ ಹರಿವು ಜಾಸ್ತಿಯಿಂದ ಭದ್ರಾವತಿ ಟೌನ್‌ ನಲ್ಲಿ ನಾಲ್ಕು ಕಡೆ ನೀರು ನುಗ್ಗಿದೆ ಎಂದು ಮಾಹಿತಿ. ಈ  ವೇಳೆ ಸಿಎಂ ಹೇಳಿಕೆ.

ಮಳೆಯಿಂದ ಡ್ಯಾಮೇಜ್ ಆದ ಮನೆಗಳನ್ನು ಗುರುತಿಸಿ ಪಟ್ಟಿ ಮಾಡಿ, ಹಾನಿಯಾಗಿರುವ ಮನೆಗಳಿಗೆ ಪರಿಹಾರವಾಗಿ 10 ಸಾವಿರ ಸ್ಥಳದಲ್ಲಿ ವಿತರಿಸಿ. ಲ್ಲೆಯ ಎಲ್ಲ ಕಂದಾಯ ಅಧಿಕಾರಿಗಳು ನೆರೆ ಪೀಡಿತ ಸ್ಥಳದಲ್ಲೇ ಇರಬೇಕು. ಪರಿಹಾರ ವಿತರಣೆ ಹಾಗು ಪುನರ್ವಸತಿ ಕಾರ್ಯಾಚರಣೆ ಯಲ್ಲಿ ಯಾವುದೇ ಚ್ಯುತಿ ಬರಬಾರದು. ವೀಡಿಯೋ ಕಾನ್ಪೆರೆನ್ಸ್ ನಲ್ಲಿ ಅಧಿಕಾರಿಗಳಿಗೆ ಸಿಎಂ ಸೂಚನೆ.

2:12 PM IST:

ಸರ್ಕಾರಿ ಕಚೇರಿಯ ಗಳಲ್ಲಿ ಇನ್ಮುಂದೆ ಪೋಟೋ ಮತ್ತು ವಿಡಿಯೋ ಚಿತ್ರಿಕರಣ ಮಾಡುವಂತಿಲ್ಲ.ಖಾಸಗಿ ವ್ಯಕ್ತಿಗಳು ಅನುಮತಿ ಇಲ್ಲದೇ ಚಿತ್ರಿಕರಣ ಮಾಡಬಾರದು. ಸರ್ಕಾರಿ ಕಚೇರಿಗಳ ವೇಳೆಯಲ್ಲಿ ಪೋಟೋ ಮತ್ತು ವಿಡಿಯೋ ಚಿತ್ರಿಕರಣ ಮಾಡಬಾರದು..ಸರ್ಕಾರದ ಅಧಿಕೃತ ಆದೇಶಕ್ಕೆ ಎಲ್ಲೆಡೆಯಿಂದ ವ್ಯಕ್ತವಾಗುತ್ತಿದೆ ವಿರೋಧ. 

2:06 PM IST:

ಬಾಗಲಕೋಟೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದ ವೇಳೆ ಹೈಡ್ರಾಮಾ ನಡೆದಿದೆ. ಇತ್ತೀಚಿಗೆ,ಕೆರೂರ ಗುಂಪು ಘರ್ಷಣೆ ಹಿಂದೂ ಮುಸ್ಲಿಂ ಗುಂಪು ಘಷ೯ಣೆಯಲ್ಲಿ ಗಾಯಗೊಂಡವರಿಗೆ ಪರಿಹಾರ ಧನ ನೀಡಲು ಸಿದ್ದರಾಮಯ್ಯ ಮುಂದಾದಾಗ ಆ ಹಣವನ್ನು  ಮಹಿಳೆಯೊಬ್ಬಳು ವಾಪಸ್ ನೀಡಿದ್ದಾರೆ. ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಮತ ಕೇಳಲು ಬರುತ್ತಾರೆ.ನಂತರ ಯಾವುದೇ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ.ಹಿಂದೂ ಮುಸ್ಲಿಂ ಎನ್ನದೇ ಎಲ್ಲರಿಗೂ ಸಮಾನರಾಗಿ ಕಾಣಬೇಕು.ಆದರೆ ನಾವು ಏನು ತಪ್ಪು ಮಾಡದೆ ಇದ್ದರೂ,ವಿನಾಕಾರಣ ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮುಸ್ಲಿಂ ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು.

2:06 PM IST:

ಬಾಗಲಕೋಟೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದ ವೇಳೆ ಹೈಡ್ರಾಮಾ ನಡೆದಿದೆ. ಇತ್ತೀಚಿಗೆ,ಕೆರೂರ ಗುಂಪು ಘರ್ಷಣೆ ಹಿಂದೂ ಮುಸ್ಲಿಂ ಗುಂಪು ಘಷ೯ಣೆಯಲ್ಲಿ ಗಾಯಗೊಂಡವರಿಗೆ ಪರಿಹಾರ ಧನ ನೀಡಲು ಸಿದ್ದರಾಮಯ್ಯ ಮುಂದಾದಾಗ ಆ ಹಣವನ್ನು  ಮಹಿಳೆಯೊಬ್ಬಳು ವಾಪಸ್ ನೀಡಿದ್ದಾರೆ. ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಮತ ಕೇಳಲು ಬರುತ್ತಾರೆ.ನಂತರ ಯಾವುದೇ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ.ಹಿಂದೂ ಮುಸ್ಲಿಂ ಎನ್ನದೇ ಎಲ್ಲರಿಗೂ ಸಮಾನರಾಗಿ ಕಾಣಬೇಕು.ಆದರೆ ನಾವು ಏನು ತಪ್ಪು ಮಾಡದೆ ಇದ್ದರೂ,ವಿನಾಕಾರಣ ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮುಸ್ಲಿಂ ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು.

1:01 PM IST:

ರಾಜ್ಯದಲ್ಲಿ ಭಾರೀ ಮಳೆ ಹಾನಿಯಾಗಿದೆ, ಈ ವೇಳೆ ಸಚಿವರ ಚಿಂತನ ಮಂಥನ ಬೈಠಕ್ ನಡೆಯುತ್ತಿರುವ ವಿಚಾರಕ್ಕೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಮಳೆ ಹಾನಿ‌ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಮಾತನಾಡಿದ್ದು, ಪ್ರವಾಹದ ಬಗ್ಗೆ ಚಿಂತನ ಮಂಥನ ಮಾಡಬೇಕಿತ್ತು. ಮುಂದೆ ಚುನಾವಣೆಲಿ ಏನಾಗುತ್ತದೆ ಅನ್ನೋ ಚಿಂತೆ ಅವರಿಗೆ ಹೆಚ್ಚಾಗಿದೆ ಎಂದಿದ್ದಾರೆ. ಆಂತರಿಕ ಸಮೀಕ್ಷೆಯಲ್ಲಿ ಏನೋ ವರದಿ ಬಂದಿರಬೇಕು ಅದಕ್ಕಾಗಿ ಈ ಸಭೆ ಮಾಡಲಾಗ್ತಿದೆ. ಪ್ರವಾಹವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಬಿಜೆಪಿಗೆ ಸೋಲಿನ ಭೀತಿ ಆರಂಭ ಆಗಿದೆ. ಹಾಗಾಗಿ ಚಿಂತನ ಮಂಥನ ಸಭೆ  ಮಾಡ್ತಾ ಇದ್ದಾರೆ. ಜನರ ಸಮಸ್ಯೆ ಬಿಜೆಪಿಗೆ ಬೇಕಿಲ್ಲ. ಈಗಾಗಲೇ ಬಿಜೆಪಿ ಸೋಲತ್ತೆ ಅಂತ ಆಂತರಿಕ ವರದಿ ಬಂದಿದೆ. ಅದಕ್ಕಾಗಿ ಗೆಲ್ಲುವುದರ ಬಗ್ಗೆ ಸಭೆ ಮಾಡುತ್ತಿದ್ದಾರೆ. ಆದ್ರೆ ಈಗ ಸಭೆ ಮಾಡಿ ಯಾವುದೇ ಪ್ರಯೋಜನ ಇಲ್ಲ. ಪ್ರವಾಹ ಪೀಡಿತ ಸ್ಥಳಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕಳೆದ ಬಾರಿ ಪ್ರವಾಹಕ್ಕೆ ಪರಿಹಾರ ಸಿಕ್ಕಿಲ್ಲ ಎಂದು ಎಂಬಿ ಪಾಟೀಲ್ ಹೇಳಿದರು. 

12:55 PM IST:

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆ. ಸಕಲೇಶಪುರ ಪಟ್ಟಣದ ಹೇಮಾವತಿ ನದಿ ದಂಡೆಯ ಹೊಳೆ ಮಲ್ಲೇಶ್ವರನಿಗೆ ಜಲ ದಿಗ್ಬಂಧನ. ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರೊ ಹೇಮಾವತಿ ನದಿ. ನೀರಲ್ಲಿ ಮುಳುಗಿದ ದೇಗುಲದ ಮೆಟ್ಟಿಲು. ಪ್ರವಾಹದ ನೀರಲ್ಲಿ ಸಂಪೂರ್ಣ ಮುಚ್ಚಿಹೋದ ಮೆಟ್ಟಿಲುಗಳು. ತುಂಬಿ ಹರಿಯುತ್ತಿರೊ ನದಿ ನೋಡಲು ದೇಗುಲದ ಬಳಿ ಬರ್ತಿರೋ ನೂರಾರು ಜನರು. ಸತತ ಎರಡು ವಾರಗಳಿಂದ ಸುರಿಯುತ್ತಿರೊ ಮಳೆಯಿಂದ ತುಂಬಿ ಹರಿಯುತ್ತಿರೋ ಹೇಮಾವತಿ ನದಿ. ನದಿಯ ಪ್ರವಾಹದಿಂದ ಜಲಾವೃತವಾದ ದೇಗುಲದ ಮೆಟ್ಟಿಲುಗಳು.

12:26 PM IST:

ಕೆಲವು ವಿವಾದಗಳ ನಂತರ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದ ಗೋಕಾಕ್ ಬಿಜೆಪ್ ಶಾಸಕ ರಮೇಶ್ ಜಾರಕಿಹೊಳಿ ಇಂದು ನಡೆಯುತ್ತಿರುವ ಚಿಂತನಾ ಸಭೆಯಲ್ಲಿ ಭಾಗಿಯಾಗಿದ್ದಾರೆ. 
 
12:06 PM IST:

ಬೆಳಗಾವಿ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆ. ಧಾರಾಕಾರ ಮಳೆಯಿಂದ ಉಕ್ಕಿ ಹರಿಯುತ್ತಿರುವ ಹಾಲಾತ್ರಿ ಹಳ್ಳ. ಮಂತುರ್ಗಾ ಗ್ರಾಮದ ಬಳಿ ಸೇತುವೆ ಮುಳುಗಡೆ. ಸಿಂಧನೂರು - ಹೆಮ್ಮಡಗಾ ಅಂತರ್‌ರಾಜ್ಯ ಹೆದ್ದಾರಿ ಮೇಲೆ ಹರಿಯುತ್ತಿರುವ ನೀರು. ಖಾನಾಪುರ ಪಟ್ಟಣದಿಂದ 30 ಹಳ್ಳಿಗಳ ಸಂಪರ್ಕ ಕಟ್. ಜೀವಭಯದಲ್ಲೇ ಮುಳುಗಡೆಯಾದ ಸೇತುವೆ ಮೇಲೆ ಬೈಕ್ ಸವಾರರ ಸಂಚಾರ. ಪುಟ್ಟ ಪುಟ್ಟ  ಮಕ್ಕಳನ್ನು ಹೆಗಲ ಮೇಲೆ ಹೊತ್ತಿಕೊಂಡು ಬಂದ ವ್ಯಕ್ತಿ. ಕಣಕುಂಬಿ ಅರಣ್ಯ ವ್ಯಾಪ್ತಿಯಲ್ಲಿ 15.2 ಸೆಂಟಿಮೀಟರ್ ಮಳೆ.

10:28 AM IST:

ದೇವನಹಳ್ಳಿ ಸಮೀಪದ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ನಡೆಯುತ್ತಿರುವ ಚಿಂತನ ಮಂಥನ ಸಭೆ. ಆರ್‌ಎಸ್ಎಸ್ ಮುಖಂಡರಾದ ಮುಕುಂದ್, ತಿಪ್ಪೇಸ್ವಾಮಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ನೇತೃತ್ವದಲ್ಲಿ ಸಭೆ. ಸಿಎಂ ಬೊಮ್ಮಾಯಿ, ಸರ್ಕಾರದ ಸಚಿವರು, ಕೋರ್‌ಕಮಿಟಿ ಸದಸ್ಯರು, ಪಕ್ಷದ ಪದಾಧಿಕಾರಿಗಳು ಸೇರಿ ಸುಮಾರು 60 ಜನ ಭಾಗಿ. ಸರ್ಕಾರದ ವರ್ಚಸ್ಸು ಹೆಚ್ಚಿಸುವ ಬಗ್ಗೆ ಸಮಾಲೋಚನೆ. ಸರ್ಕಾರದ ಸಾಧನೆಗಳ ಪರಾಮರ್ಶೆ, ಸಚಿವರ ಮೌಲ್ಯಮಾಪನ ನಡೆಯಲಿದೆ. ನಂದಿ ಬೆಟ್ಟದ ಬಳಿ ಇರುವ ರೆಸಾರ್ಟ್ ನಲ್ಲಿ ಬಿಜೆಪಿ ಸಭೆ. ಸಭೆಯ ಸ್ಥಳದಲ್ಲಿ ಸಿಎಂ, ಸಚಿವರ ಗನ್‌ಮ್ಯಾನ್‌ಗಳಿಗಿಲ್ಲ ಪ್ರವೇಶ. ಬಿಜೆಪಿ ನಾಯಕರ ಹೊರತು ಪಡಿಸಿ ಬೇರೆ ಯಾರಿಗೂ ಇಲ್ಲ ಪ್ರವೇಶ. ನಾಯಕರನ್ನು ಬಿಟ್ಟು, ಹೊರ ಬಂದ ಗನ್‌ಮ್ಯಾನ್‌ಗಳು ಹಾಗೂ ಕಾರು ಚಾಲಕರು. ರೆಸಾರ್ಟ್ ಒಳಗೆ ಮಾಧ್ಯಮಗಳಿಗೆ ನಿರ್ಬಂಧ. ಬಿಜೆಪಿ ನಾಯಕರಿಂದ ರಹಸ್ಯ ರಣತಂತ್ರಗಾರಿಕೆ.

10:24 AM IST:

ವಿಜಯಪುರ: ಊರಲ್ಲಿ ಅಪಘಾತವಾಗಿ ಸಾವು ಹಿನ್ನೆಲೆ, ಗ್ರಾಮಸ್ಥರಿಂದ ವಿಶಿಷ್ಟ ಆಚರಣೆ. ಸರಣಿ ಸಾವಿಗೆ ಹೆದರಿದ ನಿವಾಸಿಗಳು. ವಿಜಯಪುರ ನಗರದ ಕಾಲೇಭಾಗ ಪ್ರದೇಶದಲ್ಲಿ ವಿಶಿಷ್ಟ ಆಚರಣೆ. ಕಾಲಲ್ಲಿ ಚಪ್ಪಲಿ ಹಾಕದೇ, ವಾಹನಗಳನ್ನು ಬಳಸದೆ, ಕೆಲಸಕ್ಕೂ ಹೋಗದೆ, ಊಟ ಮಾಡದೇ ವಾರ ಆಚರಣೆ. ಊರಿನ ಕೆಲ ಯುವಕರು ಅಪಘಾತದಲ್ಲಿ ನಿಧನ ಹೊಂದಿದ ಕಾರಣ ಈ ಆಚರಣೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಆರು ಮಂದಿ ನಿಧನರಾದ ಕಾರಣ ಆತಂಕದಲ್ಲಿದ್ದ ಜನರು. ಬಳಿಕ ದೇವರ ಮೊರೆ ಹೋದ ಜನರು. ಅವಘಡ ನಡೆಯದಂತೆ ತಡೆಯಲು ವಾರ ಆಚರಣೆ ಮಾಡಲು ಸೂಚನೆ ನೀಡಿದ ಪೂಜಾರಿಗಳು‌.ಅದರಂತೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಈ ಆಚರಣೆ. 500ಕ್ಕೂ ಅಧಿಕ ಮನೆಗಳಿರುವ ಕಾಲೇಭಾಗ ಪ್ರದೇಶ. ಕಟ್ಟಡ ನಿರ್ಮಾಣ ‌ಕೆಲಸ ಮಾಡಿ ಜೀವನ ನಡೆಸುವ ಕಾಲೇಭಾಗ ಪ್ರದೇಶದ ಬಹುತೇಕ ಜನರು. ಕಡ್ಡಾಯವಾಗಿ ಶುಕ್ರವಾರ ಹಾಗೂ ಮಂಗಳವಾರ ಕೆಲಸಕ್ಕೂ ಹೋಗದೆ ವಾರ ಆಚರಣೆ. ಈ ಆಚರಣೆಯಿಂದಾಗಿ ಗ್ರಾಮದಲ್ಲಿ ಅಪಘಾತ ಪ್ರಕರಣಗಳು ಕಡಿಮೆ ಆಗುತ್ತದೆ ಅನ್ನೋ ನಂಬಿಕೆ ಅಲ್ಲಿಯ ಜನರದ್ದು.

10:17 AM IST:

ಚಾಮರಾಜಪೇಟೆ ಬಂದ್ ಯಶಸ್ವಿಯಾಗಿ ನಡೆಯಿತು. ಜುಲೈ ೧೨ ಕ್ಕೆ ಕರೆ ಕೊಟ್ಟ ಚಾಮರಾಜಪೇಟೆ ಬಂದ್ ಗೆ ಸ್ಥಳೀಯರು, ಅಂಗಡಿ ಮಾಲೀಕರು ತಮ್ಮ ಸಂಪೂರ್ಣ ಬೆಂಬಲ ನೀಡಿದ್ರು. ಬಂದ್ ಗೆ ಸಹಕಾರ ಕೊಟ್ಟ ಎಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಚಾಮರಾಜಪೇಟೆ ಆಟದ ಮೈದಾನದವಾಗಿಯೇ ಇರುತ್ತದೆ. ಅದು ಬಿಬಿಎಂಪಿ ಆಟದ ಮೈದಾನ. ಇಲ್ಲಿ ಹಬ್ಬಗಳ ಆಚರಣೆಗೆ ಯಾರ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ. ಸ್ವಾತಂತ್ರ್ಯ ಬಂದು‌ 75 ವರ್ಷಗಳು ಕಳೆದಿವೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಾವು ರಾಷ್ಟ್ರ ಧ್ವಜ ಹಾರಿಸಲಿದ್ದೇವೆ. 
ಒಂದು ವೇಳೆ ರಾಷ್ಟ್ರ ಧ್ವಜ ಹಾರಿಸಲು ಅವಕಾಶ ಕೊಡದಿದ್ದರೆ ಇದು ದೇಶಕ್ಕೆ ಮಾಡಿದ ಅಪಮಾನ. ಆಗಸ್ಟ್ ೧೫ ರಂದು ರಾಷ್ಟ್ರ ಧ್ವಜ ಹಾರಿಸಲು ಅನುಮತಿ‌ ಕೊಡಲೇಬೇಕು. ಕನ್ನಡ ರಾಜ್ಯೋತ್ಸವ, ಅಂಬೇಡ್ಕರ್ ಜಯಂತಿ, ಗಣೇಶ ಉತ್ಸವ ಮಾಡಲು ಅವಕಾಶ ಕೋರಿ ಮನವಿ ಸಲ್ಲಿಸಲಾಗಿದೆ. ಇದು ಬಿಬಿಎಂಪಿ ಆಟದ ಮೈದಾನ, ಇದಕ್ಕೆ ಜಯಚಾಮರಾಜೇಂದ್ರ ಆಟದ ಮೈದಾನ ಹೆಸರಿಡಲು ನಾನು ಆಗ್ರಹಿಸಿದ್ದೇನೆ. ಇಲ್ಲಿ ದೇಶ ವಿರೋಧಿ ಚಟುವಟಿಕೆ ಯಾರು ಮಾಡುತ್ತಿಲ್ಲ. ಹೀಗಾಗಿ ನಮಗೂ ಹಬ್ಬದ ಆಚರಣೆಗೆ ಅವಕಾಶ ಕೊಡಬೇಕು. ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆ ಕಮಿಷನರ್ ಹೇಳಿದ್ದಾರೆ. ವಾರದೊಳಗೆ ತೀರ್ಮಾನ ಮಾಡುವ ಬಗ್ಗೆ ಕಮಿಷನರ್ ಭರವಸೆ ನೀಡಿದ್ದಾರೆ. ಅವಕಾಶ ಕೊಡದಿದ್ದರೂ ರಾಷ್ಟ್ರಧ್ವಜ ಹಾರಿಸಿಯೇ ತೀರುತ್ತೇವೆ. ಚಾಮರಾಜಪೇಟೆ ಆಟದ ಮೈದಾನ ಸರ್ಕಾರದ ಸ್ವತ್ತು. ವರ್ಷಕ್ಕೊಂದು ಸಲ ಮೈದಾನವನ್ನು ಅವರ ಪ್ರಾರ್ಥನೆಗೂ ಅವಕಾಶ ಕೊಡಿ, ಇದಕ್ಕೆ ನಮ್ಮ ಅಭ್ಯಂತರ ಇಲ್ಲವೆಂದ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್. 

10:17 AM IST:

ಚಾಮರಾಜಪೇಟೆ ಬಂದ್ ಯಶಸ್ವಿಯಾಗಿ ನಡೆಯಿತು. ಜುಲೈ ೧೨ ಕ್ಕೆ ಕರೆ ಕೊಟ್ಟ ಚಾಮರಾಜಪೇಟೆ ಬಂದ್ ಗೆ ಸ್ಥಳೀಯರು, ಅಂಗಡಿ ಮಾಲೀಕರು ತಮ್ಮ ಸಂಪೂರ್ಣ ಬೆಂಬಲ ನೀಡಿದ್ರು. ಬಂದ್ ಗೆ ಸಹಕಾರ ಕೊಟ್ಟ ಎಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಚಾಮರಾಜಪೇಟೆ ಆಟದ ಮೈದಾನದವಾಗಿಯೇ ಇರುತ್ತದೆ. ಅದು ಬಿಬಿಎಂಪಿ ಆಟದ ಮೈದಾನ. ಇಲ್ಲಿ ಹಬ್ಬಗಳ ಆಚರಣೆಗೆ ಯಾರ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ. ಸ್ವಾತಂತ್ರ್ಯ ಬಂದು‌ 75 ವರ್ಷಗಳು ಕಳೆದಿವೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಾವು ರಾಷ್ಟ್ರ ಧ್ವಜ ಹಾರಿಸಲಿದ್ದೇವೆ. 
ಒಂದು ವೇಳೆ ರಾಷ್ಟ್ರ ಧ್ವಜ ಹಾರಿಸಲು ಅವಕಾಶ ಕೊಡದಿದ್ದರೆ ಇದು ದೇಶಕ್ಕೆ ಮಾಡಿದ ಅಪಮಾನ. ಆಗಸ್ಟ್ ೧೫ ರಂದು ರಾಷ್ಟ್ರ ಧ್ವಜ ಹಾರಿಸಲು ಅನುಮತಿ‌ ಕೊಡಲೇಬೇಕು. ಕನ್ನಡ ರಾಜ್ಯೋತ್ಸವ, ಅಂಬೇಡ್ಕರ್ ಜಯಂತಿ, ಗಣೇಶ ಉತ್ಸವ ಮಾಡಲು ಅವಕಾಶ ಕೋರಿ ಮನವಿ ಸಲ್ಲಿಸಲಾಗಿದೆ. ಇದು ಬಿಬಿಎಂಪಿ ಆಟದ ಮೈದಾನ, ಇದಕ್ಕೆ ಜಯಚಾಮರಾಜೇಂದ್ರ ಆಟದ ಮೈದಾನ ಹೆಸರಿಡಲು ನಾನು ಆಗ್ರಹಿಸಿದ್ದೇನೆ. ಇಲ್ಲಿ ದೇಶ ವಿರೋಧಿ ಚಟುವಟಿಕೆ ಯಾರು ಮಾಡುತ್ತಿಲ್ಲ. ಹೀಗಾಗಿ ನಮಗೂ ಹಬ್ಬದ ಆಚರಣೆಗೆ ಅವಕಾಶ ಕೊಡಬೇಕು. ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆ ಕಮಿಷನರ್ ಹೇಳಿದ್ದಾರೆ. ವಾರದೊಳಗೆ ತೀರ್ಮಾನ ಮಾಡುವ ಬಗ್ಗೆ ಕಮಿಷನರ್ ಭರವಸೆ ನೀಡಿದ್ದಾರೆ. ಅವಕಾಶ ಕೊಡದಿದ್ದರೂ ರಾಷ್ಟ್ರಧ್ವಜ ಹಾರಿಸಿಯೇ ತೀರುತ್ತೇವೆ. ಚಾಮರಾಜಪೇಟೆ ಆಟದ ಮೈದಾನ ಸರ್ಕಾರದ ಸ್ವತ್ತು. ವರ್ಷಕ್ಕೊಂದು ಸಲ ಮೈದಾನವನ್ನು ಅವರ ಪ್ರಾರ್ಥನೆಗೂ ಅವಕಾಶ ಕೊಡಿ, ಇದಕ್ಕೆ ನಮ್ಮ ಅಭ್ಯಂತರ ಇಲ್ಲವೆಂದ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್. 

10:02 AM IST:

ದಾವಣಗೆರೆ ಜಿಲ್ಲೆಯಲ್ಲಿ ಉಕ್ಕಿಹರಿಯುತ್ತಿರುವ ತುಂಗಾಭದ್ರಾ ನದಿ. ಹೊನ್ನಾಳಿ ಬಾಲ್ ರಾಜ್ ಘಾಟ್  ನ 22 ಮನೆಗಳಿಗೆ ನುಗ್ಗಿದ ನೀರು. ರಾತ್ರೋರಾತ್ರಿ ನಿವಾಸಿಗಳ ಸ್ಥಳಾಂತರ . ಶಾಸಕ ರೇಣುಕಾಚಾರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು. ನಮಗೆ ಪ್ರವಾಹ ಸಂಕಷ್ಟ ಅನುಭವಿಸಿ ಸಾಕಾಗಿದೆ. ಶಾಸಕರು ಸೈಟ್ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ನಮ್ಮ ಎದುರಿಗೆ ಬಂದು ಆ ಮಾತು ಹೇಳಲಿ ಎಂದು ವಾಪನ್ ಚಾಲೆಂಜ್ ಹಾಕಿದ ನಿವಾಸಿಗಳು. ಎಷ್ಟು ವರ್ಷ ಈ ಸಮಸ್ಯೆ ಅನುಭವಿಸಿದು ಎಂದು ಶಾಸಕರ ವಿರುದ್ಧ ಆಕ್ರೋಶ. ಕಾಳಜಿ ಕೇಂದ್ರದಲ್ಲಿ ಆಸರೆ ಪಡೆದಿರುವ ಪ್ರವಾಹ ಸಂತ್ರಸ್ಥರು. ಅನ್ನಭಾಗ್ಯ ಅಕ್ಕಿ ಅನ್ನಮಾಡಿ ಹಾಕಿ ಚೆನ್ನಾಗಿದಿಯಾ ಚೆನ್ನಾಗಿದಿಯಾ ಎಂದು ರೀಲು ಮಾಡುವ ಶಾಸಕರು . ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಟ್ಟಿಕೊಂಡು ವಾಸ ಮಾಡುವ ಶಾಸಕರು ನಮ್ಮ ಜೊತೆ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

9:58 AM IST:

ಮೈಸೂರು ಅಭಿವೃದ್ಧಿ ಕುರಿತಂತೆ ಸಂಸದ ಪ್ರತಾಪ್‌ಸಿಂಹ v/s ಕಾಂಗ್ರೆಸ್ ನಾಯಕರ ನಡುವೆ ಕ್ರೆಡಿಟ್‌ ವಾರ್ ಹಿನ್ನೆಲೆ. ಪ್ರತಾಪ್‌ಸಿಂಹಗೆ ಟಾಂಗ್ ಕೊಟ್ಟ ಸ್ವಪಕ್ಷೀಯ ಶಾಸಕ ಎಲ್.ನಾಗೇಂದ್ರ.
ನಾವು ಮಾಡಿದ ಕೆಲಸವನ್ನ ಜನರು ಗುರತಿಸಬೇಕು. ನಾನೇ ಮಾಡಿದ್ದು ಅಂತ ಯಾಕೆ‌ ಕ್ರೆಡಿಟ್‌ಗೆ ಇಳಿಯಬೇಕು? ಮೋದಿ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರು-ಮೈಸೂರು ಹೆದ್ದಾರಿ ಅಭಿವೃದ್ಧಿಗೆ ಹಣ ನೀಡಿದ್ದು. 2014ರಿಂದ ಕೇಂದ್ರದಲ್ಲಿ ಬಿಜೆಪಿ‌ ಸರ್ಕಾರವೇ ಅಧಿಕಾರದಲ್ಲಿರೋದು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಉಸ್ತುವಾರಿ ಸಚಿವರ ಬದಲಾವಣೆ ಸಿಎಂ ಪರಮಾಧಿಕಾರ. ಸ್ಥಳೀಯರು ಹೊರಗಿನವರು ಅಂತ ಏನಿಲ್ಲ. ಮೂಲ, ವಲಸಿಗ ಎಂಬುದೂ ಇಲ್ಲ. ಬೆಜೆಪಿ ನಂಬಿ ಬಂದ‌ ಎಲ್ಲರಿಗೂ ಪಕ್ಷ ಮಾತಿನಂತೆ ನಡೆದಿದೆ. ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಯಲ್ಲಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಹೊಸಬರಿಗೂ ಆದ್ಯತೆ ನೀಡಬೇಕು ಅಂತ ಸಿಎಂ ಬದಲಾವಣೆ ಮಾಡುತ್ತಿದ್ದಾರೆ‌. ಮೈಸೂರಿನಿಂದ‌ ನಾನು ಯಾರಿಗೂ ಶಿಫಾರಸು ಮಾಡಿಲ್ಲ. ಪಕ್ಷ ನಿಷ್ಠಾವಂತರನ್ನ ಗುರುತಿಸಿ ಶಿಫಾರಸು ಮಾಡುತ್ತೆ‌. ಚಾಮುಂಡಿ ಬೆಟ್ಟದಲ್ಲಿ ಶಾಸಕ ಎಲ್.ನಾಗೇಂದ್ರ ಹೇಳಿಕೆ.

9:56 AM IST: