Published : Mar 05, 2025, 07:26 AM ISTUpdated : Mar 05, 2025, 06:02 PM IST

Karnataka News Live ಡಿಕೆಶಿ-ಖರ್ಗೆ ಭೇಟಿ, BJPಯಲ್ಲಿ ಲಿಂಗಾಯತ ರಾಜಕೀಯ; ರಾಜ್ಯದಲ್ಲೂ ಕ್ಷಿಪ್ರ ಕ್ರಾಂತಿ

ಸಾರಾಂಶ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ. ಸುಮಾರು 20 ನಿಮಿಷಗಳ ಕಾಲ ಖರ್ಗೆ ಜೊತೆ ಡಿಕೆ ಶಿವಕುಮಾರ್ ಮಾತುಕತೆ ನಡೆಸಿದ್ದಾರೆ. ಆದ್ರೆ ಯಾವ ಚರ್ಚೆ ನಡೆದಿದೆ ಎಂಬುದರ ಗುಟ್ಟನ್ನು ಡಿಕೆ ಶಿವಕುಮಾರ್  ಬಿಟ್ಟುಕೊಟ್ಟಿಲ್ಲ.  ಒಡೆದ ಮನೆಯಾದ ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿವಕುಮಾರ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗುವುದಿಲ್ಲ. ರಾಜ್ಯದಲ್ಲೂ ಮಹಾರಾಷ್ಟ್ರದಂತೆ ಕ್ಷಿಪ್ರ ಕ್ರಾಂತಿಯಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭವಿಷ್ಯ ನುಡಿದಿದ್ದಾರೆ. ಸಿನಿಮಾ ಇಲ್ಲದೇ ಬದುಕುವ ಶಕ್ತಿ ನನಗಿದೆ. ಅವರು ಬೆಳೆಯಬೇಕು ಎಂದರೆ ಸರ್ಕಾರ ಹಾಗೂ ಜನ ಬೇಕು. ನಾನು ಅವರಿಗೆಲ್ಲ ಎಷ್ಟು ಸಹಾಯ ಮಾಡಿದ್ದೇನೆ ಎನ್ನುವುದು ನನಗೆ ಗೊತ್ತಿದೆ. ನಾನು ರಾಜ್ಯದ ಹಿತಕ್ಕಾಗಿ ಮಾತನಾಡಿದ್ದೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಇಂದು ರಾಜ್ಯದಲ್ಲಿ ನಡೆಯುವ ರಾಜಕೀಯ ಸೇರಿದಂತೆ ಇನ್ನುಳಿದ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
 

Karnataka News Live ಡಿಕೆಶಿ-ಖರ್ಗೆ ಭೇಟಿ, BJPಯಲ್ಲಿ ಲಿಂಗಾಯತ ರಾಜಕೀಯ; ರಾಜ್ಯದಲ್ಲೂ ಕ್ಷಿಪ್ರ ಕ್ರಾಂತಿ

06:02 PM (IST) Mar 05

ಬ್ಲ್ಯೂ ಗೋಸ್ಟ್‌ ತೆಗೆದ ನಾವೆಂದೂ ನೋಡದ ಚಂದ್ರನ ಚಂದನೆಯ ಚಿತ್ರಗಳು!

NASA ವಾಣಿಜ್ಯ ಚಂದ್ರ ಪೇಲೋಡ್ ಸೇವೆಗಳು (CLPS) ಉಪಕ್ರಮದ ಭಾಗವಾಗಿ, ಫೈರ್‌ಫ್ಲೈನ ಬ್ಲೂ ಘೋಸ್ಟ್ ಮಿಷನ್ 1, ಘೋಸ್ಟ್ ರೈಡರ್ಸ್ ಇನ್ ದಿ ಸ್ಕೈ ಎಂದು ಹೆಸರಿಸಲಾದ ಯೋಜನೆ ಅತ್ಯಂತ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿದೆ. ಇದರ ಬೆನ್ನಲ್ಲಿಯೇ ಇದು ಕಳಿಸಿದ ಚಂದನೆಯ ಚಿತ್ರಗಳನ್ನು ಫೈರ್‌ಫ್ಲೈ ಏರೋಸ್ಪೇಸ್‌ ಹಂಚಿಕೊಂಡಿದೆ.

ಪೂರ್ತಿ ಓದಿ

05:20 PM (IST) Mar 05

ಮೈಸೂರಲ್ಲಿ ಜನನ, ಪ್ಯಾರಿಸ್‌ನಲ್ಲಿ ಪ್ರೇಮ; ಬೆಂಜ್ ಕಾರು ಕೊಡಿಸದ್ದಕ್ಕೆ ತಾಳಿ ಕಟ್ಟದೆ ಓಡಿಹೋದ ಅಳಿಮಯ್ಯ!

ಮೈಸೂರಿನಲ್ಲಿ ಹುಟ್ಟಿ ಬೆಳೆದ ಸ್ನೇಹಿತರು, ಫ್ರಾನ್ಸ್‌ನಲ್ಲಿ ಪ್ರೇಮ, ಪ್ರಣಯ ಮಾಡಿದ ಜೋಡಿ ಮದುವೆಗೆ ಸಜ್ಜಾಗಿತ್ತು. ಆದರೆ, ವರ ವರದಕ್ಷಿಣೆ ಕೇಳಿದ್ದಕ್ಕೆ ಮಾವ ಕೊಡಲು ನಿರಾಕರಿಸಿದ್ದಕ್ಕೆ ಮಂಟಪದಿಂದಲೇ ಕಾಲ್ಕಿತ್ತಿದ್ದಾನೆ. ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೂರ್ತಿ ಓದಿ

05:19 PM (IST) Mar 05

ದೇವಾಲಯದ ಮಾಲೀಕತ್ವ ನಮ್ಮದೆಂದು ಯಾವುದೇ ಜಾತಿ ಹೇಳುವಂತಿಲ್ಲ: ಹೈಕೋರ್ಟ್ ತೀರ್ಪು

ಯಾವುದೇ ಜಾತಿ ದೇವಾಲಯದ ಮಾಲೀಕತ್ವವನ್ನು ಹೇಳಿಕೊಳ್ಳುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಜಾತಿ ತಾರತಮ್ಯವನ್ನು ಪ್ರಚೋದಿಸುವ ಕ್ರಮವನ್ನು ನ್ಯಾಯಾಲಯವು ಸ್ವೀಕರಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪೂರ್ತಿ ಓದಿ

05:19 PM (IST) Mar 05

ಬಾಲಿವುಡ್ ಸ್ಟೈಲ್‌ನಲ್ಲಿ ಎಟಿಎಂ ದರೋಡೆ; ₹2 ಕೋಟಿ ಕಳ್ಳರ ಪ್ಲ್ಯಾನ್ ನೋಡಿ ಬೆಚ್ಚಿಬಿದ್ದ ಪೊಲೀಸರು!

ಬೆಂಗಳೂರು ಸೇರಿ ಹಲವೆಡೆ ಎಟಿಎಂ ದರೋಡೆ ಮಾಡಿದ ಗ್ಯಾಂಗ್‌ನ ಹಾಲಿವುಡ್ ಶೈಲಿಯ ಪ್ಲ್ಯಾನ್ ಬಯಲಾಗಿದೆ. ಕಂಟೇನರ್‌ನಲ್ಲಿ ಕಾರು ತಂದು ಎಟಿಎಂ ದೋಚಿ 2 ಕೋಟಿ ರೂ.ಗೂ ಹೆಚ್ಚು ಹಣ ದೋಚಿದ್ದಾರೆ.

ಪೂರ್ತಿ ಓದಿ

05:17 PM (IST) Mar 05

ಇನ್ಮುಂದೆ ನಿಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ಗೆ ಕಣ್ಣಿಡಲಿದೆ ಐಟಿ ಇಲಾಖೆ!

ಆದಾಯ ತೆರಿಗೆ ಇಲಾಖೆಗೆ ಹೊಸ ಅಧಿಕಾರ: ಹೊಸ ಆದಾಯ ತೆರಿಗೆ ಮಸೂದೆಯು ತೆರಿಗೆದಾರರ ಡಿಜಿಟಲ್ ಮಾಹಿತಿಯನ್ನು ಪರಿಶೀಲಿಸಲು ಆದಾಯ ತೆರಿಗೆ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. ಇಮೇಲ್‌ಗಳು, ಸಾಮಾಜಿಕ ಮಾಧ್ಯಮ ಮತ್ತು ವ್ಯಾಪಾರ ಖಾತೆಗಳು ಸೇರಿದಂತೆ ವೈಯಕ್ತಿಕ ಮಾಹಿತಿಗೆ ಪ್ರವೇಶವು ಗೌಪ್ಯತೆಯ ಉಲ್ಲಂಘನೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಪೂರ್ತಿ ಓದಿ

04:48 PM (IST) Mar 05

ಹಣದುಬ್ಬರದಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಜಾಕ್‌ಪಾಟ್‌: 80,000 ಕೋಟಿ ಮೌಲ್ಯದ ಚಿನ್ನದ ನಿಕ್ಷೇಪ ಪತ್ತೆ

ಪಾಕಿಸ್ತಾನದಲ್ಲಿ ಸಿಂಧೂ ನದಿ ಕಣಿವೆಯ ಬಳಿ 80 ಸಾವಿರ ಕೋಟಿ ಮೌಲ್ಯದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇದು ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಆರ್ಥಿಕ ಚೇತರಿಕೆಯ ಭರವಸೆ ನೀಡಿದೆ.

ಪೂರ್ತಿ ಓದಿ

03:54 PM (IST) Mar 05

ಅನ್ನ ತಿಂದೂ ತೂಕ ಇಳಿಕೆ ಆಗ್ಬೇಕು ಅಂತ ಬಯಸಿದ್ರೆ ಈ 5 ಬಗೆಯ ಅಕ್ಕಿ ಟ್ರೈ ಮಾಡಿ

ತೂಕ ಇಳಿಸಿಕೊಳ್ಬೇಕು ಅಂದ್ರೆ ಮೊದಲು ಅನ್ನ ತಿನ್ನೋದು ಬಿಡ್ತಾರೆ. ಆದ್ರೆ ಅನ್ನ ತಿಂದು ಕೂಡ ತೂಕ ಇಳಿಸ್ಬಹುದು ಅಂತ ನಿಮಗೆ ಗೊತ್ತಾ? ಹೇಗೆ ಅಂತ ಯೋಚ್ನೆ ಮಾಡ್ತಿದ್ದೀರಾ? ಹಾಗಾದ್ರೆ ನೋಡಿ.

ಪೂರ್ತಿ ಓದಿ

03:40 PM (IST) Mar 05

ಭಾರೀ ವೆಚ್ಚದಲ್ಲಿ ಕೇದಾರನಾಥ, ಹೇಮಕುಂಡ ಸಾಹೀಬ್‌ ರೋಪ್‌ವೇ ಪ್ರಾಜೆಕ್ಟ್‌ಗೆ ಒಪ್ಪಿಗೆ ನೀಡಿದ ಕೇಂದ್ರ!

ಕೇಂದ್ರ ಸಚಿವ ಸಂಪುಟವು 4,081 ಕೋಟಿ ರೂಪಾಯಿ ವೆಚ್ಚದಲ್ಲಿ ಕೇದಾರನಾಥ ರೋಪ್‌ವೇ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯು ಸೋನ್‌ಪ್ರಯಾಗದಿಂದ ಕೇದಾರನಾಥಕ್ಕೆ 12.9 ಕಿಮೀ ಉದ್ದವಿರಲಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಪೂರ್ತಿ ಓದಿ

12:01 PM (IST) Mar 05

ಇಡ್ಲಿ, ಹೋಳಿಗೆ, ಕಲ್ಲಂಗಡಿಯಾಯ್ತು... ಬಟಾಣಿ, ಬೆಲ್ಲದಲ್ಲೂ ವಿಷ: ಆಹಾರ ಇಲಾಖೆ ವರದಿಯಲ್ಲಿ ಬೆಚ್ಚಿ ಬೀಳುವ ಅಂಶ!

ಪ್ರತಿನಿತ್ಯ ನಾವು ತಿನ್ನುವ ಬಹುತೇಕ ಆಹಾರ ಪದಾರ್ಥಗಳಲ್ಲಿ ವಿಷಕಾರಿ ಅಂಶಗಳೇ ತುಂಬಿದ್ದು, ಇದೀಗ ಆಹಾರ ಇಲಾಖೆ ವರದಿಯೊಂದು ನೀಡಿದೆ.  ಏನಿದೆ ಅದರಲ್ಲಿ?
 

ಪೂರ್ತಿ ಓದಿ

09:07 AM (IST) Mar 05

ಡಿಕೆ ಶಿವಕುಮಾರ ಹಿಂದೂತ್ವದ ನಾಟಕ ನಾನು ಒಪ್ಪೋಲ್ಲ: ಮುತಾಲಿಕ್ ಕಿಡಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಿಂದುತ್ವದ ಹೆಸರಲ್ಲಿ ನಾಟಕವಾಡುತ್ತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಿಂದುತ್ವಕ್ಕೆ ಹಾನಿ ಮಾಡಿದೆ ಎಂದು ಅವರು ಟೀಕಿಸಿದ್ದಾರೆ.

ಪೂರ್ತಿ ಓದಿ

More Trending News