ಬೆಂಗಳೂರು (ಮಾ.10): 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅಗತ್ಯ ಅನುದಾನ ಒದಗಿಸದೆ ಈ ವಿವಿಗಳನ್ನು ಆಂಭಿಸಲಾಗಿತ್ತು ಎನ್ನುವ ವಾದಗಳ ನಡುವೆ ರಾಜ್ಯದಲ್ಲಿ ಹಣವಿಲ್ಲದೆ ಪರದಾಟ ನಡೆಸುತ್ತಿರುವ ವಿವಿಗಳು ಸಾಕಷ್ಟಿವೆ. ನಾಲ್ಕು ವಿವಿಗಳನ್ನು ಬಿಟ್ಟರೆ, ರಾಜ್ಯದ ಉಳಿದೆಲ್ಲಾ ವಿವಿಗಳು ದುಡ್ಡಿಲ್ಲದೆ ಪರದಾಟ ನಡೆಸಿವೆ ಎನ್ನುವ ಮಾಹಿತಿ ಗೊತ್ತಾಗಿದೆ. ಇನ್ನೊಂದೆ ರಾಷ್ಟ್ರಮಟ್ಟದಲ್ಲಿ ಇಂದಿನಿಂದ ಸಂಸತ್ ಬಜೆಟ್‌ನ ಮುಂದುವರಿದ ಅಧಿವೇಶನ ಆರಂಭವಾಗಲಿದೆ. ಇಂದಿನಿಂದ ಏಪ್ರಿಲ್ 4 ರವರೆಗೂ ಈ ಅಧಿವೇಶನ ನಡೆಯಲಿದೆ. ಆಡಳಿತ ಪಕ್ಷ ಮತ್ತು ವಿಪಕ್ಷಗಳ ಜಟಾಪಟಿಗೆ ವೇದಿಕೆ ರೆಡಿಯಾಗಿದೆ. ಟ್ರಂಪ್ ತೆರಿಗೆ ಏರಿಕೆ, ಭಾರತೀಯರನ್ನು ಅಪರಾಧಿಗಳ ರೀತಿ ಅಮೆರಿಕ ಗಡೀಪಾರು ವಿಚಾರ, ಲೋಕಸಭಾ ಕ್ಷೇತ್ರ ಮರುವಿಂಗಡಣೆ, ಹಿಂದಿ ಹೇರಿಕೆ ವಿಚಾರಗಳು ಪ್ರಸ್ತಾಪಿಸಲು ವಿಪಕ್ಷಗಳು ಸಿದ್ದತೆ ಮಾಡಿದ್ದರೆ, ವಕ್ಫ್ ಮಸೂದೆ ಪಾಸ್ ಮಾಡಲು ಮೋದಿ ಸರ್ಕಾರ ಮತ್ತೊಂದು ಕಡೆ ಸಿದ್ದತೆ ನಡೆಸಿದೆ.

11:28 PM (IST) Mar 10
ಬೆಂಗಳೂರು ಮೂಲದ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಅಕ್ಷರ ಫೌಂಡೇಷನ್ ತನ್ನ ಪರಿಣಾಮದ 25ವರ್ಷಗಳನ್ನು ಸಂಭ್ರಮಿಸುತ್ತಿದ್ದು 'ಪ್ರತಿ ಮಗುವೂ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದೆ ಮತ್ತು ಚೆನ್ನಾಗಿ ಕಲಿಯುತ್ತಿದೆ' ಎನ್ನುವುದನ್ನು ದೃಢೀಕರಿಸಲು...
ಪೂರ್ತಿ ಓದಿ11:06 PM (IST) Mar 10
ನಾರಾಯಣ ಮೂರ್ತಿ ಪತ್ನಿ: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ 30 ವರ್ಷದಿಂದ ಹೊಸ ಸೀರೆ ಖರೀದಿಸಿಲ್ಲ. ಕಾಶಿ ಯಾತ್ರೆಯಲ್ಲಿ ಒಂದು ಇಷ್ಟವಾದ ವಸ್ತು ಬಿಡಲು ನಿರ್ಧರಿಸಿದ್ದಕ್ಕೆ ಸರಳವಾಗಿ ಬದುಕುತ್ತಿದ್ದಾರೆ..
ಪೂರ್ತಿ ಓದಿ11:03 PM (IST) Mar 10
ಸಾಮಾನ್ಯವಾಗಿ ಮಗು ಹುಟ್ಟಿದಾಗ 2.5 ಕೆಜಿಯಿಂದ ಹೆಚ್ಚೆಂದರೆ 3.5 ಕೆಜಿ ತೂಕವಿರುತ್ತೆ. ಆದರೆ ಈ ತಾಯಿ ಹೆತ್ತ ಮಗುವಿನ ತೂಕ ನೋಡಿ ಖುದ್ದು ತಾಯಿಯೇ ಅಚ್ಚರಿಗೊಂಡಿದ್ದಾರೆ. ಇತ್ತ ವೈದ್ಯರೂ ಶಾಕ್ ಆಗಿದ್ದಾರೆ. ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಗರಿಷ್ಠ ತೂಕದ ಮಗು ಹುಟ್ಟಿದೆ.
ಪೂರ್ತಿ ಓದಿ09:47 PM (IST) Mar 10
ಈ ಬಾರಿ ಸುನಿತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಜೊತೆ ಸ್ಪೇಸ್ ಎಕ್ಸ್ ಸಂಸ್ಥೆಯ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಭೂಮಿಗೆ ಆಗಮಿಸಲಿದ್ದಾರೆ. ನೌಕೆ ಉಡಾವಣೆಗೊಳ್ಳುವುದು ಯಾವಾಗ? ಸುನಿತಾ ವಿಲಿಯಮ್ಸ್, ವಿಲ್ಮೋರ್, ಹೇಗ್ ಮತ್ತು ಗೊರ್ಬುನೊವ್ ಭೂಮಿಗೆ ಮರಳು ದಿನಾಂಕ ಯಾವಾಗ?
ಪೂರ್ತಿ ಓದಿ09:43 PM (IST) Mar 10
ಚಿಕ್ಕಮಗಳೂರಿನಲ್ಲಿ ನಕ್ಸಲ್ ಚಟುವಟಿಕೆಗಳು ಅಂತ್ಯಗೊಂಡಿವೆ, ಆದರೆ ಕುಗ್ರಾಮಗಳ ಸಮಸ್ಯೆಗಳು ಹಾಗೆಯೇ ಉಳಿದಿವೆ. ಮಾಜಿ ನಕ್ಸಲರು ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಗಮನಹರಿಸಲು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒತ್ತಾಯಿಸಿದ್ದಾರೆ.
ಪೂರ್ತಿ ಓದಿ09:33 PM (IST) Mar 10
ಮಡಿಕೇರಿಯಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಜೆಟ್ ಟೀಕಿಸಿದ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಪಸಂಖ್ಯಾತರಿಗೆ ನೀಡುವ ಅನುದಾನದ ಬಗ್ಗೆಯೂ ಮಾತನಾಡಿದ್ದಾರೆ.
ಪೂರ್ತಿ ಓದಿ09:32 PM (IST) Mar 10
ತಂಗಾಳಿ ತಡ್ಕೊಂಡು, ಬೆಳದಿಂಗಳಲ್ ಮಲಕೊಂಡು, ಉತ್ತೋ ಬಿತ್ತೋ ಆಡೋಣ..! ನಾದ ಬ್ರಹ್ಮ ಹಂಸಲೇಖ ಬರೆದ ಈ ಹಾಡು ಕೇಳಿದರೆ ಸುಖದಿಂದ ನರಳುವಂತೆ ಮಾಡುತ್ತೆ. ಅಷ್ಟಕ್ಕೂ ಈ ಹಾಡು ನಿಮನ್ನು ಯಾವ ಮೂಡ್‌ಗೆ ಕರೆದೊಯ್ತುತ್ತೆ, ಒಂದು ಸಲ ಕೇಳಿ ನೋಡಿ.
ಪೂರ್ತಿ ಓದಿ09:16 PM (IST) Mar 10
ಅವೆಲ್ಲಾ ಮಾತುಗಳಿಗೆ ಫೈನಲ್ ಆಗಿ ಯಾವತ್ತೋ ತೆರೆ ಎಳೆದಿದ್ದಾರೆ ಪಾರ್ವತಮ್ಮ ರಾಜ್‌ಕುಮಾರ್. ಅವರು ಬದುಕಿದ್ದಾಗ ಹೇಳಿದ್ದ ಆ ಕೆಲವು ಮಾತುಗಳು ಈಗ ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಬಹಳಷ್ಟು ವೈರಲ್ ಅಗುತ್ತಿವೆ. ಡಾ ರಾಜ್‌ಕುಮಾರ್..
ಪೂರ್ತಿ ಓದಿ09:03 PM (IST) Mar 10
ನಿರ್ಮಾ, ಪಾರ್ಲೇಜಿ, ಸ್ಟಾರ್‌ಬಕ್ಸ್ ಸೇರಿದಂತೆ ಕೆಲ ಜನಪ್ರಿಯ ಬ್ರ್ಯಾಂಡ್ ಲೋಗೋ ರಿಯಲ್ ಲೈಫ್‌ನಲ್ಲಿ ಇದ್ದರೆ ಹೇಗಿರುತ್ತಿತ್ತು? ಈ ಭಿನ್ನ ಆಲೋಚನೆಯನ್ನು ಎಐ ಮೂಲಕ ಸಾಕಾರಗೊಳಿಸಲಾಗಿದೆ. ಲೋಗೋ ರಿಯಾಲಿಟಿ ಆಗಿದ್ದರೆ ಹೇಗಿರುತ್ತೆ, ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.
ಪೂರ್ತಿ ಓದಿ08:34 PM (IST) Mar 10
ರಷ್ಯನ ಬೆಡಗಿಯೊಬ್ಬಳು ಭಾರತದ ಯುವಕರಿಗೆ ಒಂದೊಳ್ಳೆ ಆಫರ್ ಕೊಟ್ಟಿದ್ದಾಳೆ. ಮಾಲ್ ಒಂದರಲ್ಲಿ ಬೊಂಬೆಗಳ ಪಕ್ಕ ನಿಂತ ಈಕೆ ಹೇಳಿರೋದೇನು ನೋಡಿ!
08:18 PM (IST) Mar 10
ಬ್ರಹ್ಮಗಂಟು ಧಾರಾವಾಹಿಯಲ್ಲಿ, ಅತ್ತಿಗೆಯ ಮಾತು ಕೇಳಿ ಅಪ್ಪನನ್ನು ದ್ವೇಷಿಸುವ ಚಿರುಗೆ ಅಪ್ಪನ ಪ್ರೀತಿ ಅರ್ಥ ಮಾಡಿಸಲು ದೀಪಾ ಪ್ರಯತ್ನಿಸುತ್ತಿದ್ದಾಳೆ. ವೀಕ್ಷಕರು ಚಿರುಗೆ ಅಹಂಕಾರ ಬಿಟ್ಟು ಅಪ್ಪನ ಪ್ರೀತಿ ಅನುಭವಿಸುವಂತೆ ಬುದ್ಧಿ ಹೇಳುತ್ತಿದ್ದಾರೆ.
ಪೂರ್ತಿ ಓದಿ08:05 PM (IST) Mar 10
ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ವಿಚ್ಚೇದನ ಕೋರ್ಟ್‌ನಲ್ಲಿದೆ. ಇದರ ನಡುವೆ ಚಹಾಲ್ ಹೊಸ ಹುಡುಗಿ ಜೊತೆ ಕಾಣಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಧನಶ್ರಿ ವರ್ಮಾ, ಸೋಶಿಯಲ್ ಮೀಡಿಯಾದಲ್ಲಿ ಚಹಲ್ ಜೊತೆಗಿದ್ದ ಎಲ್ಲಾ ಫೋಟೋ ಡಿಲೀಟ್ ಮಾಡಿದ್ದಾರೆ.
ಪೂರ್ತಿ ಓದಿ08:02 PM (IST) Mar 10
ಬಿಹಾರದ ಅರಾಹ್‌ನಲ್ಲಿರುವ ತನಿಷ್ಕ್ ಜ್ಯುವೆಲ್ಲರಿ ಶಾಪ್‌ನಲ್ಲಿ ಹಾಡಹಗಲೇ ದರೋಡೆ ನಡೆದಿದೆ. ಗನ್ ತೋರಿಸಿ 25 ಕೋಟಿ ರೂ. ಮೌಲ್ಯದ ಆಭರಣಗಳನ್ನು ದರೋಡೆಕೋರರು ದೋಚಿ ಪರಾರಿಯಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.
ಪೂರ್ತಿ ಓದಿ06:22 PM (IST) Mar 10
ಪೀಕ್ ಬೆಂಗಳೂರು ಮೂಮೆಂಟ್ ಹಲವು ಬಾರಿ ಭಾರಿ ಸದ್ದು ಮಾಡಿದೆ. ಇದೀಗ ಬೆಂಗಳೂರು ಆಟೋ ಚಾಲಕ ವರ್ಕ್ ಫ್ರಮ್ ಆಟೋ ಕಾನ್ಸೆಪ್ಟ್ ಎಲ್ಲರ ಚಕಿತಗೊಳಿಸಿದೆ. ಈತನ ಹೊಸ ಐಡಿಯಾಗೆ ಜನ ಮಾರು ಹೋಗಿದ್ದಾರೆ. ಒಂದೊಂದು ಕಮೆಂಟ್ ಕೂಡ ಬೆಂಕಿ.
06:21 PM (IST) Mar 10
ಆರ್.ವಿ.ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗ ಮೆಟ್ರೋ ಮೇ 2025ರಲ್ಲಿ ಸಂಚಾರ ಆರಂಭಿಸಲಿದೆ. ಕಾಳೇನ ಅಗ್ರಹಾರದಿಂದ ನಾಗವಾರವರೆಗಿನ ಪಿಂಕ್ ಲೈನ್ ಡಿಸೆಂಬರ್ 2026ರ ಒಳಗೆ ಸಂಚಾರಕ್ಕೆ ಮುಕ್ತವಾಗಲಿದೆ.
ಪೂರ್ತಿ ಓದಿ05:58 PM (IST) Mar 10
ಕುಡಿದ ಮತ್ತಿನಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬ ರೈಲು ಬರುವ ಕೆಲ ಸೆಕೆಂಡ್ ಮುನ್ನ ಎದ್ದು ಪವಾಡಸದೃಶವಾಗಿ ಪಾರಾಗಿದ್ದಾನೆ. ಪೆರುವಿನಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೂರ್ತಿ ಓದಿ05:56 PM (IST) Mar 10
ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿಶ್ವವಿದ್ಯಾಲಯದೊಂದಿಗೆ ವಿಲೀನಗೊಳಿಸುವುದು ಉತ್ತಮ ಎಂದು ಮರಿತಿಬ್ಬೇಗೌಡ ಅಭಿಪ್ರಾಯಪಟ್ಟಿದ್ದಾರೆ. ಮೂಲ ಸೌಕರ್ಯಗಳ ಕೊರತೆ ಮತ್ತು ಅನುದಾನದ ಸಮಸ್ಯೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವೆಂದು ಅವರು ಹೇಳಿದ್ದಾರೆ.
ಪೂರ್ತಿ ಓದಿ05:40 PM (IST) Mar 10
ಟಿಬೆಟ್‌ನಲ್ಲಿ ಚೀನಾ ಸರ್ಕಾರವು ಭಾಷೆ, ಧರ್ಮ ಮತ್ತು ಸಂಸ್ಕೃತಿಯ ಮೇಲೆ ಹಿಡಿತ ಸಾಧಿಸುವ ಮೂಲಕ ಟಿಬೆಟಿಯನ್ ಗುರುತನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿದೆ. ಟಿಬೆಟಿಯನ್ ಭಾಷಾ ಶಾಲೆಗಳನ್ನು ಮುಚ್ಚಲಾಗುತ್ತಿದೆ, ಮಠಗಳನ್ನು ಕಣ್ಗಾವಲಿನಲ್ಲಿ ಇರಿಸಲಾಗುತ್ತಿದೆ, ಮತ್ತು ಸಾಂಸ್ಕೃತಿಕ ಹಬ್ಬಗಳನ್ನು ನಿರ್ಬಂಧಿಸಲಾಗುತ್ತಿದೆ.
ಪೂರ್ತಿ ಓದಿ05:16 PM (IST) Mar 10
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆದ್ದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ, ವಿರಾಟ್ ಕೊಹ್ಲಿಯ ಪ್ರಮುಖ ಪಾತ್ರದಿಂದ 12 ವರ್ಷಗಳ ನಂತರ ಭಾರತಕ್ಕೆ ಈ ಗೆಲುವು ಸಿಕ್ಕಿದೆ.
ಪೂರ್ತಿ ಓದಿ05:06 PM (IST) Mar 10
ಇನ್‌ಫ್ಲುಯೆನ್ಸರ್ ಕರೆಗೆ ಹೆಣ್ಣು ಮಕ್ಕಳು ತಮ್ಮ ಮಾಜಿ ಪ್ರಿಯಕರರನ್ನು ವಿವಿಧ ಬ್ರಾಂಡ್‌ಗಳಿಗೆ ಹೋಲಿಸಿ ಮಜಾ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಉಬರ್‌ನಿಂದ ನೆಟ್‌ಫ್ಲಿಕ್ಸ್‌ವರೆಗೆ, ಹೆಣ್ಣುಮಕ್ಕಳು ತಮ್ಮ ಅನುಭವಗಳನ್ನು ತಮಾಷೆಯಾಗಿ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ04:55 PM (IST) Mar 10
ಉತ್ತರ ಕೊರಿಯಾವು ಗುರುತಿಸಲಾಗದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯಾದ ಸೇನೆ ಹೇಳಿದೆ. ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಜಂಟಿ ಮಿಲಿಟರಿ ತಾಲೀಮುಗಳ ನಡುವೆ ಈ ಘಟನೆ ನಡೆದಿದೆ.
ಪೂರ್ತಿ ಓದಿ04:45 PM (IST) Mar 10
ಮಾರ್ಚ್ 11 ರ ರಾತ್ರಿಯಿಂದ 3 ರಾಶಿಚಕ್ರ ಚಿಹ್ನೆಗಳ ಅದೃಷ್ಟ ಬೆಳಗಬಹುದು. ಚಂದ್ರನು ಬುಧ ನಕ್ಷತ್ರಪುಂಜವನ್ನು ಪ್ರವೇಶಿಸುತ್ತಾನೆ.
04:34 PM (IST) Mar 10
2025ರ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ಹಾಗೂ ಆರ್‌ಸಿಬಿ ಮುಖಾಮುಖಿಯಾಗಲಿವೆ. ಈ ನಡುವೆ ಅಂಬಟಿ ರಾಯುಡು ಆರ್‌ಸಿಬಿ ಕಪ್ ಗೆಲ್ಲಬಾರದು ಎಂದು ಹೇಳಿಕೆ ನೀಡಿದ್ದಾರೆ.
ಪೂರ್ತಿ ಓದಿ04:34 PM (IST) Mar 10
ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕಿಬಿದ್ದ ನಟಿ ರನ್ಯಾ ರಾವ್ ಪ್ರಕರಣದಲ್ಲಿ ಆಕೆಯ ಸ್ನೇಹಿತ ತರುಣ್ ರಾಜ್ ಬಂಧನವಾಗಿದೆ. ತರುಣ್ ರನ್ಯಾ ಜೊತೆ ನಿಕಟ ಸಂಪರ್ಕ ಹೊಂದಿದ್ದು, ದುಬೈಗೆ ಜೊತೆಯಲ್ಲೇ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.
ಪೂರ್ತಿ ಓದಿ04:32 PM (IST) Mar 10
ಅಮಿತಾಬ್ ಬಚ್ಚನ್ ಮನೆಯಲ್ಲಿ ಹುಟ್ಟು ಹಬ್ಬ ಆಚರಣೆ ಹೇಗಿದೆ ಗೊತ್ತಾ? ಇಲ್ಲಿ ಕೇಕ್ ಕತ್ತರಿಸಿ ಹ್ಯಾಪಿ ಬರ್ತ್ ಡೇ ಟು ಯು ಅಂತಾ ಹಾಡುವ ಸಂಪ್ರದದಾಯವಿಲ್ಲ. ಹಾಗಾದರೆ ಬಚ್ಚನ್ ಮನೆಯಲ್ಲಿ ಬರ್ತ್ ಡೇ ಸೆಲೆಬ್ರೆಷನ್ ಹೇಗಿರುತ್ತೆ?
ಪೂರ್ತಿ ಓದಿ04:21 PM (IST) Mar 10
ಗೂಗಲ್ ತನ್ನ ಉದ್ಯೋಗಿಗಳಿಗೆ ನೀಡುವ ಸೌಲಭ್ಯಗಳು ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಗುರುಗ್ರಾಮದ ಗೂಗಲ್ ಕಚೇರಿಯ ವಿಡಿಯೋ ವೈರಲ್ ಆಗಿದ್ದು, ಉದ್ಯೋಗಿಗಳ ಒಂದು ದಿನ ಹೇಗಿರುತ್ತದೆ ಎಂಬುದನ್ನು ತೋರಿಸುತ್ತದೆ.
ಪೂರ್ತಿ ಓದಿ04:17 PM (IST) Mar 10
ಯೂಟ್ಯೂಬ್ ಖಾತೆ ಹೊಂದಿದ್ದು, ಹೊಸ ಹೊಸ ವಿಡಿಯೋ ಪೋಸ್ಟ್ ಮಾಡ್ತೀರಿ ಅಂದ್ರೆ ಯೂಟ್ಯೂಬ್ ನಿಯಮಗಳು ನಿಮಗೆ ತಿಳಿದಿರಬೇಕು. ಅದ್ರಲ್ಲೂ ಮಾರ್ಚ್ 19ರಿಂದ ಯೂಟ್ಯೂಬ್ ಜಾರಿಗೆ ತರ್ತಿರುವ ಕಠಿಣ ನಿಯಮಗಳನ್ನು ಅರಿತಿರಲೇಬೇಕು.
03:56 PM (IST) Mar 10
ಕನ್ನಡ ಕಿರುತೆರೆ ನಟರಾದ ಸುನೇತ್ರಾ ಪಂಡಿತ್ ಹಾಗೂ ರಮೇಶ್ ಪಂಡಿತ್ 30ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ನಟಿ ಸುನೇತ್ರಾ 30 ವರ್ಷ ಹಿಂದಿನ ಹಾಗೂ ಇಂದಿನ ಫೋಟೊಗಳನ್ನು ಶೇರ್ ಮಾಡಿದ್ದಾರೆ.
03:26 PM (IST) Mar 10
ಇಸ್ಲಾಂನ ಪವಿತ್ರ ಮಾಸದಲ್ಲಿ ಪಾಕಿಸ್ತಾನದಲ್ಲಿ 9 ಮುಗ್ಧ ನಾಯಿಮರಿಗಳನ್ನು ಸಜೀವ ದಹನ ಮಾಡಲಾಗಿದೆ. ಈ ಅಮಾನವೀಯ ಘಟನೆಗೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪೂರ್ತಿ ಓದಿ03:26 PM (IST) Mar 10
ಈಗ ಬಹುತೇಕ ಎಲ್ಲಾ ಸಿನಿಮಾದಲ್ಲಿ ಲಿಪ್ ಲಾಕ್ ಸೀನ್ ಇದ್ದೆ ಇರುತ್ತೆ. ಆದರೆ ಈ ಲಿಪ್ ಟು ಲಿಪ್ ಕಿಸ್ ಭಾರತೀಯ ಸಿನಿಮಾಗೆ ಹೊಸದೇನಲ್ಲ. ಕಾರಣ 1933ರಲ್ಲಿ ಭಾರತೀಯ ಸಿನಿಮಾದಲ್ಲಿ ಲಿಪ್ ಕಿಸ್ ದೃಶ್ಯವಿತ್ತು. ಇದೀಗ 92 ವರ್ಷ ಉರುಳಿಸಿದೆ. ವಿಶೇಷ ಅಂದರೆ ನಾಯಕ ಹಾಗೂ ನಾಯಕಿ ಬರೋಬ್ಬರಿ 4 ನಿಮಿಷ ಚುಂಬಿಸಿದ್ದರು.
02:35 PM (IST) Mar 10
ಬೈಕ್‌ನಲ್ಲಿ ಹೋಗುವಾಗ ಸೀರೆಯ ಸೆರಗು ಚಕ್ರಕ್ಕೆ ಸಿಲುಕದಂತೆ ಎಚ್ಚರಿಸಲು ಹೋದವರಿಗೆ ಮಹಿಳೆ ನೀಡಿದ ಉತ್ತರ ವೈರಲ್ ಆಗಿದೆ..
ಪೂರ್ತಿ ಓದಿ02:27 PM (IST) Mar 10
ಸಾಮಾಜಿಕ ಜಾಲತಾಣದಲ್ಲಿ 8 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ಮಕ್ಕಳು ಸ್ಕಿಪ್ಪಿಂಗ್ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಪರಿಸರ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ತನಿಖೆಗೆ ಆದೇಶಿಸಲಾಗಿದೆ.
ಪೂರ್ತಿ ಓದಿ02:25 PM (IST) Mar 10
2025 ರ ವರ್ಷದ ಆರಂಭವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಅದ್ಭುತವಾಗಿದೆ. ಆದರೆ ಕೆಲವು ರಾಶಿಚಕ್ರ ಚಿಹ್ನೆಗಳು ಇನ್ನೂ ತಮ್ಮ ಒಳ್ಳೆಯ ದಿನಗಳಿಗಾಗಿ ಕಾಯುತ್ತಿವೆ. ಮಾರ್ಚ್ ನಂತರ ಮುಂಬರುವ ಸಮಯದಲ್ಲಿ ಗ್ರಹಗಳ ಸಂಯೋಗದಿಂದಾಗಿ ಈ ವರ್ಷ ಅವರಿಗೆ ಉತ್ತಮವೆಂದು ಸಾಬೀತುಪಡಿಸಬಹುದು.
ಪೂರ್ತಿ ಓದಿ02:24 PM (IST) Mar 10
ಬೆಂಗಳೂರಿನ ಕೆಆರ್ ಸರ್ಕಲ್‌ನಲ್ಲಿ ಹೆಲ್ಮೆಟ್ ಇಲ್ಲದೆ ಐವರು ಒಂದೇ ಬೈಕ್‌ನಲ್ಲಿ ಸಂಚರಿಸುತ್ತಿರುವ ದೃಶ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪೂರ್ತಿ ಓದಿ01:36 PM (IST) Mar 10
ಹೋಳಿ ಹಬ್ಬದ ಪ್ರಯುಕ್ತ iPhone 16 ಮೇಲೆ ಭರ್ಜರಿ ಆಫರ್ ಲಭ್ಯವಿದೆ. Flipkartನಲ್ಲಿ 12% ಡಿಸ್ಕೌಂಟ್ ಮತ್ತು ಎಕ್ಸ್ಚೇಂಜ್ ಆಫರ್‌ನೊಂದಿಗೆ ಕೇವಲ 6,800 ರೂಪಾಯಿಗೆ ಐಫೋನ್ ಪಡೆಯಿರಿ.
ಪೂರ್ತಿ ಓದಿ01:34 PM (IST) Mar 10
ಮಾರ್ಚ್ ಎರಡನೇ ವಾರದಲ್ಲಿ ಮಾಲವ್ಯ ರಾಜಯೋಗದಿಂದ ಈ ರಾಶಿಗೆ ಅದೃಷ್ಟ ಬರಬಹುದು.
01:26 PM (IST) Mar 10
2025ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಸೋಲಿನ ಬಳಿಕ ನ್ಯೂಜಿಲೆಂಡ್ ನಾಯಕ ಸ್ಯಾಂಟ್ನರ್ ಸೋಲಿಗೆ ಕಾರಣಗಳನ್ನು ವಿವರಿಸಿದ್ದಾರೆ. ರೋಹಿತ್ ಶರ್ಮಾ ಅವರ ಅದ್ಭುತ ಆಟ ಹಾಗೂ ಭಾರತದ ಬೌಲಿಂಗ್ ವಿಭಾಗದ ಪ್ರದರ್ಶನವನ್ನು ಅವರು ಶ್ಲಾಘಿಸಿದ್ದಾರೆ.
ಪೂರ್ತಿ ಓದಿ01:26 PM (IST) Mar 10
ಬೆಳಗಾವಿಯಲ್ಲಿ ಮುಸ್ಲಿಂ ಯುವಕನೊಂದಿಗೆ ಓಡಿಹೋದ ಹಿಂದೂ ಯುವತಿ, ತಾಯಿಯ ಕಣ್ಣೀರಿಗೂ ಕರಗದ ಮನಸ್ಸು. ಮದುವೆಯಾಗಿ ಬಂದಿದ್ದೇನೆ, ಮನೆಗೆ ಬರುವುದಿಲ್ಲ ಎಂದ ಮಗಳು. ಇದರಿಂದ ತಾಯಿ ಪೊಲೀಸ್ ಠಾಣೆಯಲ್ಲೇ ಕುಸಿದುಬಿದ್ದ ಘಟನೆ.
ಪೂರ್ತಿ ಓದಿ01:12 PM (IST) Mar 10
ತುಮಕೂರಿನಲ್ಲಿ ಆಟೋದಲ್ಲಿ ಚಿನ್ನಾಭರಣವಿದ್ದ ಬ್ಯಾಗ್ ಮರೆತುಹೋಗಿದ್ದನ್ನು ಆಟೋ ಚಾಲಕ ರವಿಕುಮಾರ್ ವಾಪಸ್ ನೀಡಿದ್ದಾರೆ. 4 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಹಿಂದಿರುಗಿಸುವ ಮೂಲಕ ರವಿಕುಮಾರ್ ಪ್ರಾಮಾಣಿಕತೆ ಮೆರೆದಿದ್ದಾರೆ. ಪೊಲೀಸರು ಮತ್ತು ಸಾರ್ವಜನಿಕರು ಆಟೋ ಚಾಲಕನ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದಾರೆ.
ಪೂರ್ತಿ ಓದಿ12:47 PM (IST) Mar 10
ಜ್ಯೋತಿಷಿಗಳ ಪ್ರಕಾರ, ಮಾರ್ಚ್‌ನಲ್ಲಿ ಶುಕ್ರ ಗ್ರಹ ಸೂರ್ಯನಿಗೆ ಬಹಳ ಹತ್ತಿರ ಬರುತ್ತದೆ. ನಂತರ ಹೋಳಿಯಾದ ನಾಲ್ಕು ದಿನಗಳ ನಂತರ, ಅಂದರೆ ಮಾರ್ಚ್ 18 ರಂದು ಶುಕ್ರ ಅಸ್ತಮಿಸುತ್ತಾನೆ. 4 ದಿನಗಳ ನಂತರ, ಮಾರ್ಚ್ 23 ರಂದು ಉದಯಿಸುತ್ತಾನೆ. ಈ ಸಮಯದಲ್ಲಿ ಈ 5 ರಾಶಿಯವರ ಜೀವನದಲ್ಲಿ ಧನಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ.
ಪೂರ್ತಿ ಓದಿ