ಡಿ.ಕೆ. ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಕ್ತದಲ್ಲಿ ಬೇಕಾದರೂ ಇವಾಗಲೇ ಬರೆದು ಕೊಡುತ್ತೇನೆ. ಡಿಸೆಂಬರ್ ಒಳಗಾಗಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಎಂದಿದ್ದಾರೆ. ರಾಜಣ್ಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪಕ್ಷಕ್ಕಿಂತಲೂ ಯಾರೂ ದೊಡ್ಡವರಲ್ಲ. ಪಕ್ಷವೇ ಎಲ್ಲರಿಗಿಂತ ದೊಡ್ಡದು ಎಂದು ಹೇಳುವ ಮೂಲಕ ಸಚಿವ ರಾಜಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದ ಆವರಣದಲ್ಲಿ ನಡೆದ ಪುಸ್ತಕ ಮೇಳಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಇದೇ ಮೊದಲ ಬಾರಿಗೆ ವಿಧಾನಸಭೆಯ ಅಧಿವೇಶನ ನಡೆಯುವ ಸಭಾಂಗಣ ವೀಕ್ಷಣೆಗೂ ಅವಕಾಶ ಮಾಡಿಕೊಡಲಾಗಿತ್ತು. ಬಿಸಿಲಲ್ಲೇ ಗಂಟೆಗಟ್ಟಲೆ ಸರದಿ ಸಾಲಲ್ಲಿ ನಿಂತು, ಸಾವಿರಾರು ಮಂದಿ ವಿಧಾನಸಭೆ ಸಭಾಂಗಣವನ್ನು ವೀಕ್ಷಿಸಿ ಸಂತೋಷಪಟ್ಟರು. ಇಂದಿನ ರಾಜ್ಯದ ಪ್ರಮುಖ ಸುದ್ದಿಗಳ ಲೈವ್ ಅಪ್‌ಡೇಟ್ ಇಲ್ಲಿದೆ

09:49 PM (IST) Mar 03
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿ ಸುದ್ದಿಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಸತ್ತದ್ದು ಹೇಗೆ? ಪೊಲೀಸರು ವಿವರಿಸಿದ್ದು ಹೀಗೆ..
05:35 PM (IST) Mar 03
ಅಸ್ಸಾಂನ 8 ವರ್ಷದ ಬಾಲಕಿ ಬಿನಿತಾ ಚೆಟ್ರಿ ಬ್ರಿಟನ್ ಗಾಟ್ ಟ್ಯಾಲೆಂಟ್‌ನಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ಆಕೆಯ ಅದ್ಭುತ ನೃತ್ಯಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ04:16 PM (IST) Mar 03
ಒಡಿಯಾದಲ್ಲಿ ವಿದೇಶಿ ಮಹಿಳೆಯೊಬ್ಬರು ತೊಡೆಯ ಮೇಲೆ ಜಗನ್ನಾಥನ ಟ್ಯಾಟೂ ಹಾಕಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಮಹಿಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ03:57 PM (IST) Mar 03
ಪಿಜಿ ಓನರ್ ಆದ್ರೆ ಏನೆಲ್ಲ ಲಾಭವಿದೆ? ಈ ಪ್ರಶ್ನೆಗೆ ಮಹಿಳೆಯೊಬ್ಬಳು ಉತ್ತರ ನೀಡಿದ್ದಾಳೆ. ಎಕ್ಸ್ ಖಾತೆಯಲ್ಲಿ ಆಕೆ ಪೋಸ್ಟ್ ವೈರಲ್ ಆಗಿದೆ.
03:23 PM (IST) Mar 03
ಯೂಟ್ಯೂಬರ್ ರಣವೀರ್ ಅಲಹಬಾದಿಯಾ ಅವರ ವಿವಾದಾತ್ಮಕ ಕಾಮೆಂಟ್‌ನ ನಂತರ, ಡಿಜಿಟಲ್ ಕಂಟೆಂಟ್‌ಗಾಗಿ ಮಾರ್ಗಸೂಚಿಗಳನ್ನು ರೂಪಿಸುವ ಮುನ್ನ ನೈತಿಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮತೋಲನದಲ್ಲಿರಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲಹಬಾದಿಯಾ ಅವರ ಕಾರ್ಯಕ್ರಮಗಳು ನೈತಿಕ ಮಾನದಂಡಗಳನ್ನು ಪಾಲಿಸುವಂತೆ ಕೋರ್ಟ್ ಸೂಚಿಸಿದೆ.
ಪೂರ್ತಿ ಓದಿ01:57 PM (IST) Mar 03
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲ ತಾಪದಿಂದ ಇನ್ನೂ ಎರಡು ದಿನ ಉಷ್ಣ ಅಲೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗುತ್ತಿದೆ.
ಪೂರ್ತಿ ಓದಿ01:33 PM (IST) Mar 03
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನಿಷ್ಠ 9 ಮಂದಿ ಶಾಸಕರನ್ನು ಗೆಲ್ಲಿಸಬೇಕು, ಪಕ್ಷ ಸಂಘಟನೆಗೆ 3 ತಿಂಗಳು ಕೊಡುತ್ತೇನೆ, ಇಲ್ಲದಿದ್ದಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಡುಪಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪೂರ್ತಿ ಓದಿ01:11 PM (IST) Mar 03
ಪತ್ನಿ ಜೊತೆ ನೈಟ್ ಗೇಮ್ ಇಷ್ಟ ಎಂದಿದ್ದ ಆಕಾಶ್ ಅಂಬಾನಿ ನೈಟ್ ಔಟ್ ಮುಗಿಸಿದ್ದಾರೆ. ಶ್ಲೋಕಾ ಹಾಗೂ ಆಕಾಶ್ ಅಂಬಾನಿ ಫೋಟೋಗಳ ವೈರಲ್ ಆಗ್ತಿವೆ.
01:10 PM (IST) Mar 03
2024-25ನೇ ಹಣಕಾಸು ವರ್ಷದ ಅಂತ್ಯ ಸಮೀಪಿಸುತ್ತಿದ್ದಂತೆ, ತೆರಿಗೆ ಉಳಿತಾಯ ಹೂಡಿಕೆ, ಬಂಡವಾಳ ಲಾಭಗಳ ಸರಿದೂಗಿಸುವಿಕೆ, ವಿಶೇಷ FD ಯೋಜನೆಗಳಲ್ಲಿ ಹೂಡಿಕೆ ಮತ್ತು ಮುಂಗಡ ತೆರಿಗೆ ಪಾವತಿಯಂತಹ ಪ್ರಮುಖ ಹಣಕಾಸು ಕಾರ್ಯಗಳನ್ನು ಪೂರ್ಣಗೊಳಿಸಲು ಗಮನಹರಿಸಿ. ಮಾರ್ಚ್ 31ರ ಗಡುವನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಹಣಕಾಸು ಯೋಜನೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ.
ಪೂರ್ತಿ ಓದಿ12:38 PM (IST) Mar 03
ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ 1 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ವಜಾ ಮಾಡಲು ಯೋಜನೆ ರೂಪಿಸುತ್ತಿದೆ. ನಷ್ಟ ಸರಿದೂಗಿಸಲು ಮತ್ತು ಕಾರ್ಯಾಚರಣೆಗಳನ್ನು ಪುನರ್ರಚಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಪೂರ್ತಿ ಓದಿ10:53 AM (IST) Mar 03
ಅಂಕಪಟ್ಟಿ ಕೊಡೋನು, ಪರೀಕ್ಷೆ ಪಾಸು ಮಾಡಿಸೋರಿಬ್ಬರೂ ಅಲ್ಲೇ ಸೇರಿಬಿಟ್ರು, ಮುಂದೇನು ಗತಿ? ಎಂದು ಸುದ್ದಿಗಾರರ ಪ್ರಶ್ನೆಗೆ ಪೊಲೀಸ್ ಕಮೀಶ್ವರ್ ಸಾಹೇಬ್ರು ತುಸು ವಿಚಲಿತರಾದವರಂತೆ ಕಂಡರೂ ತಕ್ಷಣ ಅಧಿಕಾರಿಗಳನ್ನ ಕರೆದು ಈ ಡೆಡ್ಲಿ ಕಾಂಬಿನೇಷನ್ ಬಗ್ಗೆ ಎಚ್ಚರವಹಿಸಲು ಸೂಚಿಸಿದರೆನ್ನಿ,
ಪೂರ್ತಿ ಓದಿ10:40 AM (IST) Mar 03
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ನಾಯಕರ ಸಭೆ ನಡೆಯಿತು.
ಪೂರ್ತಿ ಓದಿ08:31 AM (IST) Mar 03
ಆಶಾ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಮತ್ತು ವೇತನ ಸಹಿತ ಮಾತೃತ್ವ ರಜೆಯನ್ನು ನೀಡಲು ನಿರ್ಧರಿಸಿದೆ. ನಿವೃತ್ತಿ ವಯಸ್ಸನ್ನು ಹೆಚ್ಚಿಸಿ, 30 ವರ್ಷ ಸೇವೆ ಸಲ್ಲಿಸಿದವರಿಗೆ 1.5 ಲಕ್ಷ ರು. ಗ್ರಾಚ್ಯುಟಿ ನೀಡಲಾಗುವುದು.
ಪೂರ್ತಿ ಓದಿ