ಬೆಂಗಳೂರು (ಮಾ.1): ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಶನಿವಾರದಿಂದ ರಾಜ್ಯಾದ್ಯಂತ ಆರಂಭವಾಗಲಿದೆ.ಇಂದು ಅರೇಬಿಕ್ ಹಾಗೂ ಕನ್ನಡ ವಿಷಯಗಳ ಪರೀಕ್ಷೆಗಳು ನಡೆಯಲಿದೆ. 7.13 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. 3.15 ನಿಮಿಷ ಇದ್ದ ಪರೀಕ್ಷಾ ಅವಧಿಯನ್ನು ಈ ಬಾರಿ 3 ಗಂಟೆಗೆ ಇಳಿಸಲಾಗಿದೆ ಅನ್ನೋದು ಗಮನಕ್ಕಿರಲಿ. ಇನ್ನೊಂದೆಡೆ ಇಡ್ಲಿ ಪ್ಲಾಸ್ಟಿಕ್ ಬಳಿಕ ಟ್ಯಾಟೂ ಇಂಕ್‌ಗೂ ನಿಷೇಧದ ಭೀತಿ ಎದುರಾಗಿದೆ. ಟ್ಯಾಟೂ ಇಂಕ್‌ನಿಂದ ಗಂಭೀರ ಪ್ರಮಾಣದ ಚರ್ಮರೋಗ ಕಾಯಿಲೆ ಬರುವ ಹಿನ್ನಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಪ್ರಸ್ತಾಪ ಮಾಡಿದ್ದಾರೆ. ಇತ್ತ ವಿಶೇಷ ಯೋಜನೆ ಹಾಗೂ ಬುಡಕಟ್ಟು ಯೋಜನೆಯ ಹಣ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಲಾಗಿದೆ ಅನ್ನೋ ಆರೋಪ ಕಾಂಗ್ರೆಸ್ ಸರ್ಕಾರದ ಮೇಲೆ ಕೇಳಿಬಂದಿದೆ.

11:52 PM (IST) Mar 01
iftar party chicken finger recipe: ರಂಜಾನ್ ತಿಂಗಳಲ್ಲಿ ಇಫ್ತಾರ್ ಪಾರ್ಟಿಗಾಗಿ ರುಚಿಕರವಾದ ಮತ್ತು ಆರೋಗ್ಯಕರ ಪಾಕವಿಧಾನಗಳನ್ನು ಹುಡುಕುತ್ತಿದ್ದೀರಾ? ಇಲ್ಲಿ ನೀವು ತಂದೂರಿ ಚಿಕನ್ ಫಿಂಗರ್ಸ್ ರೆಸಿಪಿಯನ್ನು ಕಾಣಬಹುದು.
ಪೂರ್ತಿ ಓದಿ10:58 PM (IST) Mar 01
ಮದುವೆ ವೇಳೆ ಉಡುಗೊರೆ ನೀಡುವು ಸಾಮಾನ್ಯ. ಇದಕ್ಕಾಗಿ ಭಾರಿ ತಲೆ ಕೆಡಿಸಿಕೊಳ್ಳುವುದು, ದುಬಾರಿ ಗಿಫ್ಟ್ ಖರೀದಿಸುತ್ತಾರೆ. ಆದರೆ ಉಡುಗೊರೆ ನೀಡುವಾಗ ಈ ಗಿಫ್ಟ್‌ಗಳನ್ನು ಕೊಡಬೇಡಿ, ವಾಸ್ತು ಪ್ರಕಾರ ಇದರಿಂದ ಅಪಾಯವೇ ಹೆಚ್ಚು.
10:43 PM (IST) Mar 01
ಕೇವಲ 35 ರೂಪಾಯಿಗೆ 2 ಇಡ್ಲಿ ಹಾಗೂ ವಡೆ ನೀಡುವ ಬೀದಿ ಬದಿ ಮಹಿಳೆ ವ್ಯಾಪಾರಿ ಅಂಗಡಿಗೆ ಬಾಲಿವುಡ್ ನಟ ಸೋನು ಸೂದ್ ದಿಢೀರ್ ಭೇಟಿ ನೀಡಿದ್ದಾರೆ. ಅಚ್ಚರಿ ಮೇಲೆ ಅಚ್ಚರಿ ನೀಡಿದ ಸೂದ್.
ಪೂರ್ತಿ ಓದಿ10:43 PM (IST) Mar 01
ಕಾಂಗ್ರೆಸ್ ಶಾಸಕ ರಾಜು ಕಾಗೆ ಪುತ್ರಿ ಕೃತಿಕಾ ಕಾಗೆ ಹೃದಯ ಸಂಬಂಧಿ ಕಾಯಿಲೆಯಿಂದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪೂರ್ತಿ ಓದಿ09:36 PM (IST) Mar 01
ಮಹಾಕುಂಭದ ವೈರಲ್ ಬೆಡಗಿ ಮೊನಾಲಿಸಾ ಸೌಂದರ್ಯಕ್ಕೆ ಭಾರತ ಮನಸೋತಿದೆ. ಆದರೆ ಇದೀಗ ಮೊನಾಲಿಸಾಗೆ ನೆರೆ ದೇಶಗಳಲ್ಲೂ ಡಿಮ್ಯಾಂಡ್ ಹೆಚ್ಚಾಗಿದೆ. ಇದೀಗ ಮೊನಾಲಿಸಿ ನೇಪಾಳದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭರ್ಜರಿ ಸ್ಪೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಹೊಸ ಸಂಚಲನ ಸೃಷ್ಟಿಸಿದೆ.
ಪೂರ್ತಿ ಓದಿ09:22 PM (IST) Mar 01
ಅತಿಯಾದ ಕೊಕೇನ್ ಸೇವನೆಯಿಂದ ಯುವತಿಯೊಬ್ಬಳು ತನ್ನ ಮೂಗನ್ನೇ ಕಳೆದುಕೊಂಡ ದುರಂತ ಘಟನೆ ಇದು. ಚಿಕಾಗೋದ ಕೆಲ್ಲಿ ಕೊಸೈರಾ ಎಂಬ ಯುವತಿ ಕೊಕೇನ್ ಚಟಕ್ಕೆ ಬಲಿಯಾಗಿ, ಮೂಗಿನ ಜಾಗದಲ್ಲಿ ರಂಧ್ರ ಉಂಟಾಗಿ ನರಳಿದಳು. ನಂತರ ವೈದ್ಯರು ಮಾಡಿದ್ದೇನು ನೀವೇ ನೋಡಿ..
ಪೂರ್ತಿ ಓದಿ09:16 PM (IST) Mar 01
2025 ರಲ್ಲಿ ಸಂಭವಿಸಲಿರುವ ವಿನಾಶಕಾರಿ ಘಟನೆಗಳ ಬಗ್ಗೆ ಟೈಮ್ ಟ್ರಾವೆಲರ್ ಒಬ್ಬರು ಭವಿಷ್ಯ ನುಡಿದಿದ್ದಾರೆ. ಚಂಡಮಾರುತ, ಅಂತರ್ಯುದ್ಧ, ಏಲಿಯನ್ ಭೇಟಿ, ಬಿರುಗಾಳಿ, ಬೃಹತ್ ಸಮುದ್ರ ಜೀವಿ ಸೇರಿದಂತೆ ಹಲವು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಪೂರ್ತಿ ಓದಿ09:02 PM (IST) Mar 01
ಭಾರತೀಯ ರಿಸರ್ವ್ ಬ್ಯಾಂಕ್ 2000 ರೂ. ಮುಖಬೆಲೆಯ ನೋಟುಗಳ ವಾಪಸಾತಿಯ ಬಗ್ಗೆ ಮಾಹಿತಿ ನೀಡಿದೆ. ಶೇ. 98.18 ರಷ್ಟು ನೋಟುಗಳು ವಾಪಸ್ ಬಂದಿದ್ದು, ಕೇವಲ 6,471 ಕೋಟಿ ರೂ. ಮೌಲ್ಯದ ನೋಟುಗಳು ಮಾತ್ರ ಬಾಕಿ ಉಳಿದಿವೆ.
ಪೂರ್ತಿ ಓದಿ08:54 PM (IST) Mar 01
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದರು. ರಾಜ್ಯದ ಜನರಿಗೆ ಒಳ್ಳೆಯ ಮನಸ್ಸು ಕೊಡಲಿ ಎಂದು ರಾಯರಲ್ಲಿ ಪ್ರಾರ್ಥಿಸಿದರು ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪೂರ್ತಿ ಓದಿ08:32 PM (IST) Mar 01
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ 80.69 ಕೋಟಿ ರೂ. ಮೌಲ್ಯದ 14 ಎಕರೆ 15 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ. ವಿವಿಧ ತಾಲ್ಲೂಕುಗಳಲ್ಲಿನ ಗೋಮಾಳ, ಸ್ಮಶಾನ, ದೇವಸ್ಥಾನದ ಜಾಗಗಳನ್ನು ವಶಕ್ಕೆ ಪಡೆಯಲಾಗಿದೆ.
ಪೂರ್ತಿ ಓದಿ08:14 PM (IST) Mar 01
ಬೆಂಗಳೂರಿನ ಚಲನಚಿತ್ರೋತ್ಸವದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಿನಿಮಾ ರಂಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮೇಕೆದಾಟು ಪಾದಯಾತ್ರೆಗೆ ಕಲಾವಿದರು ಬಾರದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಪೂರ್ತಿ ಓದಿ07:30 PM (IST) Mar 01
ಮಂಡ್ಯ ವಿಶ್ವವಿದ್ಯಾಲಯವನ್ನು ಮುಚ್ಚುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ ಎಂದು ಅಶ್ವತ್ಥನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿ ವಿಶ್ವವಿದ್ಯಾಲಯವನ್ನು ಸ್ವಾಗತಿಸುತ್ತೇವೆ ಆದರೆ ಮಂಡ್ಯ ವಿವಿ ಮುಚ್ಚುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಪೂರ್ತಿ ಓದಿ07:26 PM (IST) Mar 01
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವತಾರಕ್ಕೆ ಪತ್ನಿ ಮಾತ್ರವಲ್ಲ ಜಗತ್ತೆ ಅಚ್ಚರಿಗೊಂಡಿದೆ. ಗಾಯಕ ಬೆನ್ಸನ್ ಬೂನಿ ಅವತಾರದಲ್ಲಿ ಕುಣಿದು ಕುಪ್ಪಳಿಸಿದ ಜುಕರ್‌ಬರ್ಗ್ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಅಷ್ಟಕ್ಕೂ ಪತ್ನಿಗೆ ಅಚ್ಚರಿ ನೀಡಲು ಮಾರ್ಕ್ ಜುಕರ್‌ಬರ್ಗ್ ಈ ಸಾಹಸಕ್ಕೆ ಕೈಹಾಕಿದ್ದು ಯಾಕೆ?
ಪೂರ್ತಿ ಓದಿ06:46 PM (IST) Mar 01
ಕೇಂದ್ರ ಸರ್ಕಾರವು ಎಸ್‌ಸಿಪಿಟಿಎಸ್‌ಪಿ ಯೋಜನೆಗಳಿಗೆ ಕಡಿಮೆ ಅನುದಾನ ನೀಡುವ ಮೂಲಕ ಎಸ್‌ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಸಚಿವ ಎಚ್‌ಸಿ ಮಹದೇವಪ್ಪ ಆರೋಪಿಸಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಮೌನವಾಗಿರುವುದನ್ನು ಅವರು ಟೀಕಿಸಿದ್ದಾರೆ.
ಪೂರ್ತಿ ಓದಿ06:32 PM (IST) Mar 01
ದೆಹಲಿಯಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು 15 ವರ್ಷ ಹಳೆಯ ವಾಹನಗಳು ಮಾರ್ಚ್ 31ರ ನಂತರ ರಸ್ತೆಗಿಳಿಯದಂತೆ ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಆದೇಶಿಸಿದ್ದಾರೆ. ಮಾಲಿನ್ಯ ನಿಯಂತ್ರಣಕ್ಕಾಗಿ ವಿಮಾನ ನಿಲ್ದಾಣ, ಬಹುಮಹಡಿ ಕಟ್ಟಡಗಳು ಮತ್ತು ದೊಡ್ಡ ಕಚೇರಿಗಳಲ್ಲಿ ಆ್ಯಂಟಿ-ಸ್ಮಾಗ್ ಗನ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
ಪೂರ್ತಿ ಓದಿ06:20 PM (IST) Mar 01
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಇನ್ನು ಮುಂದೆ ವಧು ಹಾಗೂ ವರರ ಜನ್ಮ ದಿನಾಂಕ ಕಡ್ಡಾಯವಾಗಿ ಉಲ್ಲೇಖಿಸಬೇಕು. ಈ ಕುರಿತು ಸರ್ಕಾರ ಹೊಸ ಆದೇಶ ಹೊರಡಿಸಿದೆ. ಇದಕ್ಕೆ ಕಾರಣವೇನು?
ಪೂರ್ತಿ ಓದಿ06:19 PM (IST) Mar 01
06:16 PM (IST) Mar 01
ಬೆಲ್ಲದ ಟೀ ಮಾಡುವಾಗ ಹಾಲು ಹಾಕಿದ ತಕ್ಷಣ ಅದು ಒಡೆದು ಹೋಗುವ ಸಮಸ್ಯೆ ನಿಮಗೂ ಇದ್ಯಾ? ಹಾಗಿದ್ರೆ ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಹೇಳಿದ ಹಾಗೆ ಮಾಡಿ ನೋಡಿ...
05:33 PM (IST) Mar 01
ಮೂತ್ರವನ್ನು ಶೇಖರಿಸಿಟ್ಟು ಗರ್ಭ ಧರಿಸಿರುವುದಾಗಿ ಹೇಳಿ ಯುವಕರಿಂದ ಹಣ ವಸೂಲಿ ಮಾಡುವ ವಂಚನೆಯೂ ನಡೆಯುತ್ತಿದೆ. ಆ ಬಗ್ಗೆ ಈ ಯುವತಿ ಹೇಳಿದ್ದಾಳೆ ಕೇಳಿ...
05:20 PM (IST) Mar 01
ಉಕ್ರೇನ್ ಅಧ್ಯಕ್ಷ ಜೆಲೆನ್ಸ್‌ಕಿ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಶ್ವೇತಭವನದಲ್ಲಿ ತೀವ್ರ ವಾಗ್ದಾಳಿ ನಡೆದಿದೆ. ಟ್ರಂಪ್, ಜೆಲೆನ್ಸ್‌ಕಿ ಅಮೆರಿಕಾಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದಾರೆ, ಉಕ್ರೇನ್ ಯುದ್ಧದ ಭವಿಷ್ಯ ಅತಂತ್ರವಾಗಿದೆ.
ಪೂರ್ತಿ ಓದಿ05:16 PM (IST) Mar 01
ವಿಶೇಷ ಯೋಜನೆ ಹಾಗೂ ಬುಡಕಟ್ಟು ಯೋಜನೆಯ ಹಣ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ ಎಂದು ಚಿಕ್ಕೋಡಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್, ಮಹೇಶ್ ಹೇಳಿದ್ದಾರೆ. 5 ಗ್ಯಾರಂಟಿ ಯೋಜನೆಗಳು ಬುಡಕಟ್ಟು ಉಪ ಯೋಜನೆಯ ಭಾಗ ಅಲ್ಲ, ನಿಗದಿ ಪಡಿಸಿದ ಹಣ ಹೇಗೆ ಉಪಯೋಗಬೇಕು ಎಂದು ನಿಯಮ ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೆ SCP TSP. ಯೋಜನೆ ಜಾರಿಗೆ ತಂದಿದ್ದಾರೆ. ಇದೀಗ SCP TSP. ಹಣವನ್ನು ಬೇಕಾಬಿಟ್ಟಿಯಾಗಿ ಸಿದ್ದರಾಮಯ್ಯ ಅವರೆ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರೆ.
05:14 PM (IST) Mar 01
ವಿಧಾನಸೌಧದಲ್ಲಿ ನಡೆದ ಪುಸ್ತಕ ಮೇಳದಲ್ಲಿ ತಮಿಳು ಮಳಿಗೆ ತೆರೆದಿರುವುದು ವಿವಾದಕ್ಕೆ ಕಾರಣವಾಗಿದೆ. ಕನ್ನಡ ಲೇಖಕರ ಪುಸ್ತಕಗಳು ತಮಿಳಿಗೆ ಅನುವಾದಗೊಂಡು ಮಾರಾಟಕ್ಕಿರುವುದು ಇಲ್ಲಿನ ವಿಶೇಷವಾಗಿದೆ. ಇದು ಕನ್ನಡಿಗರು ಹೆಮ್ಮೆ ಪಡುವ ವಿಚಾರವಾಗಿದೆ..
ಪೂರ್ತಿ ಓದಿ04:46 PM (IST) Mar 01
ನೀವು ತಿಂಗಳ ಸ್ಯಾಲರಿ ಪಡೆಯುತ್ತಿರುವ ಉದ್ಯೋಗಿಯಾ? ಹಾಗಾದರೆ ವಾರದಲ್ಲಿ ಇನ್ನು ಕನಿಷ್ಠ 80 ಗಂಟೆ ಕೆಲಸ ಅನಿವಾರ್ಯವಾಗುವ ಸಾಧ್ಯತೆಗಳು ಕಾಣುತ್ತಿದೆ. ನಾರಾಯಣ ಮೂರ್ತಿ, ಎನ್ಎಸ್ ಸುಬ್ರಹ್ಮಣ್ಯನ್ ಬಳಿಕ ಇದೀಗ ನೀತಿ ಆಯೋಗದ ಮಾಜಿ ಸಿಇಒ 80 ಗಂಟೆ ಕೆಲಸದ ಮಾತನಾಡಿದ್ದಾರೆ.
ಪೂರ್ತಿ ಓದಿ04:41 PM (IST) Mar 01
ಮಾರ್ಚ್ 2 ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆಯ ಸುದ್ದಿ ತರಬಹುದು. ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದವರಿಗೆ ಈ ದಿನವು ದೊಡ್ಡ ಬದಲಾವಣೆಯನ್ನು ತರಬಹುದು.
04:30 PM (IST) Mar 01
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರತ್ಯೇಕ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸ್ಥಾಪಿಸಿ ಕೃಷಿ ಸಚಿವರು ಆದೇಶ ಹೊರಡಿಸಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ.
ಪೂರ್ತಿ ಓದಿ04:30 PM (IST) Mar 01
ಐಐಟಿಯನ್ ಪುಷ್ಪೇಂದ್ರ ಕುಮಾರ್ ಯಶೋಗಾಥೆ: ಜಮುಯಿಯ ಪುಷ್ಪೇಂದ್ರ ಕುಮಾರ್ ಐಐಟಿ ಖರಗ್‌ಪುರದಿಂದ ಪದವಿ ಪಡೆಯುವ ಮುನ್ನವೇ ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಉತ್ತಮ ಸಂಬಳದೊಂದಿಗೆ ಡೇಟಾ ಸೈಂಟಿಸ್ಟ್ ಆಗಿ ಕೆಲಸ ಮಾಡಲಿದ್ದಾರೆ. ಪುಷ್ಪೇಂದ್ರ ಕುಮಾರ್ ಅವರ ಯಶೋಗಾಥೆ ಇಲ್ಲಿದೆ.
ಪೂರ್ತಿ ಓದಿ04:03 PM (IST) Mar 01
ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಡಿಕೆ ಶಿವಕುಮಾರ್ ಹಿಂದೂತ್ವದ ಜಪ ಮಾಡುತ್ತಿರುವುದನ್ನು ಸ್ವಾಗತಿಸಿದ್ದಾರೆ. ಮೊಘಲರಿಂದ ಭಾರತೀಯ ಸಂಸ್ಕೃತಿ ಹಾಳಾಗಿದ್ದು, ಡಿಕೆಶಿ ಈಗ ಸರಿ ದಾರಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ಪೂರ್ತಿ ಓದಿ03:55 PM (IST) Mar 01
ದಕ್ಷಿಣ ಆಫ್ರಿಕಾದ ಕೆಬೆರ್ಹಾದಲ್ಲಿರುವ ತಮ್ಮ ಮನೆಯಲ್ಲಿ ಡ್ರೇಪರ್ ಕೊನೆಯುಸಿರೆಳೆದರು.
ಪೂರ್ತಿ ಓದಿ03:51 PM (IST) Mar 01
ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೇ ಗುಡ್ ನ್ಯೂಸ್ ನೀಡಿದೆ. ಮಾರ್ಚ್ 1 ರಿಂದ ಮಂಗಳೂರು-ಗೋವಾ ರೈಲು ಸ್ಪೆಷಲ್ ರೈಲು ಪ್ರಯಾಣ ದರ ಇಳಿಕೆಯಾಗಿದೆ. ಈ ಸ್ಪೆಷಲ್ ರೈಲು ಟಿಕೆಟ್ ಕಾಯ್ದಿರಿಸದ ರೈಲಾಗಿ ಸೇವೆ ನೀಡಲಿದೆ.
ಪೂರ್ತಿ ಓದಿ03:51 PM (IST) Mar 01
ಮಾರ್ಚ್‌ನಲ್ಲಿ ಎರಡು ಸಂಚಾರಗಳು ಸಂಭವಿಸಲಿವೆ. ಸೂರ್ಯ ಮೀನ ರಾಶಿಯಲ್ಲಿ ಮತ್ತು ಮಾರ್ಚ್ ಅಂತ್ಯದಲ್ಲಿ ಶನಿ ಗ್ರಹವು ಮೀನ ರಾಶಿಯಲ್ಲಿ ಸಾಗುತ್ತದೆ.
03:33 PM (IST) Mar 01
ಅದೃಷ್ಟ ಎಂದರೆ ಹೇಗಿರುತ್ತದೆ ಎನ್ನುವುದಕ್ಕೆ ಸತ್ತ ವ್ಯಕ್ತಿ ಎದ್ದು ಬಂದು ಲಾಟರಿ ಮೇಲೆ ಲಾಟರಿ ಹೊಡೆದ ಈ ಘಟನೆಯೇ ಸಾಕ್ಷಿಯಾಗಿದೆ. ಇದರ ಡಿಟೇಲ್ಸ್ ಇಲ್ಲಿದೆ...
03:27 PM (IST) Mar 01
ಉದ್ಯಮಿ ಮೋಹನ್‌ದಾಸ್ ಪೈ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಬೆಂಗಳೂರು ಅಭಿವೃದ್ಧಿ ಕುರಿತು ಚರ್ಚಿಸಿದ್ದಾರೆ. ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವಂತೆ ಮನವಿ ಮಾಡಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಪೂರ್ತಿ ಓದಿ03:27 PM (IST) Mar 01
ದಂಪತಿಗಳಿಗೆ ರಂಜಾನ್ ನಿಯಮಗಳು: ರಂಜಾನ್ ಪವಿತ್ರ ಮಾಸ ಮಾರ್ಚ್ 2 ರಿಂದ ಪ್ರಾರಂಭವಾಗಲಿದೆ. ಇದು ಕೇವಲ ಉಪವಾಸವಿರುವ ತಿಂಗಳಲ್ಲ, ಆತ್ಮಸಂಯಮ ಮತ್ತು ಆರಾಧನೆಯ ತಿಂಗಳು. ಇಡೀ ತಿಂಗಳು ಕೆಲವು ವಿಷಯಗಳನ್ನು ಅನುಸರಿಸಬೇಕು.
ಪೂರ್ತಿ ಓದಿ03:11 PM (IST) Mar 01
ಮಂಡ್ಯ ವಿಶ್ವವಿದ್ಯಾಲಯವನ್ನು ಮುಚ್ಚುತ್ತಿರುವ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಶಾಸಕರು ವಿವಿ ಉಳಿಸಿಕೊಳ್ಳಲು ಅಸಮರ್ಥರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪೂರ್ತಿ ಓದಿ02:54 PM (IST) Mar 01
ಎಲಾನ್ ಮಸ್ಕ್ 14ನೇ ಮಗುವಿನ ತಂದೆಯಾದರು! ನ್ಯೂರಾಲಿಂಕ್‌ನ ಶಿವೋನ್ ಜಿಲಿಸ್ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಹೆಸರೇನು ಮತ್ತು ಮಸ್ಕ್ ಕುಟುಂಬದ ಬಗ್ಗೆ ತಿಳಿಯಿರಿ.
ಪೂರ್ತಿ ಓದಿ02:48 PM (IST) Mar 01
ಉಸ್ತುವಾರಿ ಸಚಿವ ಮಂಕಾಳ ವೈದ್ಯ ವಿರುದ್ಧ ಅರಣ್ಯ ಒತ್ತುವರಿ ಆರೋಪ ಕೇಳಿಬಂದಿದೆ. ಭಟ್ಕಳದ ಬೈಲೂರಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿರುವುದಾಗಿ ಆರ್.ಟಿ.ಐ ಕಾರ್ಯಕರ್ತರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಸಚಿವರು ತಮ್ಮ ಪ್ರಭಾವ ಬಳಸಿ ಬೇರೆಯವರ ಹೆಸರಿನಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೂರ್ತಿ ಓದಿ02:46 PM (IST) Mar 01
ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಮಾರ್ಚ್‌ನಲ್ಲಿ ಗ್ರಹಗಳ ಅಪರೂಪದ ಮಹಾ ಸಂಯೋಗ ಸಂಭವಿಸಲಿದೆ. ಮೀನ ರಾಶಿಯಲ್ಲಿ ಚಂದ್ರ, ಬುಧ, ರಾಹು ಮತ್ತು ಶುಕ್ರ ಏಕಕಾಲದಲ್ಲಿ ಸಾಗುತ್ತಾರೆ.
02:42 PM (IST) Mar 01
ಮುಂಬೈ ಟೆಕ್ ವೀಕ್ 2025: ರಿಲಯನ್ಸ್ ಜಿಯೋ ಚೇರ್ಮನ್ ಆಕಾಶ್ ಅಂಬಾನಿ AI ಈ ಪೀಳಿಗೆಯ ಅತೀ ದೊಡ್ಡ ಟೆಕ್ ಬದಲಾವಣೆ. ಇದು ಭಾರತದ ಆರ್ಥಿಕ ಏಳಿಗೆಗೆ ಮುಖ್ಯ ಕಾರಣವಾಗುತ್ತೆ ಅಂದಿದ್ದಾರೆ.
ಪೂರ್ತಿ ಓದಿ02:24 PM (IST) Mar 01
ಕೇರಳದ ಯೂಟ್ಯೂಬರ್ ಶಫೀಕ್ ಹಸಿಮ್ ತಮ್ಮ ಬೋಳು ತಲೆಯನ್ನು ಜಾಹೀರಾತಿಗಾಗಿ ನೀಡಿ ಹಣ ಸಂಪಾದಿಸುತ್ತಿದ್ದಾರೆ. ಕೂದಲು ಕಸಿ ಮಾಡುವ ಸಂಸ್ಥೆಯೊಂದು ಇವರ ತಲೆಯ ಮೇಲೆ ಜಾಹೀರಾತು ಹಾಕುವುದಕ್ಕೆ 50 ಸಾವಿರ ರೂಪಾಯಿ ನೀಡಿದೆ.
ಪೂರ್ತಿ ಓದಿ02:01 PM (IST) Mar 01
ಫೆಬ್ರವರಿ 28 ರಂದು ಮಧ್ಯರಾತ್ರಿ 12.09 ಕ್ಕೆ ಶನಿ ತನ್ನದೇ ಆದ ರಾಶಿಚಕ್ರ ಕುಂಭ ರಾಶಿಯಲ್ಲಿ ಅಸ್ತನಾಗಿದ್ದಾನೆ.
ಪೂರ್ತಿ ಓದಿ