ಕೆಎಸ್‌ಆರ್‌ಟಿಸಿ ಮಹತ್ವದ ಹೆಜ್ಜೆ: ಪಾರ್ಸಲ್ ಅಂಡ್ ಕೊರಿಯರ್‌ಗಾಗಿ ನಮ್ಮ ಕಾರ್ಗೋ ಸೇವೆ ಆರಂಭ

By Sathish Kumar KH  |  First Published Dec 16, 2023, 7:36 PM IST

ರಾಜ್ಯದಲ್ಲಿ ಸಾರ್ಚಜನಿಕರಿಗೆ ಪ್ರಯಾಣ ಸೇವೆ ಜೊತೆಗೆ ಪಾರ್ಸಲ್ ಅಂಡ್ ಕೋರಿಯರ್‌ ಸೇವಾ ಕ್ಷೇತ್ರಕ್ಕೂ ಕೆಎಸ್‌ಆರ್‌ಟಿಸಿ ಲಗ್ಗೆಯಿಡುತ್ತಿದೆ. 


ಬೆಂಗಳೂರು (ಡಿ.16): ರಾಜ್ಯ ಸರ್ಕಾರದ ಉದ್ಯಮ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಈಗ ಪಾರ್ಸಲ್ ಮತ್ತು ಕೋರಿಯರ್ ಸರ್ವಿಸ್ ಕ್ಷೇತ್ರಕ್ಕೂ ಲಗ್ಗೆಯಿಡುತ್ತಿದೆ. ಮೊದಲ ಹಂತದಲ್ಲಿ ಕೊರಿಯರ್ ಸರ್ವಿಸ್ ಡಿ.23ರಿಂದ ಆರಂಭವಾಗಲಿದೆ. ಈ ಮೂಲಕ ಸರ್ಕಾರಿ ಉದ್ಯಮವನ್ನು ವಿಸ್ತರಣೆ ಮಾಡುವ ಕಾರ್ಯಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮುಂದಾಗಿದ್ದಾರೆ.

ಹೌದು, ಕೆಎಸ್ಆರ್‌ಟಿಸಿಯ ಕಾರ್ಗೋ ಟ್ರಕ್ ಕಾರ್ಯಾಚರಣೆಗೆ ಮೂಹೂರ್ತ ನಿಗದಿ ಮಾಡಲಾಗಿದೆ. ಡಿಸೆಂಬರ್ 23ರಿಂದ ನಮ್ಮ‌ ಕಾರ್ಗೋದ 20 ಟ್ರಕ್‌ಗಳು ರಸತೆಗಿಳಿಯಲಿವೆ. ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಂದ 6 ಟನ್‌‌‌ ಸಾಮರ್ಥ್ಯದ 20 ಟ್ರಕ್‌ಗಳ ಮೂಲಕ ಪಾರ್ಸಲ್ ಅಂಡ್ ಕೊರಿಯರ್ ಸರ್ವಿಸ್‌ಗಳನ್ನು ಒದಗಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈಗಾಗಲೇ ಕೆಎಸ್‌ಆರ್‌ಟಿಸಿ ಕೇಂದ್ರ‌‌ ಕಛೇರಿಗೆ ಇಪ್ಪತ್ತು ಟ್ರಕ್‌ಗಳು ಆಗಮಿಸಿದ್ದು, ಅವುಗಳನ್ನು ಸಾರಿಗೆ ಸಚಿವೆ ರಾಮಲಿಂಗಾರೆಡ್ಡಿ ಪರಿಶಿಲನೆ ಮಾಡಿದ್ದಾರೆ.

Tap to resize

Latest Videos

ರಾಜ್ಯದ ಸಾರ್ವಜನಿಕ ಸಾರಿಗೆ ಸೇವೆಯಾಗಿರುವ ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಸಾರಿಗೆ ಸೇವೆಯಿಂದ ಗಳಿಸುವ ಆದಾಯದ ಜೊತೆಗೆ, ಪರ್ಯಾಯ ಆದಾಯ‌ಕ್ಕಾಗಿ ಕಾರ್ಗೋ ಟ್ರಕ್ ಕಾರ್ಯಚರಣೆಗೆ ಮುಂದಾಗಿದೆ. ಇನ್ನು ರಾಮಲಿಂಗಾರೆಡ್ಡಿ ಅವರು ಸಾರಿಗೆ ಸಚಿವಾರದ ಕೂಡಲೇ ಸಾರಿಗೆಯಿಂದ ಗಳಿಸಬಹುದಾದ ಇನ್ನಿತರೆ ಆದಾಯದ ಮೂಲಗಳನ್ನು ಶೋಧನೆ ಮಾಡಿದಾಗ ಟ್ರಕ್‌ ಸೇವೆಯ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಒಂದು ತಂಡವನ್ನು ರಚಿಸಿ ಅಧ್ಯಯನ ವರದಿಯನ್ನು ಸಿದ್ಧಪಡಿಸಿ ನಂತರ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಮುಂದಾಗಿದ್ದಾರೆ, ಪ್ರಸ್ತುತವಾಗಿ ಖಾಸಗಿಯಲ್ಲಿ ಸಾಕಷ್ಟು ಕಂಪನಿಗಳಿದ್ದ ಕಾರ್ಗೋ ಸೇವೆಗೆ ಸಕ್ಕತ್ ಡಿಮ್ಯಾಂಡ್ ಇದೆ. ಟಾಟಾ ಕಂಪನಿಯ ಪುಣೆ ಶಾಖೆಯಲ್ಲಿ 20 ಕಾರ್ಗೋ ಟ್ರಕ್ ತಯಾರಿಸಲಾಗಿದೆ. 20 ಟ್ರಕ್ ಗಳ ಸೇವೆ ಆರಂಭವಾದ್ರೆ  ವರ್ಷಕ್ಕೆ 20 ಕೋಟಿ ಆದಾಯದ ನಿರೀಕ್ಷೆ ಮಾಡಲಾಗಿದೆ.

ನಾನು ನಂದಿನಿ ಖ್ಯಾತಿಯ ವಿಕ್ಕಿಯಿಂದ ಮತ್ತೊಂದು ವೈರಲ್ ವಿಡಿಯೋ: ಬೀದಿ ಜಗಳ ಮನೆಗೆ ತಂದ್ರೆ ಏನಾಗುತ್ತೆ ಗೊತ್ತಾ?

ಇದು ಕೆಎಸ್‌ಆರ್‌ಟಿಸಿ ಲಾಜೆಸ್ಟಿಕ್: ಕೆಎಸ್‌ಆರ್‌ಟಿಸಿಯಿಂದ ಪಾರ್ಸಲ್ ಮತ್ತು ಕೊರಿಯರ್ ಸಾಗಾಣಿಕೆ ಹೊಸ ಟ್ರಕ್ ಖರೀದಿ ಮಾಡಲಾಗಿದೆ. ಕಾರ್ಗೋ ಸೇವೆಯಲ್ಲಿ ಸದ್ಯ ಕೃಷಿ, ಟೆಕ್ಸ್ ಟೈಲ್, ಆಟೋ ಮೊಬೈಲ್ ಕ್ಷೇತ್ರದಿಂದ ಟ್ರಕ್ ಗಳಿಗೆ ಬೇಡಿಕೆಯಿದೆ. ಹೀಗಾಗಿ ಅವರ ಬೇಡಿಕೆ ಅನುಗುಣವಾಗಿ ಟ್ರಕ್‌ಗಳ ಸೇವೆ ನೀಡುವುದಕ್ಕೆ ಕೆಎಸ್‌ಆರ್‌ಟಿಸಿ ಈಗ ಟ್ರಕ್‌ಗಳನ್ನು ಖರೀದಿ ಮಾಡಿದೆ. ಇನ್ನು ಯಾವ ಭಾಗದಲ್ಲಿ ಹೆಚ್ಚು ಪಾರ್ಸೆಲ್ ಬರುತ್ತದೆ ನೋಡಿಕೊಂಡು ಕಾರ್ಯಾಚರಣೆ ನಿರ್ಧಾರ ಮಾಡಲಾಗುತ್ತದೆ. ಈಗಾಗಲೇ ಕಾರ್ಗೊ ಸೇವೆಯಿಂದ ವರ್ಷಕ್ಕೆ 13 ಕೋಟಿ ಆದಾಯ ಬರ್ತಿದೆ. ಕಾರ್ಗೋ‌ ಸೇವೆಗಾಗಿ 6 ಟನ್ ಸಾಮರ್ಥ್ಯದ 20 ಹೊಸ ಟ್ರಕ್ ಖರೀದಿ ಮಾಡಲಾಗಿದೆ. ಖಾಸಗಿಯಲ್ಲಿ ಸಾಕಷ್ಟು ಕಂಪನಿಗಳಿದ್ದ ಕಾರ್ಗೋ ಸೇವೆಗೆ ಸಕ್ಕತ್ ಡಿಮ್ಯಾಂಡ್ ಇದೆ. ಹೀಗಾಗಿ ಉತ್ತಮ‌ ಆದಾಯ ಇರೋ ಕಾರಣ ಕಾರ್ಗೋ ಆರಂಭಕ್ಕೆ ಪ್ಲಾನ್ ಮಾಡಲಾಗಿದೆ.

ಪ್ರಯಾಣಿಕರ ಸೇವೆ ಹೊರತಾಗಿ ಪರ್ಯಾಯ ಆದಾಯಕ್ಕೆ ಚಿಂತನೆ: ರಾಜ್ಯದಲ್ಲಿ ಕೆಎಸ್ಆರ್‌ಟಿಸಿ ತಮ್ಮ ಸಿಬ್ಬಂದಿಗೆ ಸಂಬಳ ನೀಡಲು ಮಾಸಿಕ 140 ಕೋಟಿ ರೂ. ಖರ್ಚು ಮಾಡುತ್ತಿದೆ. ಡಿಸೇಲ್ ಖರ್ಚು ಅಂತ ತಿಂಗಳಿಗೆ 240 ಕೋಟಿ ರೂ. ಹಣ ವ್ಯಯ ಮಾಡುತ್ತಿದೆ. ಆದರೆ, ರಾಜ್ಯದಲ್ಲಿ ಸಾರಿಗೆ ಬಸ್‌ಗಳಲ್ಲಿ ಪುರುಷರ ಪ್ರಯಾಣದಿಂದ ತಿಂಗಳಿಗೆ ಅಂದಾಜು 210 ಕೋಟಿ ರೂ. ಆದಾಯ‌ ಬರುತ್ತದೆ. ಮಹಿಳೆಯರ ಉಚಿತ ಸಂಚಾರಕ್ಕೆ ಖರ್ಚಾಗುವ 130 ಕೋಟಿ ರೂ. ಹಣವನ್ನು ಸರ್ಕಾರ ಕೊಡುತ್ತದೆ. ಇನ್ನು ಇತರೆ ಆದಾಯ ಮೂಲದಿಂದ ತಿಂಗಳಿಗೆ 19 ಕೋಟಿ ರೂ. ಬರುತ್ತದೆ.

ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಜಾತಿಗಣತಿ ವರದಿ ಬಿಡುಗಡೆ ಮಾಡಲ್ಲ: ಶ್ಯಾಮನೂರು ಶಿವಶಂಕರಪ್ಪ

ಒಟ್ಟಾರೆ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ತಿಂಗಳಿಗೆ 380 ಕೋಟಿ ರೂಪಾಯಿ ಖರ್ಚು ಬರುತ್ತದೆ. ಶಕ್ತಿ‌ ಯೋಜನೆ ಬಳಿಕ ತಿಂಗಳಿಗೆ ಅಂದಾಜು ಆದಾಯ 359 ಕೋಟಿ ರೂ. ಆಗುತ್ತದೆ. ಆದರೂ ಕೂಡ ಆದಾಯಕ್ಕಿಂತ ಖರ್ಚು ಹೆಚ್ಚಳವಾಗ್ತಿದೆ. 21 ಕೋಟಿ ರೂ. ನಷ್ಟದ ಹಣ ಸರಿದೂಗಿಸಲು ಪರ್ಯಾಯ ಆದಾಯದ ಮೂಲ ಹುಡುಕಿದೆ. 20 ಟ್ರಕ್‌ಗಳ ಸೇವೆ ಆರಂಭವಾದ್ರೆ ಹೆಚ್ಚುವರಿಯಾಗಿ ವರ್ಷಕ್ಕೆ 20 ಕೋಟಿ ರೂ. ಆದಾಯ ಗಳಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ಹೆಚ್ಚಿನ‌ ಟ್ರಕ್ ಸೇವೆ ನೀಡಲು ಕೆಎಸ್‌ಆರ್‌ಟಿಸಿ ಚಿಂತನೆ ಮಾಡಿದೆ.

click me!